No Result
View All Result
English Articles

Record Budget: Chief Minister Must Fulfill Hometown Demands, Urges Dr. Shushrutha Gowda

by ಕಲ್ಪ ನ್ಯೂಸ್
March 2, 2026
0

Kalpa Media House  |  Mysuru | BJP leader and noted neurologist Dr. Shushrutha Gowda has urged Chief Minister Siddaramaiah to...

Read moreDetails
Hotel Management Students Participate in Tree Census

Hotel Management Students Participate in Tree Census

March 2, 2026
Minister Somanna Inspects & Inaugurates Road Under Bridges in Tumkur District eliminating level Crossing gates

Minister Somanna Inspects & Inaugurates Road Under Bridges in Tumkur District eliminating level Crossing gates

February 26, 2026
Le Méridien Dehradun in the Foothills of the Himalayas, Inviting Guests to Slow Down and Savour the Good Life

Le Méridien Dehradun in the Foothills of the Himalayas, Inviting Guests to Slow Down and Savour the Good Life

February 25, 2026
From Complex Revisions to Robotic Spine Care: Narayana Health City Marks 10,000 Surgery Milestone

From Complex Revisions to Robotic Spine Care: Narayana Health City Marks 10,000 Surgery Milestone

February 24, 2026
  • Advertise With Us
  • Grievances
  • About Us
  • Contact Us
Wednesday, March 4, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ದಣಿವರಿಯದ ಜನಾನುರಾಗಿ ನಾಯಕ ಈಶ್ವರಪ್ಪಗೆ ಮತ್ತೆ ಒಲಿದ ಮಂತ್ರಿಗಿರಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
August 20, 2019
in Special Articles
0
ದಣಿವರಿಯದ ಜನಾನುರಾಗಿ ನಾಯಕ ಈಶ್ವರಪ್ಪಗೆ ಮತ್ತೆ ಒಲಿದ ಮಂತ್ರಿಗಿರಿ
Share on FacebookShare on TwitterShare on WhatsApp

ಶಿವಮೊಗ್ಗ: ಮೂಲ ಬಳ್ಳಾರಿ. ಆದರೆ, ಈಗ ಮಲೆನಾಡಿಗರೇ ಆಗಿಹೋಗಿದ್ದರೂ, ರಾಜ್ಯ ನಾಯಕರಾಗಿ ಬೆಳೆದು, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡು, ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರಶಂಸೆ ಪಡೆದ ನಾಯಕ ಶ್ರೀ ಕೆ.ಎಸ್. ಈಶ್ವರಪ್ಪ.

ಹೌದು… ದಣಿವರಿಯದ ಈ ಜನಾನುರಾಗಿ ನಾಯಕನಗೀಗ ಮತ್ತೆ ಮಂತ್ರಿಗಿರಿ ಒಳಿದುಬಂದಿದೆ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪಥನಗೊಂಡ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ಸಚಿವ ಸಂಪುಟ ಇಂದು ವಿಸ್ತರಣೆಯಾಗಿದ್ದು, ಕೆ.ಎಸ್. ಈಶ್ವರಪ್ಪ ಸಂಪುಟ ಸಚಿವರಾಗಿ ಪದಗ್ರಹಣ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಜನಮಾನಸದಲ್ಲಿ ನಿಂತಿರುವ ಈ ನಾಯಕನ ಕುರಿತಾಗಿ ಒಂದಷ್ಟು ಮಾಹಿತಿ ನಿಮ್ಮೊಂದಿಗೆ.

1948ರ ಜುಲೈ 10ರಂದು ಬಳ್ಳಾರಿಯಲ್ಲಿ ಜನಿಸಿದ ಈಶ್ವರಪ್ಪ, ಮಹಾದಾರ್ಶನಿಕ ಕನಕದಾಸರನ್ನು ಜಗತ್ತಿಗೆ ಕೊಟ್ಟ, ಕ್ಷಾತ್ರಧರ್ಮದ ಅಧ್ವರ್ಯು ಸಂಗೊಳ್ಳಿ ರಾಯಣ್ಣನ ನೀಡಿದ ಕುರುಬ ಸಮುದಾಯಕ್ಕೆ ಸೇರಿದವರು.

