Friday, May 9, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಪಕ್ಷಮಾಸದ ಮಹತ್ವ: ದರ್ಶನ ಕಾಲದ ಆಚರಣೆ, ಶ್ರಾದ್ದ ಏಕೆ ಮಾಡಬೇಕು? ಅದರ ಮಹತ್ವವೇನು?

September 22, 2019
in Special Articles
0 0
0
Share on facebookShare on TwitterWhatsapp
Read - 5 minutes

ಪ್ರತಿ ತಿಂಗಳು ಅಮಾವಾಸ್ಯೆಯ ದಿನ ದ್ವಾದಶ ಪಿತೃಗಳಿಗೆ ( 12 ಜನಕ್ಕೆ ) ತಿಲ ತರ್ಪಣ ಕೊಡಬೇಕು. ದ್ವಾದಶ ಪಿತೃಗಳು ಯಾರೆಂದರೆ…
1. ಪಿತೃ ವರ್ಗ (3) = ಪಿತೃ, ಪಿತಾಮಹ, ಪ್ರಪಿತಾಮಹ
2. ಮಾತೃ ವರ್ಗ (3) = ಮಾತೃ, ಪಿತಾಮಹಿ, ಪ್ರಪಿತಾಮಹಿ
3. ಮಾತಾಮಹ ವರ್ಗ (3) = ಮಾತಾ ಮಹ, ಮಾತುಃ ಪಿತಾಮಹ, ಮಾತು: ಪ್ರಪಿತಾಮಹ
4. ಮಾತಾಮಹಿ ವರ್ಗ (3) = ಮಾತಾಮಹಿ, ಮಾತುಃ ಪಿತಾಮಹಿ, ಮಾತುಃ ಪ್ರಪಿತಾಮಹಿ
ತಂದೆ ಅಥವಾ ತಾಯಿಯ ಪ್ರತಿವರ್ಷದ ತಿಥಿ ಮತ್ತು ಪ್ರತಿ ತಿಂಗಳ ಅಮಾವಾಸ್ಯೆ ಈ ಎರಡು ಸಂದರ್ಭಗಳು ವಿನಃ ಮಿಕ್ಕ ಇತರ ಕಾಲಗಳಲ್ಲಿ ಅಂದರೆ ಸೂರ್ಯ – ಚಂದ್ರ ಗ್ರಹಣ, ಪ್ರತಿ ತಿಂಗಳಲ್ಲೂ ಬರುವ ಸಂಕ್ರಮಣ, ಮಹಾಲಯ ಪಕ್ಷ, ಉಪಾಕರ್ಮ ಇತ್ಯಾದಿ ಪುಣ್ಯ ಕಾಲಗಳಲ್ಲಿ, ಪುಣ್ಯ ನದಿ, ತೀರ್ಥ ಕ್ಷೇತ್ರ ಮತ್ತು ಸಮುದ್ರಗಳಲ್ಲಿ ಸಮಸ್ತ ಪಿತೃಗಳಿಗೂ ತರ್ಪಣ ಕೊಡಬೇಕು.

ತಿಲ ತರ್ಪಣವನ್ನು ಮೃತರಾದವರಿಗೆ ಕೊಡಬೇಕೇ ವಿನಃ ಜೀವಂತರಿಗೆ ಕೊಡಬಾರದು. ಮೇಲ್ಕಂಡ 4 ವರ್ಗಗಳಲ್ಲಿ 1ನೇಯ ವರ್ಗದಲ್ಲಿನ ಪಿತೃ ಜೀವಂತವಾಗಿದ್ದರೆ ಕರ್ತೃ ತಂದೆ ಬದುಕಿರುವವರು ಎಂದು ಕರೆಯಲ್ಪಡುತ್ತಾರೆ. ಅವರಿಗೆ ಪಿತೃ ತರ್ಪಣದಲ್ಲಿ ಅಧಿಕಾರವಿಲ್ಲ. ಆದರೆ ಬ್ರಹ್ಮಯಜ್ಞ ಮತ್ತು ಉಪಾಕರ್ಮಗಳಲ್ಲಿ…
ಭೂ ಪಿತೃಂ ತರ್ಪಯಾಮಿ
ಭುವಃ ಪಿತೃಂ ತರ್ಪಯಾಮಿ
ಸ್ವಃ ಪಿತೃಂ ತರ್ಪಯಾಮಿ
ಭೂರ್ಭವಸ್ವಃ ಪಿತೃಂ ತರ್ಪಯಾಮಿ

ಎನ್ನುವ ತರ್ಪಣಕ್ಕೆ ಅಧಿಕಾರ ಉಂಟು. ನಂತರ ಮೇಲೆ ಹೇಳಿದ ವರ್ಗಗಳ ಸಾಕ್ಷಾತ್ ಪಿತೃಗಳಿಗೆ ತರ್ಪಣ ಕೊಡಲು ಅಧಿಕಾರವಿಲ್ಲ!
ಮೇಲೆ ಹೇಳಿದ 4 ವರ್ಗಗಳು ಅಂದರೆ…
1. ಪಿತೃ ವರ್ಗ
2. ಮಾತೃ ವರ್ಗ
3. ಮಾತಾಮಹ ವರ್ಗ
4. ಮಾತಾಮಹಿ ವರ್ಗ


ವರ್ಗಳಗಲ್ಲಿ ಮೃತರಾಗುವ ತನಕ ಮಿಕ್ಕವರಿಗೆ ತರ್ಪಣ ಹುಟ್ಟುವುದಿಲ್ಲ. ಉದಾಹರಣೆಗೆ.
1. ತಂದೆ ಜೀವಂತವಾಗಿರುವ ತನಕ ತರ್ಪಣದ ಅಧಿಕಾರ ಬರುವುದಿಲ್ಲ.
2. ತಾಯಿ ಜೀವಂತವಾಗಿರುವ ತನಕ ಮಾತೃ ವರ್ಗ ತರ್ಪಣಕ್ಕೆ ಬರುವುದಿಲ್ಲ.
3. ಹಾಗೆಯೇ ಮಾತಾಮಹ ವರ್ಗ ಅಂದರೆ ತಾಯಿಯ ತಂದೆ ಮತ್ತು ತಾಯಿಯ ತಾಯಿ ಜೀವಂತವಿರುವ ತನಕ ಆಯಾ ವರ್ಗದವರಿಗೆ ತರ್ಪಣ ಹುಟ್ಟುವುದಿಲ್ಲ.
4. ಇನ್ನು ಪ್ರತಿಯೊಂದು ವರ್ಗದಲ್ಲಿಯೂ ಮೊದಲಿನವರು ಮೃತರಾಗಿ ಎರಡನೇಯವರಾಗಲೀ ಅಥವಾ ಮೂರನೇಯವರಾಗಲೀ ಜೀವಂತರಾಗಿದ್ದರೆ ಅವರ ಮುಂದಿನವರಿಗೆ ತರ್ಪಣ ಕೊಡಬೇಕಾದ ವಿಚಾರವನ್ನು ವಿದ್ವಾಂಸರನ್ನು ವಿಚಾರಿಸಿ ತಿಳಿದುಕೊಳ್ಳಬೇಕು!

