ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಪರಿಸರ ಉಳಿಸಿ.. ಗಿಡ ಮರ ಬೆಳಸಿ ಜೀವ ಜಲ ಸಂಪನ್ಮೂಲ ಕಾಪಾಡಿ. ಮರವಿದ್ದರೆ ಮಳೆ – ಶುದ್ಧ ಕುಡಿಯುವ ನೀರು, ಶುದ್ಧ ಗಾಳಿ ಪರಿಸರದ ಉಳಿವು, ಸಕಲ ಜೀವಿಗಳು ಉಸಿರಾಡಲು ಪ್ರಕೃತಿಯ ಕೊಡುಗೆ ನೀಡಲು ಸಹಕಾರಿ ಎಂಬುದು ನನ್ನ ವಿಚಾರಧಾರೆ.
ಜಗತ್ತಿನಲ್ಲಿ ಈಗ ಕೊರೋನಾ ವೈರಾಣು ರುದ್ರ ನರ್ತನ ಮಾಡುತ್ತಿದ್ದು ಅದರ ಭಯದಿಂದ ಜನರು ಮನೆಯಿಂದ ಅಗತ್ಯ ವಸ್ತುಗಳ ಹಾಗೂ ಆಹಾರ ಪದಾರ್ಥಗಳನ್ನು ತರಲು ಹೊರಗೆ ಹೋದರೆ ಮನೆಗೆ ವಾಪಾಸ್ಸು ಬಂದಾಗ ಕೈ ತೊಳೆದು ಕಾಲು ತೊಳೆದು ಮನೆಯ ಒಳಗೆ ಪ್ರವೇಶ ಪಡೆಯಬೇಕಾದ ತುರ್ತುಪರಿಸ್ಥಿತಿ ನಿರ್ಮಾಣವಾಗಿದೆ ಅದರ ಬಗ್ಗೆ ನಿಮಗೆ ಗೊತ್ತೇ ಇದೆ.
ಸರ್ಕಾರಗಳು ಜನರ ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸುವ ಮೂಲಕ ದಿಟ್ಟ ಹೆಜ್ಜೆ ಇರಿಸಿದೆ.
ಆಗಸದ ತುಂಬಾ ರಣ ಹದ್ದುಗಳು
ಇಂದು ನನಗೆ ನೀರಿನ ಬಗ್ಗೆ – ಜಲದ ಬಗ್ಗೆ ಬರೆಯಲು ಕಾರಣ ನಮ್ಮ ಮನೆಯ ತಾರಾಸಿ ಮೇಲೆ ಮುಸ್ಸಂಜೆ ಹೋದಾಗ ಆಗಸದ ತುಂಬಾ ರಣ ಹದ್ದುಗಳು ಹಾಗೂ ಪಕ್ಷಿಗಳ ಹಾರುತ್ತಿದ್ದವು. ಅದು ಭೂಮಿಯ ಸಮೀಪದಲ್ಲಿ, ಇಂದು ಬೆಳಿಗ್ಗೆಯೂ ಸಹ. ಹಾಗೆಯೇ ಪ್ರಾಯಶಃ ಹಕ್ಕಿಗಳು ನೀರು ಮತ್ತು ಆಹಾರದ ಹುಡುಕಾಟದಲ್ಲಿದ್ದವು ಎಂದು ನನಗೆ ಅನಿಸಿತ್ತು. ಹಾಗೆಯೇ ರಸ್ತೆಯ ಬದಿಯಲ್ಲಿ ಹಾವು ರಾಣಿಯೋ, ಓತಿ ಕ್ಯಾತವು ತಲೆ ಎತ್ತಿ ನೀರು ಮತ್ತು ಆಹಾರಕ್ಕೆ ನೋಟ ಬಿರುತ್ತಾ ನಿಂತಿದ್ದು ಮನ ಕುಲಕಿತ್ತು.
ನಗರದಲ್ಲಿ ಕೆಲವು ದಿನಗಳಿಂದ ಹೆಚ್ಚಿನ ಬಿಸಿಲಿನ ತಾಪವಿದ್ದು ಆ ಕಾರಣಕ್ಕೋ ಏನೋ ಹಕ್ಕಿಗಳು ಭೂಮಿಗೆ ಸಮೀಪದಲ್ಲಿ ಹಾರುತ್ತಾ ಇದ್ದವೋ ಏನೋ?
