ನವದೆಹಲಿ: ಭಾರತ ಹಾಗೂ ಪಾಕಿಸ್ಥಾನ ನಡುವೆ ಯುದ್ಧ ಘೋಷಣೆಯ ಸನ್ನಿವೇಶ ಎದುರಾಗಿರುವ ಹಿನ್ನೆಲೆಯಲ್ಲೆ ಭಾರತೀಯ ಸೇನೆ ಮೂರೂ ಪಡೆಗಳು ಮುಖ್ಯಸ್ಥರು ಇಂದು ಸಂಜೆ 5 ಗಂಟೆಗೆ ಜಂಟಿ ಪತ್ರಿಕಾಗೋಷ್ಠಿಯನ್ನು ನಡೆಸಲಿದ್ದಾರೆ.
ಪ್ರಸಕ್ತ ಬೆಳವಣಿಗೆ ಕುರಿತಂತೆ ಮೂರು ಪಡೆಯ ಮುಖ್ಯಸ್ಥರೊಂದಿಗೆ ನಿನ್ನೆ ರಾತ್ರಿ ಪ್ರಧಾನಿಯವರು ಮಹತ್ವದ ಸಭೆ ನಡೆಸಿದ್ದಾರೆ. ಇದರ ಬೆನ್ನಲ್ಲೆ ಇಂದು ರಕ್ಷಣಾ ಸಚಿವರೂ ಸಹ ಮೂರು ಪಡೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದಾರೆ. ಇದರೊಂದಿಗೆ ಗುಪ್ತಚರ ಇಲಾಖೆ, ರಾ ಮುಖ್ಯಸ್ಥರೊಂದಿಗೆ ರಾಷ್ಟಿçÃಯ ಭದ್ರತಾ ಸಲಹೆಗಾರರು ಹಾಗೂ ಗೃಹ ಸಚಿವರು ಸಭೆ ನಡೆಸಿದ್ದಾರೆ. ಈ ಎಲ್ಲ ವಿಚಾರಗಳನ್ನು ಈಗಾಗಲೇ ಪ್ರಧಾನಿವರೊಂದಿಗೆ ಚರ್ಚಿಸಿ, ಮಹತ್ವದ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಇಂದು ಸಂಜೆ 5 ಗಂಟೆಗೆ ಪತ್ರಿಕಾಗೋಷ್ಠಿ ಕರೆಯಲಾಗಿದ್ದು, ಮಹತ್ವದ ನಿರ್ಧಾರಗಳು ಹೊರಬೀಳುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
Discussion about this post