ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಅಮಚವಾಡಿ ಚಾಮರಾಜನಗರ ತಾಲೂಕಿನ ಗ್ರಾಮ. ಚಾಮರಾಜನಗರ ದಿಂದ 10 ಕಿಮೀ ದೂರದಲ್ಲಿರುವ ಅಮಚವಾಡಿ ಸುಂದರ ಪರಿಸರದಲ್ಲಿರುವ ಗ್ರಾಮ. ಹರದನಹಳ್ಳಿ ಚನ್ನಪ್ಪನಪುರ, ಸರಹದ್ದಿನಲ್ಲಿರುವ ಎಣ್ಣೆ ಹೊಳೆ, ಮರಗದ ಕೆರೆ ಕಾಳಿಕೆರೆಗಳು ಸುಂದರ ಬೆಟ್ಟ ಗುಡ್ಡಗಳ, ತೆಂಗು, ಬಾಳೆ, ಅರಿಶಿನ ಸುಂದರ ಪ್ರಕೃತಿಯ ರಮಣೀಯ ಸ್ಥಳದಲ್ಲಿರುವ ಗ್ರಾಮ. ತನ್ನದೇ ಆದ ಇತಿಹಾಸ, ಸಂಸ್ಕೃತಿ ಪರಂಪರೆಯನ್ನು ಹೊಂದಿರುವ ಈ ಗ್ರಾಮ ವೀರತ್ವಕ್ಕೆ ಶಕ್ತಿತ್ವಕ್ಕೆ ಹೆಸರಾದ ಗ್ರಾಮ. ಇಲ್ಲಿನ ವೀರಗಲ್ಲು, ಮಾಸ್ತಿಗಲ್ಲುಗಳು ಶಾಸನಗಳು ಸಾಕ್ಷಿಯಾಗಿದೆ. ಶೌರ್ಯ, ಸಾಹಸ, ಮುಗ್ಧತೆಯ ಗುಣದ ಜನರನ್ನು ಹೊಂದಿರುವ ಈ ಗ್ರಾಮ ಪ್ರಾಚೀನ ಇತಿಹಾಸ ಹೊಂದಿರುವ ಗ್ರಾಮವಾಗಿದೆ. ಗ್ರಾಮದ ಮಾರಮ್ಮ ,ಗಣಪತಿ, ಕೃಷ್ಣ, ಮಲ್ಲೇಶ್ವರ ,ಆಂಜನೇಯ ಸಿದ್ದಪ್ಪಾಜಿ ,ಮಂಟೇಸ್ವಾಮಿ, ಲಕ್ಷ್ಮಿ ದೇವಾಲಯಗಳನ್ನು ಹೊಂದಿದೆ. ಸರಳ, ಸಜ್ಜನ ,ಮುಗ್ಧ ಉತ್ತಮ ಸಹೃದಯ ಪ್ರೀತಿಗೆ ಹೆಸರಾದ ಜನರಿರುವ ಅಮಚವಾಡಿ ಗ್ರಾಮದಲ್ಲಿ ಸಂಭ್ರಮದ ವಾತಾವರಣವಿದೆ.
ಅಮಚವಾಡಿ ಗ್ರಾಮದಲ್ಲಿ ಎರಡು ಪ್ರಾಥಮಿಕ ಶಾಲೆ, #Amachavadi School ಒಂದು ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಹೊಂದಿದೆ. ಪದವಿ ಪೂರ್ವ ಕಾಲೇಜಿನಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗವಿದ್ದು ಪ್ರಾಥಮಿಕ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಇರುವ ಕಾರಣ ಎರಡು ಶಾಲೆಗಳಿವೆ. ಅಮಚವಾಡಿ 2 ಉಪ್ಪಾರ ಬಡಾವಣೆಯಲ್ಲಿ ಇರುವ ಶಾಲೆಯಾಗಿದೆ .ಇದರ 25ನೇ ವರ್ಷದ ಸಂಭ್ರಮಕ್ಕೆ ಫೆಬ್ರವರಿ ಐದು ಸಾಕ್ಷಿಯಾಗಲಿದೆ.
ಬೆಳ್ಳಿಹಬ್ಬದ ಉದ್ಘಾಟನೆಗೆ ವಿಶೇಷ ವೇದಿಕೆ ಸೃಷ್ಟಿಯಾಗಿದೆ. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ಧತೆ,ಕ್ರೀಡೆಗಳು ,ಸ್ಪರ್ಧೆಗಳನ್ನು ಹಿರಿಯ ವಿದ್ಯಾರ್ಥಿಗಳ ಸಂಘ ಹಾಗೂ ಆಚರಣೆ ಸಮಿತಿ ಹಮ್ಮಿಕೊಂಡಿದೆ.
ಉದ್ಘಾಟನೆಯನ್ನು ಎಂ ಎಸ್ ಐ ಎಲ್ ಅಧ್ಯಕ್ಷರು ಹಾಗೂ ಶಾಸಕ ಪುಟ್ಟರಂಗಶೆಟ್ಟಿರವರು ನೆರವೇರಿಸುವರು. ಅಧ್ಯಕ್ಷತೆಯನ್ನು ಎಸ್. ಡಿ .ಎಂ ಸಿ ಅಧ್ಯಕ್ಷರಾದ ಮಹದೇವಸ್ವಾಮಿ ವಹಿಸುವರು.
ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ತೇಜಸ್ವಿನಿ ಮಂಜುನಾಥ ಶೆಟ್ಟಿ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಚಂದ್ರ ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹನುಮ ಶೆಟ್ಟಿ, ಸಂಚಾರಿ ಠಾಣೆಯ ಉಪ ಆರಕ್ಷಕರಾದ ಹನುಮಂತಪ್ಪ ಉಪ್ಪಾರ್, ಮುಖ್ಯ ಭಾಷಣಕಾರರಾಗಿ ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿಗಳಾದ ರಾಜೀವ್ ಆಗಮಿಸುವರು.
ಗೌರವ ಉಪಸ್ಥಿತಿಯಾಗಿ ಗೋವಿಂದರಾಜು, ಸಿದ್ದಶೆಟ್ಟಿ, ರವಿ, ಎ ಎಸ್ ಗುರುಸ್ವಾಮಿ, ರಂಗಸ್ವಾಮಿ, ಚಿಕ್ಕಮಹದೇವ, ಸುರೇಶ್ ಎನ್ ಋಗ್ವೇದಿ, ಸಿದ್ದರಾಜು, ಮಮತಾ ಆಗಮಿಸಲಿದ್ದಾರೆ.
ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕೆಂದು ಮುಖ್ಯ ಶಿಕ್ಷಕರು,ಆಚರಣೆ ಸಮಿತಿಯ ಅಧ್ಯಕ್ಷರಾದ ನಾಗೇಂದ್ರ, ಉಪಾಧ್ಯಕ್ಷರಾದ ಮಲ್ಲಿಕಾರ್ಜುನ್ ,ಕಾರ್ಯದರ್ಶಿ ಶಿವಮಲ್ಲ ಶೆಟ್ಟಿ ,ಹಿರಿಯ ವಿದ್ಯಾರ್ಥಿ ಕನಕ ಮೂರ್ತಿ ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶಿವಪ್ರಸಾದ್ ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















