ಕಲ್ಪ ಮೀಡಿಯಾ ಹೌಸ್
ಹೌದು ಕೋವಿಡ್ ಅನ್ನೋ ಮಹಾ ಮಹಾ ಮಾರಿ ಬಂದಾಗಿನಿಂದ ಶಿಕ್ಷಕರು ಒಂದೆಲ್ಲ ಒಂದು ರೀತಿಯಲ್ಲಿ ಶಿಕ್ಷಕ ವೃತ್ತಿಯ ಜೊತೆಯಲ್ಲಿ ತನ್ನ ಬದುಕನ್ನು ಸಹ ಕಟ್ಟಿಕೊಳ್ಳುವ ಹರಸಾಹಸಪಡುತ್ತಿದ್ದಾರೆ.
ತನ್ನ ದೈನಂದಿನ ಜೀವನವು ಹದಗೆಡುತ್ತಿದ್ದರೂ ಸಹ ಮಕ್ಕಳ ಭವಿಷ್ಯಕ್ಕೆ ತನ್ನ ಜೀವನದ ಒಂದು ಘಟ್ಟವನ್ನೇ ತ್ಯಾಗ ಮಾಡಿ ವಿದ್ಯಾರ್ಥಿಗಳಿಗೋಸ್ಕರ ತನ್ನನ್ನು ತಾನು ಮುಡಿಪಾಗಿಟ್ಟಿದ್ದಾರೆ.
ಸರ್ಕಾರದ ಅಡಿಯಲ್ಲಿ ಬರುವ ಶಿಕ್ಷಕರು ಹೇಗೋ ತಮ್ಮ ಬದುಕನ್ನು ಕಟ್ಟಿಕೊಂಡು ಹೋಗುತ್ತಿದ್ದಾರೆ. ಅದೇ ಖಾಸಗಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರ ಪಾಡು ಹೇಳತೀರದು.
ತಾನು ತನ್ನ ಪುಟ್ಟ ಸಂಸಾರವನ್ನು ಕಟ್ಟಿಕೊಂಡು ತನಗೆ ಬರುವ ಸಂಬಳದಲ್ಲಿ ತನ್ನ ವೆಚ್ಚವನ್ನು ನಿರ್ವಹಿಸಿಕೊಂಡು ಬದುಕಿನ ವೆಚ್ಚವನ್ನು ಭರಿಸಿಕೊಂಡು ಮಕ್ಕಳ ಪಾಲನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾಳೆ.
ಕೆಲವರು ಅಂತೂ ತನ್ನ ವೃತ್ತಿಯನ್ನು ಬಿಟ್ಟು ಅನ್ಯ ವೃತ್ತಿಯಲ್ಲಿ ತಲ್ಲೀನರಾಗಿದ್ದಾರೆ. ಕಾರಣ ಕೋವಿಡ್ ಎಂಬ ಮಹಾಮಾರಿ ಕೆಲವರು ವಿದ್ಯಾರ್ಥಿಗಳು ತನ್ನ ಶಿಕ್ಷಕರ ಖರ್ಚುಗಳನ್ನು ಕಟ್ಟಿಕೊಟ್ಟರೆ, ಇನ್ನು ಕೆಲವರು ಅವರಿಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ, ಅಣಕಿಸಿಕೊಳ್ಳುತ್ತಿದ್ದಾರೆ.
ಶಿಕ್ಷಣವು ತನ್ನ ವೃತ್ತಿಯಲ್ಲ, ತನ್ನ ಶ್ರದ್ಧೆ ತನ್ನ ಕರ್ತವ್ಯ ಎಂದು ಹಲವರು ಶಿಕ್ಷಕರು ತನ್ನ ಒಂದು ಹೊತ್ತಿನ ಊಟವನ್ನು ಬಿಟ್ಟು ಶಿಕ್ಷಕ ವೃತ್ತಿಯಲ್ಲಿ ಮುಂದುವರೆಯುತ್ತಿದ್ದಾರೆ. ಕಾರಣ ಇಷ್ಟೇ ಮಕ್ಕಳು ಶಿಕ್ಷಣ ವಂಚಿತರಾಗುತ್ತಾರೆ ಎಂದು. ಶಿಕ್ಷಕರಿಲ್ಲದೆ ಶಿಕ್ಷಣವಿಲ್ಲ, ವಿದ್ಯಾರ್ಥಿಗಳಿಲ್ಲದೆ ಭವಿಷ್ಯದ ದೇಶವಿಲ್ಲ.
ಉತ್ತಮ ಶಿಕ್ಷರನ್ನು ಉಳಿಸಿಕೊಳ್ಳೋಣ ಅವರನ್ನು ಆರ್ಥಿಕವಾಗಿ ಬೆಳಿಸೋಣ ಅಂತಹವರಿಂದ ಉತ್ತಮ ಪರಿಸರ ಉತ್ತಮ ನಡುವಳಿಕೆ ವಿದ್ಯಾರ್ಥಿಗಳು ಉತ್ತಮ ದೇಶವನ್ನು ಕಟ್ಟಲು ಸಾಧ್ಯ.
ಶಿಕ್ಷಕರನ್ನು ಗೌರವಿಸೋಣ, ಶಿಕ್ಷಕರನ್ನು ಬೆಳೆಸೋಣ, ಶಿಕ್ಷಕರನ್ನು ಉಳಿಸಿಕೊಳ್ಳೋಣ.
ಶಿಕ್ಷಕರ ದಿನದ ಶುಭಾಶಯಗಳು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post