Application of talking ಅಸಂಭದ್ಧವಾಗಿ ಆಗಾಗ ಅವಹೇಳನಕ್ಕೆ ಗುರಿಯಾಗೋದಕ್ಕೆ ಗ್ರಹಸ್ಥಿತಿಯು ಹೇಗಿರುತ್ತದೆ?
ಜ್ಯೋತಿಷ್ಯ ಗ್ರಹಸ್ಥಿತಿ ಅಧ್ಯಯನದಿಂದ ಒಬ್ಬನ ಅಪ್ರಬುದ್ಧತೆಯನ್ನೋ, ಪ್ರಬುದ್ಧತೆಯನ್ನೋ ತಿಳಿಯಬಹುದು. ಸುಮ್ಮನೆ ಒಬ್ಬ ಅಸಂಭದ್ಧ ಮಾತನಾಡಿ ಅವಹೇಳನವನ್ನು ಬಯಸುವುದಿಲ್ಲ. ಆ ಭಾಷಣಕಾರ ತನ್ನದೇ ಸರಿ ಎಂದುಕೊಂಡೇ ಮಾತನಾಡುತ್ತಾನೆ.
ಅಲ್ಲದೆ ಅವಹೇಳನವಾದಾಗ ಸರಿಮಾಡಿಕೊಳ್ಳುವ ಬದಲು ಅದನ್ನು ignore ಮಾಡುತ್ತಾ ಮತ್ತೆ ಅದೇ ತಪ್ಪು ಮಾಡಿಕೊಳ್ಳುತ್ತಾನೆ. ಭಾಷಣ ಮಾಡುವಾಗ ಪ್ರಸಿದ್ಧರ ಹೆಸರನ್ನು ಉಲ್ಲೇಖಿಸುವಾಗ ಹೆಸರನ್ನು ಅಪಭ್ರಂಶಗೊಳಿಸಿ ಹೇಳುತ್ತಾನೆ. (ನಾಟಕ ಯಕ್ಷಗಾನಗಳಲ್ಲಿ ವಿಧೂಷಕನು ತಮಾಷೆಗಾಗಿ ಅಪಭ್ರಂಶಗೊಳಿಸಿದರೆ, ಈ ಗ್ರಹಸ್ಥಿತಿ ಉಳ್ಳವರು ಎಂದರ್ಥವಲ್ಲ. ಅವರು ಹಾಸ್ಯಕ್ಕಾಗಿ ಮಾತನಾಡುತ್ತಾರೆ. ಆದರೆ ಒಬ್ಬ ಜವಾಬ್ದಾರಿಯುತ ಯಜಮಾನ, ಒಂದು ಪಕ್ಷದ ಅಧ್ಯಕ್ಷನಾಗಿ ಮಾತನಾಡಿದರೆ ಅದು ಕೆಡುಕಾದೀತು. ಉದಾಃ * ಇವನಾರವ ಇವ ನಮ್ಮವ * ಎಂದು ಹೇಳಬೇಕಾದರೆ, ಇವ ನರ್ವ, ಇವ ನಮ್ವ ಅಂತ ಹೇಳೋದು, ಕಠಿಣ ಹೆಸರಾದ ವಿಶ್ವೇಶ್ವರಯ್ಯ ಎಂಬ ಹೆಸರನ್ನು ’ವಿಶ್ ಶರ್ ರಾಯ ’ ಎಂದು ವಿಧೂಷಕ ಹೇಳಿದರೆ ಅದು ನಾಟಕ. ಆದರೆ ಒಬ್ಬ ಜವಾಬ್ದಾರಿಯುತನು ಹೇಳಿದರೆ ಅಪಹಾಸ್ಯ ಆಗುತ್ತದೆ.
