ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಫೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಷನ್ ವತಿಯಿಂದ ಜೂ.22ರಂದು ಸಂಜೆ 6ಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಪದ್ಮಶ್ರೀ ಡಾ. ಎಂ.ಕೆ. ಶ್ರೀಧರ್ ಅವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್ #D S Arun ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಾ.ಎಂ.ಕೆ. ಶ್ರೀಧರ್ ಅವರು ಭಾರತ ದೇಶದ ಅತ್ಯುತ್ತಮ ಶಿಕ್ಷಣ ತಜ್ಞರು ಸಂಶೋಧಕರು ಆಗಿದ್ದಾರೆ. ಕಳೆದ 50 ವರ್ಷಗಳಿಂದ ಶಿಕ್ಷಣ ಕ್ಷೇತ್ರಕ್ಕಾಗಿ ಶ್ರಮಿಸಿದ್ದಾರೆ. ವಿಶೇಷ ಚೇತನರಾಗಿದ್ದರು ಕೂಡ ಅವರ ಈ ಸಾಧನೆಗೆ ಅಡ್ಡಿಯಾಗಲಿಲ್ಲ ಈ ದೇಶದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾರೆ. ಇಂತಹ ಮಹಾನ್ ವ್ಯಕ್ತಿಯನ್ನು ಶಿವಮೊಗ್ಗದವರಾದ ನಾವು ಸನ್ಮಾನಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಎಂ.ಕೆ.ಶ್ರೀಧರ್ ಅವರು ಚಾಣುಕ್ಯ ವಿಶ್ವವಿದ್ಯಾನಿಲಯದ ಸ್ಥಾಪಕ ಕುಲಾಧಿಪತಿಗಳು, ಯುಜಿಸಿ ಸದಸ್ಯರು, ಕೇರಳ ಕೇಂದ್ರಿಯ ವಿವಿಯ ಕಾರ್ಯಕಾರಿ ಮಂಡಳಿ ಸದಸ್ಯರು, ಬೆಂಗಳೂರು ವಿವಿಯ ಡೀನ್‍ಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಎಬಿವಿಪಿಯ ರಾಷ್ಟ್ರೀಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಕೂಡ ಲಭಿಸಿದೆ ಎಂದರು.
ಮುಖ್ಯವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ರಚನಾ ಸಮಿತಿಯ ಸದಸ್ಯರಾಗಿದ್ದವರು. ಅವರ ಸಹೋದರರು ಶಿವಮೊಗ್ಗದವರೇ ಆದ ಭೂಪಾಳಂ ಶಶಿದರ್ ಆಗಿದ್ದಾರೆ. ಅವರ ಸಹಕಾರದಲ್ಲಿ ಮತ್ತು ಎಬಿವಿಪಿ ಹಾಗೂ ಆರ್.ಎಸ್.ಎಸ್. ಮತ್ತು ಅಭಿಮಾನಿಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಉನ್ನತ ಶಿಕ್ಷಣ ಸಚಿವ ಡಿ.ಹೆಚ್.ಶಂಕರಮೂರ್ತಿ ವಹಿಸಲಿದ್ದು, ಕುವೆಂಪು ವಿವಿ ನಿವೃತ್ತ ಪ್ರಾಧ್ಯಪಕ ಪ್ರೊ.ಜೆ.ಎಸ್. ಸದಾನಂದ, ಪೀಪಲ್ಸ್ ಫೋರಂನ ಸಂಚಾಲಕ ಸಿ.ಎ. ಧರ್ಮಪ್ರಸಾದ್, ಎ.ಜೆ. ರಾಮಚಂದ್ರ, ಡಾ. ರವೀಶ್ ಮುಂತಾದವರು ಭಾಗವಹಿಲಿಸದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಬದಲಾಗುತ್ತಿರುವ ಭಾರತದ ಭರವಸೆಯ ಶಿಕ್ಷಣ ಕುರಿತು ಸಂವಾದವನ್ನು ಕೂಡ ಆಯೋಜಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಭೂಪಾಳಂ ಶಶಿಧರ್, ಡಾ.ರವಿಕಿರಣ್, ಚಂದ್ರಶೇಖರ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post