No Result
View All Result
Indian Railways Nepalganj Bahraich Line Upgrade 730 Crore
English Articles

Indian Railways Boosts Nepal Border Connectivity With ₹730 Crore Bahraich Rail Project

by kalpa News
September 1, 2026
0

Kalpa Media House  |  Bahraich(Uttar Pradesh)  |  Indian Railways : Uttar Pradesh Chief Minister Yogi Adityanath, along with Union Minister...

Read moreDetails
RPF Mysuru Railway Theft Lost Mobile Recovered copy

RPF Mysuru Cracks Railway Property Theft, Recovers Passenger’s Lost Mobile Phone

August 31, 2026
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
SWR food-safety-drive in Karnataka Railway Stations

SWR Intensifies Food Safety Checks Across Karnataka Railway Stations

August 28, 2026
Kriti Sanon Raksha Bandhan Controversy GIVA Withdraw Advt copy

Kriti Sanon’s Raksha Bandhan Ad Faces Backlash; GIVA Withdraws Campaign

August 26, 2026
  • Advertise With Us
  • Grievances
  • About Us
  • Contact Us
Thursday, September 3, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ವಿದ್ವಾಂಸರಾದ ರಾಮಪ್ರಸಾದ್, ನಳಿನಾಗೆ ಸುಸ್ವರಲಯ ಪ್ರಶಸ್ತಿ

ನ. 9ರಂದು ಪ್ರಶಸ್ತಿ ಪ್ರದಾನ | ಸುಸ್ವರಲಯ ಪ್ರೌಢ ಸಂಗೀತ ಕಲಾಶಾಲೆ ರಜತ ಸಂಭ್ರಮ

kalpa News by kalpa News
November 7, 2024
in Special Articles
0
ವಿದ್ವಾಂಸರಾದ ರಾಮಪ್ರಸಾದ್, ನಳಿನಾಗೆ ಸುಸ್ವರಲಯ ಪ್ರಶಸ್ತಿ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಲೇಖನ: ಕೌಸಲ್ಯಾರಾಮ  |

ರಾಜಧಾನಿಯ ಪ್ರತಿಷ್ಠಿತ ಸುಸ್ವರಲಯ ಪ್ರೌಢ ಸಂಗೀತ ಕಲಾಶಾಲೆಯು ಕರ್ನಾಟಕ ಶಾಸ್ತ್ರೀಯ ಸಂಗೀತ #CarnaticClassicalMusic ಕಲಾವಿದರಿಗೆ ಕೊಡ ಮಾಡುವ ವಾರ್ಷಿಕ ಪ್ರಶಸ್ತಿಗೆ ವಿದ್ವಾಂಸರಾದ ರಾಮಪ್ರಸಾದ್, ನಳಿನಾ ಆಯ್ಕೆಯಾಗಿದ್ದಾರೆ.

ಹಿರಿಯ ಗಾಯಕ, ವಿದ್ವಾನ್ ಟಿ.ವಿ. ರಾಮಪ್ರಸಾದ್‌ಗೆ ‘ಸ್ವರಲಯ ರತ್ನ’ ಮತ್ತು ಖ್ಯಾತ ವಯೋಲಿನ್ ವಿದುಷಿ ನಳಿನಾ ಮೋಹನ್ ಗೆ ‘ಸ್ವರಲಯ ಶೃಂಗ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕ ಮತ್ತು ಪ್ರಾಚಾರ್ಯ ವಿದ್ವಾನ್ ಸುಧೀಂದ್ರ ತಿಳಿಸಿದ್ದಾರೆ.

ಪ್ರಶಸ್ತಿಯು ಸ್ಮರಣಿಕೆ, ನಗದು ಪುರಸ್ಕಾರ ಮತ್ತು ವಿದ್ವತ್ ಸನ್ಮಾನ ಒಳಗೊಂಡಿದೆ. ನ. 9ರಂದು ಬನಶಂಕರಿ ರಾಮಲಲಿತ ಕಲಾ ಮಂದಿರದಲ್ಲಿ ದಿನಪೂರ್ಣ ಸಂಸ್ಥೆಯ ರಜತ ಮಹೋತ್ಸವ ಸಂಗೀತ ಕಛೇರಿ #MusicProgram ಆಯೋಜಿಸಿದ್ದು, ಸಂಜೆ 4ಕ್ಕೆ ವಿದ್ವಾಂಸರಿಗೆ ಪ್ರಶಸ್ತಿ ಪ್ರದಾನ ನೆರವೇರಲಿದೆ ಎಂದು ಅವರು ತಿಳಿಸಿದ್ದಾರೆ.

