ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ತೊಳಹುಣಸೆ – ದಾವಣಗೆರೆ ವಿಭಾಗದ ಎಲ್’ಸಿ ಸಂಖ್ಯೆ 196 ರಲ್ಲಿ ತಾತ್ಕಾಲಿಕ ಗರ್ಡರ್ ಅಳವಡಿಕೆ ಹಾಗೂ ತೆಗೆದುಹಾಕಲು ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಕೈಗೊಳ್ಳಲಾಗಿರುವುದರಿಂದ, ಈ ಮಾರ್ಗದ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಮಾಹಿತಿ ನೀಡಿದ್ದು, ನಿಗದಿತ ದಿನಾಂಕದಂದು ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದ್ದು, ಕೆಲವು ರೈಲು ಸೇವೆಗಳು ಭಾಗಶಃ ರದ್ದು ಹಾಗೂ ಕೆಲವು ರೈಲುಗಳನ್ನು ಮಾರ್ಗ ಬದಲಾವಣೆಯಾಗಲಿದೆ ಎಂದು ತಿಳಿಸಿದ್ದು, ವಿವರಗಳು ಹೀಗಿವೆ.
ಈ ರೈಲುಗಳ ರದ್ದು
2026 ರ ಫೆಬ್ರವರಿ 17ರಂದು 17391 ಸಂಖ್ಯೆಯ ಕೆಎಸ್’ಆರ್ ಬೆಂಗಳೂರು – ಸಿಂಧನೂರು ಎಕ್ಸ್’ಪ್ರೆಸ್, 56928 ಸಂಖ್ಯೆಯ ಸಿಂಧನೂರು – ಎಸ್’ಎಸ್’ಎಸ್ ಹುಬ್ಬಳ್ಳಿ ಪ್ಯಾಸೆಂಜರ್, 07396 ಸಂಖ್ಯೆಯ ದಾವಣಗೆರೆ – ಬಳ್ಳಾರಿ ಜಂಕ್ಷನ್ ಡೆಮು, 07395 ಸಂಖ್ಯೆಯ ಬಳ್ಳಾರಿ ಜಂಕ್ಷನ್ – ದಾವಣಗೆರೆ ಡೆಮು ರೈಲುಗಳ ಸಂಚಾರ ರದ್ದುಗೊಳ್ಳಲಿದೆ.
ಈ ರೈಲಿನ ಭಾಗಶಃ ರದ್ದುಪಡಿಕೆ
12726 ಸಂಖ್ಯೆಯ ಧಾರವಾಡ – ಕೆಎಸ್’ಆರ್ ಬೆಂಗಳೂರು ಎಕ್ಸ್’ಪ್ರೆಸ್ ರೈಲು 2026ರ ಫೆಬ್ರವರಿ 17 ರಂದು ಧಾರವಾಡ ಮತ್ತು ಚಿಕ್ಕಜಾಜೂರು ನಡುವೆ ಭಾಗಶಃ ರದ್ದುಪಡಿಸಲಾಗುತ್ತದೆ. ಈ ರೈಲು ಧಾರವಾಡದ ಬದಲು ಚಿಕ್ಕಜಾಜೂರಿನಿಂದ ತನ್ನ ನಿಗದಿತ ಸಮಯಕ್ಕೆ ಪ್ರಯಾಣ ಆರಂಭಿಸಲಿದೆ.
ಈ ರೈಲುಗಳ ಮಾರ್ಗ ಬದಲಾವಣೆ
1. 56529 ಸಂಖ್ಯೆಯ ಹರಿಹರ – ಹೊಸಪೇಟೆ ಪ್ಯಾಸೆಂಜರ್ 2026ರ ಫೆಬ್ರವರಿ 09 ಹಾಗೂ 17 ರಂದು ತನ್ನ ಪ್ರಯಾಣದಲ್ಲಿ ಈ ರೈಲು ಹರಿಹರ, ದಾವಣಗೆರೆ, ಅಮರಾವತಿ ಕಾಲೋನಿ, ತೆಲಿಗಿ ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ತನ್ನ ನಿಯಮಿತ ನಿಲ್ದಾಣಗಳಾದ ತೊಳಹುಣಸೆ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುವುದಿಲ್ಲ.
2. 56530 ಸಂಖ್ಯೆಯ ಹೊಸಪೇಟೆ – ಹರಿಹರ ಪ್ಯಾಸೆಂಜರ್ ರೈಲು 2026ರ ಫೆಬ್ರವರಿ 10ರಂದು ಪ್ರಾರಂಭವಾಗುವ ಪ್ರಯಾಣದಲ್ಲಿ, ಈ ರೈಲು ತೆಲಿಗಿ, ಅಮರಾವತಿ ಕಾಲೊನಿ, ದಾವಣಗೆರೆ, ಹರಿಹರ ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ತನ್ನ ನಿಯಮಿತ ನಿಲ್ದಾಣವಾದ ತೊಳಹುಣಸೆ ನಿಲ್ದಾಣದಲ್ಲಿ ನಿಲುಗಡೆ ಹೊಂದಿರುವುದಿಲ್ಲ.
3. 16588 ಸಂಖ್ಯೆಯ ಬಿಕಾನೆರ್ – ಯಶವಂತಪುರ ಎಕ್ಸ್’ಪ್ರೆಸ್ ರೈಲು 2026ರ ಫೆಬ್ರವರಿ 15ರಂದು ಪ್ರಾರಂಭವಾಗುವ ಪ್ರಯಾಣದಲ್ಲಿ, ಈ ರೈಲು ಗದಗ, ಬಳ್ಳಾರಿ (ಬೈಪಾಸ್), ರಾಯದುರ್ಗ, ಚಿಕ್ಕಜಾಜೂರು, ಬೀರೂರು ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ತನ್ನ ನಿಯಮಿತ ನಿಲ್ದಾಣಗಳಾದ ಎಸ್’ಎಸ್’ಎಸ್ ಹುಬ್ಬಳ್ಳಿ, ರಾಣಿಬೆನ್ನೂರು ಮತ್ತು ದಾವಣಗೆರೆ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುವುದಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