ತರ್ಪಣ ವಿಧಿ ನಿಯಮಗಳು
* ಕಲಶದ ನೀರಿಗೆ ನಿರ್ಮಾಲ್ಯ ತೀರ್ಥವನ್ನು ಹಾಕಬೇಕು.
* ತರ್ಪಣವನ್ನು ನೆಲದ ಮೇಲೆ ಕೊಡಬಾರದು.
* ತರ್ಪಣ ಕೊಟ್ಟ ನೀನು ನೆಲದ ಮೇಲೆ ಬೀಳಬಾರದು.
* ತಾಮ್ರದ ಪಾತ್ರೆಯಲ್ಲಿ ತರ್ಪಣ ಕೊಡಬೇಕು.
* ಸಂದರ್ಭಾನುಸಾರ 3, 12 ಅಥವಾ ಸಮಸ್ತ ಪಿತೃಗಳಿಗೆ ತರ್ಪಣ ಕೊಟ್ಟಾಗ ಜನಿವಾರವನ್ನು ವನಮಾಲೆಯಾಗಿ ಹಾಕಿಕೊಳ್ಳಬೇಕು.

ಶ್ರಾದ್ಧ ಏಕೆ ಮಾಡಬೇಕು? ಅದರ ಮಹತ್ವವೇನು?
ಶ್ರಾದ್ಧ ಎಂದು ಹೇಳಿದೊಡನೆ ಇಂದಿನ ವಿಜ್ಞಾನಯುಗದ ಯುವಪೀಳಿಗೆಯ ಮನಸ್ಸಿನಲ್ಲಿ ಅಶಾಸ್ತ್ರೀಯ ಮತ್ತು ಅವಾಸ್ತವ ಕರ್ಮಕಾಂಡದ ಆಡಂಬರ’ ಎಂಬ ತಪ್ಪುಕಲ್ಪನೆಯು ಮೂಡುತ್ತದೆ.

ಧರ್ಮಶಿಕ್ಷಣದ ಅಭಾವ, ಅಧ್ಯಾತ್ಮವನ್ನು ಅರ್ಥಮಾಡಿಕೊಳ್ಳುವಲ್ಲಿನ ಅನಾಸಕ್ತಿ, ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ, ಧರ್ಮದ್ರೋಹಿ ಸಂಘಟನೆಗಳಿಂದ ಹಿಂದೂ ಧರ್ಮದ ರೂಢಿ-ಪರಂಪರೆಗಳ ಮೇಲೆ ಸತತವಾಗಿ ಆಗುತ್ತಿರುವ ದ್ವೇಷಪೂರ್ವಕ ಟೀಕೆ ಇತ್ಯಾದಿಗಳಿಂದ ಈ ಪರಿಣಾಮವಾಗಿದೆ.  ಶ್ರಾದ್ಧದ ವಿಷಯದಲ್ಲಿ ಮುಂದಿನ ವಿಚಾರಸರಣಿಯು ಸಮಾಜದಲ್ಲಿ ಕಂಡುಬರುತ್ತದೆ. ಪೂಜೆ ಅರ್ಚನೆ, ಶ್ರಾದ್ಧಪಕ್ಷ ಮುಂತಾದವುಗಳ ಮೇಲೆ ವಿಶ್ವಾಸವನ್ನಿಡದ ಅಥವಾ ಸಮಾಜಕಾರ್ಯವೇ ಸರ್ವ ಶ್ರೇಷ್ಠವಾಗಿದೆ ಎಂದು ಹೇಳುವವರು ಪಿತೃಗಳಿಗಾಗಿ ಶ್ರಾದ್ಧ ವಿಧಿಗಳನ್ನು ಮಾಡದೇ ಅದರ ಬದಲು, ಬಡವರಿಗೆ ಅನ್ನದಾನ ಮಾಡುವೆವು ಅಥವಾ ಶಾಲೆಗಳಿಗೆ ಸಹಾಯ ಮಾಡುವೆವು ಎಂದು ಹೇಳುತ್ತಾರೆ! ಅನೇಕ ಜನರು ಇದೇ ರೀತಿ ಮಾಡುತ್ತಾರೆ! ಹೀಗೆ ಮಾಡುವುದೆಂದರೆ, ಒಬ್ಬ ರೋಗಿಗೆ ಶಸ್ತ್ರಚಿಕಿತ್ಸೆ ಮಾಡದೇ, ಅದರ ಬದಲು ನಾವು ಬಡವರಿಗೆ ಅನ್ನದಾನ ಮಾಡುವೆವು, ಶಾಲೆಗೆ ಸಹಾಯ ಮಾಡುವೆವು ಎಂದು ಹೇಳಿದಂತೆಯೇ ಆಗಿದೆ. ಶ್ರಾದ್ಧದಲ್ಲಿನ ಮಂತ್ರೋಚ್ಚಾರಗಳಲ್ಲಿ ಪಿತೃಗಳಿಗೆ ಗತಿ ನೀಡುವಂತಹ ಸೂಕ್ಷ್ಮಶಕ್ತಿಯು ಒಳಗೊಂಡಿರುತ್ತದೆ; ಅದರಿಂದಾಗಿ ಪಿತೃಗಳಿಗೆ ಗತಿ ಸಿಗಲು ಸಾಧ್ಯವಾಗುತ್ತದೆ. ಹಾಗಾಗಿ ಮೇಲಿನ ಹೇಳಿಕೆಗಳು ಹಾಸ್ಯಾಸ್ಪದವೆನಿಸಿಕೊಳ್ಳುತ್ತವೆ.

