ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನಾಟ್ಯರಾಣಿ ಶಾಂತಲೆ ಹುಟ್ಟಿದ ಸ್ಥಳವಾದ ಶಿಲ್ಪಕಲೆಗಳ ತವರೂರಾದ ಬೇಲೂರಿನಲ್ಲಿ ನಮ್ಮ ಬೇಲೂರಿನ ಪುಟ್ಟ ನಾಟ್ಯರಾಣಿ ಶಾಂತಲೆ ಲಾಲಿತ್ಯ. ಈಕೆ ಹಾಸನ ಜಿಲ್ಲೆಯ ಬೇಲೂರಿನವರಾದ ಶ್ರೀ ಕುಮಾರ್ ಹಾಗೂ ಶ್ರೀಮತಿ ಶೋಭಾರಾಣಿ ದಂಪತಿಗಳ ಎರಡನೇ ಪುತ್ರಿ. ಇವಳು ಸದ್ಯ ವಿದ್ಯಾ ವಿಕಾಸ್ ಪಬ್ಲಿಕ್ ಶಾಲೆಯಲ್ಲಿ ಎರಡನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಭರತನಾಟ್ಯ, ಜಾನಪದ ನೃತ್ಯ, ಸಂಗೀತ, ಕರಾಟೆ ಹಾಗೂ ಯೋಗ ನೆಚ್ಚಿನ ಹವ್ಯಾಸಗಳು.
ಕಲೆ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಆದರೆ ಅದು ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತದೆ ಎಂಬ ಮಾತಿನಂತೆ ಹೇಳುವುದಾದರೆ ಈ ಪುಟ್ಟ ಬಾಲೆಗೆ ಕಲೆ ತಾನಾಗಿಯೇ ಒಲಿದು ಬಂದಿದೆ ಎನ್ನಬಹುದು. ಇದಕ್ಕೆ ಕಾರಣ ಚಿಕ್ಕವಯಸ್ಸಿನಲ್ಲಿ ಅತಿಯಾದ ಶ್ರದ್ಧೆ-ಭಕ್ತಿಯಿಂದ ಕಲೆಯನ್ನು ಪೂಜಿಸುತ್ತಿರುವುದು. ಕಲೆಯ ಜೊತೆಗೆ ತಾನು ವಿದ್ಯಾಭ್ಯಾಸ ಮಾಡುವ ಶಾಲೆಯಲ್ಲಿ ಓದಿನಲ್ಲಿ ಯುವ ಸಹ ಗುರುತಿಸಿಕೊಂಡಿದ್ದು ತನ್ನೊಂದಿಗೆ ಶಾಲೆಯನ್ನು ಸಹ ಗುರುತಿಸುವಂತೆ ಮಾಡಿದ್ದು ಆ ಶಾಲೆಯ ಶಿಕ್ಷಕ ವೃಂದದವರೆಲ್ಲ ಅಭಿಮಾನ ಪ್ರೀತಿಗೆ ಪಾತ್ರರಾಗುತ್ತಾರೆ.
ಕಲಾ ಸಾಧನೆಗೆ ಯಾವುದು ಮಾನದಂಡವಲ್ಲ ಎಂಬ ಮಾತಿದೆ. ಅದರಂತೆ ಬೇಲೂರಿನ ಈ ಪುಟ್ಟ ನಾಟ್ಯರಾಣಿ ತನ್ನ ನಾಲ್ಕನೇ ವಯಸ್ಸಿನಲ್ಲೇ ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಎಂಬ ನಾಣ್ಣುಡಿಯಂತೆ ಮೊದಲಿಗೆ ಮನೆಯಲ್ಲಿಯೇ ಅಕ್ಕನ ಸಹಾಯದಿಂದ ಕಲಿಕೆಯನ್ನು ಪ್ರಾರಂಭಿಸುತ್ತಾಳೆ. ನಂತರ ನಾಲ್ಕನೆಯ ವಯಸ್ಸಿನಲ್ಲಿ ಬೇಲೂರಿನ ಶಾಂತಲಾ ಕಲಾ ಕುಟೀರ ಭರತನಾಟ್ಯ ಶಾಲೆಯಲ್ಲಿ ಅಭ್ಯಾಸ ಆರಂಭಿಸಿ ತನ್ನ ಎಂಟನೇ ವಯಸ್ಸಿನ ಒಳಗೆ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ತನ್ನ ಅಕ್ಕ ಸಂಜನಾಳ ಮಾರ್ಗದರ್ಶನದಲ್ಲಿ ಸೊಂಟದಲ್ಲಿ ಬೆತ್ತದ ರಿಂಗ್, ತಲೆಯ ಮೇಲೆ ದೀಪ, ಮಳೆಯ ಮೇಲೆ ಹಾಗೂ ಗಾಜಿನ ಲೋಟದ ಮೇಲೆ ನೃತ್ಯ ತರಬೇತಿಯನ್ನು ಪಡೆದು ನನ್ನ ಅಕ್ಕನನ್ನೇ ಗುರುವಾಗಿ ಪಡೆದು ಪ್ರಾರಂಭದಲ್ಲಿ ತನ್ನ ಶಾಲೆಯಲ್ಲಿ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮತ್ತು ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ನಡೆಯುವ ಉತ್ಸವದಲ್ಲಿ ಹಾಗೂ ಹಳೇಬೀಡಿನಲ್ಲಿ ನಡೆದ ಕಾರ್ತಿಕ ಮಹೋತ್ಸವ ಹಾಸನದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಚಿಕ್ಕಮಗಳೂರಿನಲ್ಲಿ ನಡೆದ ನೃತ್ಯೋತ್ಸವ ಕಾರ್ಯಕ್ರಮ ಹೀಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತನ್ನ ನೃತ್ಯ ಪ್ರದರ್ಶನದ ಮೂಲಕ ಸಾವಿರಾರು ಜನ ಕಲಾಭಿಮಾನಿಗಳ ಮನಸೂರೆಗೊಳ್ಳುವಂತೆ ಕಾರ್ಯಕ್ರಮಗಳನ್ನು ನೀಡಿದ್ದಾಳೆ.
ಪ್ರತಿಭೆ ಎಂಬುದು ಕೇವಲ ಒಂದು ಕಲೆಗೆ ಸೀಮಿತವಾಗದೆ ಜಾನಪದ ನೃತ್ಯ ಹಾಗೂ ಕರಾಟೆ ಯೋಗದ ಅಂತಹ ಅನೇಕ ಕಲೆಗಳನ್ನು ತನ್ನೊಳಗೆ ಇಟ್ಟುಕೊಂಡು ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಪ್ರತಿಭೆ ಎಂಬುದು ಒಂದು ಸ್ಥಳಕ್ಕೆ ಸೀಮಿತವಾಗಿರುವುದಿಲ್ಲ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಈ ಪುಟ್ಟ ಬಾಲೆ ರಾಜ್ಯ ಮಟ್ಟದ ರಾಷ್ಟ್ರಮಟ್ಟದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಲೂರಿನ ಹೆಸರನ್ನು ಕೊಂಡಿದ್ದಾರೆ ಎಂಬುದು ಬೇಲೂರಿನ ಜನತೆ ಹಾಸನದ ಜನತೆಗೆ ಮಾಡಿದ್ದಾಳೆ.
ಯಾವುದೇ ಪ್ರತಿಭೆ ಅನಾವರಣಗೊಳ್ಳದೆ ಕಾದರೆ ಪ್ರತಿಭೆಯ ಜೊತೆಗೆ ಪೋಷಕರು, ಗುರುಗಳು, ಜೊತೆಗಾರರ ಮಾರ್ಗದರ್ಶನವೂ ಅತ್ಯಗತ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಇವರ ಪೋಷಕರಾದ ಬ್ಯಾಂಕ್ ವ್ಯವಸ್ಥಾಪಕರಾದ ಕುಮಾರ್ ಹಾಗೂ ಇವರ ಪ್ರೀತಿಯ ತಾಯಿ ಶೋಭಾರಾಣಿ ನೆಚ್ಚಿನ ಸಹೋದರಿ ಕುಮಾರಿ ಸದಾಕಾಲ ನೀರೆರೆಯುತ್ತಾ ಪ್ರೋತ್ಸಾಹ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ ಇವರ ಪ್ರತಿಭೆ ಅನಾವರಣಕ್ಕೆ ಶಾಲಾ ಸಿಬ್ಬಂದಿ ಸ್ನೇಹಿತರು ಇವರ ಗುರುಗಳು ಸಹಕಾರ ನೀಡುತ್ತಿದ್ದಾರೆ.
