ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಿನ್ನೆ ಜಿಲ್ಲೆಯಲ್ಲಿ ಮೂರು ಕೊರೋನಾ ಪಾಸಿಟಿವ್ ಪ್ರಕರಣ ದಾಖಲಾದ ಬೆನ್ನಲ್ಲೇ ಇಂದು ಮತ್ತೆ ಎರಡು ಪ್ರಕರಣಗಳು ದಾಖಲಾಗಿದ್ದು, ಜಿಲ್ಲೆಯನ್ನು ಬೆಚ್ಚಿ ಬೀಳಿಸಿದೆ.
ಇಂದು ಪಾಸಿಟಿವ್ ಬಂದ ಪ್ರಕರಣಗಳು ಹೊಸನಗರ ಹಾಗೂ ಭದ್ರಾವತಿಯಲ್ಲಿ ಕಾಣಿಸಿಕೊಂಡಿದ್ದು ಎಂದು ಹೇಳಲಾಗಿದ್ದು, ಈ ಕುರಿತಂತೆ ಇನ್ನೂ ಅಧಿಕೃತ ಮಾಹಿತಿ ದೊರಕಬೇಕಿದೆ. ಯಾವ ತಾಲೂಕು ಎಂಬುದು ಇನ್ನೂ ಗೊಂದಲಕಾರಿಯಾಗಿಯೇ ಇದ್ದು, ಜಿಲ್ಲಾಡಳಿತ ಸ್ಪಷ್ಟಪಡಿಸಿಲ್ಲ.
ಇಂದು ಎರಡು ಪ್ರಕರಣ ಕಾಣಿಸಿಕೊಳ್ಳುವ ಮೂಲಕ ಜಿಲ್ಲೆಯಲ್ಲಿ ಒಟ್ಟು ಈವರೆಗೂ 14 ಪಾಸಿಟಿವ್ ಪ್ರಕರಣ ದಾಖಲಾದಂತಾಗಿದೆ.
ಎರಡೂ ಪ್ರಕರಣಗಳದ ವ್ಯಕ್ತಿಗಳು ಮುಂಬೈನಿಂದ ಬಂದಂತಹ ಟ್ರಾವೆಲಿಂಗ್ ಹಿಸ್ಟರಿ ಹೊಂದಿದ್ದಾರೆ. ಇನ್ನು ಜಿಲ್ಲಾಡಳಿದ ಸೂಚನೆಯ ಹಿನ್ನೆಲೆಯಲ್ಲಿ ಇವರಿಬ್ಬರೂ ಮುಂಬೈನಿಂದ ಬಂದಾಗಿನಿಂದಲೂ ಕ್ವಾರಂಟೈನ್’ನಲ್ಲಿದ್ದು, ಎಲ್ಲೂ ಓಡಾಡಿಲ್ಲ ಎಂಬುದು ಸಮಾಧಾನಕರ ಸಂಗತಿಯಾಗಿದೆ.
Get in Touch With Us info@kalpa.news Whatsapp: 9481252093

















