No Result
View All Result
Rani KoHEnur Calls Transgender Bill “Absurd”, Questions Lawmakers in Explosive Podcast Interview
English Articles

Rani KoHEnur Calls Transgender Bill “Absurd”, Questions Lawmakers in Explosive Podcast Interview

by ಕಲ್ಪ ನ್ಯೂಸ್
April 9, 2026
0

Kalpa Media House  |  Mumbai | Artist, drag performer, and activist Rani KoHEnur (Sushant Divgikar) has ignited widespread conversation following...

Read moreDetails
RPF team Seized 40.495 Kgs Ganja at Ballari Railway station

RPF team Seized 40.495 Kgs Ganja at Ballari Railway station

April 7, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Extension of Special Train Services to Manage Summer Rush

April 7, 2026
Interior / upgradation of Next-Generation Amrit Bharat Coaches. Sample coach ready

Interior / upgradation of Next-Generation Amrit Bharat Coaches. Sample coach ready

April 6, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Special Train Between Bengaluru Cantt and Chennai

April 3, 2026
  • Advertise With Us
  • Grievances
  • About Us
  • Contact Us
Sunday, April 12, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಈ ಬಾಲಕಿಯ ವಯಸ್ಸು ಆರು, ಆದರೆ ಸಾಧನೆ ಮಾತ್ರ ನೂರಾರು

ವಿಶ್ವ ದಾಖಲೆಯ ಗರಿ ಮೂಡಿಸಿಕೊಂಡಿರುವ ಬಾಲ ನಾಟ್ಯ ಪ್ರತಿಭೆ ಮೈತ್ರಿ ಮಾದಗುಂಡಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
April 12, 2020
in Special Articles
0
ಈ ಬಾಲಕಿಯ ವಯಸ್ಸು ಆರು, ಆದರೆ ಸಾಧನೆ ಮಾತ್ರ ನೂರಾರು
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ವಯಸ್ಸು ಆರು ಸಾಧನೆ ನೂರಾರು ಮಾಡಿದ ಬೇಲೂರಿನ ನಾಟ್ಯ ಶಾಂತಲೆ, ನಾಟ್ಯ ಮಯೂರಿ ಬಹುಮುಖ ಪ್ರತಿಭೆ ಕು. ಮೈತ್ರಿ ಎಸ್ ಮಾದಗುಂಡಿ.
ಈ ಪ್ರತಿಭೆ ಮೂಲತಃ ಬಾಗಲಕೋಟ ಜಿಲ್ಲೆಯ ಗುಳೇದಗುಡ್ಡ ತಾಲ್ಲೂಕಿನವರಾದ ಡಾ. ಶಿವಕುಮಾರ ಮಾದಗುಂಡಿ ಮತ್ತು ಶ್ರೀಮತಿ ಶೃತಿ ಮಾದಗುಂಡಿ ದಂಪತಿಗಳ ಮೊದಲನೆ ಪುತ್ರಿ. ಈಗ ಇವರು ಹಾಸನ ಜಿಲ್ಲೆಯ ಶಿಲ್ಪಕಲೆಯ ತವರೂರಾದ ಬೇಲೂರು ತಾಲೂಕಿನಲ್ಲಿ ವಾಸಿಸುತ್ತಿದ್ದು, ಯುರೋಕಿಡ್ಸ್‌ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಯುಕೆಜಿ ವ್ಯಾಸಂಗ ಮಾಡುತ್ತಿದ್ದಾಳೆ.

ಈ ಪೋರಿ ಭರತನಾಟ್ಯ, ಪಾಶ್ಚಾತ್ಯ ನೃತ್ಯ, ಜಾನಪದ ನೃತ್ಯ, ಹಾಡುಗಾರಿಕೆ, ಇನ್ನು ಚಿತ್ರಕಲೆ ಇವಳ ನೆಚ್ಚಿನ ಹವ್ಯಾಸಗಳು. ಪ್ರತಿಭೆ ಯಾರೊಬ್ಬರ ಸ್ವತ್ತೂ ಅಲ್ಲ ಪ್ರತಿಭೆ ಎನ್ನುವಂತದ್ದು ನಾನಾ ರೀತಿಯಲ್ಲಿ ಅನಾವರಣಗೊಳ್ಳುತ್ತದೆ. ಕಲೆಗೆ ಎಷ್ಟು ಆಸಕ್ತಿಯನ್ನು ಕೊಡುತ್ತಾರೋ ಅಷ್ಟೇ ಆಸಕ್ತಿಯನ್ನು ತನ್ನ ಓದಿನಲ್ಲಿಯೂ ಕೊಡುತ್ತಾಳೆ. ಹೀಗೆ ಹಲವು ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಮಿಂಚುತ್ತಿರುವ ಬಾಲ ಪ್ರತಿಭೆ ಕು.ಮೈತ್ರಿ.

ಜೀವನದಲ್ಲಿ ಸಾಧನೆಗೆ ಅಸಂಖ್ಯಾತ ಹಾದಿಗಳು ಇವೆ ಮನಸ್ಸಿದ್ದರೆ ಮಾರ್ಗ ಎನ್ನುವಂತೆ. ನಾವು ಕಂಡ ಕನಸಿನೆಡೆಗೆ ಸತತ ಪ್ರಯತ್ನ ಪರಿಶ್ರಮದಿಂದ ಮುನ್ನಡೆದಲ್ಲಿ ಯಾವ ಕ್ಷೇತ್ರದಲ್ಲಾದರೂ ಯಶಸ್ಸು ಖಂಡಿತ. ಅಂತಹ ಸಾಧನೆ ಹಾದಿಯಲ್ಲಿರುವ ಒಂದು ಅಪರೂಪದ ಬಾಲ ಪ್ರತಿಭೆ ಆರರ ಪೋರಿ ಕು. ಮೈತ್ರಿ. ಈ ಪುಟ್ಟ ಪುಟಾಣಿ ಎಲ್ಲ ಮಕ್ಕಳಂತೆ ಆಟವಾಡುತ್ತಾ, ಚಿಂಟು ಟಿವಿ ಮತ್ತು ನಿಕ್ ಜೂನಿಯರ್ ನೋಡುತ್ತಲೇ ಹೋಂ ವರ್ಕ್ ಮಾಡುವ ಈ ಬಾಲ ಪ್ರತಿಭೆ ಉಳಿದವರಿಗಿಂತ ಹೆಚ್ಚಾಗಿ ತನ್ನಲ್ಲಿ ಅಗಾಧ ಪ್ರತಿಭೆಯನ್ನು ಅಡಗಿಸಿಕೊಂಡಿದ್ದಾಳೆ. ಈ ಬಾಲ ಪ್ರತಿಭೆ ಮುದ್ದು ಮೊಗದ ಈ ಬಾಲಕಿಯ ಬಹುಮುಖ ಪ್ರತಿಭೆಯ ಸಾಧನೆಗೆ ಒಂದು ಅಕ್ಷರ ರೂಪ ಕೊಟ್ಟು ನಿಮ್ಮ ಮುಂದೆ ಇಡುತ್ತಿದ್ದೇನೆ.