ಹೆಚ್ಚಿನ ಅಭ್ಯಾಸಕ್ಕಾಗಿ ಬೆಂಗಳೂರಿನ ನಾಟ್ಯ ಅಂಕುರ ಪರ್ಫಾರ್ಮೆನ್ಸ್ ಆರ್ಟ್ಸ್ ಇಲ್ಲಿ ಸಕಲಕಲ ಸಂಪನ್ನರಾದ ವಿದ್ವಾನ್ ಶ್ರೀ ನಾಗೇಶ್ ರವರ ಮಾರ್ಗದರ್ಶನದಲ್ಲಿ ಬಹಳ ಶ್ರದ್ಧಾಪೂರ್ವಕವಾಗಿ ಭರತನಾಟ್ಯ ತರಬೇತಿಯನ್ನು ಪಡೆಯುತ್ತಿದ್ದಾಳೆ. ಜೊತೆಗೆ ಗುರುಗಳಾದ ನಾಗೇಶ್ ರವರು ಲಾಲಿತ್ಯ ರವರ ಶ್ರದ್ಧಾ ಭಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರತಿಭೆಗೆ ಹಲವಾರು ಮುಖಗಳಿರುತ್ತವೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತಿನಂತೆ ಇವಳು ಕಿರಿಯ ವಯಸ್ಸಿಗೆ ಹಿರಿಯ ಸಾಧನೆ ಮಾಡಿರುವುದು ಇವಳು ಪಡೆದಿರುವ ಹತ್ತು ಹಲವಾರು ಪ್ರಶಸ್ತಿ ಪಾರಿತೋಷಕಗಳು ಸಾಕ್ಷಿಯಾಗಿವೆ. ಇವರ ಪ್ರತಿಭೆಯನ್ನು ನಾಡಿನ ಜಿಲ್ಲೆಯ ಹಲವಾರು ಪತ್ರಿಕೆಗಳಾದ ಉದಯವಾಣಿ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಕನ್ನಡಪ್ರಭ, ವಿಜಯ ಕರ್ನಾಟಕ, ಸಿಂಹಧ್ವನಿ, ರಾಜ್ಯ ಧರ್ಮ, ಇನ್ನು ಹೆಸರಾಂತ ಪತ್ರಿಕೆಗಳಲ್ಲಿ ಇವರ ಬಗ್ಗೆ ಅನೇಕ ಲೇಖನಗಳು ಬರೆದಿದ್ದಾರೆ. ಅಷ್ಟೇ ಅಲ್ಲದೆ ತೆಲಂಗಾಣ ರಾಜ್ಯದ ನಮಸ್ತೆ ತೆಲಂಗಣ ಪತ್ರಿಕೆಗಳಲ್ಲಿ ಇವಳ ನಾಟ್ಯ ಪ್ರತಿಭೆ ಬೆಳಕು ಕಂಡಿರುತ್ತದೆ.
ಇವರ ಸಾಧನೆಯ ಸಾಲಿನಲ್ಲಿ ಚಿಕ್ಕಬಳ್ಳಾಪುರದಲ್ಲಿ ನಡೆದ ರಾಷ್ಟ್ರೀಯ ಅಖಿಲಭಾರತ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಅದ್ಭುತವಾದ ನಾಟ್ಯ ಪ್ರದರ್ಶನ ನೀಡಿ, ರಾಷ್ಟ್ರೀಯ ನಾಟ್ಯ ಕಲಾರವಳಿ ಎಂಬ ಬಿರುದಿಗೆ ಪಾತ್ರರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಚಿಕ್ಕಮಗಳೂರಿನಲ್ಲಿ ನಡೆದಂತಹ ಉತ್ಸವದಲ್ಲಿ ನಾಟ್ಯ ಚತುರಎಂಬ ಬಿರುದು ಬಂದಿದೆ. ಇದಲ್ಲದೆ ರಾಯಲ್ಸ್ ಸಕ್ಸಸ್ ಇಂಟರ್ ನ್ಯಾಷನಲ್ ಬುಕ್ಸ್ ಆಫ್ ರೆಕಾರ್ಡ್ಸ್ ತೆಲಂಗಾಣ ರಾಜ್ಯದ ಹೈದರಾಬಾದ್’ನಲ್ಲಿ ಸಂಸ್ಥೆ ನೀಡುವ ಕ್ಲಾಸಿಕಲ್ ಡ್ಯಾನ್ಸ್ ಐಕಾನ್ ಎಂಬ ಪ್ರಶಸ್ತಿಯನ್ನು ಹೈದರಾಬಾದ್’ನಲ್ಲಿ ನಡೆದ ಅಂತಾರಾಷ್ಟ್ರೀಯ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿ ದಾಖಲೆ ಮಾಡಿ ಇಡೀ ಕರ್ನಾಟಕ ನಾಡಿನ ಕೀರ್ತಿ ಕುವರಿ ಯಾರಲ್ಲಿ ತಾನು ಒಬ್ಬಳ ಆಗಿರುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿಯಾಗಿರುತ್ತದೆ.