ಹಿಂದೂಧರ್ಮದಲ್ಲಿ ಹೇಳಿರುವ ಈಶ್ವರಪ್ರಾಪ್ತಿಯ ಮೂಲಭೂತ ಸಿದ್ಧಾಂತಗಳಲ್ಲಿ ದೇವಋಣ, ಋಷಿಋಣ, ಪಿತೃಋಣ ಮತ್ತು ಸಮಾಜಋಣವನ್ನು ತೀರಿಸುವುದು ಒಂದು ಮುಖ್ಯ ಉದ್ದೇಶವಾಗಿದೆ. ಇವುಗಳಲ್ಲಿ ಪಿತೃಋಣವನ್ನು ತೀರಿಸಲು ಶ್ರಾದ್ಧಕರ್ಮವು ಅವಶ್ಯಕವಾಗಿದೆ. ತಂದೆತಾಯಿ ಮತ್ತು ಸಂಬಂಧಿಕರ ಮರಣೋತ್ತರ ಪ್ರಯಾಣವು ಸುಖಕರ ಮತ್ತು ಕ್ಲೇಶರಹಿತವಾಗಿ, ಅವರಿಗೆ ಸದ್ಗತಿಯು ಸಿಗಬೇಕೆಂದು ಮಾಡಬೇಕಾದ ಸಂಸ್ಕಾರಕ್ಕೆ ಶ್ರಾದ್ಧ ಎನ್ನುತ್ತಾರೆ.

ಶ್ರಾದ್ಧಕರ್ಮಗಳಲ್ಲಿನ ಮಂತ್ರೋಚ್ಚಾರಗಳಲ್ಲಿ ಪಿತೃಗಳಿಗೆ ಗತಿ ನೀಡುವ ಸೂಕ್ಷ್ಮಶಕ್ತಿ ಇದೆ. ಶ್ರಾದ್ಧಕರ್ಮಗಳಲ್ಲಿ ಪಿತೃಗಳಿಗೆ ಹವಿರ್ಭಾಗವನ್ನು ಕೊಡುವುದರಿಂದ ಅವರು ಸಂತುಷ್ಟರಾಗುತ್ತಾರೆ. ಶ್ರಾದ್ಧವನ್ನು ಮಾಡದಿದ್ದರೆ ಪಿತೃಗಳ ಆಸೆಗಳು ಅತೃಪ್ತವಾಗಿ ಉಳಿಯುತ್ತವೆ ಮತ್ತು ಈ ವಾಸನಾಯುಕ್ತ ಪಿತೃಗಳು ದುಷ್ಟ ಶಕ್ತಿಗಳ ಅಧೀನಕ್ಕೊಳಪಟ್ಟು ಅವರ ಗುಲಾಮರಾಗುತ್ತಾರೆ. ದುಷ್ಟ ಶಕ್ತಿಗಳು ವಾಸನಾಯುಕ್ತ ಪಿತೃಗಳ ಮೂಲಕ ಕುಟುಂಬದವರಿಗೆ ತೊಂದರೆಗಳನ್ನು ಕೊಡುವ ಸಂಭವವೂ ಇರುತ್ತದೆ. ಶ್ರಾದ್ಧವನ್ನು ಮಾಡುವುದರಿಂದ ಪಿತೃಗಳು ಆ ತೊಂದರೆಗಳಿಂದ ಮುಕ್ತರಾಗುವುದಲ್ಲದೇ ನಮ್ಮ ಜೀವನವೂ ಸುಖಮಯವಾಗುತ್ತದೆ.

ಶ್ರಾದ್ಧಕ್ಕೆ ಇಷ್ಟೊಂದು ಮಹತ್ವವಿದ್ದರೂ ಇಂದು ಹಿಂದೂಗಳಲ್ಲಿರುವ ಧರ್ಮಶಿಕ್ಷಣದ ಅಭಾವ, ಅಧ್ಯಾತ್ಮಶಾಸ್ತ್ರದ ಮೇಲಿನ ಅವಿಶ್ವಾಸ, ಪಾಶ್ಚಿಮಾತ್ಯ ಸಂಸ್ಕೃತಿಯ ಅಂಧಾನುಕರಣೆ ಇತ್ಯಾದಿಗಳಿಂದ ಶ್ರಾದ್ಧವಿಧಿಯು ಅಲಕ್ಷಿಸಲ್ಪಟ್ಟಿದೆ. ಶ್ರಾದ್ಧಕರ್ಮವನ್ನು ವಾಸ್ತವವಿಲ್ಲದ ಅಯೋಗ್ಯ ಕರ್ಮಕಾಂಡವೆಂದು ಪರಿಗಣಿಸಲ್ಪಡುತ್ತಿದೆ. ಆದುದರಿಂದ ಶ್ರಾದ್ಧ ಸಂಸ್ಕಾರವೂ ಇತರ ಸಂಸ್ಕಾರಗಳಷ್ಟೇ ಆವಶ್ಯಕವಾಗಿದೆ ಎಂಬುದನ್ನು ಹೇಳುವುದು ಆವಶ್ಯಕವಾಗಿದೆ.

