ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೋನಾ ವೈರಸ್ ನಿಯಂತ್ರಿಸುವ ವಿಚಾರದಲ್ಲಿ ಸೈನಿಕರಂತೆ ಜೀವ ಪಣಕ್ಕಿಟ್ಟು ಹಗಲಿರುಳು ಕೆಲಸ ನಿರ್ವಹಿಸುತ್ತಿರುವ ವೈದ್ಯರು, ಪೊಲೀಸರು, ಪೌರ ಕಾರ್ಮಿಕರು ಅರೊಗ್ಯ ಸಹಾಯಕಿರು ಹಾಗೂ ಪ್ರತ್ಯಕ್ಷ, ಪರೋಕ್ಷವಾಗಿ ಭಾಗಿಯಾಗಿರುವ ಎಲ್ಲ ಇಲಾಖೆ ನೌಕರರಿಗೂ ಈ ತಿಂಗಳ ವೇತನದ ಜತೆ ಗೌರವದ ರೂಪದಲ್ಲಿ ಹೆಚ್ಚು ಸಂಬಳ ನೀಡಬೇಕೆಂದು ಜೆಡಿಎಸ್ ಮಹಿಳಾ ಘಟಕದ ಕಾರ್ಯದರ್ಶಿ ಸುನಿತ ಇವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಹಿಂದೆಂದು ಕಾಣದಂತಹ ಮಹಾಮಾರಿ ವಿಶ್ವವನ್ನು ನಡುಗಿಸಿರುವ ಕೊರೋನಾ ವೈರಸ್ ನಿಂದ ಪ್ರಪಂಚದ ಜನರು ಭಯಗೊಂಡಿದ್ದಾರೆ. ಭಯಾನಕ, ಮಾರಕ ಮತ್ತು ಜೀವಕ್ಕೆ ಕುತ್ತು ಆಗಿರುವ ಇಂತಹ ವೈರಸ್ ಇದ್ದರು ಸಹ ತಮ್ಮ ಜೀವದ ಆಸೆಯನ್ನು ತೊರೆದು ಹಲವರು ತಮ್ಮ ಸೇವೆಯನ್ನು 24 ಗಂಟೆ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದ್ದಾರೆ.
ಈ ರೀತಿ ಸೇವೆ ಸಲ್ಲಿಸುತ್ತಿರುವ ಜನರ ಜೀವ ರಕ್ಷಿಸುವ ವೈದ್ಯರು, ಪೊಲೀಸರು, ಪೌರ ಕಾರ್ಮಿಕರು ಅರೊಗ್ಯ ಸಹಾಯಕಿರು ಹಾಗೂ ಪ್ರತ್ಯಕ್ಷ, ಪರೋಕ್ಷವಾಗಿ ಭಾಗಿಯಾಗಿರುವ ಎಲ್ಲ ಇಲಾಖೆ ನೌಕರರಿಗೂ ಹೆಚ್ಚಿನ ವೇತನ ನೀಡಿ ಅವರಿಗೆ ಪ್ರೋತ್ಸಾಹ ನೀಡಬೇಕು. ಹಗಲಿರಳು ಕಾರ್ಯನಿರ್ವಹಿಸುವ ಎಲ್ಲಾ ಜೀವ ರಕ್ಷಕರಿಗೆ ಮೊದಲು ಅವರ ಸುರಕ್ಷತೆ ಬಗ್ಗೆ ನಿಗವಹಿಸಬೇಕು, ಪೋಲಿಸ್ ಇಲಾಖೆ ಸಹ ಸಾಕಷ್ಟು ಜನ ಹೊರಬರದಂತೆ ನೋಡಿಕೊಳ್ಳುತ್ತಿದ್ದಾರೆ. ಅವರಿಗೂ ಸಹ ಸರಿಯಾದ ರೀತಿಯಲ್ಲಿ ಊಟದ ವ್ಯವಸ್ಥೆ ಆಗಬೇಕು ಎಂದಿದ್ದಾರೆ.
ಇನ್ನು ನಗರದ ನಾಗರಿಕರಲ್ಲಿ ಮನವಿ ಮಾಡಿರುವ ಅವರು ದಯವಿಟ್ಟು ಮನೆಯಿಂದ ಹೊರಬರದಂತೆ ಸರ್ಕಾರ ನೀಡಿರುವ ಲಾಕ್ ಡೌನ್ ಆದೇಶವನ್ನು ಪಾಲಿಸಿ, ದೇಶದಲ್ಲಿ ಕೊರೋನಾ ವೈರಸ್ ಬಹುಬೇಗ ಹರಡುತ್ತಿದ್ದು ಎಲ್ಲಾ ಸಹಕಾರದಿಂದ ಅದನ್ನು ಓಡಿಸಬೇಕು. ಅಲ್ಲದೇ, ಕೊರೋನಾ ಪರಿಹಾರ ನಿಧಿಗೆ ದೇಣಿಗೆ ನೀಡುತ್ತಿರುವ ಎಲ್ಲಾ ದಾನಿಗಳಿಗೆ ಕೋಟಿ ಪ್ರಣಾಮಗಳು ಎಂದಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post