3 ವರ್ಷದವಳಿದ್ದಾಗ ಪುಟ್ಟ ಪುಟ್ಟ ಹೆಜ್ಜೆ ಇಡುವಾಗಲೇ ಹಾಡು ಕೇಳಿದಾಕ್ಷಣದಲ್ಲಿಯೇ ತನಗಿಷ್ಟ ಬಂದಂತೆ ಹೆಜ್ಜೆ ಹಾಕುತ್ತಿದ್ದ ಮೈತ್ರಿ ಪ್ರಸ್ತುತವಾಗಿ ನೃತ್ಯಾಂಜಲಿ ಕಲಾನಿಕೇತನ ನೃತ್ಯ ಶಾಲೆಯ ಗುರುಗಳಾದ ಶ್ರೀಮತಿ ಶೈಲಜಾ ಕುಮಾರ ಅವರಲ್ಲಿ ಭರತನಾಟ್ಯ ಮತ್ತು ಶ್ರೀವಿದ್ಯಾ ಅವರಲ್ಲಿ ಸಂಗೀತ ಅಭ್ಯಾಸವನ್ನು ಮಾಡುತ್ತಿರುವ ಈಕೆ ನಿರಂತರ ನೃತ್ಯ ಅಭ್ಯಾಸದಲ್ಲಿ ತೊಡಗಿಸಿಕೊಂಡು ಪರಿಪಕ್ವ ಹೆಜ್ಜೆಗಳನ್ನಿಟ್ಟು ಇದೀಗ ರಾಜ್ಯಮಟ್ಟದ ಮತ್ತು ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿದ್ದಾಳೆ. ಈಕೆಯ ನರ್ತನ ನವಿಲು ಕೂಡ ನಾಚಿಸುವಂತಹ ಮೋಹಕ ನೃತ್ಯ ಅದ್ಭುತ ಮುಖಭಾವ ಅನನ್ಯ ದೇಹ ಭಂಗಿ ಅಬ್ಬಾ!

ಈಕೆಯ ನೃತ್ಯವನ್ನು ನೋಡುತ್ತಿದ್ದರೆ ನಟರಾಜನೇ ಧರೆಗಿಳಿದು ಬಂದು ನರ್ತಿಸಿದಂತೆ ಭಾಸವಾಗುತ್ತಿದೆ. ಇವಳ ನೃತ್ಯಕ್ಕೆ ಮನಸೋತು ತಲೆದೂಗದವರೇ ಇಲ್ಲ. ಪ್ರೇಕ್ಷಕರಿಗೆ ಇಂತಹ ಭವ್ಯ ರಸದೌತಣವನ್ನು ಉಣಬಡಿಸುವ ಅದ್ಭುತ ನಾಟ್ಯ ಶಾಂತಲೆ ಕು. ಮೈತ್ರಿ. ಈಕೆ ಬಾಲ ಪ್ರತಿಭೆ ಆದರೆ ಸಾಧನೆ ಮಾತ್ರ ವಯಸ್ಸನ್ನು ಮೀರಿದ್ದು. ಮಗಳ ಸಾಧನೆಯಲ್ಲಿ ಹೆಚ್ಚೆಚ್ಚು ಖುಷಿ ಪಡುವ ಮೈತ್ರಿಗೆ ತನ್ನ ತಂದೆ ತಾಯಿಯೇ ಮೊದಲ ಗುರು. ಮೈತ್ರಿ ಪ್ರತಿಭಾವಂತೆ ಆಗಿದ್ದು ಈಕೆ ಮುಂದೆ ಒಂದು ದೊಡ್ಡ ಕಲಾವಿದೆ ಆಗಬಹುದು ಎಂದು ಆಕೆಯ ಹೆತ್ತವರಿಗೆ ಅರಿವಾಗಿ ಈಕೆಯನ್ನು ಕಲಾಕ್ಷೇತ್ರದಲ್ಲಿ ಸದಾ ಪ್ರೋತ್ಸಾಹಿಸುತ್ತಾ ಹೋದರು ಹಾಗಾಗಿ ಚಿಕ್ಕ ವಯಸ್ಸಿನಲ್ಲೇ ಕಾಲಿಗೆ ಗೆಜ್ಜೆ ಕಟ್ಟಿ ಆಟವಾಡುತ್ತಾ ಬೆಳೆದ ಈಕೆ. 6 ವರ್ಷದ ಪುಟ್ಟ ಪುಟಾಣಿ ಮೈತ್ರಿ ಎಸ್. ಮಾದಗುಂಡಿ.

