ಕಲ್ಪ ಮೀಡಿಯಾ ಹೌಸ್ | ಮೈಸೂರು |
ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು, ರೈಲು ಸಂಖ್ಯೆ 06281/06282 ಮೈಸೂರು-ಅಜ್ಮೀರ್-ಮೈಸೂರು ವಿಶೇಷ ಎಕ್ಸ್’ಪ್ರೆಸ್ ಸೇವೆಗಳನ್ನು ವಿಸ್ತರಿಸಲಾಗಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ #SWR ಮಾಹಿತಿ ನೀಡಿದ್ದು, ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಸ್ಪೆಷಲ್ ರೈಲುಗಳ ಸೇವೆಯನ್ನು ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದೆ.
1. 06281 ಸಂಖ್ಯೆಯ #Mysore ಮೈಸೂರು-ಅಜ್ಮೀರ್ ವಿಶೇಷ ಎಕ್ಸ್’ಪ್ರೆಸ್ ರೈಲು ಈ ಮೊದಲು ನವೆಂಬರ್ 29ರವರೆಗೆ ಸಂಚರಿಸಲು ನಿಗದಿಪಡಿಸಲಾಗಿತ್ತು. ಈಗ ಇದರ ಸಂಚಾರವನ್ನು 2025ರ ಡಿಸೆಂಬರ್ 6 ರಿಂದ 2026ರ ಜನವರಿ 31ರವರೆಗೆ ವಿಸ್ತರಿಸಲಾಗಿದೆ. ಇದು ಪ್ರತಿ ಶನಿವಾರದಂದು ಸಂಚರಿಸಲಿದೆ.
2. 06282 ಸಂಖ್ಯೆಯ #Ajmir ಅಜ್ಮೀರ್-ಮೈಸೂರು ವಿಶೇಷ ಎಕ್ಸ್’ಪ್ರೆಸ್ ಈ ರೈಲು ಡಿಸೆಂಬರ್ 1ರವರೆಗೆ ಚಲಿಸಲು ನಿಗದಿಯಾಗಿತ್ತು. ಈಗ ಇದರ ಸಂಚಾರವನ್ನು 2025ರ ಡಿಸೆಂಬರ್ 8 ರಿಂದ 2026ರ ಫೆಬ್ರವರಿ 2ರವರೆಗೆ ವಿಸ್ತರಿಸಲಾಗಿದೆ. ಇದು ಪ್ರತಿ ಸೋಮವಾರದಂದು ಸಂಚರಿಸಲಿದೆ.
ಸಂತ್ರಾಗಾಚಿ – ಯಲಹಂಕ ವಿಶೇಷ ರೈಲು ಸೇವೆ ವಿಸ್ತರಣೆ
02863/02864 ಸಂಖೆಗಳ ಸಂತ್ರಾಗಾಚಿ-ಯಲಹಂಕ-ಸಂತ್ರಾಗಾಚಿ ವಿಶೇಷ ಎಕ್ಸ್’ಪ್ರೆಸ್ ರೈಲು ಸೇವೆಗಳನ್ನು ವಿಸ್ತರಿಸಿದೆ ಎಂದು ದಕ್ಷಿಣ ಪೂರ್ವ ರೈಲ್ವೆಯು ತಿಳಿಸಿದೆ.
1. 02863 ಸಂಖ್ಯೆಯ ಸಂತ್ರಾಗಾಚಿ – ಯಲಹಂಕ ಸಾಪ್ತಾಹಿಕ ವಿಶೇಷ ಎಕ್ಸ್’ಪ್ರೆಸ್ ರೈಲು, ಈ ಹಿಂದೆ ನವೆಂಬರ್ 27, 2025 ರವರೆಗೆ ಸಂಚರಿಸಲು ನಿಗದಿಪಡಿಸಲಾಗಿತ್ತು. ಈಗ ಡಿಸೆಂಬರ್ 4, 2025 ರಿಂದ ಡಿಸೆಂಬರ್ 25, 2025 ರವರೆಗೆ ವಿಸ್ತರಣೆಯಾಗಲಿದೆ. ಈ ರೈಲು ಪ್ರತಿ ಗುರುವಾರದಂದು ಪ್ರಯಾಣಿಸಲಿದೆ.
ಯಲಹಂಕ ನಿಲ್ದಾಣದಲ್ಲಿ ಪರಿಷ್ಕೃತ ಆಗಮನ/ನಿರ್ಗಮನ ವೇಳಾಪಟ್ಟಿ: ರೈಲು ಸಂಖ್ಯೆ 02863 ಪ್ರತಿ ಶನಿವಾರ 00:55 ಗಂಟೆಗೆ (ಮಧ್ಯರಾತ್ರಿ 12:55) ಯಲಹಂಕ ಜಂಕ್ಷನ್ ಆಗಮಿಸಲಿದೆ. ರೈಲು ಸಂಖ್ಯೆ 02864 ಪ್ರತಿ ಶನಿವಾರ 04:45 ಗಂಟೆಗೆ ಯಲಹಂಕ ಜಂಕ್ಷನ್’ನಿಂದ ಹೊರಡಲಿದೆ.
ಈ ವಿಶೇಷ ರೈಲುಗಳು ತಮ್ಮ ಅಸ್ತಿತ್ವದಲ್ಲಿರುವ ಸಮಯಗಳು, ನಿಲುಗಡೆಗಳು ಮತ್ತು ಬೋಗಿ ಸಂಯೋಜನೆಯೊಂದಿಗೆ ಮುಂದುವರೆಯಲಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post