ದೇವ ಯಾನ ಮತ್ತು ಪಿತೃ ಯಾನ ಮಾರ್ಗ
ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ
ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ ॥-ಗೀತೆ-2/23
ಆತ್ಮವನ್ನು ಶಸ್ತ್ರಗಳು ಕತ್ತರಿಸಲಾರವು, ಅಗ್ನಿಯು ಸುಡಲಾರದು, ನೀರು ನೆನಿಸಲಾರದು, ಗಾಳಿ ವಣಿಗಿಸಲಾರದು. ಈ ಮಾರ್ಗದಲ್ಲಿ ಅಗ್ನಿ ಅಥವಾ ಅರ್ಚಿಯು ಮೊದಲನೇಯನಾದುದರಿಂದ ಆ ಮಾರ್ಗವನ್ನು ಅರ್ಚಿರಾದಿ ಮಾರ್ಗ ಎಂದು ಕರೆಯುತ್ತಾರೆ. ಇದರ ವಿವರಣೆಯನ್ನು….
ಭಗವದ್ಗೀತೆಯಲ್ಲಿ….
1. ಮುಮುಕ್ಷುಗಳಾದರೋ ಈ ರೀತಿ ಅತಿವಾಹಿಕರಿಂದ ತರಲ್ಪಟ್ಟ ರಥಗಳಲ್ಲಿ ಪ್ರಯಾಣ ಮಾಡಿ ಯಮಪುರಿಗೆ ಹೋಗದಂತೆಯೇ ವಿಷ್ಣುವಿನ ಸ್ಥಾನವಾದ ಪರಮಪದಕ್ಕೆ ಹೋಗಿ ಸೇರುತ್ತಾನೆ.
2. ಧರ್ಮ-ಅರ್ಥ-ಕಾಮ-ಮೋಕ್ಷಗಳೆಂಬ 4 ಪುರುಷಾರ್ಥಗಳನ್ನು ಸೇವಿಸುವವರಲ್ಲಿ, ಯಜ್ಞ ಯಾಗಗಳನ್ನು ಮಾಡಿ ಧರ್ಮ ಮಾರ್ಗದಲ್ಲಿ ತೊಡಗಿರುವವರೋ, ಹಣದಿಂದ ವಿಶೇಷವಾದ ದಾನ ಧರ್ಮಗಳು ಮಾಡಿದವರೂ ದೇಹಾವಸಾನದಲ್ಲಿ ಹಂಸಯುಕ್ತ ವಿಮಾನದಲ್ಲಿಯೂ;
3. ಇತರರಿಗೆ ಇಷ್ಟಾರ್ಥಗಳನ್ನು ಪೂರೈಸಿ ಕೊಡುವುದರೊಡನೆ ಧರ್ಮಕ್ಕೆ ವಿರುದ್ಧವಲ್ಲದ ರೀತಿಯಲ್ಲಿ ಕಾಮವನ್ನು ಸೇವಿಸಿದವರು ಕುದುರೆಯ ಮೇಲೆ ಕುಳಿತವರಾಗಿ ಶ್ರೀ ಯಮದೇವರಲ್ಲಿಗೆ ಒಯ್ಯಲ್ಪಡುತ್ತಾರೆ.
ಅಲ್ಲಿ ಶ್ರೀ ಯಮದೇವರು ಅವರನ್ನು ಬಹಳವಾಗಿ ಗೌರವಿಸಿ ಅವರ ಪುಣ್ಯ ಫಲಗಳ ಅನುಗುಣವಾಗಿ ಅವರನ್ನು ಸ್ವರ್ಗಾದಿ ಊರ್ಧ್ವ ಲೋಕಗಳಿಗೆ ಕಳುಹಿಸಿ ಕೊಡುತ್ತಾರೆ.

ಪಿತೃಯಾನ ಮಾರ್ಗ
ಯಾರು ಸ್ವರ್ಗಾದಿ ಫಲಾಪೇಕ್ಷೆಯಿಂದ ಅಗ್ನಿಹೋತ್ರಾದಿ ಯಜ್ಞ ಯಾಗಾದಿಗಳನ್ನಾಗಲೀ, ಭಾವಿ, ಕೆರೆ, ಕಟ್ಟೆ ಮುಂತಾದವುಗಳನ್ನು ಕಟ್ಟಿಸುವುದಾಗಲೀ, ಸತ್ಪಾತ್ರರಲ್ಲಿ ದಾನಾದಿಗಳನ್ನು ಮಾಡಿರುವರೋ ಅವರು ದೇವಾವಸಾನವಾದ ಕೂಡಲೇ ಧೂಮ-ರಾತ್ರಿ-ಕೃಷ್ಣ ಪಕ್ಷ-ದಕ್ಷಿಣಾಯನಗಳ ಮತ್ತು ಸಂವತ್ಸರಾಭಿಮಾನ ದೇವತೆಗಳಿಂದ ಒಯ್ಯಲ್ಪಟ್ಟು, ಪಿತೃಲೋಕಕ್ಕೆ ಹೋಗಿ ಅಲ್ಲಿ ಪಿತೃ ದೇವತೆಗಳಿಂದಲೂ, ಶ್ರೀಯಮಧರ್ಮರಾಜರಿಂದಲೂ ಗೌರವಿಸಲ್ಪಟ್ಟು ಅಲ್ಲಿಂದ ಮುಂದೆ… ಆಕಾಶಾಭಿಮಾನಿ ದೇವತೆಯಿಂದ ಮತ್ತು ಚಂದ್ರನಿಂದಲೂ ಗೌರವಿಸಲ್ಪಟ್ಟು ಸ್ವರ್ಗಾದಿ ಲೋಕಗಳಲ್ಲಿ ಸುಖಾನುಭವ ಮಾಡಲು ಯೋಗ್ಯವಾದ ದೇಹವನ್ನು ಪಡೆದು ಆಯಾ ಪುಣ್ಯ ಫಲಗಳಿರುವ ವರೆಗೂ ಆಯಾ ಲೋಕಗಳಲ್ಲಿದ್ದು, ಆ ಸುಖಗಳನ್ನು ಅನಿಭವಿಸಿ ಪುಣ್ಯ ಫಲಗಳು ಮುಗಿದೊಡನೆ ಇತರ ಕರ್ಮ ಫಲ ಶೇಷವಿರುವುದರಿಂದ ಅದನ್ನು ಅನುಭವಿಸಲು ಕ್ಷೀಣೇ ಪುಣ್ಯೇ ಮರ್ತ್ಯಲೋಕಂ ವಿಶಂತಿ ಎಂದು ಹೇಳಿರುವಂತೆಯೇ ಹೋದ ಮಾರ್ಗದಲ್ಲೇ ಮನುಷ್ಯ ಲೋಕಕ್ಕೆ ಹಿಂದಿರುಗಿ ಬರುತ್ತಾನೆ. ಅಂದರೆ, ಸ್ವರ್ಗಾದಿ ಲೋಕಗಳಲ್ಲಿ ಪಡೆದುಕೊಂಡ ಸ್ಥೂಲ ದೇಹವನ್ನು ಅಲ್ಲಿಯೇ ತ್ಯಾಗ ಮಾಡಿ ಕೇವಲ ಸೂಕ್ಷ್ಮ ದೇಹದಿಂದ ಕೂಡಿಕೊಂಡವನಾಗಿ…

