ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ವಂದಾಲ ಹಾಗೂ ಬಸವನ ಬಾಗೇವಾಡಿ ರೋಡ್ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ (ಎಲ್ಸಿ ಸಂಖ್ಯೆ 62) ಕಾಮಗಾರಿಗಳ ಹಿನ್ನೆಲೆ ಭಾಗಶಃ ರದ್ದುಗೊಂಡಿದ್ದ ಕೆಳಕಂಡ ರೈಲುಗಳನ್ನು ಇದೀಗ ತಮ್ಮ ನಿಯಮಿತ ಮಾರ್ಗದಲ್ಲಿ ಎಂದಿನಂತೆ ಸಂಚರಿಸಲು ನಿರ್ಧರಿಸಲಾಗಿದೆ.
ಈ ಕುರಿತಂತೆ ರೈಲ್ವೆ ಇಲಾಖೆ ಮಾಹಿತಿ ನೀಡಿದ್ದು, ಪುನಃ ಸ್ಥಾಪಿಸಲಾದ ರೈಲಿನ ವಿವರ ಹೀಗಿದೆ.
07329 ಸಂಖ್ಯೆಯ ಎಸ್’ಎಸ್’ಎಸ್ ಹುಬ್ಬಳ್ಳಿ-ವಿಜಯಪುರ ವಿಶೇಷ ರೈಲು, ಮಾರ್ಚ್ 24ರಂದು, #Bagalkote ಬಾಗಲಕೋಟೆ-ವಿಜಯಪುರ ನಡುವಿನ ಭಾಗಶಃ ರದ್ದತಿ ಹಾಗೂ ಬಾಗಲಕೋಟೆಯಲ್ಲಿ ಅಂತ್ಯಗೊಳ್ಳುವಂತೆ ತಿಳಿಸಲಾಗಿತ್ತು. ಇದೀಗ ಈ ರೈಲು ತನ್ನ ಪೂರ್ಣ ನಿಯಮಿತ ಮಾರ್ಗವಾದ ಎಸ್’ಎಸ್’ಎಸ್ ಹುಬ್ಬಳ್ಳಿ-ವಿಜಯಪುರದವರೆಗೆ ಸಂಚರಿಸಲಿದೆ.
ಅದೇ ರೀತಿ, 07330 ಸಂಖ್ಯೆಯ #Vijayapura ವಿಜಯಪುರ-ಎಸ್’ಎಸ್’ಎಸ್ ಹುಬ್ಬಳ್ಳಿ ವಿಶೇಷ ರೈಲು, ಮಾರ್ಚ್ 25ರಂದು ವಿಜಯಪುರ-ಬಾಗಲಕೋಟೆ ನಡುವೆ ಭಾಗಶಃ ರದ್ದತಿ ಹಾಗೂ ವಿಜಯಪುರ ಬದಲು ಬಾಗಲಕೋಟೆಯಿಂದ ಪ್ರಾರಂಭವಾಗುವಂತೆ ತಿಳಿಸಲಾಗಿತ್ತು.
ಇದೀಗ ಈ ರೈಲೂ ತನ್ನ ಪೂರ್ಣ ನಿಯಮಿತ ಮಾರ್ಗವಾದ ವಿಜಯಪುರ-ಎಸ್’ಎಸ್’ಎಸ್ ಹುಬ್ಬಳ್ಳಿವರೆಗೆ #Hubli ಸಂಚರಿಸಲಿದ್ದು, ಪ್ರಯಾಣಿಕರಿಗೆ ಸಂಪೂರ್ಣ ಸೇವೆ ನೀಡಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















