ನವದೆಹಲಿ: ಹಿಂದೂಗಳ ದಕ್ಷಿಣ ಭಾರತದ ಪವಿತ್ರ ಯಾತ್ರಾಸ್ಥಳ ಕೇರಳದ ಶಬರಿಮಲೈಗೆ ಮಹಿಳೆಯರ ಪ್ರವೇಶದ ವಿವಾದ ಕುರಿತಂತೆ ನಾಳೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಲಿದೆ.
ಪ್ರಕರಣ ಕುರಿತಂತೆ ಆ.1ರಂದು ವಿಚಾರಣೆ ನಡೆಸಿ ವಾದ ವಿವಾದವನ್ನು ಆಲಿಸಿದ್ದ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿದ್ದ ನ್ಯಾಯ ಪೀಠ ತೀರ್ಪನ್ನು ಕಾಯ್ದಿರಿಸಿತ್ತು.
ಶಬರಿಮಲೈ ದೇವಾಲಯಕ್ಕೆ 10ರಿಂದ 50 ವರ್ಷದೊಳಗಿನ ಸ್ತ್ರೀಯರಿಗೆ ಪ್ರವೇಶ ನೀಡುವ ವಿಚಾರವಾಗಿ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ.
Discussion about this post