ನೃತ್ಯ ಮಾಡುವುದರ ಜೊತೆಗೆ ಸಂಗೀತದಲ್ಲಿಯೂ ಹೆಚ್ಚು ಆಸಕ್ತಿ ಹೊಂದಿದ್ದಾಳೆ. ಈ ಬಾಲ ಪ್ರತಿಭೆ ಮೈತ್ರಿ ಚನ್ನರಾಯಪಟ್ಟಣ, ಹಾವೇರಿ, ಬೆಂಗಳೂರು, ತುಮಕೂರು, ಬಾಗಲಕೋಟ ಮತ್ತು ಮೈಸೂರು ಮುಂತಾದ ಜಿಲ್ಲೆಗಳಲ್ಲಿ ನೃತ್ಯದ ಜತೆ ಜತೆಗೆ ಹಾಡನ್ನು ಹಾಡಿರುತ್ತಾಳೆ. ಹಾಡುವುದರ ಜತೆಗೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ, ಜಿಲ್ಲಾ ಸಮ್ಮೇಳನ, ಅಖಿಲ ಭಾರತ ಮಕ್ಕಳ ಸಾಹಿತ್ಯ ಸಮ್ಮೇಳನ, ಶರಣ ಸಂಸ್ಕೃತಿ ಉತ್ಸವ, ಮಹಿಳಾ ಸಾಹಿತ್ಯ ಜಾತ್ರೆ, ಕನ್ನಡ ನುಡಿ ಸಂಭ್ರಮ ಹೀಗೆ ರಾಜ್ಯದಾದ್ಯಂತ ಸುಮಾರು 125 ಕ್ಕೂ ಅಧಿಕ ವೇದಿಕೆಗಳಲ್ಲಿ ನೃತ್ಯ ಮಾಡಿ ಎಲ್ಲರ ಹೆಗ್ಗಳಿಕೆಗೆ ಪಾತ್ರಾಳಾದ ಈಕೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ನಡೆದ ಅಖಿಲ ಕರ್ನಾಟಕ ತೃತೀಯ ಯುವಕವಿ ಸಮ್ಮೇಳನದಲ್ಲಿ ರಾಧಾಳ ನೃತ್ಯ, ಬಾಗಲಕೋಟ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಶ್ರೀ ಹೊಳೆಹುಚ್ಚೇಶ್ವರ ಮಠ ಕೋಟೆಕಲ್ಲದಲ್ಲಿ ಜರುಗಿದ ಗುಳೇದಗುಡ್ಡ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭರತನಾಟ್ಯ ನೃತ್ಯ ಮಾಡಿ ಅಲ್ಲಿನ ಸಾಹಿತ್ಯಾಭಿಮಾನಿಗಳಿಂದ ಮೆಚ್ಚುಗೆಯನ್ನು ಪಡೆದಿರುತ್ತಾಳೆ. ತುಮಕೂರು ಜಿಲ್ಲೆಯ ಕನ್ನಡ ಭವನದಲ್ಲಿ ನಡೆದ ಹನಿ ಹನಿ ಇಬ್ಬನಿ ಸಾಹಿತ್ಯ ಬಳಗ ಹಮ್ಮಿಕೊಂಡಿರುವ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಭಾವಗೀತೆ ಗಾಯನದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಭಾವಗೀತೆಗಳನ್ನು ಹಾಡುವುದರ ಜೊತೆಗೆ ಭರತನಾಟ್ಯವನ್ನು ಮಾಡಿದ್ದಕ್ಕಾಗಿ ಸನ್ಮಾನಿಸಲಾಗಿದೆ.

ಬೇಲೂರಿನಲ್ಲಿ ನಡೆದ ಕೋಟೋರೋತ್ಸವದಲ್ಲಿ ಚನ್ನಕೇಶವ ದೇವಾಲಯದ ಪ್ರಾಂಗಣದಲ್ಲಿ ಭರತನಾಟ್ಯ ಮಾಡಿದ ಅನುಭವ ಪಡೆದಿದ್ದಾಳೆ. ಇತ್ತೀಚೆಗೆ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಚನ್ನರಾಯಪಟ್ಟಣ ಹಾಸನ ಜಿಲ್ಲೆಯಲ್ಲಿ ನಡೆದ ಪ್ರಥಮ ಅಖಿಲ ಭಾರತ ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಭರತನಾಟ್ಯ ಪ್ರದರ್ಶನ ನೀಡಿರುತ್ತಾರೆ. ಬೆಣ್ಣೆ ನಗರಿ ದಾವಣಗೆರೆಯಲ್ಲಿ ನಡೆದ ದೈವಜ್ಞ ಸಂಭ್ರಮ-2020ದ ಉದ್ಘಾಟನಾ ಸಮಾರಂಭದಲ್ಲಿ ಅದ್ಭುತವಾದಂತಹ ಭರತನಾಟ್ಯ ಪ್ರದರ್ಶನ ನೀಡುವುದರ ಜತೆಗೆ ಪಾರು ಧಾರಾವಾಹಿಯ ನಟರಾದ ಆದಿತ್ಯ ಮತ್ತು ಉಘೇ ಉಘೇ ಮಾದೇಶ್ವರ ಧಾರಾವಾಹಿಯ ಬಾಲ ನಟರಾದ ಅಮೋಘ ಕೃಷ್ಣ ಅವರಿಂದ ಮೆಚ್ಚುಗೆ ವ್ಯಕ್ತಪಡಿಸಿದರು.