ಈಶ್ವರಪ್ಪ ತಂದೆ ಶರಣಪ್ಪ ಶಿವಮೊಗ್ಗಕ್ಕೆ ಉದ್ಯೋಗ ಅರಸಿ, ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗಕ್ಕೆ ಬಂದರು. ಆಗ ಇವರ ಮನೆಯಲ್ಲಿದ್ದ ಕಷ್ಟದ ದಿನಗಳು ಈಶ್ವರಪ್ಪ ಅವರನ್ನು ವಿದ್ಯಾಭ್ಯಾಸ ತ್ಯಜಿಸಿ, ಕೆಲಸಕ್ಕೆ ಹೋಗಲು ಪ್ರೇರೇಪಿಸಿತು. ಆದರೆ, ಇದನ್ನು ವಿರೋಧಿಸಿದ್ದ ಅವರ ತಾಯಿ, ವಿದ್ಯಾರ್ಜನೆಯತ್ತ ಅವರನ್ನು ಕೇಂದ್ರೀಕರಿಸುತ್ತಾರೆ.

ಆನಂತರ, ಇವರ ಸಹಪಾಠಿ ಡಿ.ಎಂ. ರವೀಂದ್ರ – ಆನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ್ಯ ಪ್ರಚಾರಕ್ ಆದರು- ನರಸಿಂಹಮೂರ್ತಿ ಅಯ್ಯಂಗಾರ್ – ಶಿವಮೊಗ್ಗದ ವಿಶ್ವಹಿಂದೂ ಪರಿಷತ್‌ನಲ್ಲಿ ಖ್ಯಾತನಾಮರು- ಇವರ ಸಕ್ತಿಯಿಂದ ಈಶ್ವರಪ್ಪ ಆರ್’ಎಸ್,ಎಸ್ ಕಡೆಗೆ ನಡೆದು ಬಂದರು. ಇದು ಅವರ ಸಾರ್ವಜನಿಕ ಜೀವನಕ್ಕೆ ದೊಡ್ಡ ನಾಂದಿ ಒದಗಿಸಿತು.

ಆರಂಭದಿಂದಲೂ ಆರ್’ಎಸ್’ಎಸ್ ಕಾರ್ಯಕರ್ತರಾಗಿದ್ದರು. ಛತ್ರಪತಿ ಶಾಖೆಯಲ್ಲಿ ನಿತ್ಯ ಅಭ್ಯಾಸಿಗರಾಗಿದ್ದರು. ಇದಕ್ಕೆ ಆರಂಭದಲ್ಲಿ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಇವರ ತಂದೆ ಆಗ ಪ್ರಾಬಲ್ಯವಿದ್ದ ಕಾಂಗ್ರೆಸ್ ಕಡೆ ಒಲವಿದ್ದವರಾಗಿದ್ದರು, ಆದರೆ, ಈಶ್ವರಪ್ಪ ಅವರ ಸಹೋದರ ಚಂದ್ರಪ್ಪ ಒತ್ತಾಸೆ ಮೇರೆಗೆ ಆರ್‌ಎಸ್‌ಎಸ್‌ನಲ್ಲಿ ಮುಂದುವರೆದರು. ಒಂದು ಹಂತದಲ್ಲಿ ರಾಷ್ಟ್ರೀಯ ಚಿಂತನೆಗೆ ಮನಸೋತು ಮನೆತೊರೆದು ಬಂದು, ಶಿವಮೊಗ್ಗ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಅಂದಿನ ಅರ್ಚಕರ ಆರೈಕೆಯಲ್ಲಿದ್ದರು. ಆನಂತರ ಆರ್’ಎಸ್’ಎಸ್’ನಲ್ಲಿದ್ದ ಜಾತ್ಯತೀತತೆ, ರಾಷ್ಟ್ರೀಯ ಚಿಂತನೆಯನ್ನು ಈಶ್ವರಪ್ಪ ಅವರ ತಂದೆ ಒಪ್ಪಿಕೊಂಡು ಅವರಿಗೆ ಆರ್’ಎಸ್’ಎಸ್’ಗೆ ಹೋಗಲು ಅನುಮತಿ ನೀಡಿದರು.