ಖ್ಯಾತ ಗಾಯಕ ಡಾ. ವಿದ್ಯಾಭೂಷಣ, ಯದುಗಿರಿ ಯತಿರಾಜ ಮಠದ ಶ್ರೀ ನಾರಾಯಣ ರಾಮಾನುಜ ಜೀಯರ್ ಮತ್ತು ವಿಶ್ವಖ್ಯಾತ ಮೃದಂಗ ವಿದ್ವಾಂಸ ಶ್ರೀಮುಷ್ಣಂ ರಾಜಾರಾವ್ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಸುಧೀಂದ್ರ ತಿಳಿಸಿದ್ದಾರೆ.

ವಿದ್ವಾನ್ ಟಿ. ವಿ. ರಾಮ ಪ್ರಸಾದ್ ಪರಿಚಯ
ಕರ್ನಾಟಕ ಸಂಗೀತ ರಂಗದಲ್ಲಿ ಬೆಂಗಳೂರಿನ #Bengaluru ಟಿ.ವಿ. ರಾಮಪ್ರಸಾದ್ ಎಂದರೆ ಅದು ಶ್ರೇಷ್ಠತೆಗೆ ಅನ್ವರ್ಥ. ಅವರ ಬೋಧನಾ ಅನುಭವ ಮತ್ತು ಕಛೇರಿ ಶೈಲಿ ಅನನ್ಯ. ಭವ್ಯವಾದ ಧ್ವನಿ, ವಿಸ್ತಾರವಾದ ಜ್ಞಾನ, ನಿರಂತರ ಅಭ್ಯಾಸ ಮತ್ತು ಪರಿಶ್ರಮದಿಂದ ಒಲಿದ ಗಾಯನ ಸಾಮರ್ಥ್ಯಗಳು ಅವರ ಘನತೆಯನ್ನು ಆಗ್ರ ಸ್ಥಾನಕ್ಕೆ ಏರಿಸಿವೆ.
ಹಿರಿಯ ಕಲಾವಿದರಾದ ಮಹಾಲಕ್ಷ್ಮಿ ನಟರಾಜಜ್( ಮುಂಬಯಿ ) ಮತ್ತು ಶಾರದಾ ಸತ್ಯನಾರಾಯಣ ಅವರಲ್ಲಿ ರಾಮಪ್ರಸಾದರು ಕಲಿಕೆ ಪ್ರಾರಂಭಿಸಿದರು. ಸತತ ಸಾಧನೆಯೇ ಅವರಿಗೆ ವೃತ್ತಿಪರ ಬದ್ಧತೆಗಳನ್ನು ಕರಗತ ಮಾಡಿಸಿತು ಎಂಬುದು ಬಹು ವಿಶೇಷ. ಮನೋಧರ್ಮ ಅನ್ನು ನಿರೂಪಿಸುವಾಗ ಪ್ರಮುಖ ಸಾಂಪ್ರದಾಯಿಕ ಅಂಶಗಳನ್ನು ಅನುಸರಿಸುವುದು ಅವರ ವಿಶೇಷತೆ.

ಕಳೆದ 25 ವರ್ಷದಿಂದ ಆಕಾಶವಾಣಿ #Akashavani ಮತ್ತು ದೂರದರ್ಶನದ ಎ-ಗ್ರೇಡ್ ಕಲಾವಿದರಾದ ರಾಮಪ್ರಸಾದ್ ಗಾಯನ ಮಾಧುರ್ಯ ನಮ್ಮ ನಾಡನ್ನೂ ದಾಟಿ ಸಾಗರದಾಚೆಗೂ ತಲುಪಿದೆ. 25 ವಸಂತ ಕಂಡ ಸುಸ್ವರಲಯ ಸಂಸ್ಥೆಯ ಪ್ರಶಸ್ತಿ ಅವರಿಗೆ ಭೂಷಣಪ್ರಾಯವೂ ಆಗಿದೆ.

