ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕೊರೋನಾ ವೈರಸ್ ಲಾಕ್ ಡೌನ್ ನಿಯಮಾವಳಿಗಳಲ್ಲಿ ಕೆಲವೊಂದು ಸಡಿಲಿಕೆ ಮಾಡಿರುವ ಬೆನ್ನಲ್ಲೇ 55 ಸೀಟುಗಳಿರುವ ಕೆಎಸ್’ಆರ್’ಟಿಸಿಯ ಕರ್ನಾಟಕ ಸಾರಿಗೆ ಬಸ್’ನಲ್ಲಿ 35 ಪ್ರಯಾಣಿಕರಿಗೆ ಮಾತ್ರ ಅವಕಾಶವಿದ್ದು, ಸಂಸ್ಥೆ ಈಗ ನಿಗದಿಪಡಿಸಿರುವ ಪ್ರಯಾಣ ದರ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತಂತೆ ಕೆಎಸ್’ಆರ್’ಟಿಸಿ ರಾಜಧಾನಿ ಬೆಂಗಳೂರಿನಿಂದ ರಾಜ್ಯದ ವಿವಿಧ ನಗರಗಳಿಗೆ ತೆರಳುವ ಪ್ರಯಾಣದರವನ್ನು ನಿಗದಿಪಡಿಸಿ, ಪ್ರಕಟಿಸಿದ್ದು, ಇದು ಜನಸಾಮಾನ್ಯರ ಕೈ ದಾಟುತ್ತಿದೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಎಷ್ಟು?
ಸಂಸ್ಥೆ ಪ್ರಕಟಿಸರುವ ದರ ಪಟ್ಟಿಯಂತೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ 310 ಕಿಮೀ ದೂರವಿದ್ದು, ರೌಂಡ್ ಟ್ರಿಪ್’ಗೆ 620 ಕಿಮೀ ಆಗುತ್ತದೆ. ಕಿಲೋ ಮೀಟರ್’ಗೆ 39 ರೂಪಾಯಿಯಂತೆ ಒಟ್ಟು 24180 ರೂ. ಆಗುತ್ತದೆ. ಇದರೊಂದಿಗೆ ಟೋಲ್ ದರವಾಗಿ 1230 ರೂ. ಪಾವತಿಸಬೇಕಿದ್ದು, ಒಟ್ಟು 25410 ರೂ. ಆಗುತ್ತದೆ.
ಸದ್ಯ ಬಸ್’ನಲ್ಲಿ 35 ಪ್ರಯಾಣಿಕರಿಗೆ ಮಾತ್ರ ತೆರಳಲು ಅವಕಾಶವಿದ್ದು, ಈ ಲೆಕ್ಕಾಚಾರದಂತೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಪ್ರತಿ ಪ್ರಯಾಣಿಕರಿಗೆ ಬರೋಬ್ಬರಿ 847 ರೂ. ವಿಧಿಸಲಾಗುತ್ತದೆ. ಅಂದರೆ ಹಿಂದಿನ ದರದ ಮೊತ್ತಕ್ಕಿಂತಲೂ ಒಂದೂ ಮುಕ್ಕಾಲು ಪಟ್ಟು ಹೆಚ್ಚಿಗೆ ನೀಡಬೇಕಾಗುತ್ತದೆ.
ಬೆಂಗಳೂರಿನಿಂದ ರಾಜ್ಯದ ವಿವಿಧ ನಗರಗಳಿಗೆ ನಿಗದಿಯಾಗಿರುವ ಪ್ರಯಾಣ ದರವೆಷ್ಟು? ಇಲ್ಲಿದೆ ಪಟ್ಟಿ:
ಸಮಸ್ಯೆ ಪರಿಹರಿಸಿದ ಸರ್ಕಾರ:
ಇನ್ನು, ಇಂದು ಬಸ್ ಆರಂಭವಾದ ಹಿನ್ನೆಲೆಯಲ್ಲಿ ತಮ್ಮ ಊರುಗಳಿಗೆ ತೆರಳಲು ನೂರಾರು ಮಂದಿ ಕಾರ್ಮಿಕರು ಮೆಜೆಸ್ಟಿಕ್’ನಲ್ಲಿ ನೆರೆದಿದ್ದರು. ಈಗಾಗಲೇ ಸಂಕಷ್ಟದಲ್ಲಿರುವ ಈ ಕಾರ್ಮಿಕರು ದುಪ್ಪಟ್ಟು ಹಣ ನೀಡಿ ವಿವಿಧ ಊರುಗಳಿಗೆ ತೆರಳುವುದು ಕಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ತುರ್ತು ಸಭೆ ನಡೆಸಿದ ಸರ್ಕಾರ ಮಾಮೂಲಿ ದರ ನೀಡಿ ತೆರಳುವಂತೆ ಸೂಚಿಸಿದ್ದು, ಇನ್ನೊಂದು ಕಡೆ ದರವನ್ನು ಕಾರ್ಮಿಕ ಇಲಾಖೆ ಬರಿಸಲಿದೆ ಎಂದು ತಿಳಿಸಿದೆ.
ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮಾನ್ಯ ಉಪಮುಖ್ಯಮಂತ್ರಿಗಳು, ಸಾರಿಗೆ ಇಲಾಖೆ ರವರು ಇಂದು ಬೆಳಗ್ಗೆ ಚರ್ಚಿಸಿ, ಒಂದು ಕಡೆ ದರವನ್ನು ಮಾತ್ರ ವಿಧಿಸಿ, ಸೂಕ್ತ ಸಾಮಾಜಿಕ ಅಂತರವನ್ನು ಕಾಪಾಡಿ, ಕಾರ್ಮಿಕರನ್ನು ಬಸ್ಸುಗಳಲ್ಲಿ ಸ್ಥಳಾಂತರಿಸುವುದು.. ಮತ್ತೊಂದು ಕಡೆ ದರವನ್ನು ಕಾರ್ಮಿಕ ಇಲಾಖೆಯು ಭರಿಸಲಿದೆ.
— KSRTC (@KSRTC_Journeys) May 2, 2020
Get in Touch With Us info@kalpa.news Whatsapp: 9481252093
Discussion about this post