ನವದೆಹಲಿ: ಭಾರತ ಹಾಗೂ ಪಾಕಿಸ್ಥಾನ ನಡುವೆ ಯುದ್ಧ ಆರಂಭವಾಗುವ ಸನ್ನಿವೇಶಗಳು ನಿಮಾರ್ಣವಾಗಿರುವ ಬೆನ್ನಲ್ಲೆ, ಭಾರತದ ಮಿಗ್ ವಿಮಾನವನ್ನು ಹೊಡೆದು, ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕ್ ಅಕ್ರಮವಾಗಿ ಬಂಧಿಸಿದೆ.
ಅಭಿನಂದನ್ ಅವರನ್ನು ಅಕ್ರಮವಾಗಿ ಬಂಧಿಸಿರುವ ಪಾಕಿಸ್ಥಾನದ ಕೃತ್ಯವನ್ನು ಭಾರತ ಈಗಾಗಲೇ ಕಠಿಣ ಮಾತುಗಳಲ್ಲಿ ಖಂಡಿಸಿದ್ದು, ನಿಮ್ಮ ವಶದಲ್ಲಿರುವ ನಮ್ಮ ವಿಂಗ್ ಕಮಾಂಡರ್’ಗೆ ಏನಾದರೂ ತೊಂದರೆಯಾದರೆ ಪರಿಣಾಮ ಗಂಭೀರವಾಗಿರುತ್ತದೆ ಎಂಬ ಎಚ್ಚರಿಕೆಯನ್ನು ಈಗಾಗಲೇ ನೀಡಿದೆ.
ಇದರ ಹೊರತಾಗಿ ನೋಡುವುದಾರೆ, 42 ಯೋಧರನ್ನು ಕಳೆದಕೊಂಡು ನೋವು ಹಾಗೂ ಕಿಚ್ಚಿನಲ್ಲಿದ್ದ ಭಾರತ ಪಾಕ್ ಗಡಿಯೊಳಗೆ ನುಗ್ಗಿ ವಾಯುಸೇನೆಯ ಮೂಲಕ ದಾಳಿ ನಡೆಸಿ, ಉಗ್ರರ ಅಡಗುತಾಣಗಳನ್ನು ನಾಶ ಮಾಡುವ ಮೂಲಕ, ದೇಶದ ತಾಕತ್ತನ್ನು ತೋರಿಸಿದ್ದರು.
ಪುಲ್ವಾಮಾ ದಾಳಿಯಲ್ಲಿ 42 ಯೋಧರ ವೀರಸ್ವರ್ಗ ಸೇರಿದ್ದ ವೇಳೆ ಮಾತನಾಡಿದ್ದ ಪ್ರಧಾನಿ ಮೋದಿ, ನಮ್ಮ ಯೋಧರ ಪ್ರತಿ ಹನಿ ಹನಿ ರಕ್ತಕ್ಕೂ ಬೆಲೆ ತೆರಬೇಕಾಗುತ್ತದೆ. ಇದಕ್ಕೆ ಕಾರಣವಾದ ಯಾರನ್ನೂ ನಾವು ಬಿಡುವುದಿಲ್ಲ ಎಂದು ಗುಡುರು ಹಾಕಿದ್ದರು. ಅಂತೆಯೇ ಇದರ ಮೊದಲ ಭಾಗವಾಗಿ ಬಾಲಾಕೋಟ್’ನಲ್ಲಿ ದಾಳಿ ನಡೆಸಲಾಗಿದೆ.
ಈ ಪ್ರಕರಣದ ಬಗ್ಗೆ ಜ್ಯೋರ್ತಿವಿಜ್ಞಾನಂ ಖ್ಯಾತಿಯ ಪ್ರಕಾಶ್ ಅಮ್ಮಣ್ಣಾಯ ಅವರನ್ನು ಮಾತನಾಡಿಸಿದಾಗ:
ಅಭಿನಂದನ್ ಅವರ ಜಾತಕ ದೊರೆಯದೇ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಆದರೆ, ಇಂದಿನ ಗ್ರಹಗತಿಗಳು ಹಾಗೂ ಸನ್ನಿವೇಶಗಳ ಆಧಾರದಲ್ಲಿ ಹೇಳುವುದಾದರೆ ಅಭಿನಂದನ್ ಬಂಧನ ಒಂದು ಮಹತ್ವದ ನಿರ್ಧಾರಕ್ಕೆ ಹಾಗೂ ಒಂದಷ್ಟು ಪಾಕಿಗೆ ಅಪಾಯ ಕಾದಿರುವುದು ಮಾತ್ರ ನಿಶ್ಚಿತ…
ಆದರೆ, ಅಭಿನಂದನ್ ಸುರಕ್ಷಿತವಾಗಿ ದೇಶಕ್ಕೆ ಮರಳಲಿ ಎಂದು ಪ್ರಾರ್ಥಿಸುವುದಷ್ಟೆ ನಮ್ಮಿಂದ ಸಾಧ್ಯ..