ಹಳೆಬೀಡು ಪುಷ್ಪಗಿರಿ ಮಹಾ ಸಂಸ್ಥಾನದಲ್ಲಿ ನಡೆದ ಲಕ್ಷದೀಪೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ವಾಗತ ನೃತ್ಯ ಪ್ರದರ್ಶನ. ಹಾವೇರಿ ಜಿಲ್ಲೆಯ ಅಕ್ಕಿ ಆಲೂರಿನಲ್ಲಿ ನಡೆದ 29ನೆಯ ಕನ್ನಡ ನುಡಿ ಸಂಭ್ರಮದಲ್ಲಿ ಅದ್ಭುತವಾದಂತಹ ಭರತನಾಟ್ಯ ಪ್ರದರ್ಶನ ನೀಡುವುದರೊಂದಿಗೆ ಜೊತೆ ಜೊತೆಯಲಿ ಧಾರಾವಾಹಿಯ ನಟಿಯಾದ ಅನು ಅವರಿಂದ ಮೆಚ್ಚುಗೆಗೆ ಪಾತ್ರರಾದರು. ಸಕ್ಕರೆ ನಾಡಿನಲ್ಲಿ ಪಂಚ ಜಿಲ್ಲಾ ಬೆಳಕು ಸಾಹಿತ್ಯ ಸಮ್ಮೇಳನದಲ್ಲಿ ಭರತನಾಟ್ಯ. ಕೋಟೆಕಲ್ಲ ಜಾತ್ರಾ ಮಹೋತ್ಸವದಲ್ಲಿ ಹಾಸ್ಯ ಸಂಜೆಯ ಜತೆಗೆ ಅದ್ಭುತ ನೃತ್ಯ ಪ್ರದರ್ಶನ ನೀಡಿದ್ದಾಳೆ. ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವದಲ್ಲಿ ಕರ್ನಾಟಕ ಸರ್ಕಾರದ ಗೃಹ ಸಚಿವರಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ಮೈತ್ರಿಯ ನೃತ್ಯವನ್ನು ನೋಡಿ ಶಹಬ್ಬಾಶ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹೀಗೆ ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಭರತನಾಟ್ಯ ಪ್ರದರ್ಶನ ನೀಡುವುದರ ಜೊತೆಗೆ ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರದ ಗಡಿ ಭಾಗ ಚಡಚಣ, ತಮಿಳುನಾಡು ರಾಜ್ಯಗಳಲ್ಲೂ ತನ್ನ ವಿಶೇಷ ಪ್ರತಿಭೆಯ ಮೂಲಕ ಕನ್ನಡ ಕಂಪನ್ನು ಪಸರಿಸಿದ್ದಾಳೆ.

ವಿಶೇಷ ಗಮನ ಸೆಳೆದ ನೃತ್ಯ ರೂಪಕಗಳು
ಕು. ಮೈತ್ರಿ ಮಾದಗುಂಡಿ ಈ ಬಾಲ ಪ್ರತಿಭೆ ಶಾಂತಲಾ ಕಲಾ ಕುಟೀರದ ನೃತ್ಯ ಶಾಲೆಯ ಭರತನಾಟ್ಯದ ಕಲಿಕಾ ಹಂತದಲ್ಲೇ ಯು ಟೂಬ್ ನೋಡುತ್ತಲೆ ಅನೇಕ ಹಾಡುಗಳಿಗೆ ನೃತ್ಯ ಕಲಿತು ಹೆಜ್ಜೆ ಹಾಕಲು ಪ್ರಾರಂಭಿಸಿದಳು. ಈಗಾಗಲೇ ಅನೇಕ ಕಡೆ ಸೋಲೋ ಮತ್ತು ಸಮೂಹ ನೃತ್ಯ ಕಾರ್ಯಕ್ರಮ ಕೊಟ್ಟಿದ್ದಾಳೆ. ಮೈತ್ರಿಯ ವಿಶೇಷ ಏನೆಂದರೆ ಭರತನಾಟ್ಯ ಮಾಡುವಾಗ ಅನೇಕ ಪ್ರಾಪರ್ಟೀಸ್’ಗಳನ್ನು ಬಳಸಿಕೊಂಡು ನೃತ್ಯ ಮಾಡುವಾಗ ಸದಾ ಚಲನಶೀಲವಾಗುವ ಮೈತ್ರಿ ಅವರ ಕಣ್ಣುಗಳು ನೋಡುಗರನ್ನು ಆಕರ್ಷಿಸುತ್ತಿತ್ತು. ಆ ಮುಗ್ಧ ಕಣ್ಣುಗಳ ನೋಟ ಸೊಂಟದಲ್ಲಿ ಬೆತ್ತದ ರಿಂಗ್, ಕೈಯಲ್ಲಿ ಎರಡು ದೀಪಗಳು, ಗ್ಲಾಸುಗಳ ಮೇಲೆ ನಿಂತು ನೃತ್ಯ , ತಲೆಯ ಮೇಲೆ ದೀಪವನ್ನು ಇಟ್ಟುಕೊಂಡು ಮಣ್ಣಿನ ಮಡಕೆಯ ಮೇಲೆ ನಿಂತು ವಿವಿಧ ಭಂಗಿಗಳಲ್ಲಿ ನೃತ್ಯ, ಮತ್ತು ಮೊಳೆಯ ಸ್ಟ್ಯಾಂಡ್’ನ ಮೇಲೆ ನಿಂತು ಕೈಯಲ್ಲಿ ತ್ರಿಶೂಲವನ್ನು ಹಿಡಿದುಕೊಂಡು ಯಾವ ಭಯವೂ ಇಲ್ಲದೆ ಸಲೀಸಾಗಿ ಪ್ರದರ್ಶಿಸಿ ಸುಂದರ ಹಾವಭಾವಗಳಿಂದ ನೃತ್ಯವನ್ನು ಮಾಡಿ ಎಲ್ಲರ ಗಮನ ಸೆಳೆಯುವುದರ ಜತೆಗೆ ಪ್ರೇಕ್ಷಕರು ಮಂತ್ರಮುಗ್ಧರಾಗಿ ವೀಕ್ಷಿಸುತ್ತಾರೆ. ಇವಳು ಚಿಕ್ಕವಯಸ್ಸಿನಲ್ಲೇ ನೃತ್ಯ ರೂಪಕದಲ್ಲಿ ಪಾತ್ರಗಳಿಗೆ ಜೀವತುಂಬಿ ಅಭಿನಯಿಸುತ್ತಾಳೆ ಕಷ್ಟ ಪಟ್ಟು ಕಲಿಯುವುದಕ್ಕಿಂತ ಹೆಚ್ಚು ಇಷ್ಟ ಪಟ್ಟು ಕಲಿಯುತ್ತಾಳೆ ಇದೇ ಇವಳ ವಿಶೇಷ.

