ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರು ಎಫ್‌ಸಿ ತಂಡವು ಸಾವಿಯೊ ಮೆಡೈರಾ #SavioMedeira ಅವರನ್ನು ಕ್ಲಬ್‌ನ ಯುವ ಅಭಿವೃದ್ಧಿ ವಿಭಾಗದ ಮುಖ್ಯಸ್ಥರನ್ನಾಗಿ #HeadofYouthDevelopment ನೇಮಕ ಮಾಡಿರುವುದಾಗಿ ಘೋಷಿಸಲು ಹರ್ಷಿಸುತ್ತದೆ. ಬ್ಲೂಸ್ ತಂಡವು ತಳಮಟ್ಟದಿಂದ ಪ್ರಥಮ ತಂಡದವರೆಗೆ #FirstTeam ಆಟಗಾರರ ಬೆಳವಣಿಗೆಯ ಹಾದಿಯನ್ನು ಬಲಪಡಿಸುತ್ತಿದ್ದು, ಈ ನಿಟ್ಟಿನಲ್ಲಿ ಮೆಡೈರಾ ಅವರು ಕ್ಲಬ್‌ನ ಯುವ ಅಭಿವೃದ್ಧಿ ಕಾರ್ಯಕ್ರಮದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ಮೆಡೈರಾ ಅವರು ಭಾರತೀಯ ಮತ್ತು ಅಂತರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ತರಬೇತಿ, ತಾಂತ್ರಿಕ ಅಭಿವೃದ್ಧಿ ಮತ್ತು ತರಬೇತುದಾರರ ಶಿಕ್ಷಣದಲ್ಲಿ ಎರಡು ದಶಕಗಳಿಗೂ ಹೆಚ್ಚು ಅನುಭವದೊಂದಿಗೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
Also Read: ಬೆಂಗಳೂರು-ಹುಬ್ಬಳ್ಳಿ, ಬೀದರ್, ಮುಂಬೈ ಸೇರಿ 28 ರೈಲುಗಳ ಸಂಚಾರದಲ್ಲಿ ವ್ಯತ್ಯಯ
ಅವರು ಈ ಹಿಂದೆ ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ #AIFF ಅಡಿಯಲ್ಲಿ ಭಾರತೀಯ ಹಿರಿಯ ಪುರುಷರ ರಾಷ್ಟ್ರೀಯ ತಂಡದೊಂದಿಗೆ ಮುಖ್ಯ ತರಬೇತುದಾರ ಮತ್ತು ಸಹಾಯಕ ತರಬೇತುದಾರ ಸೇರಿದಂತೆ ಹಲವಾರು ಪಾತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, 2011ರ ಸ್ಯಾಫ್ #SAFF ಚಾಂಪಿಯನ್‌ಶಿಪ್, ನೆಹರು ಕಪ್ ಮತ್ತು ಎಎಫ್‌ಸಿ ಚಾಲೆಂಜ್ ಕಪ್ ಗೆದ್ದ ತಂಡದ ಭಾಗವಾಗಿದ್ದರು.
ಕ್ಲಬ್ ಮಟ್ಟದಲ್ಲಿ, ಮೆಡೈರಾ ಅವರು ಸಾಲ್ಗಾಂವ್ಕರ್ ಸ್ಪೋರ್ಟ್ಸ್ ಕ್ಲಬ್‌ನೊಂದಿಗೆ ಯಶಸ್ವಿ ಅವಧಿಯನ್ನು ಕಳೆದಿದ್ದಾರೆ. ಅವರ ನೇತೃತ್ವದಲ್ಲಿ ತಂಡವು ಅನೇಕ ಬಾರಿ ಗೋವಾ ಪ್ರೊಫೆಷನಲ್ ಲೀಗ್ ಪ್ರಶಸ್ತಿಗಳನ್ನು (2002-2005) ಮುಡಿಗೇರಿಸಿಕೊಂಡಿದೆ ಮತ್ತು ನ್ಯಾಷನಲ್ ಲೀಗ್‌ನಲ್ಲಿ ರನ್ನರ್-ಅಪ್ ಸ್ಥಾನ ಪಡೆದಿದೆ. ಜೊತೆಗೆ ಅವರು 2003ರ ಡುರಾಂಡ್ ಕಪ್‌ನಲ್ಲಿ ಅತ್ಯುತ್ತಮ ತರಬೇತುದಾರ ಪ್ರಶಸ್ತಿಯನ್ನೂ ಪಡೆದಿದ್ದಾರೆ.
