ಆಕಾರ ಪೂಜನೆಗೆ ನಾಶವೆಂಬುದು ಇಲ್ಲ
ಈ ಭಾರತ ದೇಶವು ಸನಾತನ ವೈದಿಕ ಭಾರತ. ಈಗ ಹಿಂದೂ ಎಂಬ ಹೆಸರಿನಿಂದ ಮೆರೆಯುತ್ತಿರುವ ಹಿಂದೂಸ್ಥಾನ. ಸಿಂಧೂ ಪುಣ್ಯಭೂಮಿಯೇ ಇಡೀ ರಾಷ್ಟ್ರಕ್ಕೆ ಹಿಂದೂ ಪುಣ್ಯಭೂಮಿಯಾಯಿತು.
॥ ಗಂಗೇಚ ಯಮುನೇಚೈವ ಗೋದಾವರೀ ಸರಸ್ವತಿ ನರ್ಮದೇ ಸಿಂಧು ಕಾವೇರೀ ॥ ಪುಣ್ಯನದಿಗಳ ಪಾವನವೇ ಹಿಂದೂ ರಾಷ್ಟ್ರ.
ಐನೂರು ವರ್ಷಗಳ ಮೊಘಲರ ನಿರಂಕುಶ ಪ್ರಭುತ್ವದಲ್ಲಿ ಹಿಂದುತ್ವವನ್ನು ನಾಶಮಾಡಲಾಗಲಿಲ್ಲ. ಇಸ್ಲಾಂನ್ನು ತುರುಕಿಸಿ ಕೆಲವು ಮತಾಂತರ ನಡೆಸುತ್ತಾ, ಮಂದಿರಗಳನ್ನು ಒಡೆದು ಮಸೀದಿ ಮಾಡಿದರೂ ಹಿಂದೂ ರಕ್ತದ ನಾಶ ಮಾಡಲಾಗಿಲ್ಲ. ಬದಲಾಗಿ ಆ ವಂಶಗಳೇ ನಿರ್ನಾಮವಾಗಿ ಹೋಯಿತು. ನಂತರ ಬಂದ ಆಂಗ್ಲರು ಇನ್ನೂರೈವತ್ತು ವರ್ಷ ಆಳಿ ತಮ್ಮ ದಬ್ಬಾಳಿಕೆ ನಡೆಸಿದರೂ ಕ್ರಿಶ್ಚಿಯನ್ನರನ್ನಾಗಿಸಲು ಪ್ರಯತ್ನಿಸಿ ಕೆಲವೊಂದು ಪಿಳ್ಳೆಗಳನ್ನು ಸೃಷ್ಟಿಸಿದರೂ ಬದಲಾಗಲಿಲ್ಲ ಹಿಂದೂ ರಾಷ್ಟ್ರ.
ಕಾರಣ ಏನು?
ಅವರೆಲ್ಲ ನಿರಾಕಾರದ ಪೂಜಕರು. ದೇವರ ಪರಿಕಲ್ಪನೆ ಇಲ್ಲ. ನಾವು ಆಕಾರವಿಟ್ಟು ದೇವತಾ ಶಕ್ತಿಗಳನ್ನು ಪೂಜಿಸಿ, ಆ ಶಕ್ತಿಗಳನ್ನು ಪಡೆದವರು. ಓರ್ವ ಪ್ರಾಮಾಣಿಕ, ದಕ್ಷ, ನಿಷ್ಟಾವಂತ ರಾಜನಾದ ರಾಮನನ್ನು ವಿಷ್ಣು ಸ್ವರೂಪದಲ್ಲಿ ಪೂಜಿಸುತ್ತಿದ್ದೇವೆ. ಧರ್ಮ ರಕ್ಷಣೆಗಾಗಿ ಜನಿಸಿದ ಶ್ರೀಕೃಷ್ಣನನ್ನು ವಿಷ್ಣುವಿನೊಳಗಿಟ್ಟು ಆರಾಧಿಸಿದೆವು. ಮಹಾಯೋಗಿಯಲ್ಲಿ ಶಿವನನ್ನು ನೋಡಿದೆವು. ಇಂತಹ ಕಲ್ಪನೆಯು ನಮ್ಮ ಪರಂಪರೆ.