ಇರಲಿ ಮುಂದೆ ಹೋಗುವ… ನಗರದಲ್ಲಿ ಮೂರು ದಿನಗಳಿಂದ ಮುಸ್ಸಂಜೆಯ ಹೊತ್ತಿನಲ್ಲಿ ಮಳೆರಾಯ ಬಂದು ಮಳೆಯ ಸಿಂಚನ ಮಾಡಿ ಹೋಗುತ್ತಿದ್ದಾನೆ.
ಅಮೃತ
ಜೀವ ಸಂಕುಲದ ಪ್ರತಿ ಜೀವಿಗಳ ಉಳಿವಿಗಾಗಿ, ಬಳಕೆಗಾಗಿ ಬೇಕಾಗಿರುವುದು ಅಮೃತ. ಇದೇನಿದು ಅಮೃತ ಎಲ್ಲಿ ಸಿಗುತ್ತೆ ಅಂತೀರ, ಹೌದು ಸ್ನೇಹಿತರೆ ಇಂದಿನ ದಿನಗಳಲ್ಲಿ ಪ್ರಾಣಿಗಳು, ಪಕ್ಷಿಗಳು ಎಲ್ಲಕ್ಕಿಂತ ಹೆಚ್ಚಿನ ಅಂದರೆ ದಿನನಿತ್ಯ ಅಮೃತವನ್ನು ಬಳಸುವ ಜೀವಿ ಎಂದರೆ ಅದು ಮನುಷ್ಯ, ಪ್ರಸ್ತುತ ದಿನದಲ್ಲಿ ಅಮೃತ ಅಂದರೆ ನೀರು ಎಂದು ನಾವು ನೀವು ಅರಿಯಲೇಬೇಕಾದ, ಒಪ್ಪಲೇ ಬೇಕಾದ ಸತ್ಯ ಸಂಗತಿ.
ರೈತನಿಗೆ ನೀರು ನೀಡಿದರೆ ನಮಗೆ ಅನ್ನ ನೀಡುವವ ಅವನು, ಪ್ರತಿ ಪ್ರಾಣಿ ಪಕ್ಷಿಗಳು ನೀರಿಗಾಗಿ ಪರಿತಪಿಸದಂತೆ ಸುಂದರ ಪರಿಸರ ಸೃಷ್ಟಿಸಲು ಸಾಧ್ಯವೆ!
ಮರವಿದ್ದರೆ ಮಳೆ ನೀರು ಜಾರು ಮರವೇ ಇಲ್ಲದ್ದಿದರೆ ಮಳೆಯ ಆರ್ಭಟವೆಲ್ಲಿ?
ಬೆಂಗಳೂರಿನಲ್ಲಿ ಮಣ್ಣಿನ ಸುವಾಸನೆ ಎಲ್ಲಿ ಎಂದು ಹುಡುಕುವ ಪರಿಸ್ಠಿತಿ!! ಏಕೆಂದರೆ ಆಗೊಮ್ಮೆ-ಈಗೊಮ್ಮೆ ಬರುವ ಮಳೆ. ಮಾಯಾನಗರಿಯಲ್ಲಿ ಆರ್ಭಟದ ಮಳೆ. ಅದರೆ ನೀರು ಮಾತ್ರ ಭೂಮಿಯ ಆಳಕ್ಕೆ ಇಳಿಯುವುದೇ ಕಾಣಲಾರೆ. ಕಾರಣ ಒಂದು ಇಂಚು ಉದ್ದದ ತುಂಡು ಭೂಮಿ ಇಲ್ಲ . ರಸ್ತೆಯ ಇಕ್ಕೆಲಗಳಲ್ಲಿ ಟಾರ್ ಹಾಕಲಾಗಿದೆ, ನೀರು ಭೂಮಿಯ ಅಳಕ್ಕೆ ಇಳಿಯುವುದಾದರೂ ಎಲ್ಲಿ. ಅಭಿವೃದ್ಧಿಯ ಹೆಸರಿನಲ್ಲಿ ನೀರು ಹನಿ ನೀರಿಗೆ ತಿಲಾಂಜಲಿ!!
