ಕಲ್ಪ ಮೀಡಿಯಾ ಹೌಸ್ | ತೀರ್ಥಹಳ್ಳಿ |
ಅಂಬುತೀರ್ಥ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಚುನಾವಣೆಯ ಪ್ರವಾಸ ಆರಂಭ ಮಾಡಿದ್ದೇನೆ. ಈ ಬಾರಿ ಅನ್ಯಾಯವಾಗಿರುವ ಹಿಂದುತ್ವವಾದಿಗಳ ಪರ ನೀವು ಹೋರಾಟ ಮಾಡುತ್ತಿದ್ದೀರಾ ನಿಮ್ಮ ಜೊತೆ ನಾವಿದ್ದೇವೆ ಎಂದು ಹಳ್ಳಿಯ ಜನರು ಕೂಡ ಆಶೀರ್ವಾದ ಮಾಡಿದ್ದಾರೆ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ #K S Eshwarappa ಹೇಳಿದರು
ತೀರ್ಥಹಳ್ಳಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾದ ಸಂದರ್ಭದಲ್ಲಿ ರಾಮೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಮಾಧ್ಯಮದವರ ಜೊತೆಗೆ ಅವರು ಮಾತನಾಡಿದರು.

ಮೋದಿ #Modi ಹಾಗೂ ಅಮಿತ್ ಶಾ ಅವರಿಗೆ ಕರ್ನಾಟಕದ ಕುಟುಂಬ ರಾಜಕಾರಣವನ್ನು ಫೇಸ್ ಮಾಡಲು ಸಮರ್ಥವಿದೆ. ಆದರೆ ಅವರಿಗೆ ಇವರು ಭ್ರಮೆ ತುಂಬಿದ್ಧಾರೆ. ಕರ್ನಾಟಕದಲ್ಲಿ ಯಡಿಯೂರಪ್ಪನವರೆ ಲಿಂಗಾಯತ ನಾಯಕರು, ಅವರೇ ಜನರ ನಾಯಕರು, ಆರು ಕುಟುಂಬವನ್ನು ಬಿಟ್ಟರೆ ಬೇರೆ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಬಿಜೆಪಿ ಗೆಲ್ಲುವುದಕ್ಕೆ ಆಗುವುದಿಲ್ಲ ಎಂಬ ಭ್ರಮೆ ಹುಟ್ಟಿಸಿರುವುದರಿಂದ ನಮ್ಮ ರಾಜ್ಯಕ್ಕೆ ಈ ಪರಿಸ್ಥಿತಿ ಬಂದಿದೆ ಎಂದರು.

ಬಿಜೆಪಿಯ ಹಿರಿಯರು ತಿರಸ್ಕಾರ ಮಾಡಿದ್ದಾರಾ ಎಂಬ ಪ್ರಶ್ನೆಗೆ ಅವರು ಕರೆದಿದ್ದರು ನಾನು ಹೋಗಿದ್ದೆ, ಅವರು ಬುದ್ಧಿವಂತಿಕೆಯಿಂದ ನನ್ನನ್ನು ವಾಪಸ್ ಕಳಿಸಿದ್ಧಾರೆ. ಚುನಾವಣೆಯಲ್ಲಿ ನಿಂತು ಗೆದ್ದು ಪುನಃ ಅವರ ಬಳಿ ಹೋಗುತ್ತೇನೆ. ಅವಮಾನ ಎಂದು ನಾನು ಭಾವಿಸುವುದಿಲ್ಲ. ದೊಡ್ಡವರು ಕರೆದಾಗ ಹೋಗಲಿಲ್ಲ ಎಂದರೆ ನನಗೆ ಸೊಕ್ಕು ಎನ್ನುತ್ತಾರೆ. ನನ್ನನ್ನು ಬೆಳೆಸಿರುವವರೆ ಅವರು. ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಬೇಕು ಎಂದು ಹೇಳಿದಾಗ ಸಂಘದ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ ಅಗರ್ವಾಲ್ ಬಂದಿದ್ದರು ಅವರಿಗೆ ಚುನಾವಣೆಗೆ ಯಾಕೆ ನಿಲ್ಲುತ್ತೇನೆ ಎಂದು ತಿಳಿಸಿದ್ದೇನೆ ಎಂದರು.

ಗೀತಾ ಶಿವರಾಜ್ ಕುಮಾರ್ #Geetha Shivarajkumar ಹಾಗೂ ರಾಘವೇಂದ್ರ #Raghavendra ಇಬ್ಬರನ್ನು ಸೋಲಿಸುತ್ತೇನೆ. ಹೊಂದಾಣಿಕೆ ರಾಜಕಾರಣ ಹೇಗೆ ಮಾಡಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ ಹೊಂದಾಣಿಕೆ ರಾಜಕಾರಣಕ್ಕೆ ಜಿಲ್ಲೆಯ ಜನ ಬಲಿಯಾಗಲ್ಲ. ಸಿದ್ಧಾಂತದ ವಿಚಾರದಲ್ಲಿ ಹಿಂದುತ್ವದ ವಿಚಾರದಲ್ಲಿ ಸ್ಪರ್ಧೆ ಮಾಡಿರುವ ಈಶ್ವರಪ್ಪನವರಿಗೆ ಖಂಡಿತವಾಗಿ ಬೆಂಬಲ ಕೊಡುತ್ತಾರೆ ಎಂಬ ನಂಬಿಕೆ ಇದೆ ಎಂದರು.

ಜ್ಞಾನೇಂದ್ರರ ಕಣ್ಣಿಗೆ ಬಿದ್ದಿಲ್ಲವೇ? ಅವನ ರೋಲ್ ಎಷ್ಟು ಇದೆ ನನಗೆ ಗೊತ್ತಿಲ್ಲ, ಎಂಪಿ ರೋಲ್ ಬಹಳ ಇದೆ ಎಂದು ಹೇಳುತ್ತಾರೆ. ನನಗೆ ಅದು ಕ್ಲಿಯರ್ ಇಲ್ಲ. ಈ ಚುನಾವಣೆ ಮುಗಿಯುತ್ತಿದ್ದಂತೆ ನಾಮಕಾವಸ್ತೆ ಯಾರು ಎಂದು ಜನ ತೋರಿಸುತ್ತಾರೆ. ಚುನಾವಣೆಯಲ್ಲಿ ಗೆದ್ದು ಈ ಮರಳು ಮಾಫಿಯಾವನ್ನು ಮಟ್ಟ ಹಾಕುತ್ತೇನೆ ಎಂದು ಶಪಥ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post