ಈಶ್ವರಪ್ಪ ಶಿವಮೊಗ್ಗದ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ಯ ಸಕ್ರಿಯ ಸದಸ್ಯರಾಗಿದ್ದರು. ಆನಂತರ, ವಿದ್ಯಾಭ್ಯಾಸ ಪೂರ್ಣಗೊಳಿಸಿ, ಸ್ವಂತ ಉದ್ಯಮಕ್ಕೆ ಕೈಹಾಕಿದರು. ಅದೇ ವೇಳೆಗೆ ರಾಜಕೀಯ ಪಕ್ಷವಾಗಿ ಅತ್ಯಂತ ಸಕ್ರಿಯವಾಗಿದ್ದ ಭಾರತೀಯ ಜನಸಂಘದಲ್ಲಿ ತೊಡಗಿಸಿಕೊಂಡರು.

ಅದು 1975- 77. ಆಗ ದೇಶದಲ್ಲಿ ಇಂದಿರಾಗಾಂಧಿ ತುರ್ತುಪರಿಸ್ಥಿತಿ ಹೇರಿದ್ದರು. ಇದರ ವಿರುದ್ಧ ಧ್ವನಿ ಎತ್ತಿದ ಪ್ರಮುಖ ಶಿವಮೊಗ್ಗದ ಜನಸಂಘದ ಪ್ರಮುಖರಲ್ಲಿ ಈಶ್ವರಪ್ಪ ಸಹಾ ಒಬ್ಬರು. ಆಗ ಇವರನ್ನು ಬಂಧಿಸಿದ ಸರ್ಕಾರ, ಬಳ್ಳಾರಿ ಜೈಲಿಗೆ ಹೋಗಿ ಬಂದರು. ತುರಂಗವಾಸದ ನಂತರ ತುರ್ತುಪರಿಸ್ಥಿತಿ ಹಿಂಪಡೆದ ನಂತರ ರಾಜಕೀಯ ಇನ್ನಷ್ಟು ಸಕ್ರಿಯವಾದರು.

ಭಾರತೀಯ ಜನಸಂಘ ಆನಂತರ ಭಾರತೀಯ ಜನತಾ ಪಕ್ಷವಾಗಿ ಬದಲಾಯಿತು. ಇದರಲ್ಲಿ ಬೇರೇ ಬೇರೆ ಜವಾಬ್ದಾರಿಗಳನ್ನು ನಿರ್ವಹಿಸಿದರು. 1982ರಲ್ಲಿ ಶಿವಮೊಗ್ಗ ಬಿಜೆಪಿಯ ಜಿಲ್ಲಾಧ್ಯಕ್ಷರಾದರು.

ಶಿವಮೊಗ್ಗ ನಗರದಿಂದ ಬಿಜೆಪಿಯ ಪ್ರಥಮ ಶಾಸಕರಾಗಿ ಆಯ್ಕೆಯಾದವರು ಎಂ. ಆನಂದರಾವ್. ಇವರ ಈ ಮಹತ್ವದ ಗೆಲವಿನ ಹಿಂದೆ ಈಶ್ವರಪ್ಪನವರ ಅಪಾರ ಪರಿಶ್ರಮವಿತ್ತು ಎಂದು ಇಂದಿಗೂ ಬಿಜೆಪಿಯ ಹಿರಿಯ ಕಾರ್ಯಕರ್ತರು ನೆನಪುಮಾಡಿಕೊಳ್ಳುತ್ತಾರೆ.

