ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಈಗಾಗಲೇ ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆಗುಂಬೆ ಘಾಟಿಯಲ್ಲಿ ಭಾರೀ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.
ಈ ಕುರಿತಂತೆ ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಆಗುಂಬೆ ಪ್ರದೇಶದಲ್ಲಿ ಹೆಚ್ಚಿನ ಮಳೆ ಸುರಿಯುತ್ತದೆ. ಈ ವೇಳೆಯಲ್ಲಿ ಭಾರೀ ತೂಕದ ವಾಹನಗಳು ಸಂಚರಿಸಿದರೆ ಗುಡ್ಡ ಕುಸಿಯುವ ಜೊತೆಯಲ್ಲಿ, ಇತರೆ ವಾಹನಗಳ ಸಂಚಾರಕ್ಕೆ ತೊಂದರೆಯಾಗಲಿದೆ. ಹೀಗಾಗಿ, 12 ಟನ್ ಗಿಂತ ಅಧಿಕ ಭಾರದ ಸರಕು ಸಾಗಣೆ ವಾಹನಗಳಿಗೆ ಆಗುಂಬೆ ಘಾಟಿ ರಸ್ತೆಯಲ್ಲಿ ಸಂಚರಿಸುವಂತಿಲ್ಲ ಎಂದಿದ್ದಾರೆ.
ಪರ್ಯಾಯ ಮಾರ್ಗವೇನು?
ಶಿವಮೊಗ, ತೀರ್ಥಹಳ್ಳಿ, ಶೃಂಗೇರಿ, ಕೆರೆಕಟ್ಟೆ, ಕಾರ್ಕಳ, ಉಡುಪಿ, ಮಂಗಳೂರು ಮಾರ್ಗ
ಶಿವಮೊಗ್ಗ, ತೀರ್ಥಹಳ್ಳಿ, ಮಾಸ್ತಿಕಟ್ಟೆ, ಹುಲಿಕಲ್, ಹೊಸಂಗಡಿ, ಸಿದ್ದಾಪುರ, ಉಡುಪಿ, ಮಂಗಳೂರು ಮಾರ್ಗ
Get In Touch With Us info@kalpa.news Whatsapp: 9481252093

