Also Read: ಕೋಟಕ್ ಮಹೀಂದ್ರಾ ಬ್ಯಾಂಕ್ ನಾಯಕತ್ವ ಬದಲಾವಣೆ | ಸಿಇಓ ಆಗಿ ಸೂರಜ್ ರಾಜಪ್ಪನ್ ನೇಮಕ
ಭಾರತೀಯ ಫುಟ್‌ಬಾಲ್‌ನ ತಾಂತ್ರಿಕ ವಲಯವನ್ನು ರೂಪಿಸುವಲ್ಲಿ ಮೆಡೈರಾ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು AIFF ನಲ್ಲಿ ತರಬೇತುದಾರರ ಶಿಕ್ಷಣದ ಮುಖ್ಯಸ್ಥರಾಗಿ ಮತ್ತು ಹಂಗಾಮಿ ತಾಂತ್ರಿಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಜೊತೆಗೆ AFC ಕೋಚ್ ಎಜುಕೇಶನ್ ಪ್ಯಾನೆಲ್‌ನ ಸದಸ್ಯರೂ ಆಗಿದ್ದಾರೆ. ಅವರು ಪ್ರಸ್ತುತ ಫಿಫಾ #FIFA ತಾಂತ್ರಿಕ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಇತ್ತೀಚಿನವರೆಗೆ ಸ್ಪೋರ್ಟಿಂಗ್ ಕ್ಲಬ್ ಡಿ ಗೋವಾದಲ್ಲಿ ತಾಂತ್ರಿಕ ನಿರ್ದೇಶಕರ ಹುದ್ದೆಯಲ್ಲಿದ್ದರು.
ಬೆಂಗಳೂರು ಎಫ್‌ಸಿಯ ಯುವ ಅಭಿವೃದ್ಧಿ ಮುಖ್ಯಸ್ಥ ಸಾವಿಯೊ ಮೆಡೈರಾ ಮಾತನಾಡಿ, “ಬೆಂಗಳೂರು ಎಫ್‌ಸಿ ಈ ಹಾದಿಯನ್ನು ನಿರ್ಮಿಸುವಲ್ಲಿ ಗಮನಾರ್ಹ ಕೆಲಸ ಮಾಡಿದೆ ಮತ್ತು ಇದರ ಸಂಪೂರ್ಣ ಶ್ರೇಯಸ್ಸು ಇದನ್ನು ಸಾಧ್ಯವಾಗಿಸಿದ ತರಬೇತುದಾರರು ಮತ್ತು ಎಲ್ಲರಿಗೂ ಸಲ್ಲುತ್ತದೆ. ನಮ್ಮ U14, U16, U18 ಮತ್ತು ರಿಸರ್ವ್ ತಂಡಗಳು ಈಗ ಇರುವ ಹಂತವನ್ನು ನೋಡಿದಾಗ, ಅವುಗಳ ಪ್ರಗತಿಯು ಅತ್ಯಂತ ನೈಸರ್ಗಿಕವಾಗಿದೆ ಮತ್ತು ಯುವ ಅಭಿವೃದ್ಧಿಯ ಮೂಲ ಉದ್ದೇಶವೇ ಅದು. ನನ್ನ ತತ್ವ ಸರಳವಾಗಿದೆ – ಯಾವಾಗಲೂ ಬೇರೆ ಕಡೆಯಿಂದ ಆಟಗಾರರನ್ನು ಸೆಳೆದುಕೊಳ್ಳುವ ಬದಲು, ನಮ್ಮ ಸ್ಥಳೀಯ ಆಟಗಾರರನ್ನು ಬೆಳೆಸಿ ಅವರಿಗೆ ತರಬೇತಿ ನೀಡಿ ಪ್ರಥಮ ತಂಡಕ್ಕೆ ಸೇರಿಸುವುದು ಯಾವುದೇ ಕ್ಲಬ್‌ನ ಯುವ ಅಭಿವೃದ್ಧಿಯ ಅಂತಿಮ ಗುರಿಯಾಗಿದೆ. ಅದೇ ಸಂಸ್ಕೃತಿಯನ್ನು ನಾನು ಇಲ್ಲಿ ಬಲಪಡಿಸಲು ಬಯಸುತ್ತೇನೆ ಎಂದರು.
ಬೆಂಗಳೂರು ಎಫ್‌ಸಿಯ ಫುಟ್‌ಬಾಲ್ ನಿರ್ದೇಶಕ ಡ್ಯಾರೆನ್ ಕಾಲ್ಡೈರಾ ಮಾತನಾಡಿ, “ಸಾವಿಯೊ ಅವರನ್ನು ಬೆಂಗಳೂರು ಎಫ್‌ಸಿಗೆ ಸ್ವಾಗತಿಸಲು ನಮಗೆ ಸಂತೋಷವಾಗಿದೆ. ಅವರು ಅಪಾರ ಅನುಭವವನ್ನು ಹೊತ್ತು ತಂದಿದ್ದಾರೆ. ಭಾರತೀಯ ಫುಟ್‌ಬಾಲ್‌ನ ಉನ್ನತ ಮಟ್ಟದಲ್ಲಿ ಕೆಲಸ ಮಾಡಿರುವ ತರಬೇತುದಾರ ಮತ್ತು ತಾಂತ್ರಿಕ ನಿರ್ದೇಶಕರಾಗಿರುವ ಅವರು, ಈಗಲೂ ಫಿಫಾ ತಾಂತ್ರಿಕ ತಜ್ಞರಾಗಿ ಕ್ರೀಡೆಗೆ ಕೊಡುಗೆ ನೀಡುತ್ತಿದ್ದಾರೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















