ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪ್ರಯಾಣಿಕರ ಅನುಕೂಲಕ್ಕಾಗಿ #Bengaluru ಬೆಂಗಳೂರು-ಶಿವಮೊಗ್ಗ, ಬೆಂಗಳೂರು-ಹುಬ್ಬಳ್ಳಿ #Hubli ಜನಶತಾಬ್ದಿ ರೈಲುಗಳಿಗೆ ತಿಪಟೂರು ನಿಲ್ದಾಣದಲ್ಲಿ ನೀಡಲಾಗುತ್ತಿರುವ ನಿಲುಗಡೆಯನ್ನು ಮುಂದಿನ ಆರು ತಿಂಗಳು ಮುಂದುವರೆಸಲು ನಿರ್ಧರಿಸಲಾಗಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ #SWR ಮಾಹಿತಿ ನೀಡಿದ್ದು, 12079/12080 ಸಂಖ್ಯೆಯ ಕೆಎಸ್’ಆರ್ ಬೆಂಗಳೂರು – ಎಸ್’ಎಸ್’ಎಸ್ ಹುಬ್ಬಳ್ಳಿ – ಕೆಎಸ್’ಆರ್ ಬೆಂಗಳೂರು ಜನ ಶತಾಬ್ದಿ ಎಕ್ಸ್’ಪ್ರೆಸ್ ಮತ್ತು 12089/12090 ಕೆಎಸ್’ಆರ್ ಬೆಂಗಳೂರು – #Shivamogga ಶಿವಮೊಗ್ಗ ಟೌನ್ – ಕೆಎಸ್’ಆರ್ ಬೆಂಗಳೂರು ಜನ ಶತಾಬ್ದಿ ಎಕ್ಸ್’ಪ್ರೆಸ್’ಗಳಿಗೆ ತಿಪಟೂರು ರೈಲು ನಿಲ್ದಾಣದಲ್ಲಿ ನೀಡಲಾಗಿದ್ದ ತಾತ್ಕಾಲಿಕ ನಿಲುಗಡೆಯನ್ನು ಇನ್ನೂ ಆರು ತಿಂಗಳ ಅವಧಿಗೆ ಮುಂದುವರಿಸಲಾಗಿದೆ ಎಂದು ತಿಳಿಸಿದೆ.
ಈ ವಿಸ್ತರಣೆಯು 2025ರ ನವೆಂಬರ್ 16 ರಿಂದ 2026ರ ಮೇ 15 ರವರೆಗೆ ಜಾರಿಯಲ್ಲಿರಲಿದೆ. ಈ ನಿಲುಗಡೆಯು ಪ್ರಸ್ತುತ ಇರುವ ವೇಳಾಪಟ್ಟಿಯಂತೆಯೇ ಮುಂದುವರಿಯಲಿದೆ ಇಲಾಖೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post