ಪರಂಪರೆಗೆ ಭೂಷಣ
ಸಂಗೀತ ಪರಂಪರೆಯ ಮಹಾದಿಗ್ಗಜಗಳಾದ ಪದ್ಮಭೂಷಣ ಪಿ.ಎಸ್. ನಾರಾಯಣಸ್ವಾಮಿ, ಸಂಗೀತ ಕಲಾಚಾರ್ಯ ಎಸ್. ರಾಜಂ, ಟಿ.ವಿ. ಗೋಪಾಲಕೃಷ್ಣನ್ ಮತ್ತು ಆರ್.ಆರ್. ಕೇಶವಮೂರ್ತಿ ಅವರೆಲ್ಲರ ಸಿರಿವಂತ, ಭವ್ಯ ಗುರು ಪರಂಪರೆಗೆ ರಾಮಪ್ರಸಾದ್ ಗೌರವ ತಂದುಕೊಟ್ಟ ಮೇಧಾವಿಗಳು. ಈ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿರುವ ಅಪರೂಪದ ಜ್ಞಾನ ಮೇರು ಎಂದರೂ ಅದು ಅವರಿಗೆ ಕಿರೀಟಪ್ರಾಯವಾಗುತ್ತದೆ. ಐಸಿಸಿಆರ್ ಕಲಾವಿದರೂ ಆಗಿರುವ ರಾಮ ಪ್ರಸಾದ್, ವಿಭಿನ್ನ ಸಂಗೀತ ಸಂಯೋಜಕರಾಗಿ, ಗಾಯಕರಾಗಿ, ನಿರ್ದೇಶಕರಾಗಿ, ಅನ್ವೇಷಕರಾಗಿದ್ದಾರೆ.
ಆನ್‌ಲೈನ್ ವೇದಿಕೆಯಲ್ಲಿ ಮಹತ್ತರ ಸೇವೆ
ಶೈಕ್ಷಣಿಕ ಮತ್ತು ಸಾಮಾಜಿಕ ಅಭ್ಯುದಯಕ್ಕಾಗಿ ಕಲೆಯನ್ನು ಸಮರ್ಥವಾಗಿ ಬಳಸಿಕೊಂಡು ಹೊಸ ಹೊಸ ಉಪಕ್ರಮಗಳನ್ನು, ಜಾಗತಿಕ ಮಟ್ಟದ ಆಂದೋಲನಗಳನ್ನು ಮಾಡುವಲ್ಲಿ ಅವರು ಸಿದ್ಧಹಸ್ತರಾಗಿದ್ದಾರೆ. ಇ-ಅಂಬಲಂ –  ನಿರ್ದೇಶಕರಾಗಿ  2011 ರಿಂದ ಅವರು ಜಾಗತಿಕ ಸಮುದಾಯಕ್ಕೆ ಭಾರತೀಯ ಶಾಸ್ತ್ರೀಯ ಕಲೆಗಳನ್ನು ಪರಿಚಯಿಸಿದ ರೀತಿ ಅದ್ಭುತವಾಗಿದೆ. ಆನ್‌ಲೈನ್ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಂಡು 2014ರಿಂದ ಲೈಫ್ ಆರ್ಟ್ ಎಜ್ಯುಕೇಶನ್ ಪ್ರಾಜೆಕ್ಟ್ ಪ್ರಾರಂಭಿಸಿದ ರಾಮ ಪ್ರಸಾದರು ಕೆ -12 ಆಧಾರಿತ ಕಾರ್ಯಕ್ರಮದ ರೂವಾರಿಯಾಗಿ ಸಂಗೀತ, ನೃತ್ಯ, ಯೋಗ ಮತ್ತು ವ್ಯಕ್ತಿತ್ವ ವಿಕಸನ ಕಲೆಗಳನ್ನು ವಿಶ್ವದ ವಿವಿಧ ಭಾಗದ 25 ದೇಶದ ಸುಮಾರು 50,000 ವಿದ್ಯಾರ್ಥಿಗಳಿಗೆ ತಲುಪಿಸಿರುವುದು ಮಹೋನ್ನತ ಸಾಧನೆಯೇ  ಆಗಿದೆ.

ಮೈಸೂರು ಸೀಮೆಯ ವಾದ್ಯ ಚತುರೆ ನಳಿನಾ ಮೋಹನ್
ಶುದ್ಧ ಸ್ಥಾಯಿ ಮತ್ತು ಸಿರಿವಂತ ಮನೋಧರ್ಮದ ಪಿಟೀಲು ವಾದನಕ್ಕೆ ಇನ್ನೊಂದು ಹೆಸರೇ ವಿದುಷಿ ನಳಿನಾ ಮೋಹನ್. ಅಪ್ಪಟ ಕನ್ನಡ ನಾಡಿನ, ಮೈಸೂರು ಸೀಮೆಯ ಮೇರು ಪ್ರತಿಭೆ.  ಚನ್ನಪಟ್ಟಣದ ಸುಸಂಸ್ಕೃತ ಮನೆತನದ ವೇದ ವಿದ್ವಾಂಸರಾದ ವೆಂಕಟರಾಮ ಪುರಾಣಿಕ್ ಮತ್ತು  ಗಾಯಕಿ
ರಾಜಲಕ್ಷ್ಮೀ ಪುರಾಣಿಕ್ ಅವರ ಪುತ್ರಿ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ 9ನೇ ವಯಸ್ಸಿನಿಂದಲೇ ಗಾಯನ ಕಲಿಕೆ.

