ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಗ್ರಾಮಾಂತರ ಪೊಲೀಸ್ ಇನ್ಸ್’ಪೆಕ್ಟರ್ ಸಿ.ಜೆ. ಚೈತನ್ಯ ಸೇರಿ ಜಿಲ್ಲೆ ಮೂವರು ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.
Also Read: ನೀರಾವರಿ ಯೋಜನೆಗಳಿಗೆ ಜೆಡಿಎಸ್ ಕೊಡುಗೆ ಅಪಾರ: ಮಾಜಿ ಸಚಿವ ರೇವಣ್ಣ
ರಾಜ್ಯದಾದ್ಯಂತ ಒಟ್ಟು 179 ಪಿಐಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಭದ್ರಾವತಿ ಗ್ರಾಮಾಂತರ ಪಿಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿ.ಜೆ. ಚೈತನ್ಯ ಅವರನ್ನು ಬೆಂಗಳೂರಿನ ಅಶೋಕ ನಗರ ಠಾಣೆಗೆ, ಶಿವಮೊಗ್ಗ ಸಿಇಎನ್ ಠಾಣೆಯ ಕೆ.ಟಿ. ಗುರುರಾಜ್ ಅವರನ್ನು ಕಡೂರು ಪೊಲೀಸ್ ತರಬೇತಿ ಕೇಂದ್ರಕ್ಕೆ ಹೊಸನಗರ ಸರ್ಕಲ್’ನ ಜಿ.ಕೆ. ಮಧುಸೂಧನ್ ಅವರನ್ನು ಬೆಂಗಳೂರಿನ ಸದಾಶಿವನಗರ ಸಂಚಾರಿ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
Also Read: ದೇಶದ ಎಲ್ಲ ಮುಸ್ಲಿಮರು ರಾಷ್ಟ್ರ ದ್ರೋಹಿಗಳಲ್ಲ : ಕಾಂಗ್ರೆಸ್ ನಾಯಕರು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ
ವಿಶೇಷ ಎಂದರೆ ಜಿಲ್ಲೆಯಿಂದ ವರ್ಗಾವಣೆಗೊಂಡ ಮೂವರು ಅಧಿಕಾರಿಗಳ ಸ್ಥಾನಕ್ಕೆ ಬೇರೆ ಅಧಿಕಾರಿಗಳನ್ನು ಸರ್ಕಾರ ನಿಯೋಜನೆ ಮಾಡಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















