ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರೈಲ್ವೆ ಕಾಮಗಾರಿಗಳ ಹಿನ್ನೆಲೆಯಲ್ಲಿ ಬೆಂಗಳೂರು ಹಾಗೂ ಮೈಸೂರಿನಿಂದ ಹೊರಡಲಿರುವ ಕೆಲವು ರೈಲುಗಳ ಸಂಚಾರ ಕೆಲವು ದಿನ ತಡವಾಗಲಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಇಲಾಖೆ ಮಾಹಿತಿ ಪ್ರಕಟಿಸಿದ್ದು, ವಿವರಗಳು ಇಂತಿದೆ.
ವಿಶ್ವಮಾನವ ಎಕ್ಸ್ ಪ್ರೆಸ್ ತಡವಾಗಿ ಸಂಚಾರ
ಗುಡಗೇರಿ ಮತ್ತು ಯಲವಿಗಿ ನಿಲ್ದಾಣಗಳ ನಡುವಿನ ಕಳಸ ಹಾಲ್ಟ್ ನಿಲ್ದಾಣದಲ್ಲಿ ಪಾದಚಾರಿ ಮೇಲ್ಸೇತುವೆಯ ಉಕ್ಕಿನ ಗಡರ್ರ’ಗಳನ್ನು ಅಳವಡಿಸುವ ಕಾರ್ಯದ ನಿಮಿತ್ತ, ಆಗಸ್ಟ್ 12, 2025 ರಂದು ಬೆಳಗಾವಿಯಿಂದ ಮೈಸೂರಿಗೆ ಸಂಚರಿಸುವ ರೈಲು ಸಂಖ್ಯೆ 17325 ವಿಶ್ವಮಾನವ ಡೈಲಿ ಎಕ್ಸ್ ಪ್ರೆಸ್ ರೈಲು, ಬೆಳಗಾವಿಯಿಂದ 60 ನಿಮಿಷ ತಡವಾಗಿ ಪ್ರಯಾಣ ಪ್ರಾರಂಭಿಸಲಿದೆ ಮತ್ತು ಮಾರ್ಗಮಧ್ಯೆ 40 ನಿಮಿಷಗಳ ಕಾಲ ನಿಯಂತ್ರಿಣವಾಗಲಿದೆ.
ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ
ಚಕ್ರಧರಪುರ ರೈಲ್ವೆ ವಿಭಾಗದ ಜಾರ್ಸುಗುಡ ಗೂಡ್ಸ್ ಯಾರ್ಡ್’ನಲ್ಲಿ ನಡೆಯುತ್ತಿರುವ ನವೀಕರಣ ಕಾಮಗಾರಿಗಳ ನಿಮಿತ್ತ, ಕೆಲ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಆಗ್ನೇಯ ರೈಲ್ವೆಯು ತಿಳಿಸಿದೆ.
ಆಗಸ್ಟ್ 26, 28 ಮತ್ತು ಸೆಪ್ಟೆಂಬರ್ 9, 2025 ರಂದು ಹೊರಡಲಿರುವ ರೈಲು ಸಂಖ್ಯೆ 12836 ಎಸ್‌ಎಂವಿಟಿ ಬೆಂಗಳೂರು-ಹಟಿಯಾ ದ್ವಿ-ಸೂಪರ್’ಫಾಸ್ಟ್ ಎಕ್ಸ್’ಪ್ರೆಸ್ ರೈಲು, ಬೆಂಗಳೂರಿನ ಸರ್.ಎಂ. ವಿಶ್ವೇಶ್ವರಯ್ಯ ಟರ್ಮಿನಲ್’ನಿಂದ ನಿಗದಿತ ಸಮಯಕ್ಕಿಂತ 2 ಗಂಟೆ ತಡವಾಗಿ ಹೊರಡಲಿದೆ. ಜೊತೆಗೆ, ಮಾರ್ಗಮಧ್ಯೆ 4 ಗಂಟೆಗಳ ಕಾಲ ನಿಯಂತ್ರಣವಾಗಲಿದೆ.
ಹಾಗೆಯೇ, ಸೆಪ್ಟೆಂಬರ್ 1 ಮತ್ತು 8, 2025 ರಂದು ಸಂಚರಿಸಲಿರುವ ರೈಲು ಸಂಖ್ಯೆ 12890 ಎಸ್’ಎಂವಿಟಿ ಬೆಂಗಳೂರು-ಟಾಟಾನಗರ ಸಾಪ್ತಾಹಿಕ ಸೂಪರ್’ಫಾಸ್ಟ್ ರೈಲು, ಬೆಂಗಳೂರಿನಿಂದ 2 ಗಂಟೆ ತಡವಾಗಿ ಹೊರಡಲಿದೆ. ಅಲ್ಲದೆ, ಮಾರ್ಗಮಧ್ಯೆ 3 ಗಂಟೆಗಳ ಕಾಲ ಇದರ ಸಂಚಾರವನ್ನು ನಿಯಂತ್ರಣವಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post