ಕಲ್ಪ ಮೀಡಿಯಾ ಹೌಸ್ | ತೀರ್ಥಹಳ್ಳಿ |
(Thirthahalli) ಪಟ್ಟಣದ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಠಲನಗರದ ಅಂಗನವಾಡಿ ಕೇಂದ್ರ ಕಳೆದ ಮೂರು ತಿಂಗಳಿನಿಂದ ಕತ್ತಲೆಯ ಕೂಪವಾಗಿದೆ.
ಮೆಸ್ಕಾಂ (MESCOM) ಇಲಾಖೆಯಿಂದ ಬಂದ ಅಧಿಕಾರಿಗಳು ಮೀಟರ್ ಬೋರ್ಡ್ ತೆಗೆದುಕೊಂಡು ಹೋಗಿದ್ದು ಇಲ್ಲಿಯವರೆಗೆ ಬೇರೆ ಮೀಟರ್ ಬೋರ್ಡ್ ಹಾಕದೆ ಇರುವುದರಿಂದ ಪುಟಾಣಿ ಮಕ್ಕಳು ಕತ್ತಲೆಯಲ್ಲಿ ಕೂರುವಂತಾಗಿದೆ.
ವಿಠಲನಗರ ಹಾಗೂ ಮೇಲಿನಕುರುವಳ್ಳಿ ಎರಡು ಅಂಗನವಾಡಿ ಕೇಂದ್ರಕ್ಕೆ ಹಾಕಲಾಗಿದ್ದ ಮೀಟರ್ ಬೋರ್ಡ್ ಸಂಖ್ಯೆ ಒಂದೇ ಆಗಿತ್ತು.. ಹೀಗಾಗಿ ವಿಠಲನಗರ ಅಂಗನವಾಡಿ ಕೇಂದ್ರದ ಮೀಟರ್ ಬೋರ್ಡ್ ತೆರವು ಮಾಡಲಾಗಿತ್ತು. ಆದರೆ ಮೂರು ತಿಂಗಳಾದರು ಇಲ್ಲಿಯವರೆಗೆ ಹೊಸ ಮೀಟರ್ ಬೋರ್ಡ್ ಅಳವಡಿಸದೆ ಮೆಸ್ಕಾಂ ಅಧಿಕಾರಿಗಳು ಬೇಜವಾಬ್ದಾರಿ ತೋರಿದ್ದಾರೆ. ಮಕ್ಕಳನ್ನು ಕತ್ತಲೆಯಲ್ಲಿ ಕೂರುವಂತೆ ಮಾಡಿ ಪುಟಾಣಿ ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Also read>> ರಾಜ್ಯದ 1,250 ಸರ್ಕಾರಿ ಶಾಲೆಗಳಲ್ಲಿ 1,582 ಶೌಚಾಲಯ ನಿರ್ಮಾಣ: ಸಚಿವ ಮಧು ಬಂಗಾರಪ್ಪ
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಹೊಸದಾಗಿ ಮೀಟರ್ ಬೋರ್ಡ್ ಅಳವಡಿಸಿ ಮಕ್ಕಳ ಭವಿಷ್ಯಕ್ಕೆ ತೊಂದರೆ ಆಗದಂತೆ ಕತ್ತಲೆ ಭಾಗ್ಯವನ್ನು ಹೋಗಲಾಡಿಸಲಿ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