ನಾಟ್ಯಕ್ಕೆ ಒಲಿದ ಪ್ರಶಸ್ತಿ ಪುರಸ್ಕಾರಗಳು
ಮೈತ್ರಿಯ ವಿಶೇಷ ಪ್ರತಿಭೆಗಾಗಿ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ವಿಜಯಪುರ ಜಿಲ್ಲೆಯ ಚಡಚಣದಲ್ಲಿ ನಡೆದ ರಾಜ್ಯ ಯುವ ಬರಹಗಾರರ ಒಕ್ಕೂಟದ ವತಿಯಿಂದ 3ನೆಯ ರಾಜ್ಯಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ರಾಜ್ಯ ಯುವ ಬರಹಗಾರರ ಒಕ್ಕೂಟದ ರಾಜ್ಯಾಧ್ಯಕ್ಷರು ಇವಳ ಪ್ರತಿಭೆಯನ್ನು ಗುರುತಿಸಿ ಬಾಲ ಪ್ರತಿಭಾ ಪುರಸ್ಕಾರ ನೀಡಿದ್ದಾರೆ. ಬೆಂಗಳೂರು ನಗರದ ರವೀಂದ್ರ ಕಲಾಭವನ ನಯನ ಸಭಾಂಗಣದಲ್ಲಿ ನಡೆದ ಕರ್ನಾಟಕ ಸಾಹಿತ್ಯ ಸಂಸ್ಕೃತಿ ಕಲಾ ಸಂಭ್ರಮದ ಸಮ್ಮೇಳನದಲ್ಲಿ ಸಿರಿಗನ್ನಡ ಬಾಲ ನಾಟ್ಯ ಶಿರೋಮಣಿ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾಳೆ.

ರಾಷ್ಟ್ರೀಯ ನಾಟ್ಯ ಸಂಗೀತ ಪ್ರತಿಭಾ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮೊದಲ ರಾಷ್ಟ್ರಪ್ರಶಸ್ತಿಯಾದ ಸಿರಿಗನ್ನಡ ರಾಷ್ಟ್ರೀಯ ಕಲಾ ರತ್ನ ರಾಷ್ಟ್ರ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಹಾಸನದ ಮಾಣಿಕ್ಯ ಪ್ರಕಾಶನ (ರಿ) ಅಧ್ಯಕ್ಷರು ಮತ್ತು ಸಾಹಿತಿಗಳಾದ ಕೊಟ್ರೇಸ್ ಉಪ್ಪಾರ ಅವರು ರಾಜ್ಯ ಮಟ್ಟದ ಕವಿ ಕಾವ್ಯ ಸಂಭ್ರಮದಲ್ಲಿ ರಾಜ್ಯಮಟ್ಟದ ಹೊಯ್ಸಳ ಸಾಂಸ್ಕೃತಿಕ ಪ್ರಶಸ್ತಿಯನ್ನು ನಾಡಿನ ಹೆಸರಾಂತ ಸಾಹಿತಿಗಳಾದ ಡಾ.ಸಿ.ಪಿ.ಕೆ. ಅವರಿಂದ ನೀಡಿ ಅಭಿನಂದಿಸಲಾಯಿತು.

ಹುಬ್ಬಳ್ಳಿಯ ಚೇತನ ಪ್ರಕಾಶನದ ವತಿಯಿಂದ ಪ್ರತಿಭಾ ಚೇತನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಳ್ಳಾರಿಯ ಸಮಾಜ ವಿಜ್ಞಾನ ವೇದಿಕೆಯ ವತಿಯಿಂದ ರಾಜ್ಯಮಟ್ಟದ ಕರುನಾಡ ಬಾಲ ರತ್ನ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಬೆಂಗಳೂರಿನಲ್ಲಿ ನಡೆದ ಅಖಿಲ ಕರ್ನಾಟಕ ಬೆಳಕು ಸಾಹಿತ್ಯ ಸಮ್ಮೇಳನದಲ್ಲಿ ಅಣ್ಣಪ್ಪ ಮೇಟಿಗೌಡರು, ಬೆಳಕು ರಾಜ್ಯಮಟ್ಟದ ಬೆಳಕಿನ ಬೆಳ್ಳಿ ಚುಕ್ಕಿ ರಾಜ್ಯ ಪ್ರಶಸ್ತಿ ನೀಡಲಾಯಿತು. ಸಿರಿಗನ್ನಡ ರಾಷ್ಟ್ರೀಯ ನಾಟ್ಯ ಶಾಂತಲೆ ರಾಜ್ಯ ಪ್ರಶಸ್ತಿ, ಬೆಂಗಳೂರಿನ ಮಂಜುಶ್ರೀ ಸಾಂಸ್ಕೃತಿಕ ಸೇವಾ ಟ್ರಸ್ಟ್‌ ಅಧ್ಯಕ್ಷರಾದ ಮಂಜುಳ ಅವರು ಈ ಪುಟಾಣಿ ನೃತ್ಯವನ್ನು ಪರಿಗಣಿಸಿ ಮಹಿಳಾ ಸಾಧಕ ರತ್ನ ರಾಜ್ಯ ಪ್ರಶಸ್ತಿಯನ್ನು ಸಾಲು ಮರದ ತಿಮ್ಮಕ್ಕ ಅವರಿಂದ ನೀಡಿ ಗೌರವಿಸಲಾಯಿತು.

