ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದೀಪಾವಳಿ ಹಬ್ಬದ ಸಮಯದಲ್ಲಿ ಪ್ರಯಾಣಿಕರ ದಟ್ಟಣೆ ನಿರ್ವಹಿಸುವ ಸಲುವಾಗಿ ಬೆಂಗಳೂರು-ಶಿವಮೊಗ್ಗ #Shivamogga ಹಾಗೂ ಶಿವಮೊಗ್ಗ-ತಿರುನಲ್ವೇಲಿ ನಡುವೆ ವಿಶೇಷ ರೈಲು ಸಂಚಾರವನ್ನು ಘೋಷಿಸಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ #SWR ಮಾಹಿತಿ ಪ್ರಕಟಿಸಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಎರಡು ವಿಶೇಷ ರೈಲುಗಳ ಸಂಚಾರವನ್ನು ಘೋಷಿಸಿದ್ದು, ಪ್ರಯಾಣಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದೆ.
ಯಶವಂತಪುರ-ತಾಳಗುಪ್ಪ ವಿಶೇಷ ರೈಲು:
06587 ಸಂಖ್ಯೆಯ ಯಶವಂತಪುರ -ತಾಳಗುಪ್ಪ #Talguppa ವಿಶೇಷ ರೈಲು 2 ಟ್ರಿಪ್ ಸಂಚರಿಸಲಿದೆ. ಅಕ್ಟೋಬರ್ 17 ಹಾಗೂ 24ರಂದು ಶುಕ್ರವಾರಗಳಂದು ಸಂಚರಿಸಲಿದೆ.
06588 ಸಂಖ್ಯೆಯ ತಾಳಗುಪ್ಪ-ಯಶವಂತಪುರ 2 ಟ್ರಿಪ್ ಸಂಚರಿಸಲಿದೆ. ಅಕ್ಟೋಬರ್ 18 ಹಾಗೂ 25ರ ಶನಿವಾರಗಳಂದು ಸಂಚರಿಸಲಿದೆ.ಯಾವ ಮಾರ್ಗ?
ತುಮಕೂರು – ತಿಪಟೂರು -ಅರಸೀಕೆರೆ- ಬೀರೂರು – ತರೀಕೆರೆ – ಭದ್ರಾವತಿ – ಶಿವಮೊಗ್ಗಟೌನ್ – ಆನಂದಪುರ – ಸಾಗರಜಂಬಗರು – ತಾಳಗುಪ್ಪ.
ಶಿವಮೊಗ್ಗ-ತಿರುನಲ್ವೇಲಿ ವಿಶೇಷ ರೈಲು:
06103 ಸಂಖ್ಯೆಯ ತಿರುನಲ್ವೇಲಿ-ಶಿವಮೊಗ್ಗ ಟೌನ್ ನಡುವೆ ವಿಶೇಷ ರೈಲು 4 ಟ್ರಿಪ್ ಸಂಚರಿಸಲಿದೆ. ಈ ವಿಶೇಷ ರೈಲು ಅ.5,12,19,26 ಗಳಂದು ಭಾನುವಾರ ಸಂಚರಿಸಲಿದೆ.
06104 ಸಂಖ್ಯೆಯ ಶಿವಮೊಗ್ಗ ಟೌನ್ -ತಿರುನಲ್ವೇಲಿ #Tirunelveli 4 ನಡುವಿನ ವಿಶೇಷ ರೈಲು ಅ.6,13,20,27ರ ಸೋಮವಾರಗಳಂದು ಸಂಚರಿಲಿದೆ.
ಈ ವಿಶೇಷ ರೈಲು ಅರಸೀಕೆರೆ- ಬೀರೂರು – ತರೀಕೆರೆ – ಭದ್ರಾವತಿ – ಶಿವಮೊಗ್ಗ ಟೌನ್ ಮಾರ್ಗದಲ್ಲಿ ಸಂಚರಿಸಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post