ಚಂದ್ರನಿಂದ ಆಕಾಶ – ಆಕಾಶದಿಂದ ವಾಯು – ವಾಯುವಿನಿಂದ ಧೂಮ – ಧೂಮದಿಂದ ಮೇಘವನ್ನು ಪ್ರವೇಶಿಸಿ – ಮೇಘದಿಂದ ಮಳೆಯ ನೀರಿನ ಮುಖಾಂತರ ಭೂಮಿಯಲ್ಲಿ ಬಿದ್ದು – ಭತ್ತ – ಗೋಧಿ – ಓಷಧಲತೆ – ಎಳ್ಳು – ಉದ್ದು ಮೊದಲಾದ ಆಹಾರ ಸಾಮಾಗ್ರಿಯಲ್ಲಿ ಸೇರಿಕೊಂಡು; ಇವರ ಕರ್ಮಕ್ಕನುಗುಣವಾಗಿ ಆ ಆಹಾರ ಪದಾರ್ಥವನ್ನು ಸೇವಿಸಿದ ಪುರುಷನ ದೇಹವನ್ನು ಪ್ರವೇಶಿಸಿ ಅವನ ರೇತಸ್ಸಿನ ಮೂಲಕ ಸ್ತ್ರೀ ಯೋನಿಯನ್ನು ಪ್ರವೇಶಿಸಿ ಆ ಗರ್ಭದಲ್ಲಿ ಕೆಲ ಕಾಲವಿದ್ದು ನಂತರ ಜನ್ಮವನ್ನು ಪಡೆಯುತ್ತಾನೆ. ಒಳ್ಳೆಯ ಕರ್ಮಫಲ ಶೇಷವಿದ್ದರೆ ಬ್ರಾಹ್ಮಣಾದಿ ಒಳ್ಳೆಯ ಯೋನಿಗಳಲ್ಲಿ ಹುಟ್ಟುವನು. ಕೆಟ್ಟ ಕರ್ಮಫಲ ಶೇಷವಿದ್ದರೆ ನೀಚ ಜನರ ನೀಚ ಯೋನಿಗಳಲ್ಲಾಗಲೀ, ನಾಯಿ -ಹಂದಿ-ಚಂಡಾಲಾದಿ ಯೋನಿಗಳಲ್ಲಾಗಲೀ ಇದನ್ನು ಛಾಂದೋಗ್ಯೋಪನಿಷತ್ 5ನೆಯ ಅಧ್ಯಾಯವು ಖಚಿತ ಪಡಿಸಿದೆ.

ಈ ವಿಷಯವನ್ನು ಶ್ರೀ ಕೃಷ್ಣ ಪರಮಾತ್ಮನು ಅರ್ಜುನನಿಗೆ…
ಧೂಮೋ ರಾತ್ರೋಸ್ತಥಾ ಕೃಷ್ಣ: ಷಣ್ಮಾಸಾ ದಕ್ಷಿಣಾಯಣಮ್
ತತ್ರ ಚಾಂದ್ರಮಸಂ ಜ್ಯೋತಿಃ ಯೋಗೀ ಪ್ರಾಪ್ಯ ನಿವರ್ತತೇ॥ಗೀತೆ-9/25

ವೈದಿಕ ಅಭಿಪ್ರಾಯದಂತೆ ಈ ಜಗತ್ತು ಬಿಡಲು 2 ವಿಧ:
1. ಬೆಳಕಿನಲ್ಲಿ (ಉತ್ತರಾಯಣ) ನಿರ್ಗಮಿಸಿದವನು ಹಿಂದಕ್ಕೆ ಬರುವುದಿಲ್ಲ.
2. ಕತ್ತಲಲ್ಲಿ (ದಕ್ಷಿಣಾಯಣ) ನಿರ್ಗಮಿಸಿದವನು ಹಿಂದಕ್ಕೆ ಬರುತ್ತಾನೆ. ಅಂದರೆ ಮತ್ತೆ ಹುಟ್ಟುತ್ತಾನೆ.

ಕಾಕ ಬಲಿ ಏಕೆ?
ಕಾಕ ಬಲಿ ಎಂದರೆ = ಕಾಗೆಗಳಿಗೆ ಅನ್ನ ನೀಡುವುದು ಎಂದು ಅರ್ಥ! ಮೃತನಾದ ವ್ಯಕ್ತಿಯ ಸಲುವಾಗಿ 10ನೆಯ ದಿನ ಈ ಕಾಕ ಬಲಿ ಇಡುವುದುಂಟು. ಕಾಗೆ ಆ ಬಲಿಯನ್ನು ಮುಟ್ಟದಿದ್ದರೆ ಅಥವಾ ತಿನ್ನದಿದ್ದರೆ ಮೃತನಾದ ವ್ಯಕ್ತಿಗೆ ತೃಪ್ತಿಯಾಗಲಿಲ್ಲ ಎಂದು ಭಾವಿಸುವುದುಂಟು. ಹಾಗಾದರೆ.. ಕಾಗೆಗೆ – ಪಿತೃಗಳಿಗೆ ಸಂಬಂಧ ಉಂಟೆ? ಎಂಬುದಕ್ಕೆ ಉತ್ತರ ಇಲ್ಲಿದೆ.

ಶ್ರೀ ರಾಮಾಯಣ ಉತ್ತರಕಾಂಡದಲ್ಲಿ ಒಂದು ಪ್ರಸಂಗ…
ಸೂರ್ಯವಂಶದ ಕ್ಷತ್ರೀಯ ವೀರ ಮರುತ್. ಅವನು ಶ್ರೀ ಬೃಹಸ್ಪತಿಯ ಸಹೋದರನಾದ ಶ್ರೀ ಸಂವರ್ತನೆಂಬ ಬ್ರಹ್ಮರ್ಷಿಯ ಪೌರೋಹಿತ್ಯದಲ್ಲಿ ದೊಡ್ಡ ಯಜ್ಞವೊಂದನ್ನು ನಡೆಸಿದ.

