ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮೈಸೂರು ನ್ಯೂ ಗೂಡ್ಸ್ ಟರ್ಮಿನಲ್ ಮತ್ತು ನಾಗನಹಳ್ಳಿ ನಡುವೆ ರಸ್ತೆ ಕೆಳಸೇತುವೆ ಕಾಮಗಾರಿ ನಡೆಯುವುದರಿಂದ ಏಳು ದಿನಗಳ ಕಾಲ ಬೆಂಗಳೂರು-ಅಶೋಕಪುರಂ ಹಾಗೂ ಅಶೋಕಪುರಂ-ಬೆಂಗಳೂರು ನಡುವಿನ ಮೆಮು ರೈಲು ಸಂಚಾರ ರದ್ದಾಗಲಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಮಾಹಿತಿ ನೀಡಿದ್ದು, ಈ ರೈಲುಗಳು 7 ದಿನಗಳ ಕಾಲ ಭಾಗಶಃ ರದ್ದುಪಡಿಲಾಗಿದೆ ಎಂದು ತಿಳಿಸಿದೆ.
ವಿವರಗಳು ಕೆಳಗಿನಂತಿವೆ:
66553 ಸಂಖ್ಯೆಯ ಕೆಎಸ್’ಆರ್ ಬೆಂಗಳೂರು – ಅಶೋಕಪುರಂ ಮೆಮು ನವೆಂಬರ್ 13, ಡಿಸೆಂಬರ್ 2, 4, 9, 11, 30 ಹಾಗೂ 2026ರ ಜನವರಿ 1 ರಂದು ಪ್ರಯಾಣ ಆರಂಭಿಸುವ ರೈಲು ಪಾಂಡವಪುರ ಮತ್ತು ಅಶೋಕಪುರಂ ನಡುವೆ ಭಾಗಶಃ ರದ್ದುಪಡಿಸಲ್ಪಡುತ್ತದೆ.

66580 ಸಂಖ್ಯೆಯ ಅಶೋಕಪುರಂ – ಕೆಎಸ್’ಆರ್ ಬೆಂಗಳೂರು ಮೆಮು ನವೆಂಬರ್ 13, ಡಿಸೆಂಬರ್ 2, 4, 9, 11, 30 ಹಾಗೂ ಜನವರಿ 1 ರಂದು ಪ್ರಯಾಣ ಆರಂಭಿಸುವ ರೈಲು ಅಶೋಕಪುರಂ ಮತ್ತು ಪಾಂಡವಪುರ ನಡುವೆ ಭಾಗಶಃ ರದ್ದುಪಡಿಸಲಾಗುತ್ತದೆ.
ಈ ರೈಲು ಅಶೋಕಪುರಂ ಬದಲು ಪಾಂಡವಪುರದಿಂದಲೇ ತನ್ನ ಪ್ರಯಾಣ ಆರಂಭಿಸಲಿದೆ ಎಂದು ಇಲಾಖೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post