ಬ್ರಿಟಿಷರ ಅಧಿಪತ್ಯದಲ್ಲಿ ಜೂನ್ 1923ರಲ್ಲಿ ಉಗಮವಾದ ಬಾನುಲಿಯ ಆಗಿನ ಬಾಂಬೆ ಪ್ರೆಸಿಡೆನ್ಸಿ ರೇಡಿಯೋ ಕ್ಲಬ್ ಹಾಗೂ ಇತರ ಕ್ಲಬ್ ಗಳೂ ರೇಡಿಯೊ ಕಾರ್ಯಕ್ರಮಗಳನ್ನು ಬಿತ್ತರಿಸಿದವು.
1923 ಜುಲೈ 23 ರ ಒಪ್ಪಂದದ ರೀತ್ಯಾ ಇಂಡಿಯನ್ ಬ್ರಾಡ್ ಕಾಸ್ಟಿಂಗ್ ಕಂಪನಿಯು ಎರಡು ಕೇಂದ್ರಗಳನ್ನು ಆರಂಭಿಸಿತು. ಬಾಂಬೆ ನಿಲಯ 1927 ರ 23 ಜುಲೈ ಹಾಗೂ ಕೋಲ್ಕತ್ತಾ ಕೇಂದ್ರವು 26 ಆಗಸ್ಟ್ 1927 ರಂದು ಕಾರ್ಯಾರಂಭ ಮಾಡಿದವು.
ಆದರೆ 1930 ರ ಮಾರ್ಚ್ 1 ರಂದು ಆರ್ಥಿಕ ಕೊರತೆಯ ಕಾರಣ ಕಂಪನಿಯು ಸ್ಥಬ್ಧಗೊಂಡಿತು. ಆಗಿನ ಸರ್ಕಾರ ತಾನೇ ರೇಡಿಯೊ ಪ್ರಸಾರವನ್ನು ಪ್ರಾಯೋಗಿಕವಾಗಿ 1 ಏಪ್ರಿಲ್ 1930ರಂದು ವಹಿಸಿಕೊಂಡು ಇಂಡಿಯನ್ ಸ್ಟೇಡ್ ಬ್ರಾಡ್ ಕಾಸ್ಟಿಂಗ್ ಸರ್ವೀಸ್ ( ISBS) ಹೆಸರಿನಲ್ಲಿ ಎರಡು ವರ್ಷಗಳ ಮಟ್ಟಿಗೆ ನಿರ್ವಹಿಸಿತು. ನಂತರ ಮೇ ತಿಂಗಳಿನಿಂದ ಸಂಪೂರ್ಣ ಸಂಸ್ಥೆಯಾಗಿ ಮಾರ್ಪಟ್ಟಿತು.

8 ಜೂನ್ 1936 ರಲ್ಲಿ ಈ ಸಂಸ್ಥೆ All India Radio. ಆಗಿ ನಾಮಕರಣ ಹೊಂದಿತು. ಆಕಾಶವಾಣಿ.. ಸಂಸ್ಕೃತ ಪದ. ಅಶರೀರ ವಾಣಿ ಉಲ್ಲೇಖವನ್ನು ಭಾರತೀಯರು ಪುರಾಣಗಳಲ್ಲಿ ಓದಿದ್ದೇವೆ. ಭಾರತೀಯ ಪ್ರಸಾರ ಇತಿಹಾಸದಲ್ಲಿ ಆಕಾಶವಾಣಿ ಅಭಿದಾನ ಇರಿಸಿದ ಹೆಮ್ಮೆ ಕನ್ನಡಿಗರಿಗೆ ಸಲ್ಲುತ್ತದೆ.
ಮೈಸೂರಿನ ಪ್ರೊ.ಎಮ್ ವಿ. ಗೋಪಾಲಸ್ವಾಮಿ ಅವರೇ 1936 ರಲ್ಲಿ ಪುಟ್ಟ ಖಾಸಗಿ ರೇಡಿಯೋ ನಿಲಯವನ್ನು ತಮ್ಮ ಸ್ವಗಹೃಹ ವಿಠ್ಠಲ ವಿಹಾರದಲ್ಲಿ ಆರಂಭಿಸಿದ್ದರು. ನಂತರ 1957 ರಲ್ಲಿ ಆಕಾಶವಾಣಿ ಹೆಸರು ಕನ್ನಡಿಗರ ಕಾಣಿಕೆಯಾಗಿ ಬಳಕೆಗೆ ಬಂತು.
ಎಲ್ಲರಿಗೂ ರೇಡಿಯೋ ದಿನ ಶುಭಾಶಯಗಳು
-ಡಾ.ಸುಧೀಂದ್ರ

