ಅದು ರಾವಣನ ಕಾಲ! ಅವನಿಗೆ ಹೆದರಿದ ದೇವತೆಗಳು ಒಬ್ಬೊಬ್ಬರು ಒಂದೊಂದು ಪಕ್ಷಿಯ ರೂಪ ತಾಳಿ ಮರುತ್ತನ ಯಜ್ಞಕ್ಕೆ ಬಂದರು! ಶ್ರೀ ಬ್ರಹ್ಮದೇವರು ಹಂಸ ರೂಪದಲ್ಲಿ; ಶ್ರೀ ದೇವೇಂದ್ರ ನವಿಲು ರೂಪದಲ್ಲಿ; ಶ್ರೀ ಯಮಧರ್ಮರಾಜರು ಕಾಗೆ ಯ ರೂಪದಲ್ಲಿ ಬಂದರು! ಹೀಗೆ ಯಜ್ಞದಲ್ಲಿ ಭಾಗವಹಿಸಿದ ಅವರು ತಮ್ಮ ಗೌಪ್ಯತೆಗೆ ಕಾರಣವಾದ ಆ ಪಕ್ಷಿ ಪ್ರಾಣಿಗಳಿಗೆ ಒಂದೊಂದು ವರ ನೀಡಿದರು. ಶ್ರೀ ಯಮಧರ್ಮರಾಜರು ಕಾಗೆಗಳಿಗೆ ದೀರ್ಘಾಯುಷ್ಯವನ್ನು ನೀಡಿದರು. ಯಾವ ರೋಗ ಭಯವೂ ಕಾಗೆಗಳಿಗೆ ಇಲ್ಲ. ಮನುಷ್ಯನು ಕೊಂದರಷ್ಟೇ ಅವುಗಳಿಗೆ ಮರಣ ಬರುತ್ತದೆ. ಶ್ರೀ ಯಮಧರ್ಮರಾಜರು ಕಾಗೆಗಳಿಗೆ ಇನ್ನೊಂದು ವರವನ್ನು ನೀಡಿದರು. ಯೇ ಚ ಮದ್ವಿಷಯಸ್ಥಾವೈ ಮಾನವಾ ಕ್ಷುಧಯಾರ್ದಿತಾಃ ತ್ವಯಿ ಭಕ್ತೇ ಸುತೃಪ್ತಾಸ್ತೇ ಭವಿಷ್ಯಂತಿ ಸ ಬಾಂಧವಾಃ॥ ನನ್ನ ಲೋಕದಲ್ಲಿರುವ ಪಿತೃಗಳು, ನೀವು (ಕಾಗೆಗಳು) ಅನ್ನವನ್ನು ಸ್ವೀಕರಿಸಿದರೆ ಆ ಮೂಲಕ ಸಂತೃಪ್ತರಾಗುತ್ತಾರೆ. ಈ ಕಾರಣದಿಂದ ಕಾಕ ಬಲಿ ಯ ಮೂಲಕ ಪಿತೃಗಳು ತೃಪ್ತರಾಗುವರೆಂಬ ನಂಬಿಕೆ ರೂಢಿಯಲ್ಲಿ ಬಂದಿದೆ.

ಶ್ರಾದ್ಧದಲ್ಲಿ ರಜತ ಪಾತ್ರೆ, ತುಳಸೀ ಜನಿವಾರ ಮತ್ತು ವಸ್ತ್ರದ ವಿಶೇಷತೆ
ಶ್ರಾದ್ಧ ಕರ್ಮಕ್ಕೆ ಉಪಯೋಗಿಸುವ ಪಾತ್ರೆಗಳು ಬೆಳ್ಳಿಯದ್ದೇ ಆಗಿರಬೇಕು. ಬೆಳ್ಳಿಯು ಶ್ರೀರುದ್ರದೇವರ ಕಣ್ಣಿನಿಂದ ಹುಟ್ಟಿದೆ. ಪಿತೃಗಳಿಗೆ ಈ ಧಾತುವು ಅತ್ಯಂತ ಪ್ರಿಯವಾಗಿದೆ. ದೇವ ಬ್ರಾಹ್ಮಣರಿಗೆ ದಕ್ಷಿಣೆ ಕೊಡುವಾಗ ಸುವರ್ಣವನ್ನು ಕೊಟ್ಟರೇ, ಪಿತೃಗಳಿಗೆ ತತ್ತುಲ್ಯಂ ರಜತಂ ಎಂಬಂತೆ ಬೆಳ್ಳಿಯನ್ನು ಕೊಡುವುದುಂಟು. ಪಿತೃಗಳಿಗೆ ಅನ್ನ ನಿದರ್ಶನ ಮಾಡುವಾದ ರಜತಮಯ ಪಾತ್ರೇ ಸ್ಥಿತಮನ್ನಂ ಎಂದು ಹೇಳಲಾಗುತ್ತದೆ. ಆದ್ದರಿಂದ ಪಿತೃ ಕಾರ್ಯಗಳಿಗೆ ರಜತ ಪಾತ್ರೆಗಳು ಅವಶ್ಯ ಮತ್ತು ಅನಿವಾರ್ಯ. ಈ ಪಿತೃ ಕಾರ್ಯಗಳಲ್ಲಿ ಬೇಕಾದಷ್ಟು ಬೆಳ್ಳಿಯ ಪಾತ್ರಗಳನ್ನೂ ಸಂಗ್ರಹ ಮಾಡುವಷ್ಟು ಸಾಮರ್ಥ್ಯ ಇಲ್ಲದಿದ್ದರೆ ಒಂದಾದರೂ ಬೆಳ್ಳಿಯ ಪಾತ್ರಯನ್ನಿಟ್ಟು ಪಿತೃ ಕಾರ್ಯವನ್ನು ನಡೆಸಬೇಕು.

ಶ್ರಾದ್ಧ ಕರ್ಮದಲ್ಲಿ ಉಪಯೋಗಿಸಿದ ವಸ್ತುಗಳಲ್ಲಿ ಸ್ವಲ್ಪ ಕಬ್ಬಿಣದ ಅಂಶವಿದ್ದರೂ ಪಿತೃಗಳು ಶ್ರಾದ್ಧದಲ್ಲಿ ಕೊಡಲ್ಪಟ್ಟ ಅನ್ನ ಜಲಾದಿಗಳನ್ನು ಸ್ವೀಕರಿಸದೇ ಆ ಸ್ಥಳದಿಂದ ಓಡಿ ಹೋಗುತ್ತಾರೆ. ಪದ್ಮ ಪುರಾಣದ ನಾಗರಖಂಡದಲ್ಲಿ. ಅಯಸೋ ದರ್ಶನಾದೇವ ಪಿತರೋ ವಿದ್ರವಂತಿ ಹಿ॥ ಎಲ್ಲಾ ಪಿತೃಗಳ ಪ್ರೀತ್ಯರ್ಥವಾಗಿ ಬೆಳ್ಳಿಯ ಪಾತ್ರೆ ಅಥವಾ ಬೆಳ್ಳಿ ಮಿಶ್ರಿತವಾದ ಪಾತ್ರೆಯಲ್ಲಿ ಸ್ವಧಾ ಪಿತೃಭ್ಯಃ ಎಂದು ಹೇಳಿ ಮಾಡಲ್ಪಟ್ಟ ಶ್ರಾದ್ಧವು ಪಿತೃಗಳಿಗೆ ತೃಪ್ತಿಯನ್ನುಂಟು ಮಾಡುತ್ತದೆ.

