ಕಲ್ಪ ಮೀಡಿಯಾ ಹೌಸ್ | ಚೆನ್ನೈ |
ಪಾನಿಪುರಿ #Panipuri ಮಾರಾಟಗಾರನೊಬ್ಬನ ವಾರ್ಷಿಕ ವಹಿವಾಟು ಕಂಡು ಆದಾಯ ತೆರಿಗೆ ಇಲಾಖೆ #IncomeTaxDepartment ಅಧಿಕಾರಿಗಳು ಹೌಹಾರಿದ್ದು, ಆತನಿಗೆ ತೆರಿಗೆ ನೋಟೀಸ್ ನೀಡಿರುವ ಘಟನೆ ತಮಿಳುನಾಡಿನ #TamilNadu ಚೆನ್ನೈನಲ್ಲಿ ನಡೆದಿದೆ.
ತಮಿಳುನಾಡಿನಲ್ಲಿ ಪಾನಿಪುರಿ ಮಾರಾಟಗಾರನ ವಾರ್ಷಿಕ ವಹಿವಾಟು 40 ಲಕ್ಷ ರೂ. ದಾಟಿದ ಕಾರಣಕ್ಕೇ ಕೇಂದ್ರ ಆದಾಯ ತೆರಿಗೆ ಇಲಾಖೆ ತೆರಿಗೆ ನೋಟಿಸ್ ಜಾರಿ ಮಾಡಿದೆ.
Also Read>> ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಆತ್ಮಹತ್ಯೆ ಭಾಗ್ಯವನ್ನೇ ನೀಡುತ್ತಿದೆ: ಬಿ.ವೈ. ವಿಜಯೇಂದ್ರ
ನೋಟಿಸ್ ನಲ್ಲಿ ಮಾರಾಟಗಾರನು ಜಿಎಸ್’ಟಿ ಕಾಯ್ದೆ #GSTAct ಅಡಿಯಲ್ಲಿ ನಮೂದಿಸಲಾದ ಮಿತಿಯನ್ನು ಮೀರಿದ ಸರಕು ಮತ್ತು ಸೇವೆಗಳ ಹೊರಗಿನ ಪೂರೈಕೆಗಾಗಿ ಪಾವತಿಗಳನ್ನು ಸ್ವೀಕರಿಸಿದ್ದಾನೆ ಎನ್ನುವ ಕಾರಣಕ್ಕೆ ಆತನ ವಹಿವಾಟು ಮೇಲೆ ಜಿಎಸ್’ಟಿ ಹಾಕಲಾಗಿದೆ ಎಂದು ವರದಿಯಾಗಿದೆ.
ವಾರ್ಷಿಕವಾಗಿ ಲಕ್ಷಗಟ್ಟಲೆ ವಹಿವಾಟು ನಡೆಸಿರುವ ಪಾನಿಪುರಿ ಭಯ್ಯಾ…ಯಾವುದೇ ಜಿಎಸ್’ಟಿ ಪಾವತಿಸಿಲ್ಲ, ಜಿಎಸ್’ಟಿ #GST ವ್ಯಾಪ್ತಿಗೂ ತನ್ನ ವ್ಯಾಪಾರವನ್ನು ಒಳಪಡಿಸಿಲ್ಲ ಎನ್ನುವ ಆರೋಪ ಕೇಳಿಬಂದಿದೆ.
ಈ ಪಾನಿಪುರಿ ಮಾರಾಟಗಾರನ ವಿರುದ್ಧ ತಮಿಳುನಾಡು ಸರ್ಕಾರ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ #GoodsandServicesTaxAct ಮತ್ತು ಕೇಂದ್ರ ಜಿಎಸ್’ಟಿ ಕಾಯ್ದೆಯ ಸೆಕ್ಷನ್ 70ರ ಅಡಿಯಲ್ಲಿ ನೋಟೀಸ್ ಜಾರಿಗೊಳಿಸಲಾಗಿದೆ.
ಕಳೆದ ಮೂರು ವರ್ಷಗಳಿಗೆ ಸಂಬಂಧಿಸಿದಂತೆ ನೋಟೀಸ್ ಜಾರಿಗೊಳಿಸಲಾಗಿದ್ದು, ಪ್ರಮುಖವಾಗಿ 2023-24ಕ್ಕೆ ಸಂಬಂಧಿಸಿದಂತೆ ವಹಿವಾಟಿನ ಕುರಿತಾಗಿ ಪ್ರತಿಕ್ರಿಯೆ ಕೇಳಲಾಗಿದೆ.
ಡಿಜಿಟಲ್ ಪಾವತಿ ಡೇಟಾವನ್ನು ನಿಯಂತ್ರಿಸುವುದು ಹೆಚ್ಚಿನ ವ್ಯವಹಾರಗಳನ್ನು ತೆರಿಗೆ ನಿವ್ವಳ ಅಡಿಯಲ್ಲಿ ತರಲು ಅಂತಹ ಒಂದು ಕ್ರಮವಾಗಿದೆ. ಈಗ ಸದ್ಯ ಈತನಿಗೆ ನೀಡಿರುವ ಜಿಎಸ್’ಟಿ ನೋಟಿಸ್ ಕೇವಲ ಸಮನ್ಸ್ ಆಗಿದೆಯೇ ಹೊರತು ಬೇಡಿಕೆಯ ಆದೇಶವಲ್ಲ. ಈ ಬಗ್ಗೆ ಮಾರಾಟಗಾರನ ಅಹವಾಲನ್ನು ಆಲಿಸಲಾಗುವುದು ಎಂದು ಮೂಲಗಳು ಹೇಳಿವೆ.
ಈ ಪಾನಿಪುರಿ ಮಾರಾಟಗಾರರ ಗಣನೀಯ ವಹಿವಾಟು ಕಂಡು ಸಾಮಾಜಿಕ ಜಾಲತಾಣದಲ್ಲಿ ಜನರು ಅಚ್ಚರಿಪಟ್ಟಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