ಆದರೆ ನಿರಾಕಾರ ಪೂಜನೆಯಲ್ಲಿ ದೇವರ ಬದಲು ದೆವ್ವವೂ ನುಸುಳಿ ದುಷ್ಟತನವೇ ಹೆಚ್ಚಾಗುತ್ತಾ ಬಲತ್ಕಾರ ಮತಾಂತರ, ಅಮಿಷಗಳ ಮತಾಂತರ ನಡೆಯುತ್ತಿದೆ. ಮತಾಂತರಗೊಳ್ಳಲು ಪ್ರತೀ ಮನುಷ್ಯನಿಗೂ ಹಕ್ಕಿದೆ. ಯಾವ ಸಂಪ್ರದಾಯದಿಂದ ಯಾವ ಮತಕ್ಕೂ ಹೋಗಲು ಹಕ್ಕಿದೆ. ಆದರೆ ಆಕಾರ ಕಲ್ಪನೆಯ ಪರಂಪರೆಗೆ ನಿರಾಕಾರ ಕಲ್ಪನೆಯವರು ಏನು ಪಾಠ ಹೇಳಿಯಾರು? ಅದರಿಂದ ಪ್ರಯೋಜನ ಇಲ್ಲದಿದ್ದಾಗ ಬಲತ್ಕಾರ, ಅಮಿಷಗಳೇ ಬೇಕಾಗುತ್ತದೆ. ಹಾಗಾಗಿ, ನಿರಾಕಾರಿಗಳು ತತ್ವ ಬೋಧಿಸಲು, ಶಕ್ತಿತ್ರಯಾತ್ಮಕಗಳ ಆಕಾರದ ತಿಳುವಳಿಕೆ ನೀಡಲು ಅಂದಿನಿಂದ ಇಂದಿನವರೆಗೂ ವಿಫಲರಾದರೇ ವಿನಾ, ಈ ಮತಾಂತರಗೊಂಡವರು ತಾತ್ವಿಕವಾಗಿ ಹೋದವರಲ್ಲ. ಕೇವಲ ಅಮಿಷ ಭಯಗಳಿಂದಲೇ ಹೋದವರಾಗಿದ್ದಾರೆ.
ಕಳ್ಳರ ತರಹ ಹಿಂಬಾಗಿಲಿನಿಂದ ನುಗ್ಗಿ ಮಗ್ದರ ಮನ ಕೆಡಿಸಿ, ಹಣದ ರುಚಿತೋರಿಸಿ ಇಂದು ಮತಾಂತರ ನಡೆಯುತ್ತಿದೆಯೇ ಹೊರತು, ವೇದಿಕೆಯಲ್ಲಿ ದೇವ ತತ್ವ ಪ್ರತಿಪಾದನೆ ಮಾಡಿ ಪ್ರಜೆಗಳನ್ನು ಸೆಳೆಯಲಾಗುತ್ತಿಲ್ಲ.
ನಿಶಾಚರರಂತೆ ಕುಡಿದು ಕುಣಿಯುವ ಮೋಜಿಗಾಗಿ ಮತಾಂತರ ಆಗಿರಬಹುದು ಅಥವಾ ಕಾಮಪಿಪಾಸೆಯಿಂದ love jihad ಆಗಿರಬಹುದು. ಆದರೆ ನೈಜ ಹಿಂದುತ್ವದ ಪರಿಕಲ್ಪನೆ ಇರುವವರನ್ನು ಮತಾಂತರ ಮಾಡಲು ಸಾಧ್ಯವಿಲ್ಲ. ಮತ್ತೆ ಒಂದಲ್ಲ ಒಂದು ದಿನ ಈ ಮತಾಂತರಗೊಂಡವರು ಮನನೊಂದು ಮತ್ತೆ ಮಾತೃಧರ್ಮಕ್ಕೆ ಮರಳುತ್ತಾರೆ. ಆದರೆ ಇದಕ್ಕೆ ದಕ್ಷ ಹಿಂದುತ್ವ ಪ್ರತಿಪಾದಕ ನಾಯಕರು ಬೇಕು. ಅಂತವರು ಇದ್ದಾರೆ. ಈಗ ಅಂತವರೊಳಗೆ ಎದ್ದು ಕಾಣುವವರು ನರೇಂದ್ರ ದಾಮೋದರದಾಸ್ ಮೋದಿಯವರು.
ವಿಶೇಷವೆಂದರೆ, ಅವರಿಗಿಂತಲೂ ಪ್ರಬಲರು ಒಳಗಿದ್ದಾರೆ. ಮೋದಿಯವರ ನಂತರ ಅವರು ಹೊರಗಡೆ ಕಾಣಲಿದ್ದಾರೆ. ಈಗ ಮೋದಿಯವರಿಗೆ ಬೆಂಬಲ ನೀಡಿದ್ದಾರೆ. ಇವರೆಲ್ಲರಿಗೂ ಅಧಿಕಾರದ ಆಸೆಯಿಲ್ಲ. ಇವರಿಗಿರುವುದು ಕೇವಲ ಹಿಂದುತ್ವದ ಪುನರುತ್ಥಾನ. ಪ್ರತಿಯೊಬ್ಬ ಪ್ರಜೆಯೂ ಪುನರುತ್ಥಾನ ಪುಣ್ಯಕಾರ್ಯದಲ್ಲಿ ಮನಸಾರೆ ಕೆಲಸ ಮಾಡಿದರೆ ಭಾರತ ಮಾತೆಗೆ ಇನ್ನೇನು ಬೇಕು. ಅವಳ ಅನುಗ್ರಹ ನಮಗಿರುತ್ತದೆ.
-ಪ್ರಕಾಶ್ ಅಮ್ಮಣ್ಣಾಯ
Discussion about this post