ಕಲ್ಪ ಮೀಡಿಯಾ ಹೌಸ್ | |
ಭಾರತದಾದ್ಯಂತ ಇರುವ ದಿನಸಿ ವ್ಯಾಪಾರಿಗಳಿಗೋಸ್ಕರವಾಗಿಯೇ, ಇಂದು ಇದೇ ಮೊದಲಬಾರಿಗೆ ಜರ್ಮನಿಯ ಮೂಲದ ಬುಹ್ಲ್ , ಬೆಂಗಳೂರಿನ ಮೂಲಕ ವಿಶಿಷ್ಟವಾದ ಕ್ರಾಂತಿಕಾರಕ ( mobile app Imprezz) ಮೊಬೈಲ್ ಆಪ್ ಇಂಪ್ರೆಝ್ ಮತ್ತು ಅದರ ಪಾಯಿಂಟ್ ಆಫ್ ಸೇಲ್ (PoS) Point of Saleನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಬುಹ್ಲ್ ನ ವಿಶಿಷ್ಟ ಸಾಫ್ಟ್ ವೇರ್ ಇದಾಗಿದ್ದು, ಇಂಪ್ರೆಝ್-Imprezz mobile app ವ್ಯಾಪಾರ – ವಹಿವಾಟು ಗಳ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಆಂಡ್ರಾಯ್ಡ್ ಮೊಬೈಲ್ ಆಪ್ ನಿಂದಾಗಿ ಭಾರತದ ಕ್ಲಬ್ ಹೌಸ್, ಹೋಟೆಲ್, ದಿನಸಿ ಮತ್ತು ಇತರ ಸೇವೆಗಳು, ಉತ್ಪಾದನೆ, ವಿವಿಧ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಲೆಕ್ಕಪತ್ರ ಸಂಘ ಸಂಸ್ಥೆಗಳು, ಜಿಎಸ್ಟಿ ಯನ್ನು ಒಳಗೊಂಡ ಬಿಲ್ ಗಳನ್ನು ಉತ್ಪನ್ನಗಳ ಮೇಲಿನ ಬಾರ್ ಕೋಡ್ ನ್ನು ಸ್ಕಾನ್ ಮಾಡುವುದರ ಮೂಲಕ ಪಡೆಯಬಹುದಾಗಿದೆ. ಅಥವಾ ಉತ್ಪನ್ನಗಳ ಮೇಲೆ ಬಾರ್ ಕೋಡ್ ಇದ್ದಲ್ಲಿ ಸ್ಕಾನ್ ಮಾಡಿ ಬಿಲ್ ನ್ನು ರಚಿಸಬಹುದಾಗಿದೆ.
ಈ ವಿಶಿಷ್ಟ ಇಂಪ್ರೆಸ್ ಮೊಬೈಲ್ ಆಪ್ ವ್ಯಾಪಾರಸ್ಥರ ಇನ್ ವೆಂಟರಿ, ಗ್ರಾಹಕರ ಡೇಟಾ, ಆರ್ಡರ್ ಪ್ರೊಸೆಸಿಂಗ್ ಇತ್ಯಾದಿಗಳನ್ನು ನಿರ್ವಹಿಸುತ್ತದೆ. ಈ ಮೊಬೈಲ್ ಆಪ್ ನಿಂದಾಗಿ ಈಗ ದಿನಸಿ ಖರೀದಿದಾರರು ತಮ್ಮ ಸಣ್ಣ ಪುಟ್ಟ ಮಕ್ಕಳಿಗೆ ದಿನಸಿ ಪಟ್ಟಿ ಕೊಟ್ಟು ಕಳುಹಿಸಿದರೂ ಖರೀದಿ ಕೋರಿಕೆ/ಆದೇಶದಂತೆ ಪಾರದರ್ಶಕವಾಗಿ ದಿನಸಿ ಉತ್ಪನ್ನಗಳ ಪಟ್ಟಿ, ದರ, ರಿಯಾಯಿತಿ ಮುಂತಾದ ಮಾಹಿತಿ ಒಳಗೊಂಡ ಬಿಲ್ ಗಳು ಮೆಸೇಜ್ ಮೂಲಕ ಅವರ ಈಮೈಲ್,ವಾಟ್ಸಾಪ್, ಎಸ್ ಎಮ್ ಎಸ್ ಮೂಲಕ ಮೊಬೈಲ್ ಗೆ ಬರುತ್ತದೆ ಅಥವಾ ಸ್ಥಳದಲ್ಲೇ ಪಾಸ್ ಮೂಲಕ ಅಥವಾ ಇತರ ಮಾಧ್ಯಮದ ಮೂಲಕ ಬಿಲ್ ನ ಪ್ರತಿಯ ಪ್ರಿಂಟ್ ಔಟ್ ಪಡೆಯಬಹುದಾಗಿದೆ.