1989ರ ಹೊತ್ತಿಗೆ ಶಿವಮೊಗ್ಗ ನಗರದಾದ್ಯಂತ ಈಶ್ವರಪ್ಪ ಅವರ ಅಲೆ ಆವರಿಸಿಕೊಂಡಿತ್ತು. ಆಗ ನಡೆದ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಕಣಕ್ಕಿಳಿದಿದ್ದ ಈಶ್ವರಪ್ಪ ಅಮೋಘ ಗೆಲವು ಸಂಪಾದಿಸಿದರು. ಆ ಕಾಲದಲ್ಲಿ ಕಾಂಗ್ರೆಸ್‌ನಿಂದ ನಿಂತಿದ್ದ ಬೃಹತ್ ಕಟ್ಟಾಳು ಕೆ.ಎಚ್. ಶ್ರೀನಿವಾಸ್‌ರನ್ನು 1304 ಮತಗಳ ಅಂತರದಿಂದ ಸೋಲಿಸಿದ್ದರು. ಅಲ್ಲಿಂದ ಹಿಂದಿರುಗಿ ನೋಡದ ಈಶ್ವರಪ್ಪ ಸತತ ನಾಲ್ಕು ಚುನಾವಣೆಗಳಲ್ಲಿ ಗೆಲುವಿನ ನಗೆ ಬೀರಿದರು. ಆ ಮಟ್ಟಿಗೆ ನಗರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಿ ಜನಮಾನಸದಲ್ಲಿ ನೆಲೆಸಿದರು.

1992ರಲ್ಲಿ ಭಾರತೀಯ ಜನತಾಪಕ್ಷದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದರು. ಇವರ ಅವಧಿಯಲ್ಲಿ ಅಂದರೆ, 1994ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸಿದರು. ಹೀಗಾಗಿ ಪಕ್ಷ ಗೌರವಯುತ ಸ್ಥಾನಗಳನ್ನು ಗಳಿಸಿ, ವಿರೋಚಿತವಾಗಿ ಪ್ರತಿಪಕ್ಷಗಳ ಸಾಲಿನಲ್ಲಿ ಕುಳಿತು ಆಡಳಿತವನ್ನು ಕಿವಿಹಿಂಡಿ ಸರಿದಾರಿಗೆ ತಂದಿತು.

2000ನೆಯ ಇಸವಿಯಲ್ಲಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆಯಾಯಿತು. ಆಗ ಇವರು ಕೇಂದ್ರೀಯ ರೇಷ್ಮೆ ಮಂಡಳಿ ಅಧ್ಯಕ್ಷರಾಗಿ ನೇಮಕವಾದರು.

2006-07ರಲ್ಲಿ ಕರ್ನಾಟಕದಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಯಿತು. ಆಗ ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಆಗ ಈಶ್ವರಪ್ಪ ದೂರದೃಷ್ಟಿ ಹಾಗೂ ಚಿಂತನೆಗೆ ಅನುಗುಣವಾಗಿ ಜಲಸಂಪನ್ಮೂಲ ಸಚಿವ ಸ್ಥಾನ ಅರಸಿಬಂತು.

ಆಗ ದೊರಕಿದ ಸದಾವಕಾಶ ಬಳಸಿಕೊಂಡ ಈಶ್ವರಪ್ಪ ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆ ತಂದರು. ಜಲಸಂಪನ್ಮೂಲವನ್ನು ನಿಜವಾಗಿಯೂ ರಾಜ್ಯದ ಸಂಪನ್ಮೂಲವಾಗಿಸಲು ಅವಿರತ ಶ್ರಮಿಸಿದರು. ಪ್ರಮುಖ ನೀರಾವರಿ ಯೋಜನೆಗಳಿಗೆ ಕಾಯಕಲ್ಪ ನೀಡಿದರು.

2008ರಲ್ಲಿ ಮೈತ್ರಿ ಸರ್ಕಾರ ವಿಸರ್ಜನೆಯಾಯಿತು.