ಸರ್ವೇಷಾಂ ರಜತಂ ಪಾತ್ರಮಥವಾ ರಜತಾನ್ವಿತಮ್
ದತ್ತಂ ಸ್ವಧಾಂ ಪುರೋಧಾಯ ಶ್ರಾದ್ಧಂ ಪ್ರೀಣಾತಿ ವೈ ಪಿತ್ರೂನ್॥

ನಾರದೀಯ ಪುರಾಣದನ್ವಯ ಶ್ರಾದ್ಧದಲ್ಲಿ ತುಳಸಿಯ ಮಹತ್ವ
ಪ್ರತಿಯೊಂದು ದಾನ ಕೊಡುವಾಗಲೂ, ಶ್ರಾದ್ಧದಲ್ಲಿ ಯವೋದಕ – ತಿಲೋದಕಗಳನ್ನು ಬಿಡುವಾಗಲೂ, ದತ್ತ ಮಾಡುವಾಗಲೂ, ತಾಂಬೂಲ – ದಕ್ಷಿಣೆಗಳನ್ನು ಕೊಡುವಾಗಲೂ ತುಳಸೀ ದಳವನ್ನು ಸೇರಿಸಿಕೊಂಡೇ ಕೊಡಬೇಕು.

ತುಳಸೀ ಗಂಧ ಮಾತ್ರೇಣ ಪಿತರಃ ತುಷ್ಟಿಮಾಪ್ನುಯುಃ
ಪ್ರಯಾಂತಿ ಮುಕ್ತಿ ಮಾರ್ಗೇಣ ತತ್ಪದಂ ಚಕ್ರಪಾಣಿನಃ॥
ಪರಮಾತ್ಮನಿಗೆ ಅರ್ಪಿಸಿರುವ ತುಳಸಿಯ ವಾಸನೆಯಿಂದ ಮಾತ್ರವೇ ಪಿತೃಗಳು ಸಂತೋಷವನ್ನು ಹೊಂದುತ್ತಾರೆ. ಚಕ್ರಪಾಣಿಯಾದ ಶ್ರೀಮಹಾವಿಷ್ಣುವಿನ ಲೋಕವನ್ನೂ ಮುಕ್ತಿ ಮಾರ್ಗದಿಂದ ಹೋಗಿ ಸೇರುತ್ತಾರೆ.

ತುಳಸೀ ಶ್ರಾದ್ಧ ಕಾಲೇ ತು ದತ್ವಾ ಶಿರಸಿಧಾರಿತೇ 
ದಾತಾ ಭೋಕ್ತಾ ಪಿತಾ ತಸ್ಯ ವಿಷ್ಣು ಲೋಕೇ ಮಹೀಯತೇ॥
ಶ್ರಾದ್ಧ ಕಾಲದಲ್ಲಿ ಕರ್ತೃವು ಕೊಟ್ಟ ತುಳಸಿಯನ್ನು (ಅದನ್ನು) ಭೋಕ್ತೃವು ತಲೆಯಲ್ಲಿ ಧರಿಸುವುದರಿಂದ ಕರ್ತೃ, ಕರ್ತೃವಿನ ತಂದೆ ಅಥವಾ ತಾಯಿ ಮತ್ತು ಭೋಜನ ಮಾಡಿದವರು ಮುಂದೆ ವಿಷ್ಣು ಲೋಕದಲ್ಲಿ ಪ್ರಕಾಶಿತರಾಗಿರುತ್ತಾರೆ.

ಪಿತೃ ಪಿಂಡಾರ್ಚನಂ ಶ್ರಾದ್ಧೇ ಯೈಃ ಕೃತಂ ತುಳಸೀದಲೈಃ
ತರ್ಪಿತಾ ಪಿತರಸ್ತೈಶ್ಚ ಯಾವಚ್ಚಂದ್ರಾರ್ಕ ಮೇದಿನೀ॥
ಶ್ರಾದ್ಧದಲ್ಲಿ ಯಾರಿಂದ ಪಿತೃ ಪಿಂಡಗಳ ಅರ್ಚನವು ತುಲಸೀದಳಗಳಿಂದ ಮಾಡಲ್ಪಡುತ್ತದೆಯೋ ಅವರಿಂದ ಎಲ್ಲಿಯವರೆಗೂ ಚಂದ್ರ ಸೂರ್ಯಗಳು ಭೂಮಿಗಳಿರುತ್ತವೆಯೋ ಅಲ್ಲಿಯ ವರೆಗೂ ಪಿತೃಗಳು ಸಂತುಷ್ಟರಾಗಿರುವಂತೆ ಮಾಡಲ್ಪಡುತ್ತದೆ.

ನಾರದೀಯ ಪುರಾಣದನ್ವಯ ವಸ್ತ್ರ – ಜನಿವಾರದ ಮಹತ್ವ
ವಾಸೋಸಿ ಸರ್ವ ದೈವತ್ಯಂಸರ್ವ ದೇವೈರಭಿಷ್ಟುತಮ್‌
ವಸ್ತ್ರಾಭಾವೇ ಕ್ರಿಯಾ ನಶ್ಯಾತ್ ಯಜ್ಞ ದಾನಾದಿಕಾಃ ಕ್ವಚಿತ್‌
ತಸ್ಮಾದ್ವಸ್ತ್ರಾಣಿ ದೇಯಾನಿ ಶ್ರಾದ್ಧ ಕಾಲೇ ವಿಶೇಷತಃ॥
ವಸ್ತ್ರವಾದರೋ ಎಲ್ಲಾ ದೇವತೆಗಳ ಸಾನ್ನಿಧ್ಯವನ್ನು ಹೊಂದಿರುವುದು. ಎಲ್ಲಾ ದೇವತೆಗಳಿಂದಲೂ ಸ್ತುತಿಸಲ್ಪಟ್ಟಿರುವುದು. ಕೆಲೆವೆಡೆ ಯಜ್ಞ ದಾನಾದಿ ಕ್ರಿಯೆಗಳು ವಸ್ತ್ರದಾನ ಮಾಡದುದರಿಂದ ನಷ್ಟವಾಗುತ್ತದೆ. ಆದ್ದರಿಂದ ಶ್ರಾದ್ಧ ಕಾಲದಲ್ಲಿ ವಿಶೇಷವಾಗಿ ವಸ್ತ್ರಗಳನ್ನು ಕೊಡಬೇಕು.