ಇಷ್ಟೇ ಅಲ್ಲದೆ ಪ್ರತಿಭೆ ಪ್ರದರ್ಶನಕ್ಕೆ ಕಲಾಭಿಮಾನಕ್ಕೆ ಯಾವುದೇ ಭಾಷೆ ಗಡಿಗಳ ವ್ಯಾಪ್ತಿ ಇರುವುದಿಲ್ಲ ಎಂದು ತಿಳಿದು ಈ ಪುಟ್ಟ ಕುವರಿ ಆಂಧ್ರದ ತಿರುಪತಿಯ ಗ್ಲೋಬಲ್ ಎಕ್ಸಲೆನ್ಸ್ ಬುಕ್ಸ್ ಆಫ್ ರೆಕಾರ್ಡ್ ಇಲ್ಲಿಗೂ ಸಹ ಸೇರ್ಪಡೆಯಾಗಿದ್ದಾಳೆ.
ಇವಳ ಪ್ರತಿಭೆಯನ್ನು ಗುರುತಿಸಿ ಹಾವೇರಿ ಜಿಲ್ಲೆಯ ಜನಮನ ಫೌಂಡೇಶನ್ ಸಂಸ್ಥೆ ಅವರು ನೀಡುವ ಕರ್ನಾಟಕ ಸ್ಟೇಟ್ಸ್ ಅಚೀವರ್ಸ್ ಅವಾರ್ಡ್ ನೀಡಿ ಗೌರವಿಸಿದೆ. ಇದಲ್ಲದೆ ನ್ಯಾಷನಲ್ ರೆಕಾರ್ಡ್ಸ್ ಸೂಪರ್ ಅಚೀವರ್ಡ್ ರೆಕಾರ್ಡ್ ಕೂಡ ಆಗಿದೆ.
ನಾಡಿನ ಉದ್ದಗಲಕ್ಕೂ ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಾ ಪ್ರಶಸ್ತಿ ಪಾರಿತೋಷಕಗಳನ್ನು ತನ್ನ ಮುಡಿಗೇರಿಸಿಕೊಳ್ಳುವ ತನ್ನ ಹೆತ್ತವರಿಗೆ ಹಾಗೂ ಗುರುಗಳಿಗೆ ಹಾಗೂ ಶಾಲೆಗೆ ಹೆಚ್ಚಿನ ಗೌರವವನ್ನು ತಂದು ಕೊಟ್ಟಿರುತ್ತಾಳೆ.
ಕೇವಲ 4ನೆಯ ವಯಸ್ಸಿಗೆ ಭರತನಾಟ್ಯ ಕಲಿಯಲು ಪ್ರಾರಂಭಿಸಿ ಕೇವಲ ನಾಲಕ್ಕೆ ವರ್ಷದಲ್ಲಿ ಅನೇಕ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿ ಪಾರಿತೋಷಕಗಳು ಗೊಂಚಲನ್ನೇ ತನ್ನದಾಗಿಸಿಕೊಂಡಿದ್ದಾಳೆ ಈ ಪೋರಿ. ಕೇವಲ ಸೀಮಿತಗೊಳಿಸಿ ಅಂಕಗಳು ಮಾನದಂಡ ವಾಗಿರುವ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಓದಿನೊಂದಿಗೆ ಕಲಾ ಪ್ರತಿಭೆಯ ವೃಕ್ಷವನ್ನು ಏರುತ್ತಿರುವ ಈ ಪುಟ್ಟ ಪೋರಿಯ ಕಲೆ ಮತ್ತಷ್ಟು ವಿಜೃಂಭಿಸಿ ಊರಿಗೆ, ಜಿಲ್ಲೆಗೆ, ನಾಡಿಗೆ ಮತ್ತಷ್ಟು ಕೀರ್ತಿ ಬರುವಂತಾಗಲಿ. ಜಗದ್ವಿಖ್ಯಾತ ಸುಂದರ ಕಲೆಗಳ ತವರೂರಾದ ಬೇಲೂರಿನ ಈ ಬಾಲ ಪ್ರತಿಭೆ ಹೆಮ್ಮರವಾಗಿ ಬೆಳೆಯಲಿ ಎಂದು ನಮ್ಮೆಲ್ಲರ ಮನಃಪೂರ್ವಕವಾಗಿ ಅಭಿನಂದಿಸಿ ಆಶಿಸೋಣ.
ಹೇಗೆ ನಾಟ್ಯರಾಣಿ ಶಾಂತಲೆ ಹೆಸರು ಇಂದಿಗೂ ಸಹ ಅಜರಾಮರವಾಗಿದೆ ಅದೇ ರೀತಿ ಬೇಲೂರಿನ ಪುಟ್ಟ ಕುವರಿ ಹೆಸರು ನಾಡಿನಲ್ಲೆಡೆ ಹರಡಲಿ ಎಂಬುದೇ ನಮ್ಮೆಲ್ಲರ ಆಶಯ.
ಲೇಖನ: ಕುಮಾರಸ್ವಾಮಿ
ಸಹಕಾರ: ಆರಾಧ್ಯ
Get in Touch With Us info@kalpa.news Whatsapp: 9481252093
Discussion about this post