ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಂಟರ್ ನ್ಯಾಷನಲ್ ಲಿಂಗಾಯಿತ ಯೂತ್ ಫೋರಂ (ಐಎಲ್‍ಐಎಫ್) ಶಿವಮೊಗ್ಗದಲ್ಲಿ ಅಸ್ಥಿತ್ವಕ್ಕೆ ಬಂದು ಎರಡು ವರ್ಷಗಳಾದವು. ಫೋರಂವತಿಯಿಂದ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಮುಖ್ಯವಾಗಿ ಮಹಿಳಾ ವಾಣಿಜ್ಯೋದ್ಯಮಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ಫೋರಂನ ಅಧ್ಯಕ್ಷ ವಿಶ್ವಾಸ್ ಯಲಬುರ್ಗಿ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2013ರಲ್ಲಿಯೇ ನಮ್ಮ ಯೂತ್ ಫೋರಂ ಕೇವಲ 50 ಸದಸ್ಯರೊಂದಿಗೆ ಅಸ್ಥಿತ್ವಕ್ಕೆ ಬಂದಿತ್ತು. ನಂತರ ಈಗ ರಾಜ್ಯದ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ತನ್ನ ಶಾಖೆಯನ್ನು ಆರಂಭಿಸಿ ಸುಮಾರು 3000ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿದೆ ಎಂದರು.
ಈ ಬಾರಿ 2026-27ನೇ ಸಾಲಿಗೆ ವಿಶ್ವಾಸ್ ಯಲಬುರ್ಗಿಯಾದ ನಾನು ಅಧ್ಯಕ್ಷನಾಗಿ ಆಯ್ಕೆಯಾಗಿದ್ದಾನೆ. ಉಪಾಧ್ಯಕ್ಷರಾಗಿ ಹೊಯ್ಸಳ ಡಿ.ಎಸ್., ಕಾರ್ಯದರ್ಶಿಯಾಗಿ ರಾಜು ಎಂ.ಎಸ್., ಖಜಾಂಚಿಯಾಗಿ ಸಂಜಯ್ ಎಂ.ಎಸ್. ಹಾಗೂ ನಿರ್ದೇಶಕರುಗಳಾಗಿ ಚೈತ್ರಾ ಸಜ್ಜನ್, ಅನುಷಾ, ಸುನೀಲ್, ಮೋಹನ್ ಬಾಳೆಕಾಯಿ, ಈಶ್ವರ ಸರ್ಜಿ, ಮಂಜು ಕರ್ನಲಿ, ವಿಕಾಸ್, ಸಂದೀಪ್, ರವಿ ಪಾಟೀಲ್, ನಿರಂಜನ್ ವೇದಮೂರ್ತಿ ಆಯ್ಕೆಯಾಗಿದ್ದಾರೆ ಎಂದರು.
ನಮ್ಮ ಹೊಸ ತಂಡವು ತಮ್ಮ ಕಾರ್ಯವ್ಯಾಪ್ತಿಯನ್ನು ಹೆಚ್ಚಿಸಿದ್ದು, ಕೌಶಲ್ಯಾಭಿವೃದ್ಧಿ, ಹೆಣ್ಣು ಮಗುವಿನ ಸರ್ವಾಂಗೀಣ ಶಿಕ್ಷಣ, ಸಸಿಗಳನ್ನು ನೆಡುವುದು, ರಕ್ತದಾನ ಶಿಬಿರ, ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ಪರಿಹಾರ ಕಾರ್ಯದಲ್ಲಿ ಕೈಜೋಡಿಸುವುದೇ ಆಗಿದೆ. ವಿಶ್ವದಾದ್ಯಂತ ಇರುವ ಲಿಂಗಾಯಿತ ಸಮುದಾಯದವರೆಲ್ಲರ ಏಳಿಗೆಗಾಗಿ ಕ್ರೀಯಾಶೀಲವಾಗಿ ನಮ್ಮ ಟ್ರಸ್ಟ್ ಶ್ರಮಿಸುತ್ತದೆ ಎಂದರು.
ಐ ಶೇರ್, ಐ ಲೀಡ್, ಐ ಕೇರ್, ಐ ಬಾಂಡ್, ಐ ನೆಟ್ ಎಂಬ ಪ್ರಮುಖ ಐದು ವಿಷಯಗಳನ್ನು ಇಟ್ಟುಕೊಂಡು ಚಟುವಟಿಕೆಗಳನ್ನು ಆರಂಭಿಸುತ್ತೇವೆ. ಪ್ರಸ್ತುತ ವರ್ಷದಲ್ಲಿ ಸಮುದಾಯದ ಎಲ್ಲಾ ಕೈಗಾರಿಕೋದ್ಯಮಿಗಳ, ವಾಣಿಜ್ಯೋದ್ಯಮಿಗಳನ್ನು, ವರ್ತಕರು ಮತ್ತು ರೈತರನ್ನು ಒಳಗೊಂಡ ದೊಡ್ಡಮಟ್ಟದ ವಾಣಿಜ್ಯ ಮೇಳವನ್ನು ಆಯೋಜಿಸುವ ಮಹತ್ವಾಕಾಂಕ್ಷಿಯನ್ನು ನಮ್ಮ ತಂಡ ಹೊಂದಿದೆ ಎಂದರು.
ಪ್ರಮುಖವಾಗಿ ಮಹಿಳಾ ಪ್ರಾತಿನಿಧ್ಯಕ್ಕೆ ಆದ್ಯತೆ ನೀಡಲಾಗುವುದು. ಮಹಿಳಾ ವಾಣಿಜ್ಯೋದ್ಯಮಿಗಳನ್ನು ಕೈಗಾರಿಕೋದ್ಯಮಕ್ಕೆ ಕರೆತಂದು ಸಮಗ್ರವಾಗಿ ಜಿಲ್ಲೆಯ ಹಾಗೂ ದೇಶದ ಹಣಕಾಸು ವ್ಯವಸ್ಥೆಗೂ ಕೂಡ ಸಹಾಯಕವಾಗುವುದು ನಮ್ಮ ಉದ್ದೇಶವಾಗಿದೆ ಎಂದರು.
ಪತ್ರಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಹೊಯ್ಸಳ ರಂಗಪ್ಪ, ರಾಜು ಎಂ.ಎಸ್., ಸಂಜಯ್ ಶಂಕರ್, ಡಾ||ಸುನೀಲ್, ವಿಕಾಸ್, ಚೈತ್ರಾ ಸಜ್ಜನ್, ರವಿ ಪಾಟೀಲ್, ನಿರಂಜನ್, ಗಣೇಶ್ ಅಂಗಡಿ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