ಆಚ್ಚಾದನಂ ತು ಯೋ ದದ್ಯಾತ್ ಅಹತಂ ಶ್ರಾದ್ಧ ಕರ್ಮಣಿ
ಆಯುಃ ಶ್ರೀಃ ಕಾಮಂ ಐಶ್ವರ್ಯಂರೂಪಂ ಚ ಲಭತೇ ಧ್ರುವಮ್॥
ಶ್ರಾದ್ಧ ಕರ್ಮದಲ್ಲಿ ಬ್ರಾಹ್ಮಣರಿಗೆ ಯಾವನು ಉತ್ತಮವಾದ ವಸ್ತ್ರವನ್ನು ಕೊಡುತ್ತಾನೆಯೋ; ಅವನು ನಿಶ್ಚಯವಾಗಿಯೂ ದೀರ್ಘಕಾಲದ ಆಯುಷ್ಯವನ್ನೂ, ಸಂಪತ್ತನ್ನೂ, ತನ್ನ ಇಷ್ಟವಾದ ಧನ ಕನಕವನ್ನೂ, ಸಕಲೈಶ್ವರ್ಯಗಳನ್ನೂ, ತೇಜಸ್ಸಿನಿಂದ ರೂಪವನ್ನೂ ಹೊಂದುತ್ತಾನೆ.

ಉತ್ತಮವಾದ ವಸ್ತ್ರವನ್ನು ತಗೆದುಕೊಡಲು ಹಣದ ಸೌಕರ್ಯ ಇಲ್ಲದವರು ತಮ್ಮ ಶಕ್ತಿಗನುಗುಣವಾಗಿ ವಸ್ತ್ರಕ್ಕೆ ಪ್ರತಿಯಾಗಿ ಕೇವಲ ಹಣವನ್ನಾದರೂ ದಾನ ಮಾಡಬೇಕು.

ಯಜ್ನೋಪವೀತಂ ವೈ ದದ್ಯಾತ್ಶ್ರಾದ್ಧ ಕಾಲೇಷು ಧರ್ಮವಿತ್‌
ಪಾವನಂ ಸರ್ವ ವಿಪ್ರಾಣಾಂಬ್ರಹ್ಮ ದಾನಸ್ಯ ತತ್ಫಲಂ॥
ಧರ್ಮವನ್ನರಿತವನು ಎಲ್ಲಾ ವಿಪ್ರರನ್ನು ಶುದ್ಧಿಗೊಳಿಸಿವ ಜನಿವಾರವನ್ನು ಶ್ರಾದ್ಧ ಕಾಲದಲ್ಲಿ ಕೊಡಬೇಕು. ಅದರಿಂದ ಸರ್ವ ವ್ಯಾಪಿಯಾದ ಪರಬ್ರಹ್ಮನನ್ನೇ ಅಂದರೆ ವಿಶ್ವದಲ್ಲಿರುವ ಎಲ್ಲಾ ವಸ್ತುಗಳನ್ನೂ ದಾನ ಮಾಡಿದ ಫಲ ಉಂಟಾಗುತ್ತದೆ.

ನಾಳಿನ ಲೇಖನ: ಶ್ರಾದ್ಧ ಯಜ್ಞ ಎಂದರೇನು? ಅದರ ಮಹತ್ವವೇನು ತಿಳಿಯಲು ಮರೆಯದಿರಿ

Tags: Dr. Gururaja PoshettihalliKannada ArticleMahalaya AmavasyePaksha MasaParamapadaPitru PakshaPitru Paksha ListShraddaSpecial Articleಡಾ. ಗುರುರಾಜ ಪೋಶೆಟ್ಟಿಹಳ್ಳಿತರ್ಪಣಪಕ್ಷಮಾಸಪರಮಪದಪಿತೃಪಕ್ಷಮಹಾಲಯ ಅಮಾವಾಸ್ಯೆಶ್ರಾದ್ಧಶ್ರಾದ್ಧಕರ್ಮ
Previous Post

Final Attempt: ಚಂದ್ರಯಾನ-2-ವಿಕ್ರಮ್ ಲ್ಯಾಂಡರ್ ಸಂಪರ್ಕಕ್ಕೆ ಇಂದೇ ಕೊನೆ ದಿನ, ಸಾಧ್ಯತೆ ಕ್ಷೀಣ?

Next Post

ಕೇಂದ್ರ, ರಾಜ್ಯದ ಸೌಲಭ್ಯಗಳನ್ನು ಜನರಿಗೆ ತಲುಪಿಸಿ: ಸಚಿವ ಕೆ.ಎಸ್. ಈಶ್ವರಪ್ಪ ಕರೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಕೇಂದ್ರ, ರಾಜ್ಯದ ಸೌಲಭ್ಯಗಳನ್ನು ಜನರಿಗೆ ತಲುಪಿಸಿ: ಸಚಿವ ಕೆ.ಎಸ್. ಈಶ್ವರಪ್ಪ ಕರೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಭಾರತ – ಪಾಕಿಸ್ತಾನ ಯುದ್ಧ ಭೀತಿ | ಐಪಿಎಲ್ 2025 ಪಂದ್ಯಗಳು ಮುಂದೂಡಿಕೆ

May 9, 2025

ಭದ್ರಾವತಿ | ವಾಕಿಂಗ್ ತೆರಳಿದ್ದ ವ್ಯಕ್ತಿಯ ಭೀಕರ ಹತ್ಯೆ

May 9, 2025
Internet Image

ಶಿಕಾರಿಪುರ | ಮನೆ ಬೀಗ ಮುರಿದು ಕಳ್ಳತನ | ಆರೋಪಿ ಬಂಧನ

May 9, 2025

ಕಳಸವಳ್ಳಿ ರಸ್ತೆ ನಿರ್ಮಾಣಕ್ಕೆ 600 ಕೋಟಿ ರೂ. ಮಂಜೂರು | ಸಂಸದ ರಾಘವೇಂದ್ರ

May 9, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಭಾರತ – ಪಾಕಿಸ್ತಾನ ಯುದ್ಧ ಭೀತಿ | ಐಪಿಎಲ್ 2025 ಪಂದ್ಯಗಳು ಮುಂದೂಡಿಕೆ

May 9, 2025

ಭದ್ರಾವತಿ | ವಾಕಿಂಗ್ ತೆರಳಿದ್ದ ವ್ಯಕ್ತಿಯ ಭೀಕರ ಹತ್ಯೆ

May 9, 2025
Internet Image

ಶಿಕಾರಿಪುರ | ಮನೆ ಬೀಗ ಮುರಿದು ಕಳ್ಳತನ | ಆರೋಪಿ ಬಂಧನ

May 9, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!