ಕಲ್ಪ ಮೀಡಿಯಾ ಹೌಸ್ | ತುಮಕೂರು |
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಸಮಾಧಿ ದರ್ಶನ ಪಡೆದರು. ನಂತರ ಮಕ್ಕಳಿಗೆ ತಾವೇ ಖುದ್ದಾಗಿ ಊಟ ಬಡಿಸಿ, ಮಕ್ಕಳ ಜತೆ ಕಾಲಕಳೆದರು.
ಶಿವಕುಮಾರ ಸ್ವಾಮೀಜಿಗಳು ಶಿವೈಕ್ಯರಾಗಿ ಇಂದಿಗೆ ಮೂರು ವರ್ಷಗಳಾಗಿದ್ದು, 3ನೇ ವರ್ಷದ ಪುಣ್ಯ ಸ್ಮರಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾಗಿಯಾಗಿದ್ದರು. ಮಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿ ಸೇರಿ ಹಲವು ಮಠಾಧೀಶರು, ಸಚಿವರಾದ ಬಿ.ಸಿ. ನಾಗೇಶ್, ಮಾಧುಸ್ವಾಮಿ ಸೇರಿ ಹಲವರು ಸಿಎಂಗೆ ಸಾಥ್ ನೀಡಿದರು.
ಹಸಿದ ಹೊಟ್ಟೆಗೆ ಅನ್ನ ನೀಡುವುದೇ ಮಾನವೀಯತೆ ಎಂದು ಸಾರಿದ್ದ ಶ್ರೇಷ್ಠ ಸಂತ ಶಿವಕುಮಾರ ಶ್ರೀಗಳು ಶಿವೈಕ್ಯರಾದ ದಿನವನ್ನು ರಾಜ್ಯ ಸರ್ಕಾರವು ದಾಸೋಹ ದಿನವಾಗಿ ಘೋಷಣೆ ಮಾಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post