ಇದಾದ ನಂತರ ನಿನ್ನೆ ಪಾಕ್ ವಿಮಾನಗಳು ಭಾರತದ ವಾಯುಗಡಿಯಲ್ಲಿ ಪ್ರವೇಶಿಸಲು ಯತ್ನಿಸಿದ್ದು, ಇದನ್ನು ಹೊಡೆದು ಹಾಕುವಲ್ಲಿ ಭಾರತೀಯ ಪಡೆಗಳು ಯಶಸ್ವಿಯಾಗಿದ್ದವು. ಈ ವೇಳೆ ಪಾಕ್’ನ ದಾಳಿಗೆ ಭಾರತದ ಒಂದು ಮಿಗ್ ವಿಮಾನ ಬಲಿಯಾಗಿದ್ದು, ಇದರಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕ್ ಅಕ್ರಮವಾಗಿ ಬಂಧಿಸಿ ಕರೆದೊಯ್ದಿದೆ.
ಅಭಿನಂದನ್ ಅವರನ್ನು ಬಂಧಿಸಿರುವ ಕೃತ್ಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಮೋದಿ ಸರ್ಕಾರ, ಅವರಿಗೆ ಏನಾದರೂ ತೊಂದರೆಯಾದರೆ ಪರಿಸ್ಥಿತಿ ಅತ್ಯಂತ ಭೀಕರವಾಗಿರುತ್ತದೆ ಎಂದು ಪಾಕ್‌ಗೆ ಎಚ್ಚರಿಸಿದೆ.
ವರದಿಗಳ ಅನ್ವಯ, ನಿನ್ನೆ ರಾತ್ರಿ ಸೇನೆಯ ಮೂರೂ ದಳದ ಮುಖ್ಯಸ್ಥರೊಂದಿಗೆ ನಡೆದ ಸಭೆಯಲ್ಲಿ ಪ್ರಧಾನಿಯವರು ಅಭಿನಂದನ್ ವಿಚಾರವನ್ನು ಪ್ರಸ್ತಾಪಿಸಿ, ಅವರ ಸುರಕ್ಷಿತ ಬಿಡುಗಡೆಗೆ ಎಲ್ಲ ರೀತಿಯ ಪ್ರಯತ್ನ ಮಾಡಬೇಕು. ಅವರಿಗೆ ಏನಾದರೂ ತೊಂದರೆಯಾದರೆ ಅದಕ್ಕೆ ತಕ್ಕ ಶಾಸ್ತಿಯನ್ನು ಪಾಕ್’ಗೆ ಮಾಡಿ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಉರಿ ಸೆಕ್ಟರ್ ಮೇಲಿನ ದಾಳಿ ಹಾಗೂ ಪುಲ್ವಾಮಾ ದಾಳಿಯ ನಂತರ ನಡೆಸಲಾದ ಕಾರ್ಯಾಚರಣೆಯ ಮೂಲಕ ಸೈನಿಕರ ಹಾಗೂ ದೇಶದ ವಿಚಾರಕ್ಕೆ ಬಂದರೆ ತಾವು ಏನು ಎಂಬುದನ್ನು ಮೋದಿ ತೋರಿಸಿದ್ದಾರೆ. ಈಗ ಅಭಿನಂದನ್ ವಿಚಾರವನ್ನು ಮೋದಿ ಗಂಭೀರವಾಗಿ ಪರಿಗಣಿಸಿದ್ದಾರೆ. ಒಂದು ವೇಳೆ ನಮ್ಮ ವಿಂಗ್ ಕಮಾಂಡರ್’ಗೆ ಏನಾದರೂ ಆದರೆ ನಿಜಕ್ಕೂ ಇಡಿಯ ಪ್ರಪಂಚಕ್ಕೆ ಮೋದಿ ಉಗ್ರ ನಾರಸಿಂಹನ ರೂಪದಲ್ಲಿ ಕಾಣಿಸಿಕೊಳ್ಳುವುದು ನಿಶ್ಚಿತ.
Discussion about this post