ಧಾರವಾಡದಲ್ಲಿ ನಡೆದ ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಕರುನಾಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಹೆಬ್ಬಗೋಡೆಯಲ್ಲಿ ನಡೆದ ಮೇಘ ಮೈತ್ರಿ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೇಘ ಮೈತ್ರಿ ಬಾಲ ಪುರಸ್ಕಾರ ಪ್ರಶಸ್ತಿ ಯನ್ನು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷರಾದ ಮಂಜಮ್ಮ ಜೋಗತಿ ಅವರಿಂದ ನೀಡಿ ಗೌರವಿಸಲಾಯಿತು. ಬೆಂಗಳೂರಿನಲ್ಲಿ ನಡೆದ ಪುಟ್ಟರಾಜ ಗವಾಯಿಗಳ ಜನ್ಮದಿನೋತ್ಸವ ಅಂಗವಾಗಿ ರಾಜ್ಯ ಕಲಾರತ್ನ ಪ್ರಶಸ್ತಿ ನೀಡಲಾಯಿತು. ನಯನ ಸಭಾಂಗಣದಲ್ಲಿ ನಡೆದ ಸುರೇಶ್ ವಾಘಮೋಡೆ ಅವರ ನೇತೃತ್ವದಲ್ಲಿ ನಡೆದ ಮಹಿಳಾ ದಿನಾಚರಣೆಯಂದು ಕರ್ನಾಟಕ ಜೀವಮಾನ ಶ್ರೇಷ್ಠ ಬಾಲಕಲಾ ವಿದ್ಯಾಭೂಷಣ ಪ್ರಶಸ್ತಿ ನೀಡಲಾಯಿತು. ನೆಲಮಂಗಲದ ನಮ್ಮ ಕರ್ನಾಟಕ ಜನಸೈನ್ಯ ವತಯಿಂದ ನಡೆದ ಕನ್ನಡ ಹಬ್ಬ ಅದ್ದೂರಿ ಕಾರ್ಯಕ್ರಮದಲ್ಲಿ ಕರುನಾಡ ಕಣ್ಮಣಿ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ನೀಡಿ ಅಭಿನಂದಿಸಲಾಗಿದೆ.

ಧಾರವಾಡದ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಲೇಖಕಿಯರ ರಾಜ್ಯಮಟ್ಟದ 4ನೆಯ ಸಮ್ಮೇಳನದಲ್ಲಿ ಮಕ್ಕಳ ಪ್ರತಿಭಾ ಪುರಸ್ಕಾರ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕರ್ನಾಟಕ ಜನಸ್ಪಂದನ ಟ್ರಸ್ಟ್‌ (ರಿ) ರಾಜ್ಯಾಧ್ಯಕ್ಷರಾದ ಹನುಮಂತಪ್ಪ ಮೇಡೆಗಾರ ಅವರು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ನಡೆದ ಜೀವಮಾನ ಶ್ರೇಷ್ಠ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿಯಾದ ಕಲಾರತ್ನ ರಾಷ್ಟ್ರೀಯ ಪ್ರಶಸ್ತಿ ಯನ್ನು ಇದು ಎರಡನೇ ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾಳೆ. ಇತ್ತೀಚೆಗೆ ಪಡೆದ ಪ್ರಶಸ್ತಿಯಾಗಿದೆ. ಈ ಪೈಕಿ ಇತ್ಯಾದಿಗಳು ಪ್ರಮುಖವಾದವು.

ವಿಶ್ವ ದಾಖಲೆಯ ಗರಿ
ಹಾವೇರಿಯ ಜನಮನ ಫೌಂಡೇಶನ್ ಸಂಸ್ಥಾಪಕರಾದ ಡಾ. ಅಂಬಿಕಾ ಹಂಚಾಟೆಯವರು ಮೈತ್ರಿಯ ನೃತ್ಯ ಕ್ಷೇತ್ರದಲ್ಲಿಯ ಸಾಧನೆಯನ್ನು ಪರಿಗಣಿಸಿ ಕರ್ನಾಟಕ ಅಚಿವರ್ಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ದಾಖಲಿಸಿಕೊಂಡಿರುವ ಪುಟಾಣಿ ಮೈತ್ರಿ. ಈ ಪಟ್ಟಿಗೆ ಸೇರಿದ ಜಿಲ್ಲೆಯ ಪ್ರಪ್ರಥಮ ಭರತನಾಟ್ಯ ಕಲಾವಿದೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಾಗೆಯೇ ಚಿಕ್ಕವಯಸ್ಸಿನಲ್ಲೇ ರೆಕಾರ್ಡ್’ನಲ್ಲಿ ತನ್ನ ಹೆಸರು ದಾಖಲಿಸಿದ್ದ ಬೇಲೂರಿನ ನಾಟ್ಯ ಪ್ರವೀಣೆ ಕು. ಮೈತ್ರಿ ಎಸ್. ಮಾದಗುಂಡಿ.

ಕರ್ನಾಟಕ ರಾಜ್ಯ ಯೂನಿವರ್ಸಲ್ ಅಚೀವರ್ಸ ಬುಕ್ ಆಫ್ ರೆಕಾರ್ಡ್ ನ ರಾಜ್ಯಾಧ್ಯಕ್ಷರಾದ ಡಾ. ಮಂಜುನಾಥ್ ಬಾರಗೇರ ಅವರು ಮೈತ್ರಿಯ ನೃತ್ಯವನ್ನು ಗಮನಿಸಿ ವಿಶ್ವ ದಾಖಲೆಯ ಪಟ್ಟಿಗೆ ದಾಖಲಿಸಿಕೊಳ್ಳಲು ಕಾರಣರಾದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಶಿಕಾ ಆನಂದ್ ನಟಿ ಹಾಗೂ ಬಿಗ್ ಬಾಸ್ ಖ್ಯಾತಿ ಮತ್ತು ಗೌರವಾನ್ವಿತ ಅತಿಥಿಗಳು ವಿ.ನವಿಂದರ್ ಮೂರ್ತಿ, ಆರ್. ರಾಜಪಾಂಡಿಯನ್ ನಟರು ಸರವಣನ್ ಚಂದ್ರನ್ ಸಾಮಾಜಿಕ ಕಾರ್ಯಕರ್ತ ಮತ್ತು ಸಂಯೋಜಕ, ಗಾಂಧಿ ಕುಣಗಲ್, ಡಾ. ಬಾಬು ಬಾಲ ಕೃಷ್ಣನ್ ಮತ್ತು ಉಮಾ ಮತ್ತಿತರು ಹಾಜರಿದ್ದರು. ಮೈತ್ರಿ ತಮಿಳುನಾಡಿನ ಚೆನ್ನೈನಲ್ಲಿ ಯೂನಿವರ್ಸಲ್ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ಮತ್ತು ಫ್ಯೂಚರ್ ಕಲಾಂ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರು ದಾಖಲಿಸಿಕೊಂಡಿರುವ ಅದ್ಭುತ ಪುಟಾಣಿ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಈ ಎರಡು ವಿಶ್ವದಾಖಲೆ ಪಟ್ಟಿಗೆ ಸೇರಿದ ಕರ್ನಾಟಕ ರಾಜ್ಯದ ಪ್ರಪ್ರಥಮ ಭರತನಾಟ್ಯ ಕಲಾವಿದೆ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ. ತನ್ನ ಹೆಸರು ದಾಖಲಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಛಾಪು ಮೂಡಿಸಿ ವಿಶ್ವ ದಾಖಲೆಯ ಪ್ರಶಸ್ತಿ ಪಡೆದಿದ್ದಾಳೆ. ಇವೆಲ್ಲಾ ಸಾಧನೆಯನ್ನು ಐದುವರೇ ವರ್ಷ ಇರುವಾಗಲೇ ಮಾಡಿರುತ್ತಾಳೆ. ಅನೇಕ ಧಾರಾವಾಹಿಗಳಲ್ಲಿ ಬಾಲನಟಿ ಆಗಲು ಅನೇಕ ಅವಕಾಶಗಳು ಸಹ ಒದಗಿ ಬಂದಿರುತ್ತವೆ.


ಇತ್ತೀಚೆಗೆ ನಡೆದ ಬೇಲೂರು ತಾಲೂಕು ಎಂಟನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕುಮಾರಿ ಮೈತ್ರಿಯ ಭರತನಾಟ್ಯ ಕ್ಷೇತ್ರವನ್ನು ಪರಿಗಣಿಸಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು, ಗೌರವಾಧ್ಯಕ್ಷರು, ಕಾರ್ಯದರ್ಶಿಗಳು ಮುಂತಾದವರು ಗೌರವಪೂರ್ವಕವಾಗಿ ಸನ್ಮಾನಿಸಲಾಗಿದೆ.

ಮೈತ್ರಿಯ ಈ ಎಲ್ಲಾ ಸಾಧನೆಯನ್ನು ಪರಿಗಣಿಸಿದ ಯುರೋಕಿಡ್ಸ್‌ ಶಾಲೆಯ ಅಧ್ಯಕ್ಷರು, ಶಾಲಾ ಮುಖ್ಯೋಪಾಧ್ಯಾಯರು ಮತ್ತು ಸಹಶಿಕ್ಷಕರು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಮೈತ್ರಿಯನ್ನು ಗುರುತಿಸಿದ ರಾಜ್ಯದ ಅನೇಕ ಸಂಘ ಸಂಸ್ಥೆಗಳು ಬೇಲೂರಿನ ವೇಲಾಪುರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಬೇಲೂರು ತಾಲೂಕು ಪರಿಷತ್, ಹಾಸನ ಜಿಲ್ಲಾ ಪರಿಷತ್, ರಾಜ್ಯ ಯುವ ಬರಹಗಾರರ ಒಕ್ಕೂಟ, ಕಮತಗಿಯ ಮೇಘಮೈತ್ರಿ ಕನ್ನಡ ಮತ್ತು ಸಾಹಿತ್ಯ ವೇದಿಕೆ, ಬೆಂಗಳೂರಿನ ಬೆಳಕು ಟ್ರಸ್ಟ್‌, ಮಂಗಳೂರಿನ ಸಾಹಿತ್ಯ ಚಿಗುರು, ಮೈಸೂರಿನ ಗ್ರಾಮಾಂತರ ಬುದ್ದಿಜೀವಿ ಬಳಗ ಮತ್ತು ಹಾಸನದ ಕವಿವೃಕ್ಷ ಬಳಗ. ಹಾಸನದ ಮಾಣಿಕ್ಯ ಪ್ರಕಾಶನ, ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹೀಗೆ ಅನೇಕ ಸಂಘ ಸಂಸ್ಥೆಗಳು ಗುರುತಿಸಿ ಸನ್ಮಾನಿಸಿದ್ದಾರೆ. ಇತ್ತೀಚೆಗೆ ಹಾಸನ ಜಿಲ್ಲೆಯ ಸೂಪರ್ ಕಿಡ್ಸ್‌ ಚಾನೆಲ್ ಸೆಲೆಬ್ರಿಟಿಯಾಗಿ ಆಯ್ಕೆಯಾಗಿರುತ್ತಾಳೆ. ಇವಳ ಈ ಪ್ರತಿಭೆಯ ಸಂಪೂರ್ಣ ಶ್ರೇಯಸ್ಸು ತಂದೆ ತಾಯಿ ಅವರಿಗೆ ಸಲ್ಲುತ್ತದೆ.

ಒಟ್ಟಾರೆಯಾಗಿ ತಮ್ಮದೇ ಕೆಲಸ ಕಾರ್ಯ ಒತ್ತಡಗಳಲ್ಲಿ ತಮ್ಮ ಮಕ್ಕಳ ಕಾರ್ಯ ಚಟುವಟಿಕೆಗಳನ್ನು ಗಮನಿಸದ ಹೆತ್ತವರಿರುವ ಈ ಕಾಲದಲ್ಲಿ ಮಗಳಿಗಾಗಿ ತಮ್ಮ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಅವಳ ನೃತ್ಯಕ್ಕೆ ಬೆನ್ನೆಲುಬಾಗಿ ನಿಂತ ಮೈತ್ರಿ ತಂದೆ ಡಾ. ಶಿವಕುಮಾರ್ ಮತ್ತು ತಾಯಿ ಶ್ರುತಿ ಅವರ ಅವಿರತ ಶ್ರಮ ಮೈತ್ರಿ ಪಾಲಿಗೆ ವರದಾನ. ಇಂತಹ ತಂದೆ ತಾಯಿಯನ್ನು ಪಡೆಯಬೇಕಾದರೆ ಪೂರ್ವ ಜನುಮದ ಭಾಗ್ಯವೇ ಸರಿ ಎನ್ನುತ್ತಾಳೆ ಮೈತ್ರಿ. ಅತಿ ಚಿಕ್ಕ ವಯಸ್ಸಿನಲ್ಲಿಯೇ ಇಷ್ಟೊಂದು ಸಾಧನೆಯನ್ನು ಮಾಡಿದ್ದಾಳೆ ಇಂತಹ ಅಸಾಮಾನ್ಯ ಪ್ರತಿಭೆ ಹೊಂದಿರುವ ಬೇಲೂರಿನ ಹೆಮ್ಮೆಯ ಪುಟಾಣಿಗೆ ನಿಮ್ಮೆಲ್ಲರ ಪ್ರೋತ್ಸಾಹ ಆಶೀರ್ವಾದ ಸದಾ ಇರಲಿ. ಅವಳ ಈ ನೃತ್ಯ ಸೇವೆಯ ನೋಡುವ ಭಾಗ್ಯ ನಮಗೆ ಯಾವಾಗಲೂ ಸಿಗಲಿ ಎಂದು ಹಾರೈಸೋಣ ಶುಭ ಹಾರೈಕೆಗಳೊಂದಿಗೆ!

ಲೇಖನ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ

Get in Touch With Us info@kalpa.news Whatsapp: 9481252093

Tags: BelurBharatanatyamDanceHalebeeduKannadaNewsWebsiteLatestNewsKannadaMaitri Madagundiಜಾನಪದ ನೃತ್ಯನಾಟ್ಯ ಪ್ರತಿಭೆ ಮೈತ್ರಿ ಮಾದಗುಂಡಿನೃತ್ಯಬೇಲೂರುಭರತನಾಟ್ಯಶಿಲ್ಪಕಲೆಹಳೆಬೀಡುಹಾಸನ
Share263Tweet123Send
Previous Post

18 ಪುರಾಣಗಳಲ್ಲಿ ಯಾವುದು ಏನು ಹೇಳುತ್ತದೆ?: ಮಾಲಿಕೆ-16 ಮತ್ಸ್ಯ ಪುರಾಣ

Next Post

ಭಗವಂತ ನೀಡಿದ ನೀರನ್ನು ಸಂರಕ್ಷಿಸದೇ ಸ್ವಯಂ ದ್ರೋಹ ಮಾಡಿಕೊಳ್ಳುತ್ತಿದ್ದೇವೆ: ಸಚಿವ ಈಶ್ವರಪ್ಪ ಅಭಿಮತ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಭಗವಂತ ನೀಡಿದ ನೀರನ್ನು ಸಂರಕ್ಷಿಸದೇ ಸ್ವಯಂ ದ್ರೋಹ ಮಾಡಿಕೊಳ್ಳುತ್ತಿದ್ದೇವೆ: ಸಚಿವ ಈಶ್ವರಪ್ಪ ಅಭಿಮತ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಏ.16ರಂದು ಬೃಹತ್ ರ್‍ಯಾಲಿ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಏ.16ರಂದು ಬೃಹತ್ ರ್‍ಯಾಲಿ

April 11, 2026
ಶ್ರೀ ರವಿಶಂಕರ್ ಗುರೂಜಿಯವರ 70ನೇ ಜನ್ಮೋತ್ಸವ | ಏ.14ರಿಂದ ಆರು ದಿನ ವಿಶೇಷ ಸುದರ್ಶನ ಕ್ರಿಯಾ ಶಿಬಿರ

ಶ್ರೀ ರವಿಶಂಕರ್ ಗುರೂಜಿಯವರ 70ನೇ ಜನ್ಮೋತ್ಸವ | ಏ.14ರಿಂದ ಆರು ದಿನ ವಿಶೇಷ ಸುದರ್ಶನ ಕ್ರಿಯಾ ಶಿಬಿರ

April 11, 2026
ಉತ್ತಮ ವ್ಯಕ್ತಿತ್ವ ರೂಪಿಸುವುದೇ ಎನ್‌ಎಸ್‌ಎಸ್‌ ಮುಖ್ಯ ಉದ್ದೇಶ: ಶುಭ ಮರವಂತೆ ಅಭಿಪ್ರಾಯ

ಉತ್ತಮ ವ್ಯಕ್ತಿತ್ವ ರೂಪಿಸುವುದೇ ಎನ್‌ಎಸ್‌ಎಸ್‌ ಮುಖ್ಯ ಉದ್ದೇಶ: ಶುಭ ಮರವಂತೆ ಅಭಿಪ್ರಾಯ

April 11, 2026
ಪಾರಂಪರಿಕ ಕಲೆಯ ಪುನರುಜ್ಜೀವನ ಅಭಿನಂದನೀಯ: ಹೊಂದಾಸನ ಧರ್ಮಪ್ಪ ಮೆಚ್ಚುಗೆ

ಪಾರಂಪರಿಕ ಕಲೆಯ ಪುನರುಜ್ಜೀವನ ಅಭಿನಂದನೀಯ: ಹೊಂದಾಸನ ಧರ್ಮಪ್ಪ ಮೆಚ್ಚುಗೆ

April 11, 2026
ಕೃತಕ ಬುದ್ಧಿಮತ್ತೆ ಪ್ರಯೋಜನ ಪಡೆಯುವಾಗ ಎಚ್ಚರಿಕೆ ಅಗತ್ಯ: ಪ್ರೊ. ಶರತ್  ಅನಂತಮೂರ್ತಿ

ಕೃತಕ ಬುದ್ಧಿಮತ್ತೆ ಪ್ರಯೋಜನ ಪಡೆಯುವಾಗ ಎಚ್ಚರಿಕೆ ಅಗತ್ಯ: ಪ್ರೊ. ಶರತ್  ಅನಂತಮೂರ್ತಿ

April 11, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL