ಕಲ್ಪ ಮೀಡಿಯಾ ಹೌಸ್ | ನವದೆಹಲಿ/ಬೆಂಗಳೂರು |
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) #ISRO ನೂತನ ಬಾಹ್ಯಾಕಾಶ ಕಾರ್ಯದರ್ಶಿ ಹಾಗೂ ಅಧ್ಯಕ್ಷರನ್ನಾಗಿ ವಿ. ನಾರಾಯಣನ್ #VNarayanan ಅವರನ್ನು ನೇಮಿಸಲಾಗಿದೆ.
ಈ ಕುರಿತಂತೆ ಕೇಂದ್ರ ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದ್ದು, ಪ್ರಸ್ತುತ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ ನಿರ್ದೇಶಕರಾಗಿರುವ ನಾರಾಯಣನ್ ಅವರು ಅಧ್ಯಕ್ಷ ಎಸ್. ಸೋಮನಾಥ್ ಅವರ ಉತ್ತರಾಧಿಕಾರಿಯಾಗಲಿದ್ದಾರೆ. ನೂತನ ಅಧ್ಯಕ್ಷರು ಜನವರಿ 14 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
Also Read>> ಮೈಸೂರು | ‘ಸ್ವರಸ್ವಪ್ನ’ | ಜ.12ರಂದು ಅಪರೂಪದ ವಯೋಲಿನ್ ವೃಂದ ವಾದನ
ನಾರಾಯಣನ್ ಅವರನ್ನು ಎರಡು ವರ್ಷಗಳ ಅವಧಿಗೆ ಜನವರಿ 14 ರಿಂದ ಜಾರಿಗೆ ಬರುವಂತೆ ಅಥವಾ ಮುಂದಿನ ಆದೇಶದವರೆಗೆ ನೇಮಕ ಮಾಡಲು ಸಂಪುಟದ ನೇಮಕಾತಿ ಸಮಿತಿಯು ಅನುಮೋದನೆ ನೀಡಿದೆ.
ಯಾರಿವರು ನಾರಾಯಣನ್?
ನಾರಾಯಣನ್ ಅವರು ಓರ್ವ ಪ್ರತಿಷ್ಠಿತ ವಿಜ್ಞಾನಿ(ಅಪೆಕ್ಸ್ ಗ್ರೇಡ್)ಯಾಗಿದ್ದು, #scientist ರಾಕೆಟ್ #Rocket ಮತ್ತು ಬಾಹ್ಯಾಕಾಶ ನೌಕೆ ಪ್ರೊಪಲ್ಷನ್ ತಜ್ಞರಾಗಿದ್ದಾರೆ.
ಎಲ್’ಪಿಎಸ್’ಸಿ #LPSC ನಿರ್ದೇಶಕರೂ ಆಗಿರುವ ನಾರಾಯಣನ್ ಅವರು, ಅರೆ ಕ್ರಯೋಜೆನಿಕ್, ಕ್ರಯೋಜೆನಿಕ್ ಪ್ರೊಪಲ್ಷನ್ ಹಂತಗಳು ಮತ್ತು ಉಡಾವಣಾ ವಾಹನಗಳಿಗೆ ನಿಯಂತ್ರಣ ವ್ಯವಸ್ಥೆಗಳು, ಉಪಗ್ರಹಗಳಿಗೆ ರಾಸಾಯನಿಕ ಮತ್ತು ವಿದ್ಯುತ್ ಪ್ರೊಪಲ್ಷನ್ ವ್ಯವಸ್ಥೆಗಳು ಮತ್ತು ಆರೋಗ್ಯ ಮೇಲ್ವಿಚಾರಣೆಗಾಗಿ ಸಂಜ್ಞಾಪರಿವರ್ತಕಗಳ ಅಭಿವೃದ್ಧಿಗೆ ತಾಂತ್ರಿಕ-ವ್ಯವಸ್ಥಾಪಕ ನಾಯಕತ್ವವನ್ನು ನಿಭಾಯಿಸುತ್ತಿದ್ದಾರೆ.ನಾರಾಯಣನ್ ಅವರು ಖರಗ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ #IIT ಹಳೆಯ ವಿದ್ಯಾರ್ಥಿಯಾಗಿದ್ದು, 1989 ರಲ್ಲಿ ಕ್ರಯೋಜೆನಿಕ್ ಇಂಜಿನಿಯರಿಂಗ್’ನಲ್ಲಿ ಮೊದಲ ಶ್ರೇಣಿಯೊಂದಿಗೆ ಮತ್ತು 2001 ರಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್’ನಲ್ಲಿ ಡಾಕ್ಟರೇಟ್’ನೊಂದಿಗೆ ಎಂ ಟೆಕ್ ಮಾಡಿದ್ದಾರೆ.
ಐಐಟಿ ಖರಗ್ಪುರದಲ್ಲಿ ಎಂಟೆಕ್’ನಲ್ಲಿ ಮೊದಲ ರ‍್ಯಾಂಕ್ ಪಡೆದಿರುವ ಇವರು ಬೆಳ್ಳಿ ಪದಕ ಅಲಂಕರಿಸಿಕೊಂಡಿದ್ದಾರೆ. ಆಸ್ಟ್ರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾ (ಎಎಸ್’ಐನಿಂದ ಚಿನ್ನದ ಪದಕ), ರಾಕೆಟ್ ಮತ್ತು ಸಂಬಂಧಿತ ತಂತ್ರಜ್ಞಾನಗಳಿಗಾಗಿ ಎಎಸ್’ಐ ಪ್ರಶಸ್ತಿ, ಹೈ ಎನರ್ಜಿ ಮೆಟೀರಿಯಲ್ಸ್ ಸೊಸೈಟಿ ಆಫ್ ಇಂಡಿಯಾದಿಂದ ತಂಡದ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಲ್ಲದೇ ಚೆನ್ನೈನ ಸತ್ಯಬಾಮಾ ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಸೈನ್ಸ್ (ಹಾನರಿಸ್ ಕಾಸಾ) ಗೌರವ ಪದವಿಯನ್ನು ಸಹ ಪಡೆದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post