ಆನಂತರ ಬಿಜೆಪಿ ಪ್ರಚಂಡ ಐತಿಹಾಸಿಕ ವಿಜಯ ಸಾಧಿಸಿ, ಸರ್ಕಾರ ರಚಿಸಿತು. ಇದರಲ್ಲಿಯೂ ಈಶ್ವರಪ್ಪ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಹಗಲು ರಾತ್ರಿ ಶ್ರಮಿಸಿದರು. ಕಾಲಿಗೆ ಚಕ್ರಕಟ್ಟಿಕೊಂಡವರಂತೆ ರಾಜ್ಯದಾದ್ಯಂತ ತಿರುಗಿದರು. ಆಗ ಇವರು ಇಂಧನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.


ಅಲ್ಲೂ ಸಹಾ ಇಲಾಖೆ ಕಾರ್ಯಗಳಿಗೆ ಚುರುಕುಮುಟ್ಟಿಸಿದರು. ಅಲ್ಲೂ ಸಹಾ ತಮ್ಮ ಕ್ರಿಯಾಶೀಲ ಚಟುವಟಿಕೆಗಳಿಂದ ಈಶ್ವರಪ್ಪ ಛಾಪು ಒತ್ತಿದರು. ಈಗಲೂ ಇಂಧನ ಇಲಾಖೆ ಸಿಬ್ಬಂದಿ ಅವರನ್ನು ಅತ್ಯಂತ ಪ್ರೀತಿ ಹಾಗೂ ಗೌರವದಿಂದ ಕಾಣುತ್ತಾರೆ.

2010ರಲ್ಲಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ ಇವರು, ಮತ್ತೆ ಪಕ್ಷ ಸಂಘಟನೆಯಲ್ಲಿ ತೊಡಗಿಸಕೊಂಡರು. ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಆನಂತರ 2012ರಲ್ಲಿ ಡಿ.ವಿ. ಸದಾನಂದಗೌಡ ಮುಖ್ಯಮಂತ್ರಿಯಾದರು. ಆಗ ಈಶ್ವರಪ್ಪ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಅದರ ಜೊತೆಯಲ್ಲಿಯೇ ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾಗಿ ದೊಡ್ಡ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು.

2014ರಲ್ಲಿ ರಾಜ್ಯ ವಿಧಾನಪರಿಷತ್ ನಾಮನಿರ್ದೇಶಿತ ಸದಸ್ಯರಾಗಿ, ಪ್ರತಿಪಕ್ಷ ನಾಯಕರಾಗಿ ಸರ್ಕಾರದ ಅಂಕಡೊಂಕುಗಳನ್ನು ಯಶಸ್ವಿಯಾಗಿದ್ದರು.
ಆನಂತರ 2018ರ ಚುನಾವಣೆಯಲ್ಲಿ ಭಾರೀ ಬಹುಮತದಿಂದ ಮತ್ತೆ ವಿಧಾನಸಭೆ ಪ್ರವೇಶಿಸಿದರು.

ಈಗ, ಸಮ್ಮಿಶ್ರ ಸರ್ಕಾರ ಪಥನಗೊಂಡು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರದಲ್ಲಿ ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

Tags: BJPK S EshwarappaKarnataka politicsMalnad NewsPM Narendra ModiRSSShivamoggaSpecial Articleಆರ್’ಎಸ್’ಎಸ್ಕೆ.ಎಸ್. ಈಶ್ವರಪ್ಪಪ್ರಧಾನಿ ನರೇಂದ್ರ ಮೋದಿಬಿಜೆಪಿಭಾರತೀಯ ಜನಸಂಘವಿಶ್ವಹಿಂದೂ ಪರಿಷತ್‌ಶಿವಮೊಗ್ಗ
Share196Tweet123Send
Previous Post

