ಪಕ್ಷಕ್ಕೊಂದು ಏಕಾದಶಿ, ಮಾಸಕ್ಕೆರಡು ಏಕಾದಶಿ ವರ್ಷಕ್ಕೆ ಇಪ್ಪತ್ತನಾಲ್ಕು ಏಕಾದಶಿಗಳಿರುತ್ತದೆ. ಅದರಲ್ಲಿ ಜುಲೈ 23ರ ನಾಳೆ ಸೋಮವಾರ ಬರುವ ಪ್ರಥಮೈಕಾಶಿಗೆ ಬಹಳ ಮಹತ್ವವಿದೆ.
ದಶಮಿಯ ದಿನ ರಾತ್ರಿ ಲಘ ಫಲಹಾರ ಸ್ವೀಕರಿಸಿ, ಮರುದಿನ ಸಾಲಗ್ರಾಮ ತೀರ್ಥ ಮಾತ್ರ ಸೇವಿಸಿ ಶುದ್ಧೋಪವಾಸ. ಆ ಮರುದಿನ ದ್ವಾದಶಿ ತಿಥಿಯಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಬೆಳಗ್ಗೆ ಭೋಜನ ಮಾಡಿ ಉಪವಾಸ ಮುಗಿಸುತ್ತಾರೆ. ಮಾಧ್ವ ಸಂಪ್ರದಾಯದಲ್ಲಿ ತಪ್ತ ಮುದ್ರಾಧಾರಣೆಯನ್ನು ಏಕಾದಶಿಯಂದು ಯತಿಗಳು ಭಕ್ತರಿಗೆ, ಶಿಷ್ಯರಿಗೆ ಮಾಡುವುದು ಸಂಪ್ರದಾಯ.
ಏಕಾದಶಿಯ ಉಪವಾಸದ ವಿಶೇಷ:
ಮುಖ್ಯವಾಗಿ ಘಟ ಶುದ್ಧಿ. ಯಾವ ಕಾರ್ಯಕ್ಕೂ ಶರೀರವೇ ಪ್ರಧಾನ. ಶರೀರ ಮಾಧ್ಯಂ ಖಲು ಧರ್ಮ ಸಾಧನಂ ಎಂಬಂತೆ ಶರೀರದ ಸ್ವಾಸ್ಥ್ಯ ಕಾಪಾಡಿಕೊಂಡರೆ ಅದು ಧರ್ಮಕಾರ್ಯಗಳಿಗೆ ಲೋಪವೋ, ಭಂಗವೋ ತರಲಾರದು ಎಂಬುದು ವೈಜ್ಞಾನಿಕವಾಗಿಯೂ, ವೈದ್ಯಕೀಯವಾಗಿಯೂ ಒಪ್ಪಬೇಕಾದ ವಿಚಾರ. ನಾವಿದನ್ನು ಶಾಸ್ತ್ರ ಎಂದು ಹೇಳುತ್ತೇವೆ.
ಹಿಂದೆ ಮಾಡಿದ ವೈಜ್ಞಾನಿಕ ಸಂಶೋಧನೆಯೇ ಈಗ ಶಾಸ್ತ್ರ ಸಂಪ್ರದಾಯವಾಗಿದೆ. ಅದಕ್ಕಾಗಿ ಏಕಾದಶಿ ವೃತವು ಮೋಕ್ಷದಾಯಕ ಎಂದರು. ಮೋಕ್ಷ ಎಂದರೆ solutions. ಯಾವುದೇ ಸಮಸ್ಯೆಗಳಿಗೆ ಒಂದು solutions ಸಿಕ್ಕಿದರೆ ಸಮಸ್ಯೆಗಳಿಂದ ಅಪಾಯಗಳಿರುವುದಿಲ್ಲ. ಇಂತಹ solutions ಸಿಗಬೇಕಾದರೆ ದೈಹಿಕ ಮಾನಸಿಕ ಸ್ವಾಸ್ಥ್ಯ ಇರಬೇಕು. ಇಂತಹ ರೋಗಬಾಧೆ ನಿವಾರಣೆಗೆ ಪ್ರತೀ ಪಕ್ಷದ ಹನ್ನೊಂದನೆಯ ದಿನ ಅಂದರೆ ಏಕಾದಶಿಯಂದು ಶುದ್ಧೋಪವಾಸ ವೃತವನ್ನು ಮಾಡಬೇಕೆಂದರು.
ವಿವೇಕಾನಂದರು ಹೇಳಿದ್ದು ಇದನ್ನೇ
ಇದು ಇಂದಿನವರಿಗೆ ಕಠಿಣವಾದರೆ ಮಿತ ಆಹಾರವನ್ನು ಸೇವಿಸಿ ಭಗವಂತನ ನಾಮಸ್ಮರಣೆ ಮಾಡಿದರೂ ಹರಿಪ್ರೀತ್ಯರ್ಥವೇ ಆಗುತ್ತದೆ. ದಾಸರು ಇದನ್ನೇ ಹಾಡಿನಲ್ಲಿ ಹೀಗೆ ಹೇಳಿದರು. ಒಪ್ಪೊತ್ತು ಉಂಬವ ಯೋಗಿ. ಎರಡೊತ್ತು ಉಂಬಹ ಭೋಗಿ. ಮೂರುಹೊತ್ತು ಉಂಬವನೇ ರೋಗಿ. ಆಗಾಗ ಉಂಬವನ ಹೊತ್ತುಕೊಂಡು ಹೋಗಿ ಎಂಬ ಸಂದೇಶವನ್ನು ನೀಡಿದರು. ಅಂದರೆ ಮಿತಾಹಾರ ಯಾವತ್ತೂ ದೈಹಿಕ ಮಾನಸಿಕ ಸ್ವಾಸ್ಥ್ತವನ್ನು ಕಾಪಾಡುತ್ತದೆ.
ಇದನ್ನೇ ಸ್ವಾಮಿ ವಿವೇಕಾನಂದರೂ ಹೇಳಿದ್ದರು. ಕೆಟ್ಟ ಆಲೋಚನೆಗಳು, ದುಃಖ, ರೋಗಗಳು ಎಲ್ಲವೂ ಬರುವುದು ಅತಿಯಾದ ಆಹಾರ ಸೇವನೆಯಿಂದ. ಮನಸ್ಸು ಸರಿ ಇದ್ದಾಗ ಆರೋಗ್ಯ ಸರಿ ಇರುತ್ತದೆ. ರೋಗಗಳಿಂದ ಮನುಷ್ಯ ಸಾಯುವುದಿಲ್ಲ. ರೋಗ ಭಯದಿಂದ ಮಾತ್ರ ಸಾಯುವುದು. ಇಂತಹ ಭಯ ನಿವಾರಣೆಗೆ ಬೇಕಾಗಿಯೇ ಏಕಾದಶಿ ವೃತದ ಆಚರಣೆಯು ಅನಾದಿ ಕಾಲದಿಂದಲೂ ನಡೆದುಬಂದಿದೆ.
Discussion about this post