ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬಿಡಿಎದಿಂದ ಮೇಜರ್ ಆರ್ಟಿರಿಯಲ್ ರಸ್ತೆಯ ತ್ರಿಪಥ ಯೋಜನೆ(3-ಲೇನಿಂಗ್) ಕಾಮಗಾರಿಗೆ ಸಂಬಂಧಿಸಿದಂತೆ ಹೆಜ್ಜಾಲ ಮತ್ತು ಕೆಂಗೇರಿ ನಿಲ್ದಾಣಗಳ ನಡುವೆ ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್’ಗೆ ಅನುಮತಿ ನೀಡಿರುವುದರಿಂದ ಈ ಮಾರ್ಗದ ಹಲವು ರೈಲುಗಳ ಸಂಚಾರ ರದ್ದಾಗಲಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಇಲಾಖೆ ಮಾಹಿತಿ ಪ್ರಕಟಿಸಿದ್ದು, ನಿಗದಿತ ದಿನಗಳಂದು ಹಲವು ಮಾರ್ಗದ ರೈಲುಗಳ ಸಂಚಾರ ರದ್ದು, ಭಾಗಷಃ ರದ್ದು ಹಾಗೂ ನಿಯಂತ್ರಣಗೊಳ್ಳಲಿದೆ. ಹೀಗಿದೆ ವಿವರ.
ಯಾವೆಲ್ಲಾ ರೈಲುಗಳ ರದ್ದತಿ:
1. 56265 ಸಂಖ್ಯೆಯ ಅರಸೀಕೆರೆ-ಮೈಸೂರು ಪ್ಯಾಸೆಂಜರ್ ರೈಲು ಸೇವೆಯನ್ನು ದಿನಾಂಕ 27.11.2025, ದಿನಾಂಕ 04.12.2025, ದಿನಾಂಕ 22.01.2026, ದಿನಾಂಕ 29.01.2026, ದಿನಾಂಕ 05.02.2026 ಹಾಗೂ ದಿನಾಂಕ 26.03.2026 ರಂದು ರದ್ದುಗೊಳಿಸಲಾಗುತ್ತದೆ.
2. 56266 ಸಂಖ್ಯೆಯ ಮೈಸೂರು-ಅರಸೀಕೆರೆ ಪ್ಯಾಸೆಂಜರ್ ರೈಲು ಸೇವೆಯನ್ನು ದಿನಾಂಕ 28.11.2025, ದಿನಾಂಕ 05.12.2025, ದಿನಾಂಕ 23.01.2026, ದಿನಾಂಕ 30.01.2026, ದಿನಾಂಕ 06.02.2026 ಮತ್ತು ದಿನಾಂಕ 27.03.2026 ರಂದು ರದ್ದುಗೊಳಿಸಲಾಗುತ್ತದೆ.

4. 06270 ಸಂಖ್ಯೆಯ ಎಸ್’ಎಂವಿಟಿ ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲು ಸೇವೆಯನ್ನು ದಿನಾಂಕ 27.11.2025, ದಿನಾಂಕ 04.12.2025, ದಿನಾಂಕ 22.01.2026, ದಿನಾಂಕ 29.01.2026, ದಿನಾಂಕ 05.02.2026 ಮತ್ತು ದಿನಾಂಕ 26.03.2026 ರಂದು ರದ್ದುಗೊಳಿಸಲಾಗುತ್ತದೆ.
5. 66535 ಸಂಖ್ಯೆಯ ಕೆಎಸ್’ಆರ್ ಬೆಂಗಳೂರು – ಚನ್ನಪಟ್ಟಣ ಮೆಮು ರೈಲು ಸೇವೆಯನ್ನು ದಿನಾಂಕ 28.11.2025, ದಿನಾಂಕ 05.12.2025, ದಿನಾಂಕ 23.01.2026, ದಿನಾಂಕ 30.01.2026, ದಿನಾಂಕ 06.02.2026 ಮತ್ತು ದಿನಾಂಕ 27.03.2026 ರಂದು ರದ್ದುಗೊಳಿಸಲಾಗುತ್ತದೆ.
