ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರ ಅವಧಿ ಮುಕ್ತಾಯಗೊಂಡಿದ್ದು ಇದರ ಆಯ್ಕೆಯ ಅಧಿಕಾರವನ್ನು ಜಿಪಂ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್ ಅವರಿಗೆ ಸರ್ವಾನುಮತದಿಂದ ಆಯ್ಕೆ ಮಾಡಲು ಇಂದು ನಡೆದ ವಿಶೇಷ ಸಭೆಯಲ್ಲಿ ಒಪ್ಪಿಗೆ ಸೂಚಿಸಿತು.
ಜ್ಯೋತಿ ಎಸ್. ಕುಮಾರ್ ಅವರ ನೇತೃತ್ವದಲ್ಲಿ ಜಿಪಂನ ಸಭಾಂಗಣದಲ್ಲಿ ಜಿಪಂ ಸದಸ್ಯರ ವಿಶೇಷ ಸಭೆ ನಡೆಯಿತು. 51 ಸದಸ್ಯರ, ಎಂಪಿ, ಎಂಎಲ್’ಎ, ಎಂಎಲ್’ಸಿ ಹಾಗೂ ಜಿಪಂ ಸದಸ್ಯರನ್ನೊಳಗೊಂಡ ವಿಶೇಷ ಸಭೆಯಲ್ಲಿ 35 ಜನ ಭಾಗವಹಿಸಿ ಕೋರಂಪಾರಂ ಆದ ಹಿನ್ನೆಲೆಯಲ್ಲಿ ಸಭೆ ಆರಂಭಗೊಂಡಿತು.
51 ಸದಸ್ಯರಲ್ಲಿ 26 ಜನ ಸದಸ್ಯರು ಭಾಗವಹಿಸಿದರೆ ಕೋರಂ ಫಾರಂ ಆಗಲಿದ್ದು ಈ ಬಾರಿಯ ವಿಶೇಷ ಸಭೆಯಲ್ಲಿ 26 ಜನಕ್ಕೂ ಹೆಚ್ಚ ಜನ ಭಾಗವಹಿಸಿದ್ದರು. ಈ ಹಿನ್ನಲೆಯಲ್ಲಿ ಸದಸ್ಯರ ಅನುಮೋದನೆ ಪಡೆದುಕೊಂಡಿತು.
ಆರಂಭದಲ್ಲಿ ಮಾತನಾಡಿದ ಕೆ.ಇ. ಕಾಂತೇಶ್ 5 ಸ್ಥಾಯಿ ಸಮಿತಿಯಲ್ಲಿ ಎಲ್ಲಾ ಸ್ಥಾಯಿ ಸಮಿತಿಯ ಅಧಿಕಾರವಧಿ ಪೂರ್ಣಗೊಂಡಿದ್ದು ಮುಂದಿನ ಆಯ್ಕೆಯ ಪ್ರಕ್ರಿಯೆಯನ್ನು ಜಿಪಂ ಅಧ್ಯಕ್ಷರಿಗೆ ಬಿಟ್ಟುಕೊಡಲಾಗುವುದು ಎಂದು ಸಭೆಗೆ ತಿಳಿಸಿದರು.
ಈ ಹೇಳಿಕೆಗೆ ಸಭೆ ಸರ್ವಾನು ಮತದಿಂದ ಒಪ್ಪಿಗೆ ಸೂಚಿಸಿತು. ಇದನ್ನು ಜಿಪಂ ಸಿಇಒ ಸಭೆಯ ಒಪ್ಪಿಗೆಯನ್ನು ಓದುವ ಮೂಲಕ ದಾಖಲು ಮಾಡಿಕೊಳ್ಳಲಾಯಿತು.
Get In Touch With Us info@kalpa.news Whatsapp: 9481252093
Discussion about this post