ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಸಾರ್ವಜನಿಕರ ಆರೋಗ್ಯ ದೃಷ್ಠಿಯಿಂದ ಮಹತ್ವದ ನಿರ್ಧಾರ ಕೈಗೊಂಡಿರುವ ಮಹಾನಗರ ಪಾಲಿಕೆ ಇನ್ನು ಮುಂದೆ ನಗರದಲ್ಲಿ ಕಂಡ ಕಂಡಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು, ಗುಟ್ಕಾ ಉಗಿದರೆ ದಂಡ ವಿಧಿಸುವ ನಿರ್ಧಾರಕ್ಕೆ ಬಂದಿದೆ.
ಈ ಕುರಿತಂತೆ ಆದೇಶ ಹೊರಡಿಸಿರುವ ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಮದ್ಯ ಮಾರಾಟ, ತಂಬಾಕು, ಗುಟ್ಕಾ ಸೇವಿಸಿ ಅದನ್ನು ಉಗುಳುವ ಮೊದಲ ಅಪರಾಧಕ್ಕೆ ರೂ. 500 ಹಾಗೂ ಎರಡನೇ ಅಪರಾಧಕ್ಕೆ ರೂ.1000 ಮತ್ತು ಸಾರ್ವಜನಿಕ ಸ್ಥಳ ಹಾಗೂ ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಮಾಸ್ಕ್ ಧರಿಸದಿರುವ ಮೊದಲ ಅಪರಾಧಕ್ಕೆ ರೂ.100 ಎರಡನೇಯ ಅಪರಾಧಕ್ಕೆ ರೂ. 200 ಗಳ ದಂಡವನ್ನು ವಿಧಿಸಲಾಗುತ್ತದೆ.
ಮಹಾನಗರ ಪಾಲಿಕೆಯು ಕೊರೊನಾ ಕೋವಿಡ್-19ರ ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಕೆಲವು ಮಾರ್ಗಸೂಚನೆಗಳನ್ನು ಅನುಸರಿಸುವಂತೆ ಸೂಚಿಸಿದ್ದು, ಮಾರ್ಗಸೂಚನೆಗಳನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುವುದು ಎಂದವರು ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕ ಸ್ಥಳ ಹಾಗೂ ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು. ಎಲ್ಲಾ ಸ್ಥಳದಲ್ಲಿಯೂ ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು. ಯಾವುದೇ ಸಂಘ-ಸಂಸ್ಥೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ 5 ಅಥವಾ 5ಕ್ಕಿಂತ ಹೆಚ್ಚು ಜನರು ಸೇರುವುದು ನಿರ್ಬಂಧಿಸಿಲಾಗಿದೆ. ಎಲ್ಲಾ ಸ್ಮಾರ್ಟ್ಫೋನ್ ಹೊಂದಿರುವಂತವರು ಆರೋಗ್ಯ ಸೇತು ಆ್ಯಪ್ನ್ನು ಬಳಸಲು ಉತ್ತೇಜನ ನೀಡುವಂತೆ ಅವರು ತಿಳಿಸಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post