ನವದೆಹಲಿ: ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹಲವು ದಾಖಲೆಗಳನ್ನು ಬರೆದ ಉರಿ ದಿ ಸರ್ಜಿಕಲ್ ಸ್ಟ್ರೈಕ್ ಸಿನೆಮಾ ಬಾಕ್ಸ್ ಆಫೀಸನ್ನು ಕೊಳ್ಳೆ ಹೊಡೆಯುತ್ತಿದೆ.
2019ರ ಬ್ಲಾಕ್ ಬಸ್ಟರ್ ಚಿತ್ರ ಎಂದು ಹೆಸರಾಗುವ ಜೊತೆಯಲ್ಲಿ 100 ಕೋಟಿ ಕ್ಲಬ್’ನಲ್ಲೂ ಸಹ ದಾಖಲೆ ಬರೆದಿತ್ತು. ಅಲ್ಲದೇ, ಅಲಿಯಾ ಭಟ್’ರ ‘ರಝಿ’ಯ ಜೀವಮಾನದ ವ್ಯವಹಾರವನ್ನು ಈ ಚಿತ್ರವು ಮೆಟ್ಟಿದ್ದು, ಈಗಾಗಲೇ ಬಾಕ್ಸ್ ಆಫೀಸ್’ನಲ್ಲಿ 200 ಕೋಟಿಗಳಷ್ಟು ಗಳಿಕೆಯನ್ನು ದಾಟಿದೆ.
ಈ ಕುರಿತಂತೆ ಖ್ಯಾತ ಚಿತ್ರ ವಿಮರ್ಷಕ ತರುಣ್ ಆದರ್ಶ್ ಮಾಹಿತಿ ಶೇರ್ ಮಾಡಿದ್ದು, ಬಾಹುಬಲಿ-2 ಸೇರಿದಂತೆ ಎಲ್ಲ ಚಿತ್ರಗಳ ದಾಖಲೆಯನ್ನು ಮುರಿದು ಉರಿ ಮುನ್ನುಗ್ಗುತ್ತಿದೆ ಎಂದಿದ್ದಾರೆ. ಹೌ ಈಸ್ ದಿ ಜೋಶ್ ಎಂದು ಕೇಳಿರುವ ಅವರೇ, ಈಗ ನಿಜವಾಗಲೂ ಜೋಷ್ ಎಂದು ಹೇಳಲೇಬೇಕು ಎಂದು ಪ್ರಶಂಸಿಸಿದ್ದಾರೆ.
#UriTheSurgicalStrike continues to dominate, unaffected by new releases… Surpasses *fifth Fri* biz of #Baahubali2 [#Hindi; ₹ 1.56 cr] by a big margin… [Week 5] Fri 2.13 cr. Total: ₹ 202.52 cr. India biz. #Uri #HowsTheJosh
— taran adarsh (@taran_adarsh) February 9, 2019
Discussion about this post