ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಇಲ್ಲಿನ ಜನ್ನಾಪುರದಲ್ಲಿ ಕಳೆದ ವರ್ಷ ನಡೆದಿದ್ದ ಮನೆಕಳ್ಳತನವನ್ನು #Burglary ಬೇಧಿಸಿರುವ ಪೊಲೀಸರು ಬೆಂಗಳೂರು ಮೂಲದ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯನ್ನು ಬೆಂಗಳೂರು ಮೂಲದ ಸೂರ್ಯ(28) ಎಂದು ಗುರುತಿಸಲಾಗಿದೆ.
ಘಟನೆ ಹಿನ್ನೆಲೆ:
ಭದ್ರಾವತಿ #Bhadravathi ನಗರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೌಭಾಗ್ಯ ಎನ್ನುವವರ ಜನ್ನಾಪುರದಲ್ಲಿರುವ ಮನೆಯಲ್ಲಿ 2025ರ ನವೆಂಬರ್ 19ರಂದು ಬೆಳಿಗ್ಗೆ 5:30 ಗಂಟೆಯಿಂದ ಬೆಳಿಗ್ಗೆ 10 ಗಂಟೆಯ ಮದ್ಯದ ಅವಧಿಯಲ್ಲಿ ಮನೆಯ ಡ್ರೆಸ್ಸಿಂಗ್ ಟೇಬಲ್ ಮೇಲೆ ಇಟ್ಟಿದ್ದ ಸುಮಾರು 10 ಗ್ರಾಂ ತೂಕದ 1,00,000/- ರೂ.ಬೆಲೆಯ ಬಂಗಾರದ ಸರವನ್ನು ಯಾರೋ ಕಳ್ಳತನ ಮಾಡಿದ್ದರು. ಈ ಕುರಿತಂತೆ ನ್ಯೂಟೌನ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು, ಬೆಂಗಳೂರು ಮೂಲದ ಸೂರ್ಯ ಎಂಬ ಆರೋಪಿಯನ್ನು ಬಂಧಿಸಿದ್ದು, ಆತನಿಂದ 10 ಗ್ರಾಂ ತೂಕದ ಬಂಗಾರದ ಸರ ಅಂದಾಜು ಮೌಲ್ಯ 1,40,000 ರೂ. ಅಮಾನತ್ತು ಪಡಿಸಿಕೊಳ್ಳಲಾಗಿದೆ.
ಎಸ್’ಪಿ ಬಿ. ನಿಖಿಲ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎ.ಜಿ. ಕಾರಿಯಪ್ಪ, ರಮೇಶ್ ಅವರುಗಳ ಮಾರ್ಗದರ್ಶನದಲ್ಲಿ ಡಿವೈಎಸ್’ಪಿ ಪ್ರಕಾಶ್ ರಾಥೋಡ್ ಹಾಗೂ ನಗರ ವೃತ್ತ ಸಿಪಿಐ ಕೆ. ನಾಗಮ್ಮ ಅವರ ಮೇಲ್ವಿಚಾರಣೆಯಲ್ಲಿ ನ್ಯೂಟೌನ್ ಠಾಣೆ ಪೊಲೀಸ್ ಸಬ್ ಇನ್ಸ್’ಪೆಕ್ಟರ್ ಟಿ. ರಮೇಶ್ ನೇತೃತ್ವದಲ್ಲಿ ಪಿಎಸ್’ಐ ಕವಿತಾ, ಸಿಬ್ಬಂದಿಗಳಾದ ಟಿ. ನವೀನ್, ಆರ್. ಆದರ್ಶ, ಜಿ.ಕೆ. ಪ್ರಕಾಶ್, ಎಚ್. ಪ್ರಸನ್ನ ಕಾರ್ಯಾಚರಣೆಯಲ್ಲಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