ನಾರಾಯಣ ಅಯ್ಯಂಗಾರ್ ಅವರೇ ಗುರು. ನಂತರ  ಆರ್. ಆರ್. ಕೇಶವಮೂರ್ತಿ ಅವರ ಗರಡಿಯಲ್ಲಿ ಪಿಟೀಲು ಕಲಿಕೆ. ವಿದ್ವಾನ್ ಅನೂರು ರಾಮಕೃಷ್ಣರಲ್ಲಿ ಉನ್ನತ ಕಲಿಕೆ. ಮನೆತದ ಸಂಸ್ಕೃತಿ ಬಳುವಳಿ, ಸ್ವಯಂ ಆಸಕ್ತಿಗಳು ನಳಿನಾ ಅವನ್ನು ಬಹುಬೇಗ ಕಲಾ ಲೋಕದಲ್ಲಿ ಎತ್ತರಕ್ಕೆ ಬೆಳೆಸಿ ವಿಶ್ವ ಮಟ್ಟಕ್ಕೆ ಪರಿಚಯಿಸಿದವು.
ಸಂಗೀತ ಕಲಾನಿಧಿ, ಪದ್ಮಭೂಷಣ ಡಾ. ಆರ್.ಕೆ. ಶ್ರೀಕಂಠನ್, ಪ್ರಸ್ತುತ ವಿದ್ವಾನ್ ಎಚ್.ಎಸ್. ಸುಧೀಂದ್ರ ಅವರ ಮಾರ್ಗದರ್ಶನದಲ್ಲಿ ನಳಿನಾ ತಮ್ಮ ಕಲಾತ್ಮಕತೆ ಮತ್ತು ನುಡಿಸಾಣಿಕೆ ತಂತ್ರದಿಂದ ಕಲಾಲೋಕದ ಧೃವತಾರೆಯಾಗಿ ಬೆಳಗುತ್ತಿದ್ದಾರೆ. ಏಕವ್ಯಕ್ತಿ ವಾದಕರಾಗಿ, ಪಕ್ಕವಾದ್ಯಕ್ಕಾಗಿ ಕಲಾವಿದೆಯಾಗಿ ಅವರು ಜಾಗತಿಕ ಮಟ್ಟದ ಬಹು ಬೇಡಿಕೆ ಕಲಾವಿದೆಯಾಗಿರುವುದು ಕನ್ನಡ ನಾಡಿಗೆ ಹೆಮ್ಮೆಯಾಗಿದೆ.

ಸಮರ್ಥ ಪಕ್ಕವಾದ್ಯ ಸಾಥ್
ಡಾ.ಆರ್.ಕೆ. ಶ್ರೀಕಂಠನ್, ಪ್ರೊ.ಟಿ.ಆರ್. ಸುಬ್ರಹ್ಮಣ್ಯಂ, ಡಾ.ಎನ್. ರಮಣಿ, ಡಾ.ಟಿ.ಕೆ. ಗೋವಿಂದ ರಾವ್, ಟಿ.ವಿ. ಗೋಪಾಲಕೃಷ್ಣನ್, ತ್ಯಾಗರಾಜನ್, ಕದ್ರಿ, ಬಾಂಬೆ ಸಿಸ್ಟರ್ಸ್, ಎಂ.ಎಸ್. ಶೀಲಾ, ಸುಧಾ ರಘುನಾಥನ್ ಮೊದಲಾದ ಅಗ್ರ ಪಂಕ್ತಿಯ ಕಲಾವಿದರ ಗಾಯನ ಕಛೇರಿ ಇನ್ನಷ್ಟು, ಮತ್ತಷ್ಟು ಕಳೆಗಟ್ಟಲು ಸಮರ್ಥವಾದ ಪಕ್ಕವಾದ್ಯ ಸಾಥ್ ನೀಡುವಲ್ಲಿ ಸೈ ಎನಿಸಿಕೊಂಡಿರುವುದು ನಳಿನಾರ ಹೆಗ್ಗಳಿಕೆ.

