ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಸೆಪ್ಟೆಂಬರ್ 8 ರಿಂದ 11ರವರೆಗೆ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಭಜನಾ ಕಾರ್ಯಕ್ರಮ
(ಪ್ರತಿದಿನ ಸಂಜೆ 6-00 ರಿಂದ 7-00) : ಸೆಪ್ಟೆಂಬರ್ 8-ಮತ್ತಿಕೆರೆಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ಭಜನಾ ಮಂಡಳಿ, ಸೆಪ್ಟೆಂಬರ್ 9-ವಿಜಯನಗರದ ಪವಿತ್ರ ಗಾನ ವೃಂದ, ಸೆಪ್ಟೆಂಬರ್ 10-ಬಸವೇಶ್ವರನಗರದ
ಶ್ರೀ ಹಯವದನ ಭಜನಾ ಮಂಡಳಿ.
ಪ್ರವಚನ ಕಾರ್ಯಕ್ರಮ
(ಪ್ರತಿದಿನ ಸಂಜೆ 7-00 ರಿಂದ 8-00) : ಸೆಪ್ಟೆಂಬರ್ 8, 9 ಮತ್ತು 10ರಂದು ಶ್ರೀ ಕಂಬಾಲೂರು ಶ್ರೀವತ್ಸಾಚಾರ್ಯ ಇವರಿಂದ “ಭಾಗವತ ಮಹಾತ್ಮೆ” ಧಾರ್ಮಿಕ ಪ್ರವಚನ.
Also read>> ಪ್ಲಾಸ್ಟಿಕ್’ನಲ್ಲಿ ಸಂಗ್ರಹಿಸಿದ ನೀರು ಆರೋಗ್ಯಕ್ಕೆ ಮಾರಕ: ರಾಘವೇಶ್ವರ ಶ್ರೀ
ಹರಿನಾಮ ಸಂಕೀರ್ತನೆ :
ಸೆಪ್ಟೆಂಬರ್ 11, ಶುಕ್ರವಾರ, ಸಂಜೆ 6:30 ರಿಂದ 8-00. ಗಾಯನ : ಕು|| ರಚನಾ ಶರ್ಮಾ, ಪಿಟೀಲು : ಶ್ರೀ ಎಂ.ಎನ್. ಸತ್ಯನಾರಾಯಣ, ಮೃದಂಗ : ಶ್ರೀ ಶ್ರೀನಿವಾಸ್ ಅನಂತರಾಮಯ್ಯ ಇವರುಗಳು ನಡೆಸಿಕೊಡಲಿದ್ದಾರೆ ಎಂದು ಟಿ ಟಿ ಡಿ ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ|| ಪಿ. ಭುಜಂಗರಾವ್ ತಿಳಿಸಿದ್ದಾರೆ. ಕಾರ್ಯಕ್ರಮ ನಡೆಯುವ ಸ್ಥಳ : ಶ್ರೀ ಮಾರುತಿ ಮಹಾಗಣಪತಿ ದೇವಸ್ಥಾನ (ಪುಣ್ಯಧಾಮ), 1ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-560010.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









