ಕಲ್ಪ ಮೀಡಿಯಾ ಹೌಸ್ | ತುಮಕೂರು |
ತುಮಕೂರು ನಿವಾಸಿ, ಮಲೆನಾಡು ಮೂಲದ ಪ್ರತಿಭೆ ಯುವ ಕವಯಿತ್ರಿ ನಿತ್ಯಶ್ರೀ ಸುಶೀಲ್ ಅವರಿಗೆ ಬೆಂಗಳೂರಿನ ಕರ್ನಾಟಕ ಕನ್ನಡ ಸಾಹಿತ್ಯ ಲೋಕದ ವತಿಯಿಂದ ಕೊಡಮಾಡುವ ಕನ್ನಡದ ಕಬ್ಬಿಗ-2024 ಪ್ರಶಸ್ತಿ ಲಭಿಸಿದೆ.
ಇತ್ತೀಚೆಗೆ ರಾಷ್ಟ್ರ ಮಟ್ಟದ ಕವಿಗೋಷ್ಠಿ, ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಿಡುಗಡೆ ಸಮಾರಂಭವು ಬೆಂಗಳೂರು ಗ್ರಾಮಾಂತರ ನೆಲಮಂಗಲದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ನಡೆಯಿತು.
ರಾಷ್ಟ್ರೀಯ ಕನ್ನಡ ಸಾಹಿತ್ಯ ಸಂಭ್ರಮ ಕವಿಗೋಷ್ಠಿ 2024 ಕಾರ್ಯಕ್ರಮದಲ್ಲಿ ಒಂದೇ ಸಮಯದಲ್ಲಿ, 9 ವೇದಿಕೆಗಳಲ್ಲಿ ನಡೆಯಿತು. ಇದರಲ್ಲಿ ದ.ರಾ. ಬೇಂದ್ರೆ ವೇದಿಕೆಯಲ್ಲಿ ತುಮಕೂರಿನ ಯುವ ಕವಯಿತ್ರಿ ಆದ ಶ್ರೀಮತಿ ನಿತ್ಯಶ್ರೀ ಸುಶಿಲ್ ಅವರು ಒಂಟಿ ಮಹಿಳೆಯ ಪಾಡು ಎಂಬ ಕವನ ವಾಚನ ಮಾಡಿ 2024ರ ಕನ್ನಡದ ಕಬ್ಬಿಗ ಪ್ರಶಸ್ತಿಯನ್ನು ಸ್ವೀಕರಿಸಿದರು.
ನಿತ್ಯಶ್ರೀ ಅವರು 200ಕ್ಕೂ ಹೆಚ್ಚು ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ. ಕವನ ವಾಚಿಸಿದ 200 ಕವಿಗಳ ಕವನ ಒಳಗೊಂಡ ಕಬ್ಬಿಗರ ಕೈಯಲ್ಲಿ ಅರಳಿದ ಕವನ ಕುಸುಮಗಳು ಎಂಬ ಕವನ ಸಂಕಲನ ಪ್ರಜಾಕವಿ ಎನ್.ಆರ್. ನಾಗರಾಜು ಸಂಪಾದಕತ್ವದಲ್ಲಿ ಪುಸ್ತಕ ಬಿಡುಗಡೆ ಆಯಿತು.
ಪ್ರಜಾಕವಿ ಎನ್.ಆರ್. ನಾಗರಾಜು, ಪವಾಡ ಶ್ರೀ ಬಸವಣ್ಣ ದೇವರ ಮಠದ ಪರಮ ಪೂಜ್ಯ ಶ್ರೀಸಿದ್ಧಲಿಂಗ ಮಹಾಸ್ವಾಮಿಗಳು, ಡಾ. ವೆಂಕಟೇಶ್ ಆರ್ ಚೌಥಾಯಿ ಹಾಗೂ ಅಧ್ಯಕ್ಷರಾದ ಡಿ. ಸಿದ್ದರಾಜು ಸೇರಿ ಹಲವರು ಇದ್ದರು.
Also read: ರೀಲ್ಸ್ ಶೋಕಿ | ಪ್ರಪಾತಕ್ಕೆ ಬಿದ್ದ ಕಾರು | ಯುವತಿ ಸಾವು | ಸ್ನೇಹಿತನ ವಿರುದ್ಧ ಕೇಸ್ | ಘಟನೆ ನಡೆದಿದ್ದೆಲ್ಲಿ?
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post