ಯಾವೆಲ್ಲಾ ರೈಲುಗಳ ಭಾಗಶಃ ರದ್ದತಿ?
1. 06526 ಸಂಖ್ಯೆಯ ಅಶೋಕಪುರಂ – ಕೆಎಸ್’ಆರ್ ಬೆಂಗಳೂರು ಮೆಮು ರೈಲು ಸಂಚಾರವನ್ನು ದಿನಾಂಕ 27.11.2025, ದಿನಾಂಕ 04.12.2025, ದಿನಾಂಕ 22.01.2026, ದಿನಾಂಕ 29.01.2026, ದಿನಾಂಕ 05.02.2026 ಮತ್ತು ದಿನಾಂಕ 26.03.2026 ರಂದು ಚನ್ನಪಟ್ಟಣ ಮತ್ತು ಕೆಎಸ್’ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತದೆ.
2. 16022 ಸಂಖ್ಯೆಯ ಅಶೋಕಪುರಂ – ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್’ಪ್ರೆಸ್ ರೈಲು ಸಂಚಾರವನ್ನು ದಿನಾಂಕ 27.11.2025, ದಿನಾಂಕ 04.12.2025, ದಿನಾಂಕ 22.01.2026, ದಿನಾಂಕ 29.01.2026, ದಿನಾಂಕ 05.02.2026 ಮತ್ತು ದಿನಾಂಕ 26.03.2026 ರಂದು ಅಶೋಕಪುರಂ ಮತ್ತು ಕೆಎಸ್’ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತದೆ.
4. 66579 ಸಂಖ್ಯೆಯ ಕೆಎಸ್’ಆರ್ ಬೆಂಗಳೂರು – ಅಶೋಕಪುರಂ ಮೆಮು ರೈಲು ದಿನಾಂಕ 28.11.2025, ದಿನಾಂಕ 05.12.2025, ದಿನಾಂಕ 23.01.2026, ದಿನಾಂಕ 30.01.2026, ದಿನಾಂಕ 06.02.2026 ಮತ್ತು ದಿನಾಂಕ 27.03.2026 ರಂದು ಕೆಎಸ್’ಆರ್ ಬೆಂಗಳೂರು ಮತ್ತು ರಾಮನಗರ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದ್ದು, ಈ ರೈಲು ಕೆಎಸ್’ಆರ್ ಬೆಂಗಳೂರು ನಿಲ್ದಾಣದ ಬದಲಾಗಿ ರಾಮನಗರ ನಿಲ್ದಾಣದಿಂದ ಅದರ ನಿಗದಿತ ಸಮಯಕ್ಕೆ ಹೊರಡುವುದು.
5. 16227 ಸಂಖ್ಯೆಯ ಮೈಸೂರು – ತಾಳಗುಪ್ಪ ಎಕ್ಸ್‌ಪ್ರೆಸ್ ರೈಲು ದಿನಾಂಕ 04.12.2025 ಮತ್ತು ದಿನಾಂಕ 05.02.2026 ರಂದು ಮೈಸೂರು ಮತ್ತು ಕೆಎಸ್‌ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದ್ದು, ಈ ರೈಲು ಮೈಸೂರು ನಿಲ್ದಾಣದ ಬದಲಾಗಿ ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ಅದರ ನಿಗದಿತ ಸಮಯಕ್ಕೆ ಹೊರಡುವುದು.
ಈ ರೈಲು ನಿಯಂತ್ರಣ
1. ದಿನಾಂಕ 04.12.2025 ಮತ್ತು 05.02.2026 ರಂದು ಹೊರಡುವ ರೈಲು ಸಂಖ್ಯೆ 16021 ಎಂಜಿಆರ್ ಚೆನ್ನೈ ಸೆಂಟ್ರಲ್ – ಅಶೋಕಪುರಂ ಎಕ್ಸ್’ಪ್ರೆಸ್ ಸಂಚಾರವನ್ನು ಮಾರ್ಗ ಮಧ್ಯದಲ್ಲಿ 30 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post