ಹಿಂದೆ ಏನು ಹೇಳಿದ್ದೇನೆ, ಮುಂದೇನು ಹೇಳಬೇಕು ಎಂಬ ಪರಿಜ್ಞಾನ ಇವರಲ್ಲಿರುವುದಿಲ್ಲ. ಇದಕ್ಕೆ ಕಾರಣವಾದ ಗ್ರಹಸ್ಥಿತಿಗಳು ಹೇಗಿರುತ್ತದೆ ಎಂದು ಶೋಧಿಸಿದಾಗ ನಮಗೆ ನಿಖರತೆ ಬರುತ್ತದೆ. ಅಂತಹ ಜಾತಕ ನಮಗೆ ಸಿಕ್ಕಿದಾಗ ಅವನ ವ್ಯಕ್ತಿತ್ವವನ್ನೂ ತುಲನೆ ಮಾಡಿ ನೋಡಿದಾಗ ಸ್ಪಷ್ಟತೆ ಬರುತ್ತದೆ. ಒಂದು ಉದಾಹೃತ ಜಾತಕದ ಕುಂಡಲಿಯಲ್ಲಿ ಅಥವಾ ನವಾಂಶ ಕುಂಡಲಿಯಲ್ಲಿ ಕುಜನು ಮೀನಾಂಶದಲ್ಲೂ, ಶುಕ್ರನು ಕನ್ಯಾಂಶದಲ್ಲೂ ಇದ್ದಾಗ ಅಥವಾ ಯುತಿಯಲ್ಲಿ ಇದ್ದರೆ, ಇದು ಭೃಗು ಅಂಗಾರಕ ದೋಷವಾಗುತ್ತದೆ. ಇದು ಪರಸ್ಪರ ಸಮ ಸಪ್ತಕ ವೀಕ್ಷಣೆಯಿದ್ದಾಗಲೂ ಭೃಗು ಅಂಗಾರಕ ದೋಷವಾಗುತ್ತದೆ. ನವಾಂಶವು ರಾಶಿಗಿಂತಲೂ Power full ಆಗಿರುತ್ತದೆ. ಈ ಜಾತಕದ ನವಾಂಶದಲ್ಲಿ ಧನುರಾಶಿಯು ಲಗ್ನವಾಗಿ ಕರ್ಮ ಸ್ಥಾನಕ್ಕೆ (ಕನ್ಯ)ಕುಜ ದೃಷ್ಟಿಯ ಫಲದಿಂದ ತಾನೊಬ್ಬ fit person ಎಂಬ police mentality ಇರುತ್ತದೆ. ಇವರಿಗೆ ಸಂಶಯ ಜಾಸ್ತಿ. ಇಂತಹ ಜಾತಕದಲ್ಲಿ ಅದೇ ಕರ್ಮ ಸ್ಥಾನದಲ್ಲಿ ನೀಚ ಶುಕ್ರನೂ ಆಗಿದ್ದರೆ ಭಯ, ಸಾತ್ವಿಕತೆ, ಮೇಲ್ನೋಟದಲ್ಲಿ ಇದೆ.
ಶುಕ್ರನಿಂದ ಅಲಂಕಾರ ಚಿಂತನೆ. ಶುಕ್ರನು ನೀಚನಾಗಿ ಅಲಂಕಾರವನ್ನು(ವ್ಯಕ್ತಿತ್ವ ಅಸಂಭದ್ಧವಾದ ಮಾತು) ಹಾಳುಮಾಡುತ್ತಾನೆ. ಸಾಮಾನ್ಯವಾಗಿ ಇಂತವರು ರಾಜಕಾರಣಿಯಾಗಿದ್ದರೆ, ಆ ರಾಜಕಾರಣಿಗೆ ವಾಕ್ ಪ್ರಬುದ್ಧತೆಯೇ ಅಲಂಕಾರ. ಆದರೆ ಶುಕ್ರನು ನೀಚಾಂಶಗತನಾಗಿರುವುದರಿಂದ ಅಪ್ರಬುದ್ಧತೆಯು ಅಲಂಕಾರವನ್ನು ಅಪಹಾಸ್ಯಕ್ಕೊಳಗಾಗಿಸಿ ಹಾಳು ಮಾಡುತ್ತದೆ. ಅಂದರೆ comedy, ಹಾಸ್ಯಾಸ್ಪದ ನಡತೆ ಇತ್ಯಾದಿ ಪ್ರವೃತ್ತಿ. ಇಂಗ್ಲೀಷ್ ಸಿನಿಮಾದಲ್ಲಿನ Mr Been ಉತ್ತಮ ಹಾಸ್ಯಗಾರ. ಆದರೆ ಹೀರೊ ಅಲ್ಲ. ಆದರೂ ಇವನ ಹಾಸ್ಯದ ಮಾತಿಗಾಗಿ ಜನ ಚಪ್ಪಾಳೆ ತಟ್ಟುತ್ತಾರೆ. ಅದೇ ಹಾಸ್ಯದ ಮೂಲಕ ರಾಜಕಾರಣಿಯಾಗಿ ವೇದಿಕೆ ಏರಿದರೆ ಅದು ಅಪಹಾಸ್ಯ, ಅವಹೇಳನವಾಗುತ್ತದೆ. ತನ್ನನ್ನು ಅವಹೇಳನ ಮಾಡುತ್ತಾರೆ ಎಂಬ ಜ್ಞಾನವೂ ಇಲ್ಲದವರು ಇನ್ನಷ್ಟು ರಂಜನೆ ಕೊಡುತ್ತಾರೆ. ಮಗು ಚಡ್ಡಿಯಲ್ಲೇ ಹೊಲಸು ಮಾಡಿಕೊಂಡು ಬಂದಾಗ ನಾವು ನಗುತ್ತೇವೆ. ಆಗ ಮಗುವೂ ನಗುತ್ತದೆ. ಅದಕ್ಕೆ ತನ್ನ ಕಿತಾಪತಿಯ ಅರಿವು ಇರುವುದಿಲ್ಲ. ಹಾಗೆಯೇ ಅಪ್ರಬುದ್ಧರದ್ದೂ ಆಗುತ್ತದೆ. ಇಂತದ್ದೇ ಸ್ಥಿತಿಯ ಮನುಷ್ಯನೊಬ್ಬ ಒಂದು ದೊಡ್ಡ ಪಕ್ಷದ ನಾಯಕನಾದರೆ, ಅಪಹಾಸ್ಯಕ್ಕೊಳಗಾಗುತ್ತಾ ಇದ್ದರೆ ಅದರೊಳಗಿನ ಪ್ರಬುದ್ಧ ನಾಯಕರುಗಳ ಸ್ಥಿತಿ ಏನಾಗಬೇಡ?
ಕೌರವ ಒಬ್ಬ ಮೂರ್ಖ. ಧೃತರಾಷ್ಟ್ರ ಒಬ್ಬ ಪುತ್ರವ್ಯಾಮೋಹಿ. ಇಂತವರ ರಾಜ್ಯದಲ್ಲಿ ಇದ್ದ ಭೀಷ್ಮಾಚಾರ್ಯರು, ದ್ರೋಣಾಚಾರ್ಯರು, ವಿದುರ, ಕೃಪಾಚಾರ್ಯಾದಿಗಳು ಎಷ್ಟು ನೊಂದುಕೊಂಡು ಜೀವ ಕಳೆದುಕೊಂಡರು. ಕುರುವಂಶದ ಗೌರವ ಪ್ರತಿಷ್ಠೆಗಳನ್ನು ಉಳಿಸಲೆಂದೇ ಪ್ರತಿಜ್ಞಾ ಸ್ವೀಕಾರ ಮಾಡಿದವರಿವರು. ಬಿಟ್ಟು ಹೋಗುವ ಹಾಗಿಲ್ಲ. ನಿಲ್ಲುವ ಹಾಗೂ ಇಲ್ಲ. ಆದರೂ ಪ್ರತಿಜ್ಞೆಯನ್ನು ಕೃಷ್ಣನಿಗರ್ಪಣೆ ಮಾಡಿ ಮಡಿದರು. ಅದೇ ನೋವು ಇಂತಹ ನಾಯಕನಿರುವ ಪಕ್ಷದಲ್ಲಿದ್ದರೆ ಪಕ್ಷವೇ ನಾಶವಾಗಿ ವಂಶಕ್ಷಯದ ಸೂಚನೆಯಾಗುತ್ತದೆ. ಈ ಭೃಗು ಅಂಗಾರಕ ದೋಷದ ಈ ಒಂದು ಗ್ರಹಸ್ಥಿತಿಯ ಮನುಷ್ಯನ ಆಡಳಿತದಿಂದಾಗಿ ಆ ಪಕ್ಷವು ಸರ್ವ ನಾಶವಾಗುತ್ತದೆ. ಇದರಲ್ಲಿ ವಿದುರನಂತವರು ಹೊರಬಂದು ಪಾಪ ಕಳೆದು ಪುಣ್ಯಾಂಶ ಪಡೆದು ಮೋಕ್ಷ ಪಡೆಯುತ್ತಾರೆ.
