ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನವರಾತ್ರಿ/ದಸರಾ ಹಬ್ಬದ ಹಿನ್ನೆಲೆಯಲ್ಲಿ ತಿರುನಲ್ವೇಲಿ-ಶಿವಮೊಗ್ಗ #Shivamogga ಹಾಗೂ ಯಶವಂತಪುರ-ಶಿವಮೊಗ್ಗ-ತಾಳಗುಪ್ಪ #Talguppa ನಡುವೆ ವಿಶೇಷ ರೈಲು ಸಂಚರಿಸಲಿದೆ.
ಈ ಕುರಿತಂತೆ ರೈಲ್ವೆ ಇಲಾಖೆ ಮಾಹಿತಿ ಪ್ರಕಟಿಸಿದ್ದು, ದಸರಾ ಹಬ್ಬದ ಪ್ರಯುಕ್ತ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು ನೈಋತ್ಯ ರೈಲ್ವೆ 51 ವಿಶೇಷ ರೈಲುಗಳು ಸಂಚಲಿಸಲಿದೆ. ಇದರಲ್ಲಿ 11 ಕಾಯ್ದಿರಿಸದ ವಿಶೇಷ ರೈಲುಗಳು, 27 ಎಕ್ಸ್’ಪ್ರೆಸ್ ರೈಲುಗಳು, 3 ತಾತ್ಕಾಲಿಕ ನಿಲುಗಡೆಗಳು, 2 ತಾತ್ಕಾಲಿಕ ವಿಸ್ತರಣೆಗಳು ಹಾಗೂ 8 ರೈಲುಗಳ ಅವಧಿ ವಿಸ್ತರಣೆಗಳು ಸೇರಿವೆ.
ಪ್ರಮುಖವಾಗಿ, ಹಬ್ಬದ ವಿಶೇಷವಾಗಿ ತಿರುನಲ್ವೇಲಿ – ಶಿವಮೊಗ್ಗ ಹಾಗೂ ಯಶವಂತಪುರ – ತಾಳಗುಪ್ಪ ನಡುವೆ ವಿಶೇಷ ರೈಲು ಸಂಚಾರ ಮಾಡಲಿದೆ.
ತಿರುನಲ್ವೇಲಿ-ಶಿವಮೊಗ್ಗ-ತಿರುನಲ್ವೇಲಿ ರೈಲು ವಿವರ:
ತಮಿಳುನಾಡಿನ ತಿರುನಲ್ವೇಲಿಯಿಂದ ಶಿವಮೊಗ್ಗ ಹಾಗೂ ಶಿವಮೊಗ್ಗದಿಂದ ತಿರುನಲ್ವೇಲಿಗೆ #Tirunelveli ವಿಶೇಷ ರೈಲು ಸಂಚರಿಸಲಿದೆ.

ಅದೇ ರೀತಿಯಲ್ಲಿ 06104 ಸಂಖ್ಯೆಯ ವಿಶೇಷ ರೈಲು, ಶಿವಮೊಗ್ಗದಿಂದ ತಿರುನಲ್ವೇಲಿಗೆ ಸೆಪ್ಟೆಂಬರ್ 8, 15, 22, 29 ಹಾಗೂ ಅಕ್ಟೋಬರ್ 6, 13, 20 ಹಾಗೂ 27ರಂದು ಸಂಚರಿಸಲಿದೆ.
ಶಿವಮೊಗ್ಗದಿಂದ ಭದ್ರಾವತಿ, ತರೀಕೆರೆ, ಬೀರೂರು ಹಾಗೂ ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದ್ದು, ಈ ಭಾಗದ ಪ್ರಯಾಣಿಕರಿಗೆ ಈ ರೈಲು ಅನುಕೂಲವಾಗಲಿದೆ.
ಯಶವಂತಪುರ-ತಾಳಗುಪ್ಪ ವಿಶೇಷ ರೈಲು:
ಇನ್ನು, 06587 ಸಂಖ್ಯೆಯ ವಿಶೇಷ ರೈಲು, ಯಶವಂತಪುರದಿಂದ ಶಿವಮೊಗ್ಗಕ್ಕೆ ಸೆ.19ರಂದು ಸಂಚರಿಸಿದ್ದು, ಅದೇ ರೀತಿಯಲ್ಲಿ ಸೆ.26 ಹಾಗೂ ಅಕ್ಟೋಬರ್ 3ರಂದು ಸಂಚರಿಸಲಿದೆ.

ತರೀಕೆರೆ, ಅರಸೀಕೆರೆ, ಬೀರೂರು, ತರೀಕೆರೆ, ಭದ್ರಾವತಿ, ಶಿವಮೊಗ್ಗ, ಅನಂತಪುರ, ಸಾಗರ ಮಾರ್ಗದಲ್ಲಿ ತಾಳಗುಪ್ಪ ನಿಲ್ದಾಣಗಳು ಇರಲಿವೆ.
ತಾತ್ಕಾಲಿಕ ನಿಲುಗಡೆ ನಿಲ್ದಾಣಗಳು:
ಹಬ್ಬದ ಹಿನ್ನೆಲೆಯಲ್ಲಿ ಮೈಸೂರು – ತಾಳಗುಪ್ಪ ನಡುವಿನ ರೈಲಿಗೆ ಹಲವು ಕಡೆಗಳಲ್ಲಿ ತಾತ್ಕಾಲಿಕ ನಿಲುಗಡೆ ನೀಡಲಿದೆ.
16225/26 ಸಂಖ್ಯೆಯ ಮೈಸೂರು-ಶಿವಮೊಗ್ಗ-ಮೈಸೂರು ನಡುವಿನ ವಿಶೇಷ ರೈಲು ಈ ಮಾರ್ಗದಲ್ಲಿ ಬೆಳಗುಳ, ಕೃಷ್ಣರಾಜಸಾಗರ, ಕಲ್ಲೂರು ಯಡಹಳ್ಳಿ, ಸಾಗರಕಟ್ಟೆ, ದೋರ್ನಹಳ್ಳಿ, ಹಂಪಾಪುರ, ಅರ್ಜುನಹಳ್ಳಿ, ಹೊಸ ಅಗ್ರಹಾರ, ಮಾವಿನಕರೆ ನಿಲ್ದಾಣಗಳಲ್ಲಿ ಸೆ.23ರಿಂದ ಅ.2ರವರೆಗೂ ನಿಲುಗಡೆ ನೀಡಲಿದೆ.
ಅದೇ ರೀತಿ, 16222/21 ಸಂಖ್ಯೆಯ ಮೈಸೂರು-ತಾಳಗುಪ್ಪ-ಮೈಸೂರು ವಿಶೇಷ ರೈಲು ಬೆಳಗುಳ, ಕಲ್ಲೂರು ಯುಡಹಳ್ಳಿ, ದೋರ್ನಹಳ್ಳಿ, ಹಂಪಾಪುರ, ಅರ್ಜುನಹಳ್ಳಿ ನಿಲ್ದಾಣಗಳಲ್ಲಿ ಸೆ.23ರಿಂದ ಅ.2ರವರೆಗೂ ತಾತ್ಕಾಲಿಕವಾಗಿ ನಿಲುಗಡೆ ನೀಡಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






















Discussion about this post