ಜಲ ಜಾಗೃತಿ ಗಿಡ-ಮರಗಳ ಕಣ್ಣ ಅಂಚಿನಲ್ಲಿ ಸಣ್ಣ ನೀರು ಗಿಡ-ಮರವಿಲ್ಲದೆ ಭೂಮಿ ಮೇಲೆ ಕಾಣದಾಗಲಿದೆ ನೀರಿನ ಪಸೆ ಪ್ರಾಣಿ ಪಕ್ಷಿಗಳ ಕಲರವ ಇಲ್ಲದ ಹಾಗೆ ಆಗಲಿದೆ ಭುವಿಯ ಮೇಲೆ ಬರಲಿದೆ ಹನಿ ನೀರು - ನೀರಿಗಾಗಿ ಪರಾದಡುವಾ ದಿನ ಜಾಗೃತರಾಗಿ ಎಲ್ಲರೂ ಅರಿಯರಿ ನೀರಿನ ಮಹತ್ವ ಹನಿ ಹನಿ ನೀರಿಗೂ ಮಹತ್ವವಿದೆ ಕಾಪಾಡಿಕೊಳ್ಳಿ ಅಂರ್ತಜಲವಾ ನೀರಿನ ಮಹತ್ವ ತಿಳಿದುಕೊಳ್ಳಿ
ಜಲ ಜಾಗೃತಿ: ಕ್ಷಾಮ ತಲೆದೊರಬಹುದು ಎಚ್ಚರಿಕೆ… ಎಚ್ಚರಿಕೆ..!
ವೈಭವದ ಬದುಕಿನಲ್ಲಿ ಎಲ್ಲವೂ ಇದೆ ಅದರೆ ಬರುವ ದಿನಗಳಲ್ಲಿ ರಾಜ್ಯದಾದ್ಯಂತ ಕ್ಷಾಮ ತಲೆ ದೊರಯಬಹುದು ಎಚ್ಚರಿಕೆ… ಎಚ್ಚರಿಕೆ..! ಸಹೋದರ-ಸಹೋದರಿಯರೇ!!
ನಾಡಿನಲ್ಲಿ ಬಹು ದೊಡ್ಡ ಪ್ರಮಾಣದಲ್ಲಿ ಮರಗಳ ಮಾರಣ ಹೋಮ – ಹವನ ಅದರಿಂದ ಉಂಟಾಗುವ ಪ್ರಕೃತಿ ವಿನಾಶ, ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ, ಬವಣೆ ನಾಡಿಗೆ ಕಟ್ಟಿಟ್ಟ ಬುತ್ತಿ.
ಬೆಂಗಳೂರು ನಗರದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ, ಮೆಟ್ರೊ ನಿರ್ಮಾಣಕ್ಕೆ ಎಷ್ಟು ಮರಗಳು ಧರೆಗುರುಳಿ ಎಲ್ಲಡೆ ಬಿಸಿಲಿನ ಝಳ! ಬಿಸಿಲಿನ ಜಳಕ್ಕೆ ಅಂರ್ತಜಲ ಕುಸಿತ. ಅದರಿಂದ ಉಂಟಾಗುವುದು ಕುಡಿಯುವ ನೀರಿನ ಬವಣೆ ಮನೆಯ ಮುಂದೆ ಕೊರೆದ ಬೋರು – ಬೋರು ಆದರಲ್ಲಿ ನೀರಿನ ಪಸೆ ಹುಡುಕುವ ಕಾಲ ಸನ್ನಿಹಿತವಾಗಲಿದೆ ಎನ್ನುವುದ ಮರೆಯದಿರಿ.
ಡಾ. ಗುರುರಾಜ್ ಪೊಶೆಟ್ಟಿಹಳ್ಳಿ ರವರು ನೀರನ್ನು ಅಮೃತಕ್ಕೆ ಹೋಲಿಸಿದ್ದನ್ನು ಅವರ ಅನುಮತಿಯ ಮೇರೆಗೆ ಲೇಖನದಲ್ಲಿ ಬಳಸಿಕೊಳ್ಳಲಾಗಿದೆ.
Get in Touch With Us info@kalpa.news Whatsapp: 9481252093
Discussion about this post