ಈ ಭೃಗು ಅಂಗಾರಕ ದೋಷ ಎಂದ ಮಾತ್ರಕ್ಕೇ ಅಪ್ರಬುದ್ಧರು ಎಂದು ತಿಳಿಯಬಾರದು. ಇದು ಒಬ್ಬರಿಗೆ ಮಾತ್ರ ಎಂದೂ ಹೇಳಲಾಗದು ಅಥವಾ ಅವರೆಲ್ಲರೂ ಮೂರ್ಖರು ಎಂದೂ ಹೇಳುವುದೂ ತಪ್ಪು. ಈ ದೋಷಕ್ಕೆ ಕೇತುವು ವಾಕ್ ಸ್ಥಾನದಲ್ಲಿದ್ದು, ಗುರು ಷಷ್ಠಾಧಿಪತಿಯಾಗಿ ಕರ್ಮಕಾರಕ ಶತ್ರು ಕ್ಷೇತ್ರಗತ, ರಾಶಿ ಕುಂಡಲಿಯಲ್ಲಿ ಅಸ್ತನಾದ ಕುಜ ವೀಕ್ಷಣೆಯಲ್ಲಿ ಇದ್ದುಬಿಟ್ಟರೆ ‘ಯದ್ವಾತದ್ವಂ ಭವಿಷ್ಯತಿ ಆಗುತ್ತದೆ.
ಈ ಉದಾಹರಣೆಯ ಜಾತಕದಲ್ಲಿ ಕರ್ಕ ಲಗ್ನವಾಗಿದ್ದಾಗ ಹಾ.. ಗುರು ಭಾಗ್ಯಾಧಿಪತಿ ಅಲ್ವೇ? ಹೌದು. ಆದರೆ ಭಾಗ್ಯಕ್ಕೆ ಷಷ್ಟಾಷ್ಟಮದಲ್ಲಿಯೂ, ಶತ್ರು ಕ್ಷೇತ್ರದಲ್ಲೂ ಇದ್ದ ಗುರುವು(ತುಲಾ ರಾಶಿ) ಇವರನ್ನು ಕೇವಲ ಪಾರಂಪರಿಕವಾಗಿ ಒಂದು ಮನೆಗೆ, ವಂಶಕ್ಕೆ, ಒಂದು ಪಕ್ಷಕ್ಕೆ, ಜನಾಂಗಕ್ಕೆ, ಯಜಮಾನ (ಅಧ್ಯಕ್ಷ) ಪಟ್ಟವನ್ನು ನೀಡಿ ಭಾಗ್ಯವಂತನನ್ನಾಗಿ ಮಾಡಿಬಿಡುತ್ತದೆ. ಇಷ್ಟಾದರೂ ಇಂತಹ ವ್ಯಕ್ತಿಗೆ ಈ trollನಿಂದ ತಿದ್ದಿಕೊಳ್ಳೋಣ ಎಂಬ ಜ್ಞಾನ ಇರಲಾರದು. ಆ ಜ್ಞಾನ ನೀಡುವ ಗುರುವೇ ಸರಿ ಇಲ್ಲದಿದ್ದಾಗ ಏನೂ ಪ್ರಯೋಜನವಿಲ್ಲ. ಆದಾಗ್ಯೂ ಈತ ಇಂತಹ ಅಪಹಾಸ್ಯ ಮಾಡುತ್ತಲೇ ಕಾಲ ಕಳೆಯುತ್ತಾನೆ. ಸಭೆಯನ್ನು ನಗೆ ಕಡಲಲ್ಲಿ ಮುಳುಗಿಸಿದೆ ಎಂಬ ಅಹಂ ಇವನೊಳಗಿದೆ. ಸಭಿಕರ ಕರತಾಡನವು ನನ್ನ ಪೆದ್ದುತನಕ್ಕೆ ತಮಾಷೆಯ ಶಬ್ದ ಎಂಬುದನ್ನು ತಿಳಿಯುವ ಪರಿಜ್ಞಾನ ಇಲ್ಲದ ಭೂಪನೆನಿಸುತ್ತಾನೆ.
