ಕಲ್ಪ ಮೀಡಿಯಾ ಹೌಸ್ | ಮೈಸೂರು |
ಬೆಂಗಳೂರು ದಂಡು ರೈಲ್ವೆ ನಿಲ್ದಾಣದಲ್ಲಿ ಹಳಿ ನಿರ್ವಹಣಾ ಕಾಮಗಾರಿ ನಡೆಯುವುದರಿಂದ ಅಕ್ಟೋಬರ್ 11ರಂದು ಮೈಸೂರಿನಿಂದ ಸಂಚರಿಸುವ ಎರಡು ರೈಲುಗಳ ಮಾರ್ಗದಲ್ಲಿ ಬದಲಾವಣೆಯಾಗಲಿದೆ.
ಈ ಕುರಿತಂತೆ ನೈಋತ್ಯ ಹಾಗೂ ಮಧ್ಯ ರೈಲ್ವೆ ಇಲಾಖೆ ಮಾಹಿತಿ ನೀಡಿದ್ದು, ಅ.11ರಂದು ಒಂದು ದಿನಕ್ಕೆ ಮಾತ್ರ ಎರಡು ರೈಲುಗಳ ಮಾರ್ಗದಲ್ಲಿ ಬದಲಾವಣೆಯಾಗಲಿದೆ ಎಂದು ತಿಳಿಸಿದೆ.
06243 ಸಂಖ್ಯೆಯ ಮೈಸೂರು – ಕಾರೈಕುಡಿ ಎಕ್ಸ್’ಪ್ರೆಸ್ ಮೈಸೂರಿನಿಂದ ಹೊರಡುವ ಈ ರೈಲು ಕೆಎಸ್’ಆರ್ ಬೆಂಗಳೂರು – ಯಶವಂತಪುರ – ಲೊಟ್ಟೆಗೊಲ್ಲಹಳ್ಳಿ – ಬಾನಸವಾಡಿ – ಎಸ್’ಎಂವಿಟಿ ಬೆಂಗಳೂರು – ಬೈಯ್ಯಪನಹಳ್ಳಿ – ಕೃಷ್ಣರಾಜಪುರಂ ಮಾರ್ಗವಾಗಿ ಸಂಚರಿಸಲಿದೆ.
ಈ ರೈಲು ಬೆಂಗಳೂರು ದಂಡು ನಿಲ್ದಾಣದಲ್ಲಿ ನಿಗದಿತ ನಿಲುಗಡೆ ಇರುವುದಿಲ್ಲ.
ಇನ್ನು, ಕರ್ಜತ ನಿಲ್ದಾಣ ಮತ್ತು ಯಾರ್ಡ್‌ನ ಮರುರೂಪಿಸುವಿಕೆಯ (Remodeling work) ಕಾಮಗಾರಿಯ ಹಿನ್ನಲೆ, ಅ 11, 2025 ರಂದು ಮೈಸೂರಿನಿಂದ ಹೊರಡುವ ರೈಲು ಸಂಖ್ಯೆ 06281 ಮೈಸೂರು-ಅಜ್ಮೀರ್ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲು, ಮಿರಜ್ ಜಂಕ್ಷನ್, ಪಂಢರಪುರ, ಕುರ್ದುವಾಡಿ ಜಂಕ್ಷನ್, ದೌಂಡ್ ಜಂಕ್ಷನ್, ಅಹ್ಮದ್‌ನಗರ ಜಂಕ್ಷನ್, ಮನ್ಮಾಡ್ ಜಂಕ್ಷನ್, ಜಲಗಾಂವ್ ಜಂಕ್ಷನ್, ನಂದುರ್ ಬಾರ್, ಮತ್ತು ಸೂರತ್ ನಿಲ್ದಾಣಗಳ ಮಾರ್ಗವಾಗಿ ಸಂಚರಿಸಲಿದೆ ಎಂದು ಮಧ್ಯ ರೈಲ್ವೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post