ಬೆಂಗಳೂರು: ಬ್ಯಾನಿಯನ್ ಟ್ರೀ ಇವೆಂಟ್ಸ್ ಮತ್ತು ಬಿರ್ಲಾ ಸನ್ ಲೈಫ್ ಇನ್ಸೂರೆನ್ಸ್ ಅವರು ಹೆಸರಾಂತ ಕಲಾವಿದರಿಂದ ತೀನ್ ಪ್ರಹಾರ್’ ಅಪರೂಪದ ರಾಗಗಳನ್ನು ಪ್ರಸ್ತುತ ಪಡಿಸುವ ಸಂಗೀತ ಕಚೇರಿ ಕಾರ್ಯಕ್ರಮವನ್ನು ಮಾರ್ಚ್ 17ರಂದು ಸಂಜೆ 6 ಗಂಟೆಗೆ ಚೌಡಯ್ಯ ಸ್ಮಾರಕ ಭವನದಲ್ಲಿ ಏರ್ಪಡಿಸಲಾಗಿದೆ.
ತೀನ್ ಪ್ರಹಾರ್ ಸಂಗೀತ ಕಾರ್ಯಕ್ರಮದಲ್ಲಿ ಹೆಸರಾಂತ ಗಾಯಕ ಹರಿಹರನ್ ಅವರು ಶಾಸ್ತ್ರೀಯ ಸಂಗೀತ, ತುಮರಿ ಮತ್ತು ಘಜಲ್ ಗಾಯನವನ್ನು ಪ್ರಸ್ತುತ್ತಿ ಪಡಿಸಲಿದ್ದಾರೆ. ಶಾಸ್ತ್ರೀಯ ಸಂಗೀತ, ಸಿನಿಮಾ ಸಂಗೀತ, ಘಜಲ್ ಮತ್ತು ಫ್ಯೂಷನ್ ಸಂಗೀತಗಳಲ್ಲಿ ಇತ್ತೀಚಿನ ದಶಕಗಳಲ್ಲಿ ಪ್ರಮುಖ ಹೆಸರಾದ ಹರಿಹರನ್ ಅವರು ಭಾರತದ ಹಿಂದಿ , ತಮಿಳು, ಮಲಯಾಳಂ, ಕನ್ನಡ, ಮರಾಠಿ, ಭೋಜಪುರಿ ಮತ್ತು ತೆಲುಗು ಚಿತ್ರರಂಗದ ಹಿನ್ನೆಲೆಗಾಯಕರು. ಸುಪ್ರಸಿದ್ಧ ಘಜಲ್ ಗಾಯಕರೂ ಮತ್ತು ಭಾರತೀಯ ಫ್ಯೂಷನ್ ಸಂಗೀತದ ಆದ್ಯಪ್ರವರ್ತಕರಲ್ಲಿ ಒಬ್ಬರೂ ಹೌದು.
ಅಲ್ಲದೇ ವೈಭವ್ ರಮಣಿ (ವಯಲಿನ್), ಎಸ್. ಶಶಾಂಕ್ (ಕೊಳಲು), ದೇಬಶಿಶ್ ಭಟ್ಟಾಚಾರ್ಯ (ಸ್ಲೈಡ್ ಗಿಟಾರ್), ಕೋಹ್ ಶ್ರೀ. ಸ್ಯಾಕ್ಸ್ಮನ್ (ಸ್ಯಾಕ್ಸೋಫೋನ್) ಮತ್ತು ಅನುಬ್ರತಾ ಚಟರ್ಜಿ (ತಬಲಾ) ಇವರೆಲ್ಲಾ ಇದೇ ಮೊದಲ ಬಾರಿಗೆ ಒಟ್ಟಿಗೆ ಸೇರಿ ಸಂಗೀತ ಪ್ರೀಯರಿಗೆ ಸಂಗೀತದ ರಸದೌತಣವನ್ನು ಉಣಬಡಿಸಲಿದ್ದಾರೆ.
ಬೆಳಗಿನ ಜಾವದ ಬ್ರಾಹ್ಮಿ ಮುಹೂರ್ತ, ಸೂರ್ಯೋದಯ, ಸೂರ್ಯಾಸ್ತ, ಮಧ್ಯರಾತ್ರಿ- ಹೀಗೆ ಇಡೀ ದಿನದಲ್ಲಿ ನಾಲ್ಕು ಭಾಗ. ಮನುಷ್ಯನ ಮನಸು ಮತ್ತು ಭಾವಗಳು ಈ ಸಮಯದಲ್ಲಿ ಒಂದೇ ಬಗೆಯಾಗಿರುವುದಿಲ್ಲ. ಅದನ್ನೇ ಆಧಾರವಾಗಿಟ್ಟುಕೊಂಡು ಬೆಳಗಿನ ರಾಗ, ಮಧ್ಯಾಹ್ನ, ಇಳಿ ಸಂಜೆ ಹಾಗೂ ರಾತ್ರಿಯ ರಾಗಗಳನ್ನು ಸಂಗೀತದಲ್ಲಿ ಸಂಯೋಜಿಸಲಾಗಿದೆ.
ಭೈರವ ಮತ್ತು ಜೋಗಿಯಾ ರಾಗಗಳನ್ನು ಬೆಳಗಿನ ಜಾವದ ರಾಗಗಳೆಂದು ಗುರುತಿಸಲಾಗುತ್ತದೆ. ಸಾರಂಗ ರಾಗವನ್ನು ಮಧ್ಯಾಹ್ನಕ್ಕೆ, ಯಮನ್ ರಾಗವನ್ನು ಸಂಜೆಗೆ ಬಾಗೇಶ್ರೀ ರಾಗವನ್ನು ರಾತ್ರಿಗೆಂದೂ ಪರಿಗಣಿಸಲಾಗಿದೆ. ಹೀಗೆ ಮೂರನೆಯ ಪ್ರಹರಿ ಎಂದು ಸಂಜೆಯ ರಾಗಗಳನ್ನು ನುಡಿಸುವ ಕಚೇರಿಯನ್ನು ಬ್ಯಾನಿಯನ್ ಟ್ರೀ ಆಯೋಜಿಸಿದೆ.
ಕಾರ್ಯಕ್ರಮ: ತೀನ್ ಪ್ರಹಾರ್
ಯಾವಾಗ: ಮಾ.17 ಭಾನುವಾರ 2017
ಎಲ್ಲಿ: ಚೌಡಯ್ಯ ಸ್ಮಾರಕ ಭವನ, ವೈಯಾಲಿಕಾವಲ್
ಸಮಯ: ಸಂಜೆ 06:00 ಕ್ಕೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಸಚಿನ್ ಮಾನೆ(9223231359)
Discussion about this post