ಇದು ವಂಶ ಕ್ಷಯ ಯೋಗ. ಇಲ್ಲಿಗೆ ಆ ವಂಶವು ಇತಿಶ್ರೀ ಅಂತ್ಯೋಧ್ಯಾಯಃ ಆಗುತ್ತದೆ. ಒಂದು ವೇಳೆ ದೋಷ ಗ್ರಸ್ತ ಜಾತಕವಾದರೂ ಪುಣ್ಯಾಂಶಗಳಿದ್ದರೆ ಚಿಗುರುತ್ತದೆ. ಆದರೆ ಪುಣ್ಯ ನೀಡುವ ಜ್ಞಾನಕಾರಕ ಗುರುವೇ ದುರ್ಬಲನಾಗಿ ಅದೇ ಶತ್ರು ಸ್ಥಾನಾಂಶದಲ್ಲಿ ಇದ್ದಾಗ ಪುಣ್ಯ ಸಂಪಾದನೆಯ ಬುದ್ಧಿಯೂ ಇಲ್ಲ, ಹಿರಿಯರು ಸಂಪಾದಿಸಿದ್ದೂ ಇಲ್ಲದಂತಾಗಿ ಇದು ಇಲ್ಲಿಗೆ ಇತಿಶ್ರೀ ಆಗುತ್ತದೆ.
ಚುನಾವಣಾ ಸಂದರ್ಭಗಳಲ್ಲಿ ಮತದಾರರು ನಾಯಕರ ವಾಕ್ ಶೈಲಿಯನ್ನು ನೋಡಿ ಅರ್ಥ ಮಾಡಿಕೊಂಡೇ ಮತದಾನ ಮಾಡುವುದೋ, ಮಾಡದಿರುವುದೋ ಮಾಡಬೇಕು. ನಾಯಕನ ನಡತೆಯ ಆಧಾರದಲ್ಲಿ ಆಯ್ಕೆ ಮಾಡುವುದು ಪ್ರಜೆಗಳ ಜವಾಬ್ದಾರಿ. ಆಯ್ಕೆ ವಿಫಲ ಆದರೂ ಮತದಾರನೇ ಹೊಣೆ, ಸಫಲವಾದರೂ ಮತದಾರನೇ ಹೊಣೆ. ಇಲ್ಲಿ ನಾಯಕರನ್ನು ನಿಂದಿಸುವುದಕ್ಕಿಂತ ನಮ್ಮ ನಮ್ಮ ಪ್ರಜ್ಞೆಯ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಇದೊಂದು ಜವಾಬ್ದಾರಿಯುತ ರಾಜನ ಆಯ್ಕೆಯ ಪ್ರಕ್ರಿಯೆ. ಇಲ್ಲಿ ನಾವು ಎಡವಿ ಬೀಳಬಾರದು. ಹಣ, ಹೆಂಡ, ಅಪ್ರಬುದ್ಧ ಮಾತುಗಳು ಒಂದು ಕ್ಷಣಕ್ಕೆ ಆನಂದ ನೀಡಬಹುದು. ಆದರೆ ಹಲವು ವರ್ಷ ದುಃಖ ನೀಡಬಹುದು.
ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post