ಬೆಂಗಳೂರು: ಕಾಕೋಳು, ಬೆಂಗಳೂರು-ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಸಮೀಪದ ಚಾರಿತ್ರಿಕ ಪ್ರೇಕ್ಷಣೀಯ ತಾಣದಲ್ಲಿ ನಾಳೆ ಶ್ರೀಪಾದರಾಜರ ಆರಾಧನೆಗೆ ಸಕಲ ಸಿದ್ದತೆ ನಡೆದಿದೆ.
ಇಲ್ಲಿನ ಶ್ರೀಪಾದರಾಜರಿಂದ ಪ್ರತಿಷ್ಠಾಪಿತ ಬೃಂದಾವನದಲ್ಲಿರುವ ಚತುರ್ಭುಜ ವೇಣುಗೋಪಾಲಕೃಷ್ಣನ ಜಾಗೃತ ಸನ್ನಿಧಾನದ ಪಾಂಚಜನ್ಯ ಸಭಾಂಗಣದ ಹರಿತಸ ವೇದಿಕೆಯಲ್ಲಿ ಮಹಿಮಾನ್ವಿತ ಮಾಧ್ವ ತಪಸ್ವಿ , ವ್ಯಾಸ-ದಾಸ ಸಾಹಿತ್ಯಗಳ ಸವ್ಯಸಾಚಿ, ಸಾಧನದ ಸತ್ಪಥ ತೋರುವ ಭಕ್ತಾನುಕಂಪಿ ಯತಿಪುಂಗವ, ಪರಮ ಭಾಗವತ ಶಿರೋಮಣಿ ಧೃವಾಂಶ ಸಂಭೂತರಾದ ಶ್ರೀಶ್ರೀಪಾದರಾಜರ ಆರಾಧನಾ ಮಹೋತ್ಸವವನ್ನು ಪಾಂಚಜನ್ಯ ಪ್ರತಿಷ್ಠಾನದ ಸಹಯೋಗದೊಂದಿಗೆ ವಿಶೇಷವಾಗಿ ಗಾನ ಜ್ಞಾನ ಯಜ್ಞವನ್ನಾಗಿ ಆಚರಿಸಲಾಗುತ್ತದೆ.
ಕೀರ್ತಿಶೇಷ ಶ್ರೀಹೊಳವನಹಳ್ಳಿ ನಾಗರಾಜಮೂರ್ತಿ ಸ್ಮರಣಾರ್ಥ ಅವರ ಕುಟುಂಬವರ್ಗದವರು ಪ್ರಧಾನ ಸೇವಾಕರ್ತರಾಗಿ ಆಯೋಜಿಸಿರುವ ಗುರುಭಕ್ತಿ ಉತ್ಸವದಲ್ಲಿ ಜೂನ್ 16ರ ನಾಳೆ ಬೆಳಿಗ್ಗೆ 10 ಗಂಟೆಗೆ ಶ್ರೀಪಾದರಾಜರ ಮಹಿಮಾ ಕುರಿತು ವಿದ್ವಾನ್ ಕಲ್ಲಾಪುರ ಪವಮಾನಾಚಾರ್ಯರು ಪ್ರವಚನ ನೆರವೇರಿಸಕೊಡಲಿದ್ದಾರೆ. ನಂತರ ಶ್ರೀಪಾದರಾಜರ ಕೃತಿಗಳ ಗಾಯನ ಕಾರ್ಯಕ್ರಮವನ್ನು ವಿದೂಷಿ ರಶ್ಮಿ ಮಧುಸೂಧನ್ ರವರು ನಡೆಸಿಕೊಡಲಿದ್ದಾರೆ.
ವಿವರಗಳಿಗೆ 9845075250/9739369621ಗೆ ಸಂಪರ್ಕಿಸಬಹುದು.
Discussion about this post