ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಮುಂಗಾರು ಮಳೆ ತೀರ ವಿಳಂಬದಿಂದ ಇಲ್ಲಿನ ತುಂಗಭದ್ರಾ ಜಲಾಶಯದ Thunga Bhadra Reservior ನೀರಿನ ಮಟ್ಟ ಬಹುತೇಕ ತಳಮಟ್ಟ ತಲುಪಿದೆ. ಜಲಾಶಯದಲ್ಲಿ 5 ಟಿಎಂಸಿ ಅಡಿ ನೀರು ಇದ್ದರು ಉಪಯೋಗಕ್ಕೆ ಮತ್ತು ಬಳಕೆಗೆ 3 ಟಿ ಎಂ ಸಿ ಮಾತ್ರ ಲಭ್ಯವಿದೆ. ಅದು ಸಹಿತ ಇನ್ನೊಂದು ವಾರದಲ್ಲಿ ಖಾಲಿಯಾಗಲಿದೆ.
ನಾಲ್ಕು ಜಿಲ್ಲೆಗಳಿಗೆ ನೀರುಣಿಸುವ ಹಾಗೂ ತೆಲಂಗಾಣ, ಆಂಧ್ರಪ್ರದೇಶಗಳಿಗೂ ನೀರು ಪೂರೈಸುವ ತುಂಗಭದ್ರಾ ಜಲಾಶಯದಲ್ಲಿ 105.78 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯವಿದೆ. ಈಗ ಇರುವ ಒಟ್ಟು ನೀರಿನ ಪ್ರಮಾಣ 4.84 ಟಿಎಂಸಿ ಅಡಿ. ಇದರಲ್ಲೂ 2 ಟಿಎಂಸಿ ಅಡಿ ನೀರನ್ನು ಕುಡಿಯುವ ನೀರಿಗಾಗಿ ಪರಿಗಣಿಸುವುದರಿಂದ ಇನ್ನು ಬಳಕೆಗೆ ಲಭ್ಯ ಇರುವ ನೀರಿನ ಪ್ರಮಾಣ 2.50 ಟಿಎಂಸಿ ಅಡಿ ನೀರು ಮಾತ್ರ. ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಜಲಾಶಯದಲ್ಲಿ 40 ಟಿಎಂಸಿ ನೀರಿನ ಸಂಗ್ರಹವಾಗಿತ್ತು. ಕಳೆದ ನಾಲ್ಕೈದು ದಿನಗಳಿಂದ ಜಲಾಶಯಕ್ಕೆ ಒಳಹರಿವು ಬಂದ್ ಆಗಿದೆ. ಹೊರ ಹರಿವನ್ನು 300 ಕ್ಯೂಸೆಕ್‌ಗೂ ಮಿತಿಗೊಳಿಸಲಾಗಿದೆ.

ವಿಜಯನಗರ ಜಿಲ್ಲೆಯಲ್ಲಿ ಸದ್ಯ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ, ಶಿವಮೊಗ್ಗ ಸಹಿತ ಸುತ್ತಮುತ್ತಲ ಪ್ರದೇಶಗಳಿಗೆ ಮುಂಗಾರು ಮಳೆ ಬರುವುದು ಮತ್ತಷ್ಟು ವಿಳಂಬವಾದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆ ಇರುತ್ತದೆ. ಹಾಗಿದ್ದಾಗ ನದಿಯಲ್ಲಿ 2 ಟಿ ಎಂಸಿ ಡೆಡ್‌ಸ್ಟೋರೇಜ್ ನೀರನ್ನು ಕುಡಿಯಲು ಮಾತ್ರ ಬಳಸಬೇಕಾಗುತ್ತದೆ.
ವೆಂಕಟೇಶ್, ಜಿಲ್ಲಾಧಿಕಾರಿ

Also read: ರಾಜಸ್ಥಾನದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಮೋದಿ ಮೂರನೇ ಅವಧಿಗೆ ಪ್ರಧಾನಿಯಾಗಲಿದ್ದಾರೆ: ಅಮಿತ್ ಶಾ
101 ಟಿಎಂಸಿ ಶೇಖರಣಾ ಸಾಮರ್ಥ್ಯವಿರುವ ತುಂಗಾ ಭದ್ರಾ ಜಲಾಶಯವು 28000 ಚದರ ಕಿ.ಮೀ. ವಿಸ್ತಾರವನ್ನು ಹೊಂದಿದೆ. ತುಂಗಭದ್ರಾ ಅಣೆಕಟ್ಟು ಸುಮಾರು 49.5 ಮೀಟರ್ ಎತ್ತರವಿದ್ದು ಮತ್ತು ಸುಮಾರು 33 ಕ್ರೆಸ್ಟ್ ಗೇಟ್‌ಗಳನ್ನು ಹೊಂದಿದೆ. ಅಲ್ಲದೆ, ಇದರ ಮೂಲಕ ಸುಮಾರು 10 ಲಕ್ಷ ಹೆಕ್ಟೇರ್ ಪ್ರದೇಶಗಳಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಈ ಬಾರಿ ಮಳೆಬಾರದೆ ಇದ್ದರೆ ಈ ವರ್ಷ ಈ ಭಾಗದಿಂದ ಭತ್ತ, ಬಾಳೆ ಮತ್ತು ಕಬ್ಬಿನ ಬೇಳೆಗೆ ಬಾರಿ ಹೊಡೆತ ಬಿಳುತ್ತದೆ. ಕಾದು ನೋಡ ಬೇಕಾಗಿದೆ, ಭಾಗೀರಥಿ ಸಮೀಪಿಸುತ್ತಿದ್ದಾಳೆ ಮಂತ್ರಾಲಯದ ಕಾಮಧೇನು ಕಲ್ಪ ವೃಕ್ಷ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ ಸಹ ಸಮೀಪದಲ್ಲಿ ಇರುವುದರಿಂದ ತುಂಗಭದ್ರಾ ಉಕ್ಕಿ ಹರಿಯುತ್ತಾಳೆ ಎಂಬುವ ಭರವಸೆ ಇಲ್ಲಿಯ ಭಕ್ತರದಾಗಿದೆ.
ಲೇಖನ: ಮುರುಳಿಧರ್ ನಾಡಿಗೇರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post