ಖ್ಯಾತ ಲೇಖಕ, ಛಾಯಾಗ್ರಾಹಕ ಡಾ. ಹನುಮಂತ ಜೋಯಿಸ್ ವಿಧಿವಶ

Next Post

ಬಳ್ಳಾರಿಯ ಸೇನಾನಿ, ಜನಸೇವಕ ಶ್ರೀರಾಮುಲು ನಿಷ್ಠೆಗೆ ಒಲಿದ ಮಂತ್ರಿ ಪದವಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಬಳ್ಳಾರಿಯ ಸೇನಾನಿ, ಜನಸೇವಕ ಶ್ರೀರಾಮುಲು ನಿಷ್ಠೆಗೆ ಒಲಿದ ಮಂತ್ರಿ ಪದವಿ

ಬಳ್ಳಾರಿಯ ಸೇನಾನಿ, ಜನಸೇವಕ ಶ್ರೀರಾಮುಲು ನಿಷ್ಠೆಗೆ ಒಲಿದ ಮಂತ್ರಿ ಪದವಿ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ಈ ದಿನಗಳು ಹುಬ್ಬಳ್ಳಿ-ವಿಜಯಪುರ-ಹುಬ್ಬಳ್ಳಿ ಡೆಮು ರೈಲು ಸಂಚಾರ ಭಾಗಶಃ ರದ್ದು

ಈ ದಿನಗಳು ಹುಬ್ಬಳ್ಳಿ-ವಿಜಯಪುರ-ಹುಬ್ಬಳ್ಳಿ ಡೆಮು ರೈಲು ಸಂಚಾರ ಭಾಗಶಃ ರದ್ದು

March 3, 2026
ಮಾ.7ರಿಂದ 10 ಸಹ್ಯಾದ್ರಿ ನಾಟಕೋತ್ಸವ | ಜೋಕುಮಾರಸ್ವಾಮಿ ಪ್ರದರ್ಶನದೊಂದಿಗೆ ಚಾಲನೆ

ಮಾ.7ರಿಂದ 10 ಸಹ್ಯಾದ್ರಿ ನಾಟಕೋತ್ಸವ | ಜೋಕುಮಾರಸ್ವಾಮಿ ಪ್ರದರ್ಶನದೊಂದಿಗೆ ಚಾಲನೆ

March 3, 2026
‘ಶಾಖಾಹಾರಿ’ ಸಿನಿಮಾಗೆ ಪ್ರತಿಷ್ಠಿತ ಫಿಲ್ಮ್‌ಫೇರ್ ಅವಾರ್ಡ್

‘ಶಾಖಾಹಾರಿ’ ಸಿನಿಮಾಗೆ ಪ್ರತಿಷ್ಠಿತ ಫಿಲ್ಮ್‌ಫೇರ್ ಅವಾರ್ಡ್

March 3, 2026
ಪುತ್ತೂರಿನ ಆಗಸದ ಕೆಳ ಎತ್ತರದಲ್ಲಿ ಹಾರಾಡಿದ ಸಣ್ಣ ವಿಮಾನ | ಭಯ ಪಡುವ ಅಗತ್ಯವಿಲ್ಲ

ಪುತ್ತೂರಿನ ಆಗಸದ ಕೆಳ ಎತ್ತರದಲ್ಲಿ ಹಾರಾಡಿದ ಸಣ್ಣ ವಿಮಾನ | ಭಯ ಪಡುವ ಅಗತ್ಯವಿಲ್ಲ

March 3, 2026
ಮಾ.3ರಂದು ಈಡಿಗರ ಬಾಲಕರ ವಿದ್ಯಾರ್ಥಿ ನಿಲಯ ಕಟ್ಟಡ ಶಂಕುಸ್ಥಾಪನಾ ಸಮಾರಂಭ

ಮಾ.3ರಂದು ಈಡಿಗರ ಬಾಲಕರ ವಿದ್ಯಾರ್ಥಿ ನಿಲಯ ಕಟ್ಟಡ ಶಂಕುಸ್ಥಾಪನಾ ಸಮಾರಂಭ

March 3, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL