ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಧಾರವಾಡದ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ Yogesh Gowda Murder Case ಸಂಬಂಧಪಟ್ಟಂತೆ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಶಾಸಕ ವಿನಯ್ ಕುಲಕರ್ಣಿ ಪರಪ್ಪನ ಅಗ್ರಹಾರದ ಕ್ವಾರಂಟೈನ್ ಸೆಲ್ ಸೇರಿದ್ದಾರೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶಾಸಕ ವಿನಯ್ ಕುಲಕರ್ಣಿ MLA Vinay Kulkarni ಸೇರಿದಂತೆ ಹದಿನೇಳು ಜನರನ್ನು ಅಪರಾಧಿಗಳು ಅಂತಾ ತೀರ್ಪು ಪ್ರಕಟಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ. ನಿನ್ನೆ ಪರಪ್ಪನ ಅಗ್ರಹಾರ ಜೈಲು ಸೇರಿದ ಎಲ್ಲಾ ಹದಿನೇಳು ಅಪರಾಧಿಗಳನ್ನು ಕ್ವಾರಂಟೈನ್ ಸೆಲ್‌ನ ‘ಡಿ’ ಬ್ಲಾಕ್ ಬ್ಯಾರಕ್‌ಗೆ ಹಾಕಲಾಗಿದೆ.
ನಟ ದರ್ಶನ್ Darshan ಸೆಲ್‌ನ ಕೂಗಳತೆ ದೂರದಲ್ಲೇ ಈ ಕೈದಿಗಳು ಇದ್ದಾರೆ. ಎಲ್ಲಾ ಹದಿನೇಳು ಕೈದಿಗಳನ್ನು ಒಂದೇ ಸೆಲ್‌ನಲ್ಲಿ ಇಡಲಾಗಿದ್ದು, ವಿನಯ್ ಕುಲಕರ್ಣಿಗೆ 3476 ತಾತ್ಕಾಲಿಕ ಯುಟಿಪಿ ನಂಬರ್ ನೀಡಲಾಗಿದೆ. ನಂತರ ಸಿಟಿಪಿ ನಂಬರ್ ನೀಡಲಿದ್ದು, ಹತ್ತು ದಿನಗಳ ನಂತರ ಬೇರೆ ಸೆಲ್‌ಗೆ ರವಾನೆ ಮಾಡಲಾಗುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