ಈ ಹಿಂದೆ ದಿನಸಿ ವ್ಯಾಪಾರಸ್ಥರು ಅಥವಾ ಗ್ರಾಹಕರು ತಮ್ಮ ಖರೀದಿದಾರರ ದಿನಸಿ ಪಟ್ಟಿ ಗೆ ಬಿಲ್ ಮಾಡಲು ಸಮಯಾವಕಾಶ ಇಲ್ಲದೇ ಇದ್ದರೂ ಕೈಯಲ್ಲೇ ಬರೆಯಬೇಕಾಗಿತ್ತು. ಪ್ರಸ್ತುತ ಬುಹ್ಲ್ ನ ಇಂಪ್ರೆಸ್ ನಿಂದಾಗಿ ಭಾರತದಾದ್ಯಂತ ಇರುವ ಚಿಲ್ಲರೆ-ದಿನಸಿ ವ್ಯಾಪಾರಿಗಳಿಗೋಸ್ಕರ ಕ್ರಾಂತಿಕಾರಕ ( mobile app Imprezz) ಮೊಬೈಲ್ ಆಪ್ ಇಂಪ್ರೆಝ್ – ಪಾಯಿಂಟ್ ಆಫ್ ಸೇಲ್ (PoS) Point of Sale ಮೂಲಕ ದೇಶಾದ್ಯಂತ ಎಲ್ಲೇ ಇದ್ದರೂ ತಮ್ಮ ಬಿಲ್ ನ್ನು ಪಡೆದು ಹಣ ಪಾವತಿಸಬಹುದಾಗಿದೆ.
ಈ ವಿಶಿಷ್ಟ ಮೊಬೈಲ್ ಆಪ್ ನಿಂದಾಗಿ ಈಗ ವ್ಯಾಪಾರಸ್ಥರು ಉತ್ಪನ್ನಗಳ ಪ್ಯಾಕಿಂಗ್ ಮೇಲಿರುವ ಬಾರ್ ಕೋಡ್ ನ್ನು ಈ ಆಪ್ ನ ಸಹಾಯದಿಂದ ಆಂಡ್ರಾಯ್ಡ್ ಮೊಬೈಲ್ ಹಿಡಿದು ಸ್ಕಾನ್ ಮಾಡಿದರೆ ಸಾಕು, ಖರೀದಿ ಆದೇಶದಂತೆ ದಿನಸಿ ಅಥವಾ ಯಾವುದೇ ಉತ್ಪನ್ನಗಳ ದರ, ತೂಕ, ಸಂಖ್ಯೆ, ಅಳತೆ, ಪ್ರಮಾಣ ರಿಯಾಯಿತಿ ಮತ್ತು ಜಿಎಸ್ಟಿ ಯೊಂದಿಗೆ ಬುಹ್ಲ್ ನ (PoS) Point of Sale ಮೂಲಕ ಅಥವಾ ಮೊಬೈಲ್ ಮೂಲಕ ಪ್ರಿಂಟ್ ಅಥವಾ ಸಂದೇಶ ಮೂಲಕ ಪಡೆಯಬಹುದು.
ಮೊಬೈಲ್ ಆಪ್ ಇಂಪ್ರೆಸ್ ನ ವೈಶಿಷ್ಟ್ಯದಲ್ಲಿ 200,000 ಕ್ಕೂ ಹೆಚ್ಚು ಗೃಹೋಪಯೋಗಿ ಬ್ರಾಂಡ್ ಗಳು ಮತ್ತು ಉತ್ಪನ್ನಗಳ ದತ್ತಾಂಶ ಪಟ್ಟಿ ಇರುತ್ತವೆ. ಇನೆವೆಂಟರಿ ಮಾಡುವುದರ ಮೂಲಕ ವ್ಯಾಪಾರಸ್ಥರು ಮತ್ತು ಗ್ರಾಹಕರು ತಾವು ಪ್ರಸ್ತುತ ಮತ್ತು ಕಳೆದ ಬಾರಿ ಖರೀದಿಸಿದ ಪದಾರ್ಥಗಳ ಪ್ರಮಾಣ, ರಿಯಾಯಿತಿ, ಮುಂತಾದ ಮಾಹಿತಿಯನ್ನು ಇತರ ಉತ್ಪಾದಕರ ದರ ದೊಂದಿಗೆ ಮತ್ತು ಕಳೆದ ಖರೀದಿಗೂ ಈಗಿನ ದರಕ್ಕೂ ಹೋಲಿಕೆ ಮಾಡುವ ಅನುಕೂಲವೂ ಸಹ ಈ ಆಪ್ ನಲ್ಲಿ ಇರುತ್ತದೆ.
ಈ ಹೊಸ ಅನನ್ಯ ಮೊಬೈಲ್ ಆಪ್ ನಿಂದಾಗಿ ಪೋಷಕರು ತಮ್ಮ ಸಣ್ಣ ಪುಟ್ಟ ಮಕ್ಕಳಿಗೆ ದಿನಸಿ/ಆಹಾರೋತ್ಪನ್ನಗಳ ಪಟ್ಟಿ ಕಳುಹಿಸಬಹುದು ಅಥವಾ ನೇರ ಅಂಗಡಿ ಮಾಲೀಕರಿಗೆ ಖರೀದಿಸಬಹುದಾದ ಪಟ್ಟಿಯನ್ನು ಮೆಸೆಜ್ ಕಳುಹಿಸಿ, ಖರೀದಿಸಿದ ಉತ್ಪನ್ನಗಳ ಸ್ಪಷ್ಟ ಪಾರದರ್ಶಕವಾದ ಬಿಲ್ ನೊಂದಿಗೆ ಪದಾರ್ಥಗಳನ್ನು ಪಡೆಯಬಹುದಾಗಿದೆ. ಇವು ಕೇವಲ ಆಹಾರೋತ್ಪನ್ನ ಅಲ್ಲದೇ ಇತರ ಸೇವಾ ಸಂಘ ಸಂಸ್ಥೆಗಳೂ ಸಹ ಬಿಲ್ ರಚಿಸಲಿಕ್ಕೆ ಖರೀಧಿಸಬಹುದಾಗಿದೆ. ಬೇಡದ ಉತ್ಪನ್ನ-ಸೇವೆ ಕೆಲವು ಬಾರಿ ಬಿಲ್ ಆದರೂ ಅದರ ಹಣ ಅಥವಾ ಬದಲಿ ವ್ಯವಸ್ಥೆಯು ಸಹ ಈ ವಿಶಿಷ್ಟವಾದ ಮೊಬೈಲ್ ಆಪ್ ನ ಪಾರದರ್ಶಕತೆಯಿಂದ ಆಗುತ್ತದೆ.
ಕ್ಲಬ್ ಹೌಸ್, ಹೋಟೆಲ್, ದಿನಸಿ ಮತ್ತು ಇತರ ಸೇವೆಗಳು, ಉತ್ಪಾದನೆ, ವಿವಿಧ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಲೆಕ್ಕಪತ್ರ ಸಂಘ ಸಂಸ್ಥೆಗಳು, ಸ್ನೇಹಪರ ನೆರೆಹೊರೆಯ ಚಿಲ್ಲರೆ ದಿನಸಿ ವ್ಯಾಪಾರಿಗಳೂ ಸಹ ಈಗ ವಿಶಿಷ್ಟವಾದ ಕ್ರಾಂತಿಕಾರಕ Point of Sale (P.O.S) ಪಾಯಿಂಟ್ ಆಫ್ ಸೇಲ್ ಮತ್ತು ಅದರ ಇಂಪ್ರೆಝ್-Imprezz ಅತ್ಯಾಧುನಿಕ ಮೊಬೈಲ್ ಅಪ್ಲಿಕೇಶನ್ ನೊಂದಿಗೆ ತಮ್ಮ ಅಂಗಡಿಗಳ ವ್ಯಾಪಾರವನ್ನುಈಗ ಹೆಚ್ಚು ಪರಿಣಾಮಕಾರಿಯಾಗಿ ನಡೆಸಬಹುದು.
ನಮ್ಮ ನೆರೆಹೊರೆಯ ಅಂಗಡಿಗಳು ಮತ್ತು ಅವರ ಗ್ರಾಹಕರಿಗಾಗಿಯೇ ವಿಶಿಷ್ಟವಾಗಿ ವಿನ್ಯಾಸ ಗೊಳಿಸಿರುವ ಈ ಮೊಬೈಲ್ ಅಪ್ಲಿಕೇಶನ್ ನಿಂದಾಗಿ ತಮ್ಮ ಅಂಗಡಿಯ ವ್ಯಾಪಾರದಲ್ಲಿ ಪಾರದರ್ಶಕತೆ, ದಾಸ್ತಾನು ನಿರ್ವಹಣೆ, ಬಿಲ್ಲಿಂಗ್,ಪಾವತಿಸಂಗ್ರಹ, ಗ್ರಾಹಕರ ಪ್ರೊಫೈಲ್ ನಿರ್ವಹಣೆ, ದಿನ ಅಂತ್ಯದ ವಹಿವಾಟಿನ ಮಾಹಿತಿ, ವ್ಯವಹಾರ ಪಾರದರ್ಶಕತೆ ಮತ್ತು ಒಟ್ಟಾರೆ ಪೂರೈಕೆ ಸರಪಳಿಯಾದ್ಯಂತ ಅನೇಕ ಚಿಲ್ಲರೆ ವ್ಯಾಪಾರಗಳ ಸಮಸ್ಯೆಗಳಿಗೆ ಇದರಿಂದ ಪರಿಹಾರ ಪಡೆಯಬಹುದಾಗಿದೆ. ಯಾವುದೇ ಹೆಚ್ಚುವರಿ ಹಾರ್ಡ್ ವೇರ್ ಹೂಡಿಕೆಯಿಲ್ಲದ, ಮೊಬೈಲ್ ಫೋನ್ ನ ಸೌಕರ್ಯಗಳ ಮೂಲಕ. ವೆಬ್ ಅಪ್ಲಿಕೇಶನ್ ನಲ್ಲಿರುವ ಎಲ್ಲಾ ವೈಶಿಷ್ಟ್ಯಗಳ ಜೊತೆಗೆ, ಇಂಪ್ರಜ್ ನ ಪಾಯಿಂಟ್ ಆಫ್ ಸೇಲ್ (ಪಿಒಎಸ್) ವ್ಯವಸ್ಥೆಯಿಂದಾಗಿ, ಚಿಲ್ಲರೆ ವ್ಯಾಪಾರಿಗಳು, ತಮ್ಮ ಸಂಪೂರ್ಣ ಬಿಲ್ಲಿಂಗ್ ಪ್ರಕ್ರಿಯೆಯನ್ನು ಮಾಡಲು ಬಳಸುವ ನಗದು ರಿಜಿಸ್ಟರ್ ಮಾಡ್ಯೂಲ್ ಗೆ ಸಮಾನವಾಗಿದೆ. ಈ ವಿಶಿಷ್ಟ ಅಪ್ಲಿಕೇಶನ್ ನಿಂದಾಗಿ ವ್ಯಾಪಾರಿಗಳು ತಮ್ಮ ವ್ಯವಹಾರವನ್ನು ಹೆಚ್ಚು ಹೆಚ್ಚು ನಿರ್ವಹಿಸಿ ಬೆಳೆಸಲು, ಪರಿಣಾಮಕಾರಿ ನಿರ್ಧಾರ ತೆಗೆದುಕೊಳ್ಳಲು, ವ್ಯಾಪಾರ-ವಹಿವಾಟಿನ ವಿವರವಾದ ದತ್ತಾಂಶ ಮತ್ತು ಹೂಡಿಕೆ-ವೆಚ್ಚ ಇತರ ಅಂಕಿಅಂಶಗಳನ್ನು ಸಹ ಪಡೆಯಬಹುದಾಗಿದೆ.
- ಭಾರತದ ಸಣ್ಣಪುಟ್ಟ ವ್ಯಾಪಾರಸ್ಥರು ಮತ್ತು ಗ್ರಾಹಕರಿಗೆ ಇಂಪ್ರೆಸ್ ಮೊಬೈಲ್ ಆಪ್ ನಿಂದಾಗಿ ದೊಡ್ಡ ವರದಾನವಾಗಲಿದೆ.
- ಭಾರತದಾದ್ಯಂತ ಇರುವ ಕ್ಲಬ್ ಹೌಸ್/ರೆಸ್ಟೋರೆಂಟ್/ ದಿನಸಿ/ಸಣ್ಣಪುಟ್ಟ ಚಿಲ್ಲರೆ ವ್ಯಾಪಾರಸ್ಥರಿಗಾಗಿ ವಿಶೇಷ ಮೊಬೈಲ್ ಆಪ್ ಇಂಪ್ರೆಸ್ – ಕ್ರಾಂತಿಕಾರಕ mobile app Imprezz- ಮೊಬೈಲ್ ಆಪ್ ಇಂಪ್ರೆಝ್ – ಪಾಯಿಂಟ್ ಆಫ್ ಸೇಲ್ (PoS) Point of Sale ನ್ನು ಇದೇ ಮೊದಲ ಬಾರಿಗೆ ಬೆಂಗಳೂರಿನ ಮೂಲಕ ಭಾರತೀಯ ದಿನಸಿ ಮಾರುಕಟ್ಟೆಗೆ ಪ್ರವೇಶ ಪಡೆದಿದೆ.
- ಈಗ ಬೆಂಗಳೂರಿನ ನೆರೆಹೊರೆಯ ಚಿಲ್ಲರೆ ಅಂಗಡಿಗಳು ತಮ್ಮ ಗ್ರಾಹಕರಿಗೆ ಯಾವುದೇ ಅಡೇಚಣೆಯಿಲ್ಲದೇ, ಉತ್ಪನ್ನಗಳ ಮೆಲೆ ಇರುವ ಬಾರ್ ಕೋಡ್ ನ್ನು ಸ್ಕಾನ್ ಮಾಡುವುದರ ಮೂಲಕ ಬಿಲ್ ನ ಪ್ರಿಂಟ್ ಔಟ್ ಅಥವಾ ಮೆಸೆಜ್ ಮಾಡಬಹುದಾಗಿದೆ.
- ವ್ಯಾಪಾರದಲ್ಲಿ ಪಾರದರ್ಶಕತೆ, ಬಿಲ್ಲಿಂಗ್, ದಾಸ್ತಾನು ಮತ್ತು ಗ್ರಾಹಕರ ಪ್ರೊಫೈಲ್ ಗಳನ್ನು ನಿರ್ವಹಿಸಬಹುದು.
- ಕ್ಲಬ್ ಹೌಸ್/ರೆಸ್ಟೋರೆಂಟ್/ ದಿನಸಿ/ಸಣ್ಣಪುಟ್ಟ ಚಿಲ್ಲರೆ ವ್ಯಾಪಾರಸ್ಥರನ್ನು ಗುರಿಯಾಗಿಸಿಕೊಂಡು ವಿನ್ಯಾ ಸಗೊಳಿಸಲಾದ ಈ ವಿಶಿಷ್ಟ ಮೊಬೈಲ್ ಆಪ್ ಇಂಪ್ರೆಸ್ ನ್ನು ಜರ್ಮನಿಯ ಮೂಲದ ಬುಹ್ಲ್ ಸಂಸ್ಥೆ ತಯಾರಿಸಿದೆ.
- ಆಂಡ್ರಾಯ್ಡ್ ಮೊಬೈಲ್ ಅಪ್ಲಿಕೇಶನ್ ನಲ್ಲಿ ತನ್ನ (PoS) Point of Sale ವೈಶಿಷ್ಟ್ಯದ 200,000 ಕ್ಕೂ ಬ್ರಾಂಡ್ ನ ಉತ್ಪನ್ನಗಳ ದತ್ತಾಂಶ ಹೊಂದಿದೆ. ಅಥವಾ ಉತ್ಪನ್ನಗಳ ಮೇಲೆ ಬಾರ್ ಕೋಡ್ ಇದ್ದಲ್ಲಿ ಸ್ಕಾನ್ ಮಾಡಿ ಬಿಲ್ ನ್ನು ರಚಿಸಬಹುದಾಗಿದೆ.
“ನಮ್ಮ ಪ್ರಮುಖ ಉತ್ಪನ್ನ ಇಂಪ್ರೆಝ್ ನೊಂದಿಗೆ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಲು ನಮಗೆ ಸಂತೋಷವಾಗಿದೆ. ಭಾರತವು ವಿಶ್ವದ ಅತಿದೊಡ್ಡ ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದಾಗಿದೆ ಆದರೂ, ತನ್ನ ಅಸಂಘಟಿತ ಚಿಲ್ಲರೆ, ಕಿರಾಣಾ ಅಂಗಡಿಗಳನ್ನೂ ದೊಂದಿದೆ. ಕಳೆದ ವರ್ಷದಲ್ಲಿ ಸಾಂಕ್ರಾಮಿಕವು ಚಿಲ್ಲರೆ ವ್ಯಾಪಾರಿಗಳನ್ನು ಹಿಂದೆಂದಿಗಿಂತಲೂ ಹೆಚ್ಚು ಈ ರೀತಿಯ ಡಿಜಿಟಲೀಕರಣಗೊಳಿಸುವಂತೆ ಒತ್ತಾಯಿಸಿದೆ ಮತ್ತು ಇಲ್ಲಿನ ಚಿಲ್ಲರೆ ಮಾರುಕಟ್ಟೆಗೆ ಇಂಪ್ರೆಜ್ ಪಾಸ್ ಅನ್ನು ನೀಡಲು ಇದು ಸರಿಯಾದ ಸಮಯ ಎಂದು ನಾವು ಭಾವಿಸುತ್ತೇವೆ. ಬೆಂಗಳೂರಿನಲ್ಲಿ ನಮ್ಮ ಪರೀಕ್ಷಾ ಹಂತವು ನಮಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಒದಗಿಸಿದೆ ಮತ್ತು ನಾವು ಶೀಘ್ರದಲ್ಲೇ ಭಾರತದಾದ್ಯಂತ ಈ ವ್ಯವಸ್ಥೆಯನ್ನು ಹೆಚ್ಚಿಸಲು ನೋಡುತ್ತಿದ್ದೇವೆ. ನಮಗೆ ಅಮಿತ್ ಮತ್ತು ಅವರ ತಂಡದಲ್ಲಿ ನಮಗೆ ವಿಶ್ವಾಸವಿದೆ”.
ಮೊರಿಟ್ಜ್ ಬುಹ್ಲ್, ಬುಹ್ಲ್ ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ
ಇಂಪ್ರಜ್ ನ ಪಾಯಿಂಟ್ ಆಫ್ ಸೇಲ್ (ಪಿಒಎಸ್) ವ್ಯವಸ್ಥೆ ಅಪ್ಲಿಕೇಶನ್ ಬಿಡುಗಡೆ ಕುರಿತು ಬುಹ್ಲ್ ಡೇಟಾ ಸರ್ವೀಸ್ ಪ್ರೈವೇಟ್ ಲಿಮಿಟೆಡ್ ನ ಸಿಇಒ ಮತ್ತು ಕಂಟ್ರಿ ಮ್ಯಾನೇಜರ್ ಅಮಿತ್ ಮುಂದ್ರಾ ಮಾತನಾಡಿ, “ನಮ್ಮ ವೈಶಿಷ್ಟ್ಯ-ಸಮೃದ್ಧವಾದ ಈ ಮೊಬೈಲ್ ಅಪ್ಲಿಕೇಶನ್- ಇಂಪ್ರೆಝ್, ಪಾಯಿಂಟ್ ಆಫ್ ಸೇಲ್ (ಪಿಒಎಸ್) ವ್ಯಾಪಾರಸ್ತರಿಗೆ ಮತ್ತು ಅವರ ಗ್ರಾಹಕರಿಗೆ ಬಹಳ ಉಪಕಾರಿಯಾಗಿದೆ. ನಮ್ಮ ನಡುವೆ ಇರುವ ಸ್ನೇಹಪರ ನೆರೆಹೊರೆಯ ಮಳಿಗೆಗಳನ್ನು ಡಿಜಿಟಲೀಕರಣಗೊಳಿಸುವ ಮತ್ತು ಸ್ವಯಂಚಾಲಿತಗೊಳಿಸುವ ಕಡೆಗೆ ನಮ್ಮ ಪ್ರಯತ್ನ ಇದಾಗಿದೆ. ಈ ಅಪ್ಲಿಕೇಶನ್ ಗ್ರಾಹಕರಿಗೆ ಉತ್ತಮ ಗ್ರಾಹಕ ಶಾಪಿಂಗ್ ಅನುಭವವನ್ನು ನೀಡುವುದರ ಜೊತೆಗೆ ಅವರ ದಿನನಿತ್ಯದ ಕಾರ್ಯಾಚರಣೆಗಳನ್ನು ನಿರ್ವಹಿಸಲು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ. ಈ ಅಪ್ಲಿಕೇಶನ್ನೊಂದಿಗೆ, ಮಳಿಗೆಗಳು ಈಗ ಸಾಂಪ್ರದಾಯಿಕ ವಿಧಾನದ ಬಿಲ್ಲಿಂಗ್, ಇನ್ವಾಯ್ಸಿಂಗ್ ಮತ್ತು ದಿನನಿತ್ಯದ ವಹಿವಾಟು ಇತರ ಪ್ರಕ್ರಿಯೆಗಳನ್ನು ಈಗ ಸುಲಭವಾಗಿ ಡಿಜಿಟಲಿಕರಣ ಮಾಡಬಹುದು ಮತ್ತು ಇದರಿಂದ ತಮ್ಮ ವ್ಯಾಪಾರವನ್ನು ಹೇಗೆ ಬೆಳೆಸುವುದು ಮತ್ತು ಗ್ರಾಹಕರ ಹೇಗೆ ತೃಪ್ತಿ ಪಡಿಸಬಹುದು ಎಂಬುದರ ಮೇಲೆ ಹೆಚ್ಚು ಗಮನಹರಿಸಬಹುದು” ಎಂದರು.
ಸಾಂಪ್ರದಾಯಿಕ ವ್ಯಾಪಾರಸ್ಥರ ಅಂದಾಜುಗಳ ಪ್ರಕಾರ ಬೆಂಗಳೂರಿನಲ್ಲಿ ಏಕ ರೀತಿಯ ಚಿಲ್ಲರೆ ಅಂಗಡಿಯ ಮಾರಾಟ ಮಳಿಗೆಗಳ ಸಂಖ್ಯೆ 28,000 ಇವೆ. ಇವರುಗಳು ಬೃಹತ್ ಮಟ್ಟದಲ್ಲಿ, ಅಸಂಘಟಿತ ಚಿಲ್ಲರೆ ವ್ಯಾಪಾರಿಗಳು, ನಮ್ಮ ನೆರೆಹೊರೆಯ ಕಿರಾಣಾ ಅಂಗಡಿಗಳು ತಮ್ಮ ವ್ಯಾಪಾರವನ್ನು ಉತ್ತಮವಾಗಿ ನಡೆಸುತ್ತಿದ್ದಾರೆ. ಅಸಂಘಟಿತ ಚಿಲ್ಲರೆ ವ್ಯಾಪಾರವು ಕಿರಾಣಿ ಚಿಲ್ಲರೆ ಉಪವಿಭಾಗದ 90 ಪ್ರತಿಶತಕ್ಕಿಂತ ಹೆಚ್ಚು ಪ್ರಾಬಲ್ಯ ಹೊಂದಿದೆ. ಆಧುನಿಕ ಚಿಲ್ಲರೆ ಮಾದರಿ ವ್ಯಾಪಾರಿಗಳು ನೆರೆಹೊರೆಯ ಮಳಿಗೆಗಳಲ್ಲಿ ವಿಶೇಷವಾಗಿ ಕಿರಾಣಿ ಚಿಲ್ಲರೆ ಉಪವಿಭಾಗಕ್ಕೆ ಪ್ರವೇಶವನ್ನು ಮಾಡುತ್ತಿರುವಾಗ, ಅಸಂಘಟಿತ ಚಿಲ್ಲರೆ ವ್ಯಾಪಾರಿಗಳು ಇವರ ವಿರುದ್ಧ ತಮ್ಮದೇ ಆದ ಹಿಡಿತ ಸಾಧಿಸಲು ಈ ಉತ್ಪನ್ನ ದಿಂದ ಸಾಧ್ಯವಾಗಿದೆ. ಚಿಲ್ಲರೆ ವ್ಯಾಪಾರಸ್ಥರು ಈಗ ದೊಡ್ಡ ದೊಡ್ಡ ಮಾರ್ಟ್/ಮಾಲ್ ಗಳ ದಿನಸಿ ಶಾಪ್ ಗಳೊಂದಿಗೆ ಆರೋಗ್ಯಕರ ಪೈಪೋಟಿ ನೀಡಲು ಸಾಧ್ಯವಾಗಿದೆ. ಅವರ ಪೈಪೋಟಿಯ ಹೊರತಾಗಿಯೂ, ಈ ಸಾಂಪ್ರದಾಯಿಕ ಚಿಲ್ಲರೆ ವ್ಯಾಪಾರಿಗಳು ತಮ್ಮ ಗ್ರಾಹಕರ ಅಭ್ಯಾಸಗಳ ಬಗ್ಗೆ ಆಳವಾದ ಒಳನೋಟಗಳಿಂದ ಪ್ರಯೋಜನ ಪಡೆಯಲು, ಮತ್ತು ಅನೇಕ ವರ್ಷಗಳ ನಿಯಮಿತ ವ್ಯಾಪಾರದ ಪರಸ್ಪರ ಕ್ರಿಯೆಗಳಿಂದ ಖರೀದಿಸುವ ಅಭ್ಯಾಸಗಳನ್ನು ಪಡೆಯುತ್ತಿದ್ದಾರೆ. ಆಧುನಿಕ ಚಿಲ್ಲರೆ ವ್ಯಾಪಾರಿಗಳು ತಂತ್ರಜ್ಞಾನದ ಬಳಕೆಯೊಂದಿಗೆ ಗ್ರಾಹಕರ ನಿಕಟ ಸಂಬಧವನ್ನು ಪುನರಾವರ್ತಿಸಲು ಆರಂಭಿಸಿದ್ದಾರೆ.
ಇಂಪ್ರೆಝ್ ವೆಬ್ ಅಪ್ಲಿಕೇಶನ್ ಈಗಾಗಲೇ 22,000 ರೂ. ಮೌಲ್ಯದ ವ್ಯವಹಾರಗಳ ಇನ್ವಾಯಿಸ್ ಗಳನ್ನು ಮಾಡಿದ್ದು, ವ್ಯಾಪಾರಿಗಳು ಈಗಾಗಲೇ ಇಂಪ್ರೆಝ್ ಅಪ್ಲಿಕೇಶನ್ ಬಳಸಿ 600 ಕೋಟಿ ವಹಿವಾಟು ನಡೆಸಿದ್ದಾರೆ. ರಾಷ್ಟ್ರದಾದ್ಯಂತ ತಯಾರಕರು, ಚಿಲ್ಲರೆ ವ್ಯಾಪಾರಿಗಳು ಮತ್ತು ಸೇವಾ ಸಂಸ್ಥೆಗಳು, ಕೈಗಾರಿಕೆಗಳು ನಂಬುವಂತೆ, ಈ ಸಾಸ್ ( software as a service) ಉತ್ಪನ್ನವನ್ನು ಬಹು ವೇದಿಕೆಗಳಿಂದ ಸುರಕ್ಷತೆಗಾಗಿ ಪ್ರಮಾಣೀಕರಿಸಲಾಗಿದೆ. ಇಂಪ್ರಜ್ ನ ಪಾಯಿಂಟ್ ಆಫ್ ಸೇಲ್ (ಪಿಒಎಸ್) ವ್ಯವಸ್ಥೆಯಲ್ಲಿ ದಾಸ್ತಾನು ನಿರ್ವಹಣೆ, 200,000+ ಉತ್ಪನ್ನಗಳ ಸಿದ್ಧ ಡೇಟಾಬೇಸ್ ನಿಂದ ಪದಾರ್ಥಗಳನ್ನು ಸ್ಕ್ಯಾನ್ ಮಾಡುವುದು ಮತ್ತು ಟ್ರ್ಯಾಕಿಂಗ್ ಮಾಡುವುದು, ಇನ್ ವಾಯ್ಸಿಂಗ್, ಉತ್ಪಾದನೆ, ಪಾವತಿಗಳು ಮತ್ತು ಪಾವತಿ ಜ್ಞಾಪಕಗಳು, ಗ್ರಾಹಕರ ಡೇಟಾ ನಿರ್ವಹಣೆ,ಮಾರಾಟ ಮತ್ತು ವೆಚ್ಚ ಒಳನೋಟಗಳು,ಡೇಟಾ ಭದ್ರತೆ ಮತ್ತು ತೆರಿಗೆ, ವ್ಯಾಪಾರದಲ್ಲಿ ಪಾರದರ್ಶಕತೆ ಸೌಲಭ್ಯಗಳು ಸೇರಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post