Read - 2 minutes
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧಿಕಾರೇತರ ಸದಸ್ಯರನ್ನಾಗಿ ಕೆ. ವೆಂಕಟೇಶ್ ಕವಲಕೋಡು ಅವರನ್ನು ರಾಜ್ಯ ಸರ್ಕಾರ ನಿಯೋಜನೆ ಮಾಡಲಾಗಿದೆ.
ಗ್ರಾಮಾಂತರ ಸಮುದಾಯ ವಿಜ್ಞಾನ ಕೇಂದ್ರ ಶೆಡ್ತಿಕೆರೆ ಸಂಸ್ಥೆಯು ಕಳೆದ ಮೂರುವರೆ ದಶಕಗಳಿಂದ ಗ್ರಾಮೀಣ ಪ್ರದೇಶದಲ್ಲಿ ವಿಜ್ಞಾನ, ತಂತ್ರಜ್ಞಾನ, ಕೃಷಿ, ಪರಿಸರ, ಆರೋಗ್ಯ, ಶೈಕ್ಷಣಿಕ, ಗಣಕ ಶಿಕ್ಷಣ, ಬದಲೀ ಇಂಧನಗಳ ಬಳಕೆ, ಕಡಿಮೆ ಖರ್ಚಿನಲ್ಲಿ ವಿಜ್ಞಾನ ಉಪಕರಣಗಳ ತಯಾರಿಕಾ ಕಾರ್ಯಾಗಾರ, ವೈಜ್ಞಾನಿಕ ಪುಸ್ತಕಗಳ ಪ್ರಕಟಣೆ, ಜನವಿಜ್ಞಾನ ಮಾಸಪತ್ರಿಕೆ, ವೃಕ್ಷಲಕ್ಷ ಅಂದೋಲನದಲ್ಲಿ , ಸೇವಾಸಾಗರ ಸಂಸ್ಧೆ ಗಳಲ್ಲಿ 30 ವಷ್ ಗಳಿಂದ ಸಕ್ರಿಯವಾಗಿ ಭಾಗವಹಿಸಿರುತ್ತಾರೆ. ಹೀಗೆ ಹಲವು ಸಮಾಜ ಮುಖಿ ಕ್ರ್ಯಾಗಳನ್ನು ನಡೆಸಿಕೊಂಡು ಬರುತ್ತಿದೆ.
ವಿಜ್ಞಾನ ಕೇಂದ್ರದ ಮೂಲಕ ಇವರು ನಡೆಸುತ್ತಿರುವ ಜನಪರ ಕಾರ್ಯಗಳನ್ನು ಗುರುತಿಸಿ 1988-89ರಲ್ಲಿ ಕರ್ನಾಟಕ ಸರ್ಕಾರದ ಯುವಜನ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಯುವಪ್ರಶಸ್ತಿ, 1992-93ರಲ್ಲಿ ನೆಹರು ಯುವ ಕೇಂದ್ರ ಶಿವಮೊಗ್ಗದಿಂದ ಜಿಲ್ಲಾಮಟ್ಟದಲ್ಲಿ ಉತ್ತಮ ಯುವಸಂಘಟನೆ ಪ್ರಶಸ್ತಿ, 2009-10ರಲ್ಲಿ ಕರ್ನಾಟಕ ಅರಣ್ಯ, ಪರಿಸರ, ಜೀವಶಾಸ್ತ್ರ ಇಲಾಖೆಯಿಂದ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ, ಮತ್ತು 2001ರಲ್ಲಿ ಪರಿಸರ, ವಿಜ್ಞಾನ ಮತ್ತು ಕೃಷಿಗಳ ಬಗ್ಗೆ ಜನಜಾಗೃತಿ ಮೂಡಿಸಿದ ಸೇವೆಯನ್ನು ಗಮನಿಸಿ ರಾಜ್ಯಮಟ್ಟದ ಸಂದೇಶ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಜೈವಿಕ ವೈವಿಧ್ಯ ಸಂರಕ್ಷಣೆ, ಜೈವಿಕ ಸಂಪನ್ಮೂಲಗಳ ಸುಸ್ಥಿರ ಬಳಕೆ ಮತ್ತು ಜೈವಿಕ ಸಂಪನ್ಮೂಲಗಳ ಬಳಕೆಯಿಂದ ಪ್ರಾಪ್ತವಾಗುವ ಲಾಭಗಳ ನ್ಯಾಯ ಸಮ್ಮತ ಹಂಚಿಕೆ ವಿಷಯಗಳಲ್ಲಿ ಪರಿಣಿತಿ/ಅನುಭವ/ತಜ್ಞರ 5 ಜನರರಲ್ಲಿ ಗ್ರಾಮಾಂತರ ಸಮುದಾಯ ವಿಜ್ಞಾನ ಕೇಂದ್ರ ಶಡ್ತಿಕೆರೆ ಇದರ ಸಂಯೋಜಕರಾಗಿರುವ ಕೆ. ವೆಂಕಟೇಶ್ ಕವಲಕೋಡು ಅವರನ್ನು ಕರ್ನಾಟಕ ಜೀವವೈವಿಧ್ಯ ಮಂಡಳಿಗೆ ಅಧಿಕಾರೇತರ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಸಮುದಾಯ ಕೇಂದ್ರದ ಅಧ್ಯಕ್ಷ ರಾಜಶೇಖರ ಸಿ.ಎ. ಚಿಪ್ಪಳಿ ಹಾಗೂ ಸದಸ್ಯರುಗಳು, ಬಿ.ಎಚ್. ರಾಘವೇಂದ್ರ ಜಿಲ್ಲಾ ಸಂಯೋಜಕ ವೃಕ್ಷಲಕ್ಷ ಅಂದೋಲನ, ಡಾ.ಕೇಶವ ಕೋಸ್ಸೆ ಪರಿಸರ ಬರಹಗಾರರು, ಸಂಶೋಧಕರು, ಸಿರಸಿ, ಅನೆಗೊಳ್ಳಿ ಸುಬ್ಬರಾವ್ ಗಿಡಮೂಲಿಕೆ ತಜ್ಞರು, ಅನಂತರಾಮು ಜನಪದ ವೈದ್ಯರು ಹಾರೆಕೊಪ್ಪ, ನಾಗೇಂದ್ರ ಸಾಗರ್, ಜೇನು, ಬಿದಿರು ತಜ್ಞರು, ಶ್ರೀಪಾದ ಬಿಚ್ಚುಗತ್ತಿ, ಸೊರಬ ಸಂಶೋಧಕರು ಕಾನು ಅರಣ್ಯ ಕೆರೆ, ಹನಿಯ ರವಿ ಪರಿಸರ ಚಿಂತಕರು, ಎನ್.ಟಿ. ಮಹಾಬಲ ಗಿರಿ, ನೀಚಡಿ ಮತ್ತು ವಿವಿಧ ತಾಲೂಕಿನ ಪರಿಸರ ಮಿತ್ರರು, ಕಲ್ಪ ಮೀಡಿಯಾ ಹೌಸ್ ಹಿರಿಯ ಸಲಹಾ ಸಂಪಾದಕ ಡಾ. ಚನ್ನಗಿರಿ ಸುಧೀಂದ್ರ ಸೇರಿದಂತೆ ಹಲವರು ಅಭಿನಂದಿಸಿದ್ದಾರೆ. ಪ್ರಸ್ತುತ ಅನಂತ ಹೆಗ್ಗಡೆ ಅಶೀಸರ ರವರು ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷರಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post