ತಲೆದೂಗಿದೆ ವಿಶ್ವ ವೇದಿಕೆ
ದಕ್ಷಿಣ ವಲಯ ಸಂಗೀತ ಕಚೇರಿಗಳು ಮತ್ತು ಸ್ಪಿರಿಟ್ ಆಫ ಯೂನಿಟಿ ಕಾನ್ಸರ್ಟ್ ಅವರ ಮಹತ್ತರ ಕಲಾಭಿವ್ಯಕ್ತಿಗೆ ಭೂಷಣ. ಅಮೆರಿಕ, ಕೆನಡಾ, ಶ್ರೀಲಂಕಾ, ಫ್ರಾನ್ಸ್ ಸೇರಿದಂತೆ ವಿಶ್ವದ ಪ್ರತಿಷ್ಠಿತ ವೇದಿಕೆಗಳು ಇವರ ತಂತಿವಾದ್ಯ ಪ್ರೌಢಿಮೆಗೆ ತಲೆದೂಗಿವೆ. ‘ಸ್ವರಲಯ ಶೃಂಗ’ ಎಂಬ ಪ್ರಶಸ್ತಿ ಅವರ ಕಲಾಚತುರತೆಗೆ ವಿನೂತನ ಕಂಠಾಭರಣವಾಗಿ ಶೋಭಿಸಲಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   
Kalahamsa Infotech private limited

Tags: Carnatic classical musicKannada News WebsiteLatset News Kannadamysoreಕರ್ನಾಟಕ ಶಾಸ್ತ್ರೀಯ ಸಂಗೀತಡಾ. ವಿದ್ಯಾಭೂಷಣಮೃದಂಗಮೈಸೂರುಯದುಗಿರಿ ಯತಿರಾಜ ಮಠರಾಜಧಾನಿವಯೋಲಿನ್ಸುಸ್ವರಲಯ ಪ್ರೌಢ ಸಂಗೀತ ಕಲಾ ಶಾಲೆ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯ ಸಮಯ ವ್ಯರ್ಥ ಮಾಡುವುದು ಭವಿಷ್ಯದಲ್ಲಿ ಮಾರಕ

Next Post

ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾ ಕೂಟ: ಕ್ರೈಸ್ಟ್‌ಕಿಂಗ್ ವಿದ್ಯಾರ್ಥಿನಿ ಸುದೀಕ್ಷಾ ಕಾಮತ್ ರಾಜ್ಯ ಮಟ್ಟಕ್ಕೆ ಆಯ್ಕೆ

kalpa News

kalpa News

Next Post
ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾ ಕೂಟ: ಕ್ರೈಸ್ಟ್‌ಕಿಂಗ್ ವಿದ್ಯಾರ್ಥಿನಿ ಸುದೀಕ್ಷಾ ಕಾಮತ್ ರಾಜ್ಯ ಮಟ್ಟಕ್ಕೆ ಆಯ್ಕೆ

ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾ ಕೂಟ: ಕ್ರೈಸ್ಟ್‌ಕಿಂಗ್ ವಿದ್ಯಾರ್ಥಿನಿ ಸುದೀಕ್ಷಾ ಕಾಮತ್ ರಾಜ್ಯ ಮಟ್ಟಕ್ಕೆ ಆಯ್ಕೆ

Leave a Reply Cancel reply

Your email address will not be published. Required fields are marked *

No Result
View All Result
Indian Railways Nepalganj Bahraich Line Upgrade 730 Crore
English Articles

Indian Railways Boosts Nepal Border Connectivity With ₹730 Crore Bahraich Rail Project

by kalpa News
September 1, 2026
0

Kalpa Media House  |  Bahraich(Uttar Pradesh)  |  Indian Railways : Uttar Pradesh Chief Minister Yogi Adityanath, along with Union Minister...

Read moreDetails
RPF Mysuru Railway Theft Lost Mobile Recovered copy

RPF Mysuru Cracks Railway Property Theft, Recovers Passenger’s Lost Mobile Phone

August 31, 2026
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
SWR food-safety-drive in Karnataka Railway Stations

SWR Intensifies Food Safety Checks Across Karnataka Railway Stations

August 28, 2026
Kriti Sanon Raksha Bandhan Controversy GIVA Withdraw Advt copy

Kriti Sanon’s Raksha Bandhan Ad Faces Backlash; GIVA